logo
ಕನ್ನಡ ಸುದ್ದಿ  /  ಮನರಂಜನೆ  /  Dunki Ott: ಒಟಿಟಿಗೆ ಆಗಮಿಸಲು ಶಾರುಖ್‌ ಖಾನ್ ಡಂಕಿ ರೆಡಿ; ಯಾವ ಒಟಿಟಿ, ಸ್ಟ್ರೀಮಿಂಗ್‌ ಯಾವಾಗ?

Dunki OTT: ಒಟಿಟಿಗೆ ಆಗಮಿಸಲು ಶಾರುಖ್‌ ಖಾನ್ ಡಂಕಿ ರೆಡಿ; ಯಾವ ಒಟಿಟಿ, ಸ್ಟ್ರೀಮಿಂಗ್‌ ಯಾವಾಗ?

Feb 07, 2024 03:03 PM IST

Dunki OTT: ಒಟಿಟಿಗೆ ಆಗಮಿಸಲು ಶಾರುಖ್‌ ಖಾನ್ ಡಂಕಿ ರೆಡಿ; ಯಾವ ಒಟಿಟಿ, ಸ್ಟ್ರೀಮಿಂಗ್‌ ಯಾವಾಗ?

    • Dunki Ott Release Date: ಶಾರುಖ್‌ ಖಾನ್‌ ಮತ್ತು ರಾಜ್‌ಕುಮಾರ್‌ ಹಿರಾನಿ ಕಾಂಬಿನೇಷನ್‌ನ ಡಂಕಿ ಸಿನಿಮಾ ಒಟಿಟಿಗೆ ಆಗಮಿಸುತ್ತಿದೆ. ಬಾಕ್ಸ್‌ಆಫೀಸ್‌ನಲ್ಲಿ ಡೀಸೆಂಟ್‌ ಗಳಿಕೆ ಕಂಡಿದ್ದ ಈ ಸಿನಿಮಾ ಇದೀಗ ಜಿಯೋ ಸಿನಿಮಾ ಒಟಿಟಿಗೆ ಎಂಟ್ರಿಕೊಡಲು ಸಿದ್ಧವಾಗಿದೆ. ಹಾಗಾದರೆ ಯಾವಾಗಿಂದ ಸ್ಟ್ರೀಮಿಂಗ್‌ ಶುರು? ಇಲ್ಲಿದೆ ಮಾಹಿತಿ
Dunki OTT: ಒಟಿಟಿಗೆ ಆಗಮಿಸಲು ಶಾರುಖ್‌ ಖಾನ್ ಡಂಕಿ ರೆಡಿ; ಯಾವ ಒಟಿಟಿ, ಸ್ಟ್ರೀಮಿಂಗ್‌ ಯಾವಾಗ?
Dunki OTT: ಒಟಿಟಿಗೆ ಆಗಮಿಸಲು ಶಾರುಖ್‌ ಖಾನ್ ಡಂಕಿ ರೆಡಿ; ಯಾವ ಒಟಿಟಿ, ಸ್ಟ್ರೀಮಿಂಗ್‌ ಯಾವಾಗ?

Dunki OTT Release Date: ಬಾಲಿವುಡ್‌ ಬಾದ್ಶಾ ಶಾರುಖ್‌ ಖಾನ್‌ಗೆ 2023 ಸುಗ್ಗಿಯ ಕಾಲ. ಒಟ್ಟು ಮೂರು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸಾವಿರಾರು ಕೋಟಿ ಕಲೆಕ್ಷನ್‌ ಮಾಡಿ, ಸಕ್ಸಸ್‌ ಪಡೆದಿವೆ. ಪಠಾಣ್‌ ಮೂಲಕ ಆರಂಭವಾದ ಆ ಯಶಸ್ಸಿನ ಓಟ, ಅದಾದ ಮೇಲೆ ಜವಾನ್‌ ಸಿನಿಮಾ ಸಹ ಬ್ಲಾಕ್‌ ಬಸ್ಟರ್‌ ಹಿಟ್‌ ಆಯ್ತು. ವರ್ಷಾಂತ್ಯಕ್ಕೆ ಬಂದ ರಾಜ್‌ಕುಮಾರ್‌ ಹಿರಾನಿ ನಿರ್ದೇಶನದ ಡಂಕಿ ಸಿನಿಮಾ ಈ ಹಿಂದಿನ ಎರಡು ಸಿನಿಮಾಗಳಷ್ಟು ಸದ್ದು ಮಾಡದಿದ್ದರೂ, ಡೀಸೆಂಟ್‌ ಮೊತ್ತ ಕಲೆ ಹಾಕಿ, ಆಟ ಮುಗಿಸಿತ್ತು. ಇದೀಗ ಇದೇ ಡಂಕಿ ಚಿತ್ರ ಒಟಿಟಿಗೆ ಎಂಟ್ರಿ ಕೊಡಲು ಸಿದ್ಧವಾಗಿದೆ.

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಡಿಜಿಟಲ್‌ ಪ್ರಸಾರಕ್ಕೆ ದಾಖಲೆಯ ಮೊತ್ತ

ಕಳೆದ ವರ್ಷ, ಶಾರುಖ್ ಖಾನ್ ನಟನೆಯ ಪಠಾಣ್ ಮತ್ತು ಜವಾನ್ ಸಿನಿಮಾಗಳು ನಿರ್ಮಾಪಕರಿಗೆ ಸಾವಿರ ಸಾವಿರ ಕೋಟಿ ಹಣ ತಂದುಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಸಹಜವಾಗಿ ಡಂಕಿ ಸಿನಿಮಾ ಮೇಲೂ ಅದೇ ನಿರೀಕ್ಷೆ ಇತ್ತು. ಅದರ ಆಧಾರದ ಮೇಲೆಯೇ ಡಂಕಿ ಸಿನಿಮಾದ ಡಿಜಿಟಲ್‌ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಬಿಕರಿಯಾಗಿತ್ತು. ಜಿಯೋ ಸಿನಿಮಾ ಡಂಕಿ ಸಿನಿಮಾದ OTT ಹಕ್ಕುಗಳನ್ನು ಬರೋಬ್ಬರಿ 155 ಕೋಟಿಗೆ ಖರೀದಿಸಿದೆ. ಈ ಮೂಲಕ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಒಟಿಟಿಗೆ ಸೇಲ್‌ ಆದ ಚಿತ್ರ ಎಂಬ ದಾಖಲೆ ಡಂಕಿ ಹೆಸರಿಗಿದೆ. ಶಾರುಖ್ ವೃತ್ತಿಜೀವನದಲ್ಲಿ ಅತಿ ಹೆಚ್ಚು ಮೊತ್ತಕ್ಕೆ OTTಗೆ ಮಾರಾಟವಾದ ಸಿನಿಮಾ ಸಹ ಇದಾಗಿದೆ. ಅಂದಹಾಗೆ ಇದೇ ಚಿತ್ರದ ಆಡಿಯೋ ಹಕ್ಕುಗಳನ್ನು 36 ಕೋಟಿಗೆ ಟಿ ಸೀರೀಸ್ ಖರೀದಿಸಿದೆ.

ಎಲ್ಲಿ, ಯಾವಾಗ ಸ್ಟ್ರೀಮಿಂಗ್?

ಶಾರುಖ್ ಖಾನ್ ಮತ್ತು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಡಂಕಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಗಳಿಕೆ ಕಾಣದಿದ್ದರೂ, ಎವರೇಜ್‌ ಗಳಿಕೆ ಕಂಡು ನಷ್ಟದಿಂದ ಪಾರಾಗಿದೆ. ಇದೀಗ ಇದೇ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿರಿಸಿದೆ. ಈ ಚಿತ್ರದ ಡಿಜಿಟಲ್‌ ಸ್ಟ್ರೀಮಿಂಗ್‌ ಹಕ್ಕುಗಳನ್ನು ಜಿಯೋ ಸಿನಿಮಾ ಪಡೆದುಕೊಂಡಿದ್ದು, ಫೆ. 16ರಿಂದ ಈ ಸಿನಿಮಾ ಜಿಯೋ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ ಎನ್ನಲಾಗುತ್ತಿದೆ. ಇನ್ನೇನು ಶೀಘ್ರದಲ್ಲಿ ಈ ಚಿತ್ರದ ಒಟಿಟಿ ಬಿಡುಗಡೆ ಬಗ್ಗೆ ಅಧಿಕೃತವಾಗಿ ಘೋಷಣೆ ಹೊರಬೀಳಲಿದೆ.

ಡಂಕಿ ಬಜೆಟ್‌ ಎಷ್ಟು, ಗಳಿಸಿದ್ದೆಷ್ಟು?

ಡಿಸೆಂಬರ್ 21 ರಂದು ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಎದುರು ಶಾರುಖ್‌ ಖಾನ್‌ ಡಂಕಿ ಚಿತ್ರ ಬಿಡುಗಡೆ ಆಗಿತ್ತು. ಶಾರುಖ್ ಖಾನ್ ಮತ್ತು ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನ ಮೇಲಿನ ಕ್ರೇಜ್‌ನಿಂದಾಗಿ, ಬಿಡುಗಡೆಯ ಮೊದಲು ಡಂಕಿ ಚಿತ್ರದ ಮೇಲೆ ನಿರೀಕ್ಷೆಗಳು ಇದ್ದವು. ಆದರೆ, ಬಿಡುಗಡೆ ಬಳಿಕ ಸಿನಿಮಾ ಹೆಚ್ಚು ಸದ್ದು ಮಾಡಲಿಲ್ಲ. ಮೊದಲ ದಿನ ಆ ನಿರೀಕ್ಷೆ ಮಟ್ಟ ಮುಟ್ಟಲಿಲ್ಲ. ಕೇವಲ 29 ಕೋಟಿ ಕಲೆಕ್ಷನ್‌ ಮಾಡಿತ್ತು ಡಂಕಿ ಸಿನಿಮಾ.

ಇನ್ನು ಬಜೆಟ್‌ ಬಗ್ಗೆ ಹೇಳುವುದಾದರೆ, 120 ಕೋಟಿ ಮೊತ್ತದಲ್ಲಿ ಈ ಚಿತ್ರ ತಯಾರಾಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಒಟ್ಟು 470 ಕೋಟಿ ಗಳಿಕೆ ಕಂಡಿತ್ತು. ಕಳೆದ ವರ್ಷ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಹತ್ತು ಚಿತ್ರಗಳಲ್ಲಿ ಡಂಕಿ ಸಹ ಒಂದಾಗಿತ್ತು. ನೆಗೆಟಿವ್ ಟಾಕ್ ಏನೇ ಇದ್ದರೂ ನಿರ್ಮಾಪಕರಿಗೆ ಈ ಸಿನಿಮಾ ಲಾಭ ತಂದುಕೊಟ್ಟಿತ್ತು.

ತಾಪ್ಸಿ ನಾಯಕಿಯಾಗಿದ್ದ ಡಂಕಿ ಚಿತ್ರದಲ್ಲಿ ವಿಕ್ಕಿ ಕೌಶಲ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ವಿಕ್ರಮ್ ಕೊಚ್ಚರ್, ಅನಿಲ್ ಗ್ರೋವರ್ ಮತ್ತು ಬೊಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಕ್ರಮವಾಗಿ ವಿದೇಶಕ್ಕೆ ವಲಸೆ ಹೋಗುತ್ತಿರುವವರ ಬದುಕಿನ ಕಥೆಯನ್ನು ನಿರ್ದೇಶಕ ರಾಜ್ ಕುಮಾರ್ ಹಿರಾನಿ, ಡಂಕಿ ಸಿನಿಮಾದಲ್ಲಿ ತೋರಿಸಿದ್ದಾರೆ. ಶಾರುಖ್ ಖಾನ್ ಈ ಚಿತ್ರದಲ್ಲಿ ಹಾರ್ಡಿ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸಂಜಯ್ ದತ್ ಜೀವನಾಧಾರಿತ ಚಿತ್ರದ ನಂತರ ರಾಜ್‌ಕುಮಾರ್ ಹಿರಾನಿ ಸುದೀರ್ಘ ನಾಲ್ಕು ವರ್ಷಗಳ ಬಳಿಕ ಡಂಕಿ ಸಿನಿಮಾ ಮೂಲಕ ಆಗಮಿಸಿದ್ದರು. ಇದೀಗ ಇದೇ ನಿರ್ದೇಶಕ ದಾದಾ ಸಾಹೇಬ್ ಫಾಲ್ಕೆ ಅವರ ಜೀವನಾಧಾರಿತ ಮೇಡ್‌ ಇನ್‌ ಇಂಡಿಯಾ ಚಿತ್ರಕ್ಕೆ ಕಥೆ ಒದಗಿಸುತ್ತಿದ್ದಾರೆ. ಟಾಲಿವುಡ್‌ನ ಟಾಪ್ ನಿರ್ದೇಶಕ ರಾಜಮೌಳಿ ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ನಿರ್ಮಾಪಕರಾಗಿ ಕೆಲಸ ಮಾಡುತ್ತಿರುವುದು ವಿಶೇಷ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ