ಕನ್ನಡ ಸುದ್ದಿ  /  ಮನರಂಜನೆ  /  ಝೀ ಕನ್ನಡ ಮಹಾನಟಿ ರಿಯಾಲಿಟಿ ಶೋಗೆ ಫೆ 10ರಿಂದ 16 ಜಿಲ್ಲೆಗಳಲ್ಲಿ ಅಡಿಷನ್‌; 18-28 ವಯೋಮಿತಿಯ ಪ್ರತಿಭಾನ್ವಿತರಿಗೆ ಸದಾವಕಾಶ, ಇಲ್ಲಿದೆ ವಿವರ

ಝೀ ಕನ್ನಡ ಮಹಾನಟಿ ರಿಯಾಲಿಟಿ ಶೋಗೆ ಫೆ 10ರಿಂದ 16 ಜಿಲ್ಲೆಗಳಲ್ಲಿ ಅಡಿಷನ್‌; 18-28 ವಯೋಮಿತಿಯ ಪ್ರತಿಭಾನ್ವಿತರಿಗೆ ಸದಾವಕಾಶ, ಇಲ್ಲಿದೆ ವಿವರ

Mahanati Zee Kannada Reality Show: ಝೀ ಕನ್ನಡವು ಮಹಾನಟಿ ರಿಯಾಲಿಟಿ ಶೋ ಮೂಲಕ ಕರ್ನಾಟಕದ ಹೊಸ ನಟಿಯರನ್ನು ಬೆಳಕಿಗೆ ತರಲು ಉದ್ದೇಶಿಸಿದೆ. ಇದಕ್ಕಾಗಿ ಇದೇ ಫೆಬ್ರವರಿ 10ರಿಂದ 18ರವರೆಗೆ ರಾಜ್ಯದ ವಿವಿಧ ನಗರಗಳಲ್ಲಿ ಅಡಿಷನ್‌ ಆಯೋಜಿಸಿದೆ. ಮಹಾನಟಿ ಅಡಿಷನ್‌ನಲ್ಲಿ ಭಾಗವಹಿಸಲು 18-28 ವರ್ಷ ವಯೋಮಿತಿ ನಿಗದಿಪಡಿಸಿದೆ.

ಮಹಾನಟಿ ರಿಯಾಲಿಟಿ ಶೋಗೆ ಫೆ 10ರಿಂದ ಅಡಿಷನ್‌; ನಟಿಯರಾಗಲು ಬಯಸುವವರಿಗೆ ಅವಕಾಶ
ಮಹಾನಟಿ ರಿಯಾಲಿಟಿ ಶೋಗೆ ಫೆ 10ರಿಂದ ಅಡಿಷನ್‌; ನಟಿಯರಾಗಲು ಬಯಸುವವರಿಗೆ ಅವಕಾಶ

ಬೆಂಗಳೂರು: ಝೀ ಕನ್ನಡದ ಮಹಾ ನಟಿ ಅಡಿಷನ್‌ ಸದ್ಯದಲ್ಲಿಯೇ ಆರಂಭವಾಗಲಿದೆ. "ಜನರ ಮನದಲ್ಲಿ ಅಚ್ಚಳಿಯದೇ ಉಳಿಯೋ ಹೀರೋಯಿನ್ ಆಗೋ ಗುರಿ ನಿಮಗಿದ್ರೆ ನಿಮ್ಮ ಗುರುವಾಗಿ ಬರ್ತಿದೆ ಜೀ಼ ಕನ್ನಡ ವೇದಿಕೆ! ಮಹಾನಟಿ- ಆಡಿಷನ್ ಅತೀ ಶೀಘ್ರದಲ್ಲಿ" ಎಂದು ಜೀ ಕನ್ನಡ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದೆ. "ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟಿಯರ ಸಾಲಿಗೆ ಸೇರುವ ಮೊದಲ ಹೆಜ್ಜೆ, ಚಿತ್ರರಂಗದ ನಾಯಕಿಯರ ಪರಂಪರೆಯ ಶ್ರೀಮಂತಿಕೆಯನ್ನು ಹೆಚ್ಚಿಸಲು ಈ ಮಹಾನಟಿ ಅಡಿಷನ್‌ ನೆರವಾಗಲಿದೆ" ಎಂದು ಝೀಕನ್ನಡ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಮಹಾನಟಿ ರಿಯಾಲಿಟಿ ಶೋ ಅಡಿಷನ್‌

ಜೀ ಕನ್ನಡದ ಮಹಾನಟಿ ಅಡಿಷನ್‌ ಎಲ್ಲೆಲ್ಲಿ ನಡೆಯಲಿದೆ ಎಂಬ ವಿವರವನ್ನು ಮುಂದೆ ನೀಡಲಾಗಿದೆ. ಇದೇ ಫೆಬ್ರವರಿ 10ರಂದು ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಮಹಾನಟಿ ರಿಯಾಲಿಟಿ ಶೋ ಅಡಿಷನ್‌ ನಡೆಯಲಿದೆ. ಫೆಬ್ರವರಿ 11 ಭಾನುವಾರ ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಅಡಿಷನ್‌ ನಡೆಯಲಿದೆ.

ಫೆಬ್ರವರಿ 12 ಸೋಮವಾರದಂದು ಹಾಸನ ಮತ್ತು ಬಾಗಲಕೋಟೆಯಲ್ಲಿ ಮಹಾನಟಿ ಅಡಿಷನ್‌ ನಡೆಯಲಿದೆ. ಫೆಬ್ರವರಿ 13ರಂದು ಚಿಕ್ಕಮಗಳೂರು ಮತ್ತು ಕಲಬುರಗಿಯಲ್ಲಿ, ಫೆಬ್ರವರಿ 14ರಂದು ಕೊಡಗಿನಲ್ಲಿ ಅಡಿಷನ್‌ ನಡೆಯಲಿದೆ. ಫೆಬ್ರವರಿ 15ರಂದು ಬಳ್ಳಾರಿಯಲ್ಲಿ, ಫೆಬ್ರವರಿ 16ರಂದು ಮಂಗಳೂರು ಮತ್ತು ಕೊಪ್ಪಳದಲ್ಲಿ ಅಡಿಷನ್‌ ನಡೆಯಲಿದೆ.

ಫೆಬ್ರವರಿ 17ರ ಶನಿವಾರದಂದು ಉಡುಪಿ ಮತ್ತು ದಾವಣಗೆರೆಯಲ್ಲಿ, ಫೆಬ್ರವರಿ 18ರಂದು ಶಿವಮೊಗ್ಗ ಮತ್ತು ಚಿತ್ರದುರ್ಗದಲ್ಲಿ ಅಡಿಷನ್‌ ನಡೆಯಲಿದೆ. ಈ ಅಡಿಷನ್‌ಗೆ ಯಾವುದೇ ಶುಲ್ಕ ಇರುವುದಿಲ್ಲ. ಅಡಿಷನ್‌ ಹೆಸರಲ್ಲಿ ಯಾರಿಗೂ ಶುಲ್ಕ ನೀಡಬೇಡಿ. ವಾಹಿನಿಯ ಹೆಸರಲ್ಲಿ ಯಾರಾದರೂ ಹಣ ಪಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಝೀಕನ್ನಡ ತಿಳಿಸಿದೆ.

ವಯೋಮಿತಿ ಎಷ್ಟು?

ಝೀ ಕನ್ನಡದ ಮಹಾನಟಿ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳಲು ವಯಸ್ಸಿನ ಮಿತಿ ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷ ನಿಗದಿಪಡಿಸಲಾಗಿದೆ. ಆಸಕ್ತರು ಮೇಲ್ಕಂಡ ಸ್ಥಳಗಳಲ್ಲಿ ಅಡಿಷನ್ಸ್‌ನಲ್ಲಿ ಪಾಲ್ಗೊಳ್ಳಬಹುದು.

ಅಡಿಷನ್‌ನಲ್ಲಿ ಭಾಗವಹಿಸುವುದು ಹೇಗೆ?

ಅಡಿಷನ್‌ನಲ್ಲಿ ಭಾಗವಹಿಸಲು ಆಸಕ್ತಿ ಇರುವ 18-28 ವಯೋಮಿತಿಯ ಕಲಾಸಕ್ತ ಯುವತಿಯರು ತಮ್ಮ ಪಾಸ್‌ಪೋರ್ಟ್‌ ಗಾತ್ರದ ಫೋಟೋ ಮತ್ತು ಅಡ್ರೆಸ್‌ ಪ್ರೂಫ್‌ ಜತೆಗೆ ಬರಬೇಕು. ಅದಕ್ಕಿಂತ ಮೊದಲು ನಿಮ್ಮ ಆಕ್ಟಿಂಗ್‌ ವಿಡಿಯೋಗಳನ್ನು 9513516200 ಸಂಖ್ಯೆಗೆ ವಾಟ್ಸಪ್‌ ಮಾಡಬೇಕೆಂದು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಝೀ ಕನ್ನಡ ಪ್ರಕಟಿಸಿದೆ.

ಏನಿದು ಮಹಾನಟಿ ರಿಯಾಲಿಟಿ ಶೋ

ಚಂದನವನಕ್ಕೆ ಹೊಸ ನಟಿಯರನ್ನು ಪರಿಚಯಿಸುವ ಪ್ರಯತ್ನವಾಗಿ ಝಿಕನ್ನಡವು ಮಹಾನಟಿ ಎಂಬ ಹೊಸ ರಿಯಾಲಿಟಿ ಶೋ ಆರಂಭಿಸುತ್ತಿದೆ. ಇತ್ತೀಚೆಗೆ ಇದಕ್ಕೆ ಸಂಬಂಧಪಟ್ಟ ಪ್ರಮೋವನ್ನು ಬಿಡುಗಡೆ ಮಾಡಲಾಗಿತ್ತು. ನಟನಾ ಕ್ಷೇತ್ರಕ್ಕೆ ಬರಬೇಕೆಂದುಕೊಳ್ಳುವವರಿಗೆ ಇದು ವೇದಿಕೆಯಾಗಲಿದೆಯಂತೆ.

ಕಲರ್ಸ್‌ ಕನ್ನಡದಲ್ಲಿ ಬಿಗ್‌ಬಾಸ್‌ ಕನ್ನಡ ರಿಯಾಲಿಟಿ ಶೋ ಇತ್ತೀಚೆಗೆ ಕೊನೆಗೊಂಡಿದೆ. ಇದೇ ಸಮಯದಲ್ಲಿ ಗಿಚ್ಚಿ ಗಿಲಿಗಿಲಿ ಆರಂಭಗೊಂಡಿದೆ. ಇದೀಗ ಮುಂದಿನ ದಿನಗಳಲ್ಲಿ ಮಹಾನಟಿ ಎಂಬ ರಿಯಾಲಿಟಿ ಶೋ ಆರಂಭವಾಗಲಿದೆ. ಶ್ರೀಗೌರಿ ಎಂಬ ಹೊಸ ಧಾರಾವಾಹಿ ಈಗಾಲಗೇ ಆರಂಭವಾಗಲಿದೆ. ನಮ್ಮಮ್ಮ ಸೂಪರ್‌ಸ್ಟಾರ್‌ ಕೂಡ ಪ್ರೇಕ್ಷಕರ ಗಮನ ಸೆಳೆಯಲಿದೆ. ಸರಿಗಮಪ, ಡ್ರಾಮಾ ಜೂನಿಯರ್‌, ಡ್ಯಾನ್ಸ್‌ ರಿಯಾಳಿಟಿ ಶೋ, ಕಾಮಿಡಿ ಶೋಗಳ ಮೂಲಕ ಹಲವು ಪ್ರತಿಭೆಗಳನ್ನು ಬೆಳಕಿಗೆ ತಂದಿರುವ ವಾಹಿನಿಯು ಮಹಾನಟಿ ಶೋ ಮೂಲಕ ಹಲವು ನಟಿಯರನ್ನು ಬೆಳಕಿಗೆ ತರುವ ನಿರೀಕ್ಷೆಯಿದೆ.

(ಡಿಸ್ಕ್ಲೈಮರ್‌: ಝೀ ಕನ್ನಡ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಆಧರಿತ ಬರಹ)

IPL_Entry_Point