logo
ಕನ್ನಡ ಸುದ್ದಿ  /  ಮನರಂಜನೆ  /  Dhruva Sarja Birthday: ಧ್ರುವ ಸರ್ಜಾ ಬರ್ತ್‌ಡೇಗೆ ಹೊಸ ಪೋಸ್ಟರ್‌ ರಿಲೀಸ್‌ ಮಾಡಿದ ಮಾರ್ಟಿನ್‌, ಕೆಡಿ ಚಿತ್ರತಂಡ

Dhruva Sarja Birthday: ಧ್ರುವ ಸರ್ಜಾ ಬರ್ತ್‌ಡೇಗೆ ಹೊಸ ಪೋಸ್ಟರ್‌ ರಿಲೀಸ್‌ ಮಾಡಿದ ಮಾರ್ಟಿನ್‌, ಕೆಡಿ ಚಿತ್ರತಂಡ

HT Kannada Desk HT Kannada

Oct 06, 2023 02:47 PM IST

ಧ್ರುವ ಸರ್ಜಾ ಬರ್ತ್‌ಡೇಗೆ ಮಾರ್ಟಿನ್‌, ಕೆಡಿ ಚಿತ್ರತಂಡದಿಂದ ಹೊಸ ಪೋಸ್ಟರ್‌ ರಿಲೀಸ್

  • Dhruva Sarja Birthday: ಮೂರು ವರ್ಷಗಳ ಬಳಿಕ ಇಂದು ಧ್ರುವ ಸರ್ಜಾ ಫ್ಯಾನ್ಸ್‌ ಜೊತೆ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದಾರೆ. ಪ್ರೇಮ್‌ ನಿರ್ದೇಶನದ ಕೆಡಿ ಹಾಗೂ ಎಪಿ ಅರ್ಜುನ್‌ ನಿರ್ದೇಶನದ ಮಾರ್ಟಿನ್‌ ಸಿನಿಮಾ ತಂಡ ಹೊಸ ಪೋಸ್ಟರ್‌ ರಿಲೀಸ್‌ ಮಾಡುವ ಮೂಲಕ ಧ್ರುವ ಬರ್ತ್‌ಡೇಗೆ ಶುಭ ಕೋರಿದ್ದಾರೆ. 

ಧ್ರುವ ಸರ್ಜಾ ಬರ್ತ್‌ಡೇಗೆ ಮಾರ್ಟಿನ್‌, ಕೆಡಿ ಚಿತ್ರತಂಡದಿಂದ ಹೊಸ ಪೋಸ್ಟರ್‌ ರಿಲೀಸ್
ಧ್ರುವ ಸರ್ಜಾ ಬರ್ತ್‌ಡೇಗೆ ಮಾರ್ಟಿನ್‌, ಕೆಡಿ ಚಿತ್ರತಂಡದಿಂದ ಹೊಸ ಪೋಸ್ಟರ್‌ ರಿಲೀಸ್

Dhruva Sarja Birthday: ಸ್ಯಾಂಡಲ್‌ವುಡ್‌ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ಧಾರೆ. ಇಂದು ಧ್ರುವ ಹುಟ್ಟುಹಬ್ಬದ ಜೊತೆಗೆ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ 'ರಾಜ ಮಾರ್ತಾಂಡ' ಕೂಡಾ ರಿಲೀಸ್‌ ಆಗಿದೆ. ಅಣ್ಣ ನಿಧನರಾದ ಮೂರು ವರ್ಷಗಳ ನಂತರ ಧ್ರುವ ಅಭಿಮಾನಿಗಳೊಂದಿಗೆ ಬರ್ತ್‌ಡೇ ಆಚರಿಸಿಕೊಂಡಿದ್ದು ಧ್ರುವ ಮನೆ ಮುಂದೆ ಅವರ ವಿಐಪಿಗಳು ಜಮಾಯಿಸಿದ್ದಾರೆ.‌

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಮಾರ್ಟಿನ್‌, ಕೆಡಿ ಚಿತ್ರಗಳ ಹೊಸ ಪೋಸ್ಟರ್

ಧ್ರುವ ಸರ್ಜಾ ಸದ್ಯಕ್ಕೆ 2 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಪ್ರೇಮ್‌ ನಿರ್ದೇಶನದಲ್ಲಿ 'ಕೆಡಿ' ಹಾಗೂ ಎಪಿ ಅರ್ಜುನ್‌ ನಿರ್ದೇಶನದಲ್ಲಿ 'ಮಾರ್ಟಿನ್‌' ಸಿನಿಮಾಗಳಲ್ಲಿ ಧ್ರುವ ನಟಿಸುತ್ತಿದ್ದಾರೆ. ಈ ಎರಡೂ ಚಿತ್ರತಂಡಗಳು ಧ್ರುವಾಗೆ ಹೊಸ ಪೋಸ್ಟರ್‌ ರಿಲೀಸ್‌ ಮಾಡುವ ಮೂಲಕ ಹುಟ್ಟುಹಬ್ಬದ ಶುಭ ಕೋರಿದೆ. ಎಪಿ ಅರ್ಜುನ್‌ ಹಾಗೂ ಪ್ರೇಮ್‌ ಇಬ್ಬರೂ ತಮ್ಮ ಸಿನಿಮಾಗಳ ಹೊಸ ಪೋಸ್ಟರ್‌ಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೊಸ ಪೋಸ್ಟರ್‌ ನೋಡಿ ಅಭಿಮಾನಿಗಳು ಕೂಡಾ ಥ್ರಿಲ್‌ ಆಗಿದ್ದಾರೆ.‌

ಉದಯ್‌ ಮೆಹ್ತಾ ನಿರ್ಮಾಣದ ಸಿನಿಮಾ

'ಮಾರ್ಟಿನ್‌' ಚಿತ್ರವನ್ನು ವಾಸವಿ ಎಂಟರ್‌ಟೈನ್ಮೆಂಟ್‌ ಬ್ಯಾನರ್‌ ಅಡಿ ಉದಯ್‌ ಮೆಹ್ತಾ ನಿರ್ಮಿಸಿದ್ದು ಎಪಿ ಅರ್ಜುನ್‌ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಸರ್ಜಾ ಕಥೆ ಬರೆದಿದ್ದಾರೆ. ಮಣಿ ಶರ್ಮಾ, ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಧ್ರುವ ಜೊತೆಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸುತ್ತಿದ್ಧಾರೆ. ಜೊತೆಗೆ ಅನ್ವೇಶಿ ಜೈನ್‌, ಚಿಕ್ಕಣ್ಣ, ಮಾಳವಿಕಾ ಅವಿನಾಸ್‌, ಅಚ್ಯುತ್‌ ಕುಮಾರ್‌ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಕನ್ನಡ ಹೊರತುಪಡಿಸಿ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ತಯಾರಾಗುತ್ತಿದೆ. ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡುವುದಾಗಿ ಅಭಿಮಾನಿಗಳು ಚಿತ್ರತಂಡಕ್ಕೆ ಮನವಿ ಮಾಡುತ್ತಿದ್ದಾರೆ.

ಕೆವಿಎನ್‌ ಪ್ರೊಡಕ್ಷನ್‌ ನಿರ್ಮಾಣದ 'ಕೆಡಿ'

'ಕೆಡಿ' ಚಿತ್ರವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಿಸುತ್ತಿದ್ದು ಪ್ರೇಮ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯಾ ಸಂಗೀತ ನೀಡಿದ್ದಾರೆ. ಕೆಜಿಎಫ್‌ ಬಳಿಕ ಬಾಲಿವುಡ್‌ ನಟ ಸಂಜಯ್‌ ದತ್‌ ಮತ್ತೆ ಕೆಡಿ ಮೂಲಕ ಕನ್ನಡದಲ್ಲಿ ನಟಿಸುತ್ತಿದ್ಧಾರೆ. ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕೂಡಾ ಬಹಳ ವರ್ಷಗಳ ಬಳಿಕ ಮತ್ತೆ ಈ ಸಿನಿಮಾ ಮೂಲಕ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಬಹುತೇಕ ಶೂಟಿಂಗ್‌ ಮುಗಿದಿದ್ದು ಚಿತ್ರತಂಡ ಶೀಘ್ರದಲ್ಲೇ 'ಕೆಡಿ' ಚಿತ್ರದ ರಿಲೀಸ್‌ ದಿನಾಂಕ ಘೋಷಣೆ ಮಾಡಲಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ