logo
ಕನ್ನಡ ಸುದ್ದಿ  /  ಮನರಂಜನೆ  /  ಓ ಮೈ ಗಾಡ್‌ ಅನ್ತಾ ಶಿಲ್ಪಾ ಶೆಟ್ಟಿ ಮೈಸೂರು ಪಾಕ್‌ ತಿನ್ತಾ ಇದ್ರೆ ನೋಡುಗರ ಬಾಯಲ್ಲಿ ನೀರು; ಮೈಸೂರಿಗೆ ಬಂದ ಬಾಲಿವುಡ್‌ ನಟಿಗೆ ಸಿಹಿಸ್ವಾಗತ

ಓ ಮೈ ಗಾಡ್‌ ಅನ್ತಾ ಶಿಲ್ಪಾ ಶೆಟ್ಟಿ ಮೈಸೂರು ಪಾಕ್‌ ತಿನ್ತಾ ಇದ್ರೆ ನೋಡುಗರ ಬಾಯಲ್ಲಿ ನೀರು; ಮೈಸೂರಿಗೆ ಬಂದ ಬಾಲಿವುಡ್‌ ನಟಿಗೆ ಸಿಹಿಸ್ವಾಗತ

Praveen Chandra B HT Kannada

Nov 07, 2023 02:03 PM IST

ಓ ಮೈ ಗಾಡ್‌ ಅನ್ತಾ ಶಿಲ್ಪಾ ಶೆಟ್ಟಿ ಮೈಸೂರು ಪಾಕ್‌ ತಿನ್ತಾ ಇದ್ರೆ ನೋಡುಗರ ಬಾಯಲ್ಲಿ ನೀರು

    • Jogi Prem KD Movie Shilpa Shetty: ಕರಾವಳಿ ಮೂಲದ ಬಾಲಿವುಡ್‌ ಬೆಡಗಿ ಶಿಲ್ಪಾ ಶೆಟ್ಟಿ ಮೈಸೂರಿಗೆ ಬಂದಿದ್ದು, ಮೈಸೂರು ಪಾಕ್‌ ತಿಂದಿದ್ದಾರೆ. ಇವರು ಜೋಗಿ ಪ್ರೇಮ್‌ ನಟನೆಯ ಕೆಡಿ ಚಿತ್ರದ ಶೂಟಿಂಗ್‌ಗಾಗಿ ಮೈಸೂರಿಗೆ ಬಂದಿದ್ದಾರೆ.
ಓ ಮೈ ಗಾಡ್‌ ಅನ್ತಾ ಶಿಲ್ಪಾ ಶೆಟ್ಟಿ ಮೈಸೂರು ಪಾಕ್‌ ತಿನ್ತಾ ಇದ್ರೆ ನೋಡುಗರ ಬಾಯಲ್ಲಿ ನೀರು
ಓ ಮೈ ಗಾಡ್‌ ಅನ್ತಾ ಶಿಲ್ಪಾ ಶೆಟ್ಟಿ ಮೈಸೂರು ಪಾಕ್‌ ತಿನ್ತಾ ಇದ್ರೆ ನೋಡುಗರ ಬಾಯಲ್ಲಿ ನೀರು

ಮೈಸೂರು: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ ಕೆಡಿ-ದಿ ಡೆವಿಲ್‌ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ಬಾಲಿವುಡ್‌ ಬೆಡಗಿ ಶಿಲ್ಪಾ ಶೆಟ್ಟಿ ಕೂಡ ನಟಿಸುತ್ತಿದ್ದಾರೆ. ಚಿತ್ರದಲ್ಲಿರುವ ತಮ್ಮ ಪಾತ್ರದ ಶೂಟಿಂಗ್‌ಗಾಗಿ ಶಿಲ್ಪಾ ಶೆಟ್ಟಿ ಮೈಸೂರಿಗೆ ಬಂದಿಳಿದಿದ್ದಾರೆ. ದಸರಾ ಮುಗಿದ ಬಳಿಕ ಮೈಸೂರಿಗೆ ಬಂದಿರುವ ನಟಿ ಶಿಲ್ಪಾ ಶೆಟ್ಟಿಗೆ ಚಿತ್ರತಂಡವು ಮೈಸೂರು ಪಾಕ್‌, ಜಿಲೇಬಿ ಸೇರಿದಂತೆ ಬಗೆಬಗೆಯ ಸಿಹಿತಿಂಡಿ ನೀಡಿ ಸ್ವಾಗತ ಕೋರಿದೆ.

ಟ್ರೆಂಡಿಂಗ್​ ಸುದ್ದಿ

Dhurva Sarja: ಅಪ್ಪ ಮಗಳ ಬಾಂಧವ್ಯದ C ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಿದ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ

ನಟಿ ಪವಿತ್ರಾ ಜಯರಾಮ್‌ಗೆ ನನ್ನ ಗಂಡ ಆರನೇಯವನು; ಅಕ್ರಮ ಸಂಬಂಧದ ಬಗ್ಗೆ ಮೌನ ಮುರಿದ ಮೃತ ಚಂದ್ರಕಾಂತ್‌ ಪತ್ನಿ ಶಿಲ್ಪಾ

Amruthadhaare: ಜೈದೇವ್‌ ಕಿಡ್ನ್ಯಾಪ್‌ ಕಥೆ ಕೇಳಿ ಹೆಸರಘಟ್ಟಕ್ಕೆ ಬಂದಳು ಮಲ್ಲಿ; ಚಿಕ್ಕಮಗಳೂರಿನಲ್ಲಿ ಹನಿಮೂನ್‌ ನಡುವೆಯೇ ಅಲರ್ಟ್‌ ಆದ ಭೂಮಿ

ನಾನಿನ್ನೂ ಅವನ ನೆನಪಿನಲ್ಲಿಯೇ ಇದ್ದೇನೆ! ವಯಸ್ಸು 50 ದಾಟಿದರೂ ಮದುವೆ ಆಗದಿರುವುದಕ್ಕೆ ಕಾರಣ ತಿಳಿಸಿದ ‘ಹಾಲುಂಡ ತವರು​’ ನಟಿ ಸಿತಾರಾ

ಕೆಡಿ ಚಿತ್ರದ ಶೂಟಿಂಗ್‌ಗಾಗಿ ಮೈಸೂರಿಗೆ ಆಗಮಿಸಿರುವ ಶಿಲ್ಪಾ ಶೆಟ್ಟಿ ಮೈಸೂರು ಪಾಕ್‌ ಸವಿದ ಫೋಟೋವನ್ನು ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮೈಸೂರಿನ ಮೈಸೂರು ಪಾಕ್‌ ಜಗದ್‌ಖ್ಯಾತಿ ಪಡೆದ ತಿನಿಸು. ಮುಟ್ಟಿದರೆ ಮೃದುವಾಗಿರುವ, ಬಾಯಲ್ಲಿ ಇಟ್ಟರೆ ಕರಗಿ ಸ್ವರ್ಗಕ್ಕೆ ಹೋಗಿ ಬಂದಂತೆ ಎನಿಸುವ ಈ ಮೈಸೂರು ಪಾಕ್‌ ಮೈಸೂರಿನ ಹೆಸರನ್ನು ಜಗತ್ತಿನಾದ್ಯಂತ ಪ್ರಸಿದ್ಧಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಮೈಸೂರು ಪಾಕ್‌ ಅನ್ನು ಮೈಸೂರಲ್ಲಿ ತಯಾರಿಸುವ ಪ್ರಸಿದ್ಧ ಅಂಗಡಿಯ ಕುರಿತು ನಿಮಗೆ ಮಾಹಿತಿ ಇದೆಯೇ? ಹಾಗಾದರೆ ಮೈಸೂರಿನ ಗುರು ಸ್ವೀಟ್ಸ್‌ ಬಗ್ಗೆ ತಿಳಿದುಕೊಳ್ಳಿ. ಈ ರೀತಿ ಹಲವು ಕಡೆಗಳಲ್ಲಿ ಮೈಸೂರಲ್ಲಿ ಒರಿಜಿನಲ್‌ ಸ್ವಾದದ ಮೈಸೂರು ಪಾಕ್‌ ದೊರಕುತ್ತದೆ.

ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ

ಮೈಸೂರಲ್ಲಿ ಮೈಸೂರು ಪಾಕ್‌ ತಿನ್ನುತ್ತಿರುವ ವಿಡಿಯೋವನ್ನು ನಟಿ ಶಿಲ್ಪಾ ಶೆಟ್ಟಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮೈಸೂರು ಪಾಕ್‌ನ ಸವಿಯನ್ನು ವಿಶೇಷವಾಗಿ ಉತ್ತರ ಭಾರತೀಯರಿಗೆ ಪರಿಚಯಿಸಿದ್ದಾರೆ. ಇದು ನೋಡಿ ಮೈಸೂರು ಪಾಕ್‌, ಈ ಮೈಸೂರು ಪಾಕ್‌ನ ಬಣ್ಣ ನೋಡಿ, ಇಲ್ಲಿರುವ ಈ ಮೈಸೂರು ಪಾಕ್‌ ಒರಿಜಿನಲ್‌ ಎಂದೆಲ್ಲ ಅವರು ವಿಡಿಯೋದಲ್ಲಿ ವಿವರಿಸಿದ್ದಾರೆ. ಜತೆಗೆ ಓ ಮೈ ಗಾಡ್‌ ಓ ಮೈ ಗಾಡ್‌ ಎನ್ನುತ್ತ ಮೈಸೂರು ಪಾಕ್‌ ತಿನ್ನುತ್ತ ನೋಡುಗರ ಬಾಯಲ್ಲಿ ನೀರೂರಿಸಿದ್ದಾರೆ.

ಧ್ರುವ ಸರ್ಜಾ ನಾಯಕ ನಟನಾಗಿ ನಟಿಸುತ್ತಿರುವ ಕೆಡಿ ಚಿತ್ರದ ಶೂಟಿಂಗ್‌ ನಡೆಯುತ್ತಿದೆ. ಈ ಚಿತ್ರವನ್ನು ಪ್ರೇಮ್‌ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಂಜಯ್‌ ದತ್‌, ಶಿಲ್ಪಾ ಶೆಟ್ಟಿ ನಟಿಸುತ್ತಿದ್ದಾರೆ. ಇದೇ ಶೂಟಿಂಗ್‌ಗೆ ಬಂದ ಶಿಲ್ಪಾ ಶೆಟ್ಟಿ ಮೈಸೂರು ಪಾಕ್‌ ಸವಿದಿದ್ದಾರೆ. ಕನ್ನಡ ನಟ ರವಿಚಂದ್ರನ್‌ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಮೇಶ್‌ ಅರವಿಂದ್‌ ಕೂಡ ಇದ್ದಾರೆ. ಇತ್ತೀಚೆಗೆ ಈ ಚಿತ್ರದಲ್ಲಿ ರಮೇಶ್‌ ಅರವಿಂದ್‌ ಹೇಗಿರಲಿದ್ದಾರೆ ಎಂಬ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಲಾಗಿತ್ತು.

ಕೆಡಿ ಚಿತ್ರದಲ್ಲಿ ಧರ್ಮನಾಗಿ ರಮೇಶ್‌ ಅರವಿಂದ್‌ ನಟಿಸುತ್ತಿದ್ದಾರೆ. ಮಾಸ್‌ ಲುಕ್‌ನಲ್ಲಿ ಕೈಯಲ್ಲಿ ಲಾಂಗ್‌ ಹಿಡಿದ ಚಿತ್ರಕ್ಕೆ ಅಭಿಮಾನಿಗಳು ಬಗೆಬಗೆಯ ಕಾಮೆಂಟ್‌ ಮಾಡಿದ್ದಾರೆ. ರಮೇಶ್‌ ಅರವಿಂದ್‌ ಅವರ ಈ ಹಿಂದಿನ ಚಿತ್ರಗಳಲ್ಲಿ ಎಲ್ಲೂ ಮಚ್ಚು ಹಿಡಿದಿರಲಿಲ್ಲ. ಆದರೆ, ಜೋಗಿ ಪ್ರೇಮ್‌ ಇದೇ ಮೊದಲ ಬಾರಿಗೆ ರಮೇಶ್‌ ಅರವಿಂದ್‌ ಕೈಗೆ ಮಚ್ಚು ನೀಡಿದ್ದಾರೆ. ಜತೆಗೆ, ಇವರ ಸ್ಟೈಲ್‌ ಕೂಡ ಈ ಚಿತ್ರದಲ್ಲಿ ಸಂಪೂರ್ಣವಾಗಿ ಬದಲಾಗಿದೆ. ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೋಡಲು ರಜನಿಕಾಂತ್‌ ರೀತಿ ಕಾಣಿಸ್ತಿರಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.

ಕೆಲವು ತಿಂಗಳ ಹಿಂದೆ ಕೆಡಿ ಚಿತ್ರದ ರೀಷ್ಮಾ ನಾಣಯ್ಯ ಅವರ ಲುಕ್‌ ರಿವೀಲ್‌ ಮಾಡಲಾಗಿತ್ತು. ರೀಷ್ಮಾ ನಾಣಯ್ಯ ಹುಟ್ಟುಹಬ್ಬದಂದು ಆ ಚಿತ್ರದಲ್ಲಿ ಅವರು ಮಚ್‌ಲಕ್ಷ್ಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ರಿವೀಲ್‌ ಮಾಡಲಾಗಿತ್ತು. ಏಕ್‌ ಲವ್‌ ಯಾ ಚಿತ್ರದ ನಾಯಕಿ ರೀಷ್ಮಾ ಈ ಚಿತ್ರದಲ್ಲಿ ರಗಡ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಆ ಫಸ್ಟ್‌ ಲುಕ್‌ ಚಿತ್ರದಲ್ಲಿ ಗೋಚರಿಸಿತ್ತು. ಇದೀಗ ರಮೇಶ್‌ ಅರವಿಂದ್‌ ಕೂಡ ಮಚ್ಚು ಹಿಡಿದಿರುವುದು ನೋಡಿದರೆ ಕೆಡಿ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರದಲ್ಲಿ ಶಿಲ್ಪಾ ಶೆಟ್ಟಿಯವರ ಪಾತ್ರ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ