logo
ಕನ್ನಡ ಸುದ್ದಿ  /  ಮನರಂಜನೆ  /  Darshan: ‘ಮೊದಲ ಸಲ ಕುತ್ತಾರು ಕೊರಗಜ್ಜನ ದೈವಸ್ಥಾನಕ್ಕೆ ಬಂದಿದ್ದೇನೆ, ದರ್ಶನ ಪಡೆದಿದ್ದು ಖುಷಿಯಾಯ್ತು’ ನಟ ದರ್ಶನ್‌

Darshan: ‘ಮೊದಲ ಸಲ ಕುತ್ತಾರು ಕೊರಗಜ್ಜನ ದೈವಸ್ಥಾನಕ್ಕೆ ಬಂದಿದ್ದೇನೆ, ದರ್ಶನ ಪಡೆದಿದ್ದು ಖುಷಿಯಾಯ್ತು’ ನಟ ದರ್ಶನ್‌

Mar 10, 2024 12:41 PM IST

Darshan: ‘ಮೊದಲ ಸಲ ಕುತ್ತಾರು ಕೊರಗಜ್ಜನ ದೈವಸ್ಥಾನಕ್ಕೆ ಬಂದಿದ್ದೇನೆ, ದರ್ಶನ ಪಡೆದಿದ್ದು ಖುಷಿಯಾಯ್ತು’ ನಟ ದರ್ಶನ್‌

    • ನಟ ದರ್ಶನ್‌ ಮತ್ತವರ ಸ್ನೇಹಿತರ ಬಳಗ ದಕ್ಷಿಣ ಕನ್ನಡದ ಕುತ್ತಾರು ಕೊರಗಜ್ಜ ದೈವ ಸ್ಥಾನಕ್ಕೆ ಭೇಟಿ ನೀಡಿ ಅಜ್ಜನ ದರ್ಶನ ಪಡೆದಿದೆ. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿಯಿಂದ ನಟ ದರ್ಶನ್‌ಗೆ ಸತ್ಕರಿಸಲಾಗಿದೆ.  
Darshan: ‘ಮೊದಲ ಸಲ ಕುತ್ತಾರು ಕೊರಗಜ್ಜನ ದೈವಸ್ಥಾನಕ್ಕೆ ಬಂದಿದ್ದೇನೆ, ದರ್ಶನ ಪಡೆದಿದ್ದು ಖುಷಿಯಾಯ್ತು’ ನಟ ದರ್ಶನ್‌
Darshan: ‘ಮೊದಲ ಸಲ ಕುತ್ತಾರು ಕೊರಗಜ್ಜನ ದೈವಸ್ಥಾನಕ್ಕೆ ಬಂದಿದ್ದೇನೆ, ದರ್ಶನ ಪಡೆದಿದ್ದು ಖುಷಿಯಾಯ್ತು’ ನಟ ದರ್ಶನ್‌

Darshan at Kuttaru koragajja Temple: ಸ್ಯಾಂಡಲ್‌ವುಡ್‌ ನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸಿನಿಮಾಗಳ ಕೆಲಸದ ನಡುವೆಯೇ ಆಗಾಗ ಸ್ನೇಹಿತರ ಜತೆಗೆ ಕುಟುಂಬದ ಜತೆಗೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತಾರೆ. ಈಗ ಮೊದಲ ಸಲ ದಕ್ಷಿಣ ಕನ್ನಡದ ಕುತ್ತಾರು ಕೊರಗಜ್ಜನ ಸನ್ನಿಧಾನಕ್ಕೆ ನಟ ದರ್ಶನ್‌ ಭೇಟಿ ನೀಡಿದ್ದಾರೆ. ನಟ ದರ್ಶನ್‌ ಜತೆಗೆ ಆಪ್ತರಾದ ಚಿಕ್ಕಣ್ಣ, ಯಶಸ್‌ ಸೂರ್ಯ ಸೇರಿ ಹಲವು ಆಗಮಿಸಿ ಕೊರಗಜ್ಜನ ಪಾದಕ್ಕೆ ಎರಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅಲ್ಲಿ ಪತ್ನಿ ಜತೆಗೆ ದರ್ಶನ್‌ ವಿವಾಹ ವಾರ್ಷಿಕೋತ್ಸವ ಆಚರಣೆ, ಇಲ್ಲಿ ಕರ್ಮ ಯಾರನ್ನೂ ಬಿಡಲ್ಲ ಎಂದ ಪವಿತ್ರಾ ಗೌಡ

Brundavana Serial: ಡಿನ್ನರ್‌ಗೆ ಮನೆಗೆ ಕರೆದ ಸಹನಾ; ನಿಧಾನಕ್ಕೆ ಭಾರ್ಗವಿ ಮೋಸದ ಬಲೆಯೊಳಗೆ ಸಿಲುಕುತ್ತಿದ್ದಾನೆ ಆಕಾಶ್‌

Bhagyalakshmi Serial: 5 ಸ್ಟಾರ್‌ ಹೋಟೆಲ್‌ನಲ್ಲಿ ಹೊಸ ಅವತಾರ ತಾಳಿದ ಭಾಗ್ಯಾ; ಭಗಾಯ ಭಗಾಯ ಅಂತ ಹಿಂದೆ ಬಿದ್ದ ಸಹೋದ್ಯೋಗಿಗಳು

ಪ್ರಮೋದ್ ನಾರಾಯಣ್ ನಿರ್ಮಾಣದ ನೂತನ ಚಿತ್ರದ ನಾಯಕರಾಗಿ ‌ರಿಷಿ; ಸದ್ಯದಲ್ಲಿಯೇ ಶೀರ್ಷಿಕೆ ಬಿಡುಗಡೆ

ನಟ ದರ್ಶನ್‌ ಇತ್ತೀಚೆಗಷ್ಟೇ ಕುಟುಂಬದ ಜತೆಗೆ ಆಂಧ್ರದ ಕಾಳಹಸ್ತೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಬಂದಿದ್ದರು. ಬರ್ತ್‌ಡೇಗೂ ಮುನ್ನ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದು ಮರಳಿದ್ದರು. ಇದೀಗ ಕೊರಗಜ್ಜನ ಸನ್ನಿಧಾನಕ್ಕೆ ಮೊದಲ ಸಲ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ದರ್ಶನ್‌ ಆಗಮಿಸುತ್ತಿದ್ದಂತೆ, ಅವರನ್ನು ದೈವ ಸನ್ನಿಧಾನದ ವತಿಯಿಂದ ಸತ್ಕರಿಸಲಾಗಿದೆ. ದೇವಸ್ಥಾನ ಮಂಡಳಿಯಿಂದ ನೆನಪಿನ ಕಾಣಿಕೆ ನೀಡಲಾಗಿದೆ.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದರ್ಶನ್‌, ಎಲ್ಲರೂ ಹೇಳ್ತಿದ್ರು, ಕೊರಗಜ್ಜನ ದೈವ ಸ್ಥಾನಕ್ಕೆ ಭೇಟಿ ನೀಡುವಂತೆ. ಹಾಗಾಗಿ ಮೊದಲ ಸಲ ಸ್ನೇಹಿತರ ಜತೆಗೆ ಆಗಮಿಸಿದ್ದೇವೆ. ಈ ಹಿಂದೆ ಮಂಗಳೂರಿಗೆ ಸಿನಿಮಾ ಸೇರಿ ಬೇರೆ ಬೇರೆ ಕೆಲಸದ ನಿಮಿತ್ತ ಆಗಮಿಸಿದ್ದೆ. ಆದರೆ, ಇಲ್ಲಿ ಬರಲು ಆಗಿರಲಿಲ್ಲ. ಸಿನಿಮಾ ಶೂಟಿಂಗ್‌ ಬಿಡುವು ಮಾಡಿಕೊಂಡು ಬಂದಿದ್ದೇವೆ. ಸದ್ಯ ಇಲ್ಲಿ ಬಂದಿರುವುದಕ್ಕೆ ಯಾವುದೇ ನಿರ್ದಿಷ್ಟ ಕಾರಣ ಇಲ್ಲ ಎಂದಿದ್ದಾರೆ ದರ್ಶನ್‌.

ಇನ್ನು ನಟ ದರ್ಶನ್‌ ಕೊರಗಜ್ಜನ ದೈವ ಸನ್ನಿಧಾನಕ್ಕೆ ಆಗಮಿಸಿದ ಸುದ್ದಿ ತಿಳಿದ ಅವರ ಫ್ಯಾನ್ಸ್‌, ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಬೇಕೆಂದು ಆಗಮಿಸಿದ್ದರು. ನೂರಾರು ಅಭಿಮಾನಿಗಳ ಆಗಮನದ ಹಿನ್ನೆಲೆಯಲ್ಲಿ ಪೊಲೀಸ್‌ ತುಕಡಿಯೂ ಸ್ಥಳದಲ್ಲಿತ್ತು. ದೇವರ ದರ್ಶನದ ಬಳಿಕ ದರ್ಶನ್‌, ಚಿಕ್ಕಣ್ಣ, ಯಶಸ್‌ ಸೂರ್ಯ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ನೆನಪಿಕನ ಕಾಣಿಕೆಯನ್ನೂ ನೀಡ ಸತ್ಕರಿಸಲಾಯ್ತು.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಕಾಟೇರ ಸಿನಿಮಾ ಸಕ್ಸಸ್‌ ಖುಷಿಯಲ್ಲಿರುವ ನಟ ದರ್ಶನ್‌, ಸದ್ಯ ಡೆವಿಲ್‌ ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ಆ ಚಿತ್ರದ ಚಿತ್ರೀಕರಣದ ಗ್ಯಾಪ್‌ನಲ್ಲಿಯೇ ಇದೀಗ ಕೊರಗಜ್ಜನ ದರ್ಶನ ಪಡೆದಿದ್ದಾರೆ.

ಗಮನ ಸೆಳೆದಿತ್ತು ಡೆವಿಲ್‌ ಟೀಸರ್‌

ದರ್ಶನ್‌ ಅವರ 47ನೇ ವರ್ಷದ ಬರ್ತ್‌ಡೇ ದಿನದ ಪ್ರಯುಕ್ತ ಡೆವಿಲ್‌ ಚಿತ್ರದ ಮಾಸ್‌ ಟೀಸರ್‌ ಝಲಕ್‌ ಬಿಡುಗಡೆಯಾಗಿತ್ತು. ಟೀಸರ್‌ ನೋಡಿದ ಅವರ ಸೆಲೆಬ್ರಿಟಿಗಳು ಕುಣಿದು ಕುಪ್ಪಳಿಸಿದ್ದರು. ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು.. ಪೋಟೋ ತೆಗೆಯಲದು ಬಲು ಕೋಪ ಬರುವುದು.. ಫೋಟೋ ತೆಗೆದ ಕೈಯ ಪಾಪು ಮುರಿದು ಬಿಡುವುದು... ಸರಸು ಪಾಪು ಹೆಸರು ಕೇಳಲ್ವ? ಎನ್ನುತ್ತಿದ್ದಂತೆ ಆ ಪಾಪು ಡೆವಿಲ್‌ ಎಂದು ಗಹಗಹಿಸಿ ನಗುತ್ತಾರೆ ದರ್ಶನ್‌.. ಹೀಗೆ ಆ ಡೆವಿಲ್‌ ಎಷ್ಟು ಕ್ರೂರಿ ಇರಬಹುದು ಎಂಬುದನ್ನು ಒಂದು ಸಣ್ಣ ಝಲಕ್‌ನಲ್ಲಿ ತೋರಿಸಿಕೊಟ್ಟಿದ್ದರು ನಿರ್ದೇಶಕ ಪ್ರಕಾಶ್‌ ವೀರ್.‌

ಮಾಸ್‌ ಕಮರ್ಷಿಯಲ್‌ ಕಥೆಯ ಡೆವಿಲ್‌ ಚಿತ್ರದ ಫಸ್ಟ್‌ಲುಕ್‌ ಟೀಸರ್‌ನಲ್ಲಿ ದರ್ಶನ್‌ ರಗಡ್‌ ಆಗಿಯೇ ಕಾಣಿಸಿದ್ದರು. ಕಡುಗೆಂಪು ವರ್ಣದ ಸೂಟ್‌ ಧರಿಸಿ, ಬಾಯಲ್ಲಿ ಸಿಗರೇಟ್‌ ಹೊತ್ತಿಸಿ, ಮತ್ತೊಂದು ಕೈಯಲ್ಲಿ ಗನ್‌ ಹಿಡಿದು ಹೊಸ ಅವತಾರದಲ್ಲಿ ಎದುರಾಗಿದ್ದರು ದರ್ಶನ್. ಇನ್ನು ನಿರ್ದೇಶಕ ಪ್ರಕಾಶ್‌ ವೀರ್‌, ಈ ಹಿಂದೆ ದರ್ಶನ್‌ಗೆ ತಾರಕ್‌ ಸಿನಿಮಾ ಮಾಡಿದ್ದರು. ಇದೀಗ ಡೆವಿಲ್‌ ಮೂಲಕ ಆಗಮಿಸಿದ್ದಾರೆ. ದರ್ಶನ್‌ ಅವರನ್ನು ಬೇರೆ ರೀತಿಯಲ್ಲಿ ತೋರಿಸುವೆ ಎಂದು ಈ ಹಿಂದೆ ನಿರ್ದೇಶಕರು ಹೇಳಿದ್ದರು. ಅದರಂತೆ, ಹೊಸ ಅವತಾರದಲ್ಲಿಯೇ ದರ್ಶನ್‌ ಎದುರಾಗಿದ್ದಾರೆ. ರಗಡ್‌ ಡೈಲಾಗ್‌ ಮೂಲಕ ಸ್ಕ್ರೀನ್‌ ಮೇಲೆ ದರ್ಶನ್‌ ಅಬ್ಬರಿಸಿದರೆ, ಅದರ ನಡುವೆ ತೇಲಿ ಬರುವ ಅಜನೀಶ್‌ ಲೋಕನಾಥ್‌ ಅವರ ಮಾಸ್‌ ಬಿಜಿಎಂ ಸಹ ಮೆಚ್ಚುಗೆ ಪಡೆದುಕೊಂಡಿತ್ತು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ