ಕನ್ನಡ ಸುದ್ದಿ  /  Entertainment  /  Sandalwood News Shivarajkumar Narthan Combination Bhairathi Ranagal Movie Releasing On August 15 Mnk

‘ಭೈರತಿ ರಣಗಲ್’ ಚಿತ್ರದ ಬಗ್ಗೆ ಹೊರಬಿತ್ತು ಬಿಗ್‌ ಅಪ್‌ಡೇಟ್‌; ಘಟಾನುಘಟಿಗಳ ಎದುರು ಸೆಣಸಲು ಶಿವಣ್ಣ ರೆಡಿ!

ಶಿವರಾಜ್‌ಕುಮಾರ್‌ ನಾಯಕನಾಗಿ ನಟಿಸುತ್ತಿರುವ ಭೈರತಿ ರಣಗಲ್‌ ಸಿನಿಮಾ ಇದೀಗ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಅಚ್ಚರಿಯ ವಿಚಾರ ಏನೆಂದರೆ ಪರಭಾಷೆಯ ದೊಡ್ಡ ದೊಡ್ಡ ಸಿನಿಮಾಗಳ ಎದುರು ಈ ಚಿತ್ರ ಆಗಸ್ಟ್‌ 15ರಂದು ರಿಲೀಸ್‌ ಆಗಲಿದೆ.

‘ಭೈರತಿ ರಣಗಲ್’ ಚಿತ್ರದ ಬಗ್ಗೆ ಹೊರಬಿತ್ತು ಬಿಗ್‌ ಅಪ್‌ಡೇಟ್‌; ಘಟಾನುಘಟಿಗಳ ಎದುರು ಸೆಣಸಲು ಶಿವಣ್ಣ ರೆಡಿ!
‘ಭೈರತಿ ರಣಗಲ್’ ಚಿತ್ರದ ಬಗ್ಗೆ ಹೊರಬಿತ್ತು ಬಿಗ್‌ ಅಪ್‌ಡೇಟ್‌; ಘಟಾನುಘಟಿಗಳ ಎದುರು ಸೆಣಸಲು ಶಿವಣ್ಣ ರೆಡಿ!

Bhairathi Ranagal Release Date: ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ನಟನೆಯ ಕರಟಕ ದಮನಕ ಸಿನಿಮಾ ಬಿಡುಗಡೆಯಾಗಿದೆ. ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ನಡುವೆಯೇ ತಮ್ಮ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿದ್ದಾರೆ ಶಿವರಾಜ್‌ಕುಮಾರ್‌. ತಮ್ಮದೇ ಹೋಮ್‌ ಬ್ಯಾನರ್‌ನಲ್ಲಿ ಮೂಡಿಬರುತ್ತಿರುವ ಭೈರತಿ ರಣಗಲ್‌ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ ಶಿವಣ್ಣ. ಮಫ್ತಿ ಸಿನಿಮಾ ನಿರ್ದೇಶಿಸಿದ್ದ ನರ್ತನ್‌ ಈ ಚಿತ್ರಕ್ಕೆ ಆಕ್ಷನ್‌ ಕಟ್ ಹೇಳುತ್ತಿದ್ದಾರೆ.

2017 ಡಿಸೆಂಬರ್‌ನಲ್ಲಿ ತೆರೆಕಂಡ ಮಫ್ತಿ ಚಿತ್ರವನ್ನು ಜಯಣ್ಣ ಕಂಬೈನ್ಸ್‌ ನಿರ್ಮಿಸಿ ನರ್ತನ್‌ ಕಥೆ ಬರೆದು ನಿರ್ದೇಶಿಸಿದ್ದರು. 'ಮಫ್ತಿ' ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಅವರ ಭೈರತಿ ರಣಗಲ್‌ ಪಾತ್ರ ನೋಡುಗರಿಂದ ಮೆಚ್ಚುಗೆ ಪಡೆದಿತ್ತು. ಸಿನಿಮಾ ಬಿಡುಗಡೆ ಆಗಿ ಸೂಪರ್‌ ಹಿಟ್‌ ಪಟ್ಟಿ ಸೇರಿದರೂ ಆ ಸಿನಿಮಾದಲ್ಲಿನ ಶಿವಣ್ಣನ ಪಾತ್ರದ ಹೆಸರೇ ಒಂದು ಟ್ರೆಂಡ್‌ ಸೆಟ್‌ ಮಾಡಿತ್ತು. ಇದೀಗ ಈ ಚಿತ್ರದ ಪ್ರೀಕ್ವೆಲ್‌ ಭೈರತಿ ರಣಗಲ್‌ ಹೆಸರಿನಲ್ಲಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲು ರೆಡಿಯಾಗಿದೆ. ಗೀತಾ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

ಆಗಸ್ಟ್‌ನಲ್ಲಿ ಭೈರತಿ ರಣಗಲ್‌ ರಿಲೀಸ್

ಭೈರತಿ ರಣಗಲ್‌ ಈ ವರ್ಷದ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ. ಸದ್ಯ ಶೂಟಿಂಗ್‌ ಹಂತದಲ್ಲಿರುವ ಈ ಸಿನಿಮಾತಂಡದಿಂದ ಇದೀಗ ಬಿಗ್‌ ಅಪ್‌ಡೇಟ್‌ ಹೊರಬಿದ್ದಿದೆ. ಆಗಸ್ಟ್‌ 15ರಂದು ಭೈರತಿ ರಣಗಲ್‌ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಈ ಬಗ್ಗೆ ಅಧಿಕೃತವಾಗಿ ನೂತನ ಬಿಡುಗಡೆಯ ದಿನಾಂಕದ ಪೋಸ್ಟರ್‌ ಶೇರ್‌ ಮಾಡಿಕೊಂಡ ಶಿವರಾಜ್‌ಕುಮಾರ್‌ ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿದ್ದಾರೆ.

ಪ್ಯಾನ್‌ ಇಂಡಿಯಾ ಭೈರತಿ..

ಶಿವರಾಜ್‌ಕುಮಾರ್‌ ಮತ್ತು ನರ್ತನ್‌ ಜೋಡಿಯ ಭೈರತಿ ರಣಗಲ್‌ ಸಿನಿಮಾ, ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗುತ್ತಿಲ್ಲ. ಬದಲಿಗೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ. ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಿಗೂ ಡಬ್‌ ಆಗಿ ತೆರೆಕಾಣಲಿದೆ. ಶಿವರಾಜ್‌ಕುಮಾರ್‌ಗೆ ಜೋಡಿಯಾಗಿ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಖ್ಯಾತಿಯ ರುಕ್ಮಿಣಿ ವಸಂತ್‌ ಈ ಚಿತ್ರದಲ್ಲಿ ನಾಯಕಿಯಾಗಿದ್ದಾರೆ.

ಪುಷ್ಪ 2 ಜತೆಗೆ ಭೈರತಿ ಸ್ಪರ್ಧೆ

ಅಲ್ಲು ಅರ್ಜುನ್‌ ನಾಯಕನಾಗಿ ನಟಿಸುತ್ತಿರುವ ಪುಷ್ಪ 2 ಸಿನಿಮಾ ಈಗಾಗಲೇ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದೆ. ಆಗಸ್ಟ್‌ 15ರಂದೇ ಆ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಈಗ ಪುಷ್ಪ ಬರೋ ದಿನದಂದೇ ಭೈರತಿ ರಣಗಲ್‌ ಸಿನಿಮಾ ಸಹ ರಿಲೀಸ್‌ ಆಗಲಿದೆ. ಈ ಮೂಲಕ ಕರ್ನಾಟಕದಲ್ಲಿ ದೊಡ್ಡ ಪೈಪೋಟಿ ಏರ್ಪಡಲಿದೆ ಎಂದೇ ಹೇಳಲಾಗುತ್ತಿದೆ.