logo
ಕನ್ನಡ ಸುದ್ದಿ  /  ಮನರಂಜನೆ  /  Love Birds Movie: ಪೊಲೀಸ್‌ ಠಾಣೆ ಮೆಟ್ಟಿಲೇರಿದ ಲವ್‌ ಬರ್ಡ್ಸ್‌ ವಿವಾದ; ಸಂಭಾವನೆ ಕೊಟ್ಟಿಲ್ಲ ಎಂದು ದೂರಿದ ನಿರ್ದೇಶಕ ಪಿಸಿ ಶೇಖರ್‌

Love Birds Movie: ಪೊಲೀಸ್‌ ಠಾಣೆ ಮೆಟ್ಟಿಲೇರಿದ ಲವ್‌ ಬರ್ಡ್ಸ್‌ ವಿವಾದ; ಸಂಭಾವನೆ ಕೊಟ್ಟಿಲ್ಲ ಎಂದು ದೂರಿದ ನಿರ್ದೇಶಕ ಪಿಸಿ ಶೇಖರ್‌

Rakshitha Sowmya HT Kannada

May 22, 2023 11:22 AM IST

google News

ಲವ್‌ ಬರ್ಡ್ಸ್‌ ಸಿನಿಮಾ ವಿವಾದ

    • ನನ್ನ ಪೋರ್ಜರಿ ಮಾಡಿ ಸಿನಿಮಾವನ್ನು ಅಮೆಜಾನ್‌ ಪ್ರೈಂಗೆ ಒಳ್ಳೆ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ನನಗೆ ಬರಬೇಕಿದ್ದ ಹಣವನ್ನೂ ನೀಡದೆ, ಅದನ್ನು ಕೇಳಲು ಹೋದರೆ ಚಂದ್ರು, ನನ್ನ ಮೇಲೆ ಆವಾಜ್‌ ಹಾಕುತ್ತಿದ್ದಾರೆ ಎಂದು ಶೇಖರ್‌ ಆರೋಪಿಸಿದ್ದಾರೆ.
ಲವ್‌ ಬರ್ಡ್ಸ್‌ ಸಿನಿಮಾ ವಿವಾದ
ಲವ್‌ ಬರ್ಡ್ಸ್‌ ಸಿನಿಮಾ ವಿವಾದ

ಸಂಭಾವನೆ, ಕೃತಿ ಚೌರ್ಯ ಸೇರಿದಂತೆ ಇನ್ನಿತರ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದಲ್ಲಿ ಅನೇಕ ಪ್ರಕರಣಗಳು ಕೋರ್ಟ್‌ ಮೆಟ್ಟಿಲೇರಿವೆ. ಕೆಲವು ಪ್ರಕರಣಗಳು ಫಿಲ್ಮ್‌ ಚೇಂಬರ್‌ನಲ್ಲಿ ಸಿನಿ ಗಣ್ಯರ ಸಮ್ಮುಖದಲ್ಲಿ ಇತ್ಯರ್ಥವಾಗಿವೆ. ಇದೀಗ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಅಭಿನಯದ ಲವ್‌ ಬರ್ಡ್ಸ್‌ ಸಿನಿಮಾ ಪ್ರಕರಣ ಕೂಡಾ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

ಲವ್‌ ಬರ್ಡ್ಸ್‌ ಸಿನಿಮಾ ಇತ್ತೀಚೆಗಷ್ಟೇ ತೆರೆ ಕಂಡಿತ್ತು. ಕೆಲವು ದಿನಗಳ ಹಿಂದೆ ಈ ಸಿನಿಮಾ ಒಟಿಟಿಯಲ್ಲಿ ಕೂಡಾ ಪ್ರಸಾರ ಆರಂಭಿಸಿತ್ತು. ಈ ಚಿತ್ರವನ್ನು ಕಡ್ಡಿಪುಡಿ ಚಂದ್ರು ನಿರ್ಮಾಣ ಮಾಡಿದ್ದು ಪಿ.ಸಿ. ಶೇಖರ್‌ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕರು ಸಿನಿಮಾಗೆ ಒಪ್ಪಿಕೊಂಡಿದ್ದ ಸಂಭಾವನೆವನ್ನು ನನಗೆ ಇನ್ನೂ ನೀಡಿಲ್ಲ ಎಂದು ನಿರ್ದೇಶಕ ಶೇಖರ್‌ ಆರೋಪ ಮಾಡಿದ್ದಾರೆ. ಟಿವಿ 9 ವಾಹಿನಿಗೆ ಪ್ರತಿಕ್ರಿಯಿಸಿರುವ ಶೇಖರ್‌, ಲವ್‌ ಬರ್ಡ್ಸ್‌ ಸಿನಿಮಾ ನಿರ್ದೇಶನದ ಜೊತೆಗೆ ಎಡಿಟಿಂಗ್‌ ಮಾಡಲು ಒಟ್ಟು 25 ಲಕ್ಷ ರೂಪಾಯಿ ಸಂಭಾವನೆ ಎಂದು ಫಿಕ್ಸ್‌ ಆಗಿತ್ತು. ಆದರೆ ನಿರ್ಮಾಪಕರು ನನಗೆ 6.5 ಲಕ್ಷ ರೂಪಾಯಿ ಮಾತ್ರ ನೀಡಿದ್ದು ಉಳಿದ ಹಣವನ್ನು ಇದುವರೆಗೂ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಅಷ್ಟೇ ಅಲ್ಲ, ನನ್ನ ಪೋರ್ಜರಿ ಮಾಡಿ ಸಿನಿಮಾವನ್ನು ಅಮೆಜಾನ್‌ ಪ್ರೈಂಗೆ ಒಳ್ಳೆ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ನನಗೆ ಬರಬೇಕಿದ್ದ ಹಣವನ್ನೂ ನೀಡದೆ, ಅದನ್ನು ಕೇಳಲು ಹೋದರೆ ಚಂದ್ರು, ನನ್ನ ಮೇಲೆ ಆವಾಜ್‌ ಹಾಕುತ್ತಿದ್ದಾರೆ ಎಂದು ಶೇಖರ್‌ ಆರೋಪಿಸಿದ್ದಾರೆ. ಆದರೆ ನಿರ್ಮಾಪಕ ಕಡ್ಡಿಪುಡಿ ಚಂದ್ರು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಶೇಖರ್‌ ಅವರು ತಮ್ಮ ಪತ್ನಿ ಹಾಗೂ ಅಣ್ಣನಿಗೂ ಸಂಭಾವನೆ ಕೊಡಲು ಒತ್ತಾಯಿಸುತ್ತಿದ್ದಾರೆ. ಸಿನಿಮಾಗೆ ಸಂಬಂಧಿಸಿದಂತೆ ನನಗೆ ಇನ್ನೂ ಕೆಲವರಿಂದ ಹಣ ಬರಬೇಕಿದೆ ಎಂದಿದ್ದಾರೆ. ಈ ಆರೋಪ ಪ್ರತ್ಯಾರೋಪಕ್ಕೆ ಯಾವ ರೀತಿ ಫುಲ್‌ ಸ್ಟಾಪ್‌ ಬೀಳಲಿದೆ ಕಾದು ನೋಡಬೇಕು.

ಮತ್ತಷ್ಟು ಸಿನಿಮಾ ಸುದ್ದಿಗಳು

ಅಡಲ್ಟ್‌ ಸಿನಿಮಾ ಅನ್ನೋ ಕಾರಣಕ್ಕೆ ಆ ಚಿತ್ರಕ್ಕೆ ನನ್ನ ಹೆಸರು ನಾನೇ ಹಾಕಿಸಿಕೊಂಡಿರಲಿಲ್ಲ; ವಿ. ನಾಗೇಂದ್ರ ಪ್ರಸಾದ್

ಎಂ ಡಿ ಶ್ರೀಧರ್‌ ನಿರ್ದೇಶನದಲ್ಲಿ ಫ್ರೆಂಡ್ಸ್‌ ಹೆಸರಿನ ಸಿನಿಮಾ ಬಿಡುಗಡೆ ಆಗಿತ್ತು. ಮಾಸ್ಟರ್‌ ಆನಂದ್‌, ಶರಣ್‌, ವಾಸು, ಶ್ಯಾಮ್‌ ಈ ಸಿನಿಮಾದಲ್ಲಿ ನಟಿಸಿದ್ದರು. ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದ ಈ ಸಿನಿಮಾಕ್ಕೆ ನಾಗೇಂದ್ರ ಪ್ರಸಾದ್‌ ಸಂಭಾಷಣೆ ಬರೆಯುವುದರ ಜತೆಗೆ ಹಾಡುಗಳಿಗೂ ಸಾಹಿತ್ಯ ಬರೆದಿದ್ದರು. ಆದರೆ, ಸಿನಿಮಾ ಬಿಡುಗಡೆ ಸಮಯದಲ್ಲಿ ಎಲ್ಲಿಯೂ ಸಹ ತಮ್ಮ ಹೆಸರನ್ನು ಸೇರಿಸಬೇಡಿ ಎಂದಿದ್ದರಂತೆ ನಾಗೇಂದ್ರ ಪ್ರಸಾದ್. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಒತ್ತಿ.

ಜೊತೆ ಜೊತೆಯಲಿ ಧಾರಾವಾಹಿ ಅಂತ್ಯ, ಇನ್ಮುಂದೆ ಸಿನಿಮಾಗಳತ್ತ ಹೆಚ್ಚು ಗಮನ ಹರಿಸುತ್ತೇನೆ; ಅನು ಸಿರಿಮನೆ ಖ್ಯಾತಿಯ ಮೇಘಾ ಶೆಟ್ಟಿ

ಧಾರಾವಾಹಿ ಆರಂಭದಿಂದ ಕೊನೆವರೆಗೂ ಬಹಳ ಕುತೂಹಲ ಕೆರಳಿಸಿತ್ತು. 45ರ ವ್ಯಕ್ತಿ ಹಾಗೂ 18ರ ಯುವತಿ ನಡುವಿನ ಪ್ರೀತಿ, ಮದುವೆ ಹಾಗೂ ಇನ್ನಿತರ ಅಂಶಗಳನ್ನು ಧಾರಾವಾಹಿಯಲ್ಲಿ ತೋರಿಸಲಾಗಿತ್ತು. ಈ ಧಾರಾವಾಹಿ ಅನಿರುದ್ಧ್‌ಗೆ ಒಂದೊಳ್ಳೆ ಬ್ರೇಕ್‌ ನೀಡಿತು. ಇದಕ್ಕೂ ಮುನ್ನ ಸಿನಿಮಾಗಳಲ್ಲಿ ನಟಿಸಿದ್ದ ಅನಿರುದ್ಧ್‌ಗೆ ಈ ಧಾರಾವಾಹಿ ಕಿರುತೆರೆ ಸ್ಟಾರ್‌ ಪಟ್ಟ ತಂದು ನೀಡಿತು. ಹಾಗೇ ಇದು ಮೇಘಾ ಶೆಟ್ಟಿಗೆ ಮೊದಲ ಧಾರಾವಾಹಿ. ನಟನೆಯ ಬಗ್ಗೆ ಕಿಂಚಿತ್ತೂ ತಿಳಿಯದ ಮೇಘಾ ಶೆಟ್ಟಿ ಈ ಧಾರಾವಾಹಿಯಿಂದ ಸಾಕಷ್ಟು ಕಲಿತಿದ್ದಾರೆ. ಜೊತೆಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನೂ ಪಡೆದಿದ್ದಾರೆ. ಪೂರ್ತಿ ಸ್ಟೋರಿಗೆ ಈ ಲಿಂಕ್‌ ಒತ್ತಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ