ಕನ್ನಡ ಸುದ್ದಿ  /  ಮನರಂಜನೆ  /  Weekend With Ramesh: ಅಡಲ್ಟ್‌ ಸಿನಿಮಾ ಅನ್ನೋ ಕಾರಣಕ್ಕೆ ಆ ಚಿತ್ರಕ್ಕೆ ನನ್ನ ಹೆಸರು ನಾನೇ ಹಾಕಿಸಿಕೊಂಡಿರಲಿಲ್ಲ; ವಿ. ನಾಗೇಂದ್ರ ಪ್ರಸಾದ್

Weekend With Ramesh: ಅಡಲ್ಟ್‌ ಸಿನಿಮಾ ಅನ್ನೋ ಕಾರಣಕ್ಕೆ ಆ ಚಿತ್ರಕ್ಕೆ ನನ್ನ ಹೆಸರು ನಾನೇ ಹಾಕಿಸಿಕೊಂಡಿರಲಿಲ್ಲ; ವಿ. ನಾಗೇಂದ್ರ ಪ್ರಸಾದ್

ಈ ವಾರದ ವೀಕೆಂಡ್‌ ವಿಥ್‌ ರಮೇಶ್‌ ಶೋನಲ್ಲಿ ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್‌ ಸಾಧಕರ ಸೀಟ್‌ ಏರಿದ್ದರು. ಈ ವೇಳೆ ಸಿನಿಮಾವೊಂದರ ಹಾಸ್ಯ ಪ್ರಸಂಗವೊಂದನ್ನು ನೆನಪು ಮಾಡಿಕೊಂಡಿದ್ದಾರೆ.

ಅಡಲ್ಟ್‌ ಸಿನಿಮಾ ಅನ್ನೋ ಕಾರಣಕ್ಕೆ ಆ ಚಿತ್ರಕ್ಕೆ ನನ್ನ ಹೆಸರು ನಾನೇ ಹಾಕಿಸಿಕೊಂಡಿರಲಿಲ್ಲ; ಡಾ ವಿ. ನಾಗೇಂದ್ರ ಪ್ರಸಾದ್
ಅಡಲ್ಟ್‌ ಸಿನಿಮಾ ಅನ್ನೋ ಕಾರಣಕ್ಕೆ ಆ ಚಿತ್ರಕ್ಕೆ ನನ್ನ ಹೆಸರು ನಾನೇ ಹಾಕಿಸಿಕೊಂಡಿರಲಿಲ್ಲ; ಡಾ ವಿ. ನಾಗೇಂದ್ರ ಪ್ರಸಾದ್

Weekend With Ramesh: ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಶೋ ವೀಕೆಂಡ್‌ ವಿಥ್‌ ರಮೇಶ್‌ ಕಾರ್ಯಕ್ರಮದಲ್ಲಿ ಈ ಭಾನುವಾರ ಖ್ಯಾತ ಚಿತ್ರ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್‌ (Dr V Nagendra Prasad)ಸಾಧಕರ ಸೀಟ್‌ನಲ್ಲಿ ಆಸೀನರಾಗಿದ್ದರು. ಕಳೆದ ಹತ್ತಾರು ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಗೀತೆ ರಚನೆಕಾರರಾಗಿ, ಸಂಭಾಷಣಾಕಾರರಾಗಿ, ನಿರ್ದೇಶಕರಾಗಿ ಅವರು ಗುರುತಿಸಿಕೊಂಡಿದ್ದಾರೆ. ಬರೋಬ್ಬರಿ 3000 ಕ್ಕೂ ಅಧಿಕ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ ನಾಗೇಂದ್ರ ಪ್ರಸಾದ್.‌

ಟ್ರೆಂಡಿಂಗ್​ ಸುದ್ದಿ

ಈ ಸಾಧಕನ ಸಿನಿಮಾ ಮತ್ತು ವೈಯಕ್ತಿಕ ಜೀವನ ಈ ವಾರದ ವೀಕೆಂಡ್‌ ಟೆಂಟ್‌ನಲ್ಲಿ ಅನಾವರಣಗೊಂಡಿದೆ. ಹತ್ತು ಹಲವು ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಆರಂಭದ ಕಷ್ಟದ ದಿನಗಳನ್ನು ಕಣ್ಣ ಮುಂದೆ ಎಳೆದುಕೊಂಡಿದ್ದಾರೆ. ಒಂದೊಂದು ರೂಪಾಯಿಗೂ ಪಟ್ಟ ಯಾತನೆಯನ್ನು ನೆನಪು ಮಾಡಿಕೊಂಡಿದ್ದಾರೆ. ಗೆಲುವಿನ ಖುಷಿಯನ್ನೂ ಹಂಚಿಕೊಂಡಿದ್ದಾರೆ. ಆ ಪೈಕಿ ಒಂದು ಗೌಪ್ಯ ವಿಚಾರವನ್ನೂ ಹೇಳಿಕೊಂಡಿದ್ದಾರೆ.

ಅದು 2002. ಎಂ ಡಿ ಶ್ರೀಧರ್‌ ನಿರ್ದೇಶನದಲ್ಲಿ ಫ್ರೆಂಡ್ಸ್‌ ಹೆಸರಿನ ಸಿನಿಮಾ ಬಿಡುಗಡೆ ಆಗಿತ್ತು. ಮಾಸ್ಟರ್‌ ಆನಂದ್‌, ಶರಣ್‌, ವಾಸು, ಶ್ಯಾಮ್‌ ಈ ಸಿನಿಮಾದಲ್ಲಿ ನಟಿಸಿದ್ದರು. ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದ ಈ ಸಿನಿಮಾಕ್ಕೆ ನಾಗೇಂದ್ರ ಪ್ರಸಾದ್‌ ಸಂಭಾಷಣೆ ಬರೆಯುವುದರ ಜತೆಗೆ ಹಾಡುಗಳಿಗೂ ಸಾಹಿತ್ಯ ಬರೆದಿದ್ದರು. ಆದರೆ, ಸಿನಿಮಾ ಬಿಡುಗಡೆ ಸಮಯದಲ್ಲಿ ಎಲ್ಲಿಯೂ ಸಹ ತಮ್ಮ ಹೆಸರನ್ನು ಸೇರಿಸಬೇಡಿ ಎಂದಿದ್ದರಂತೆ ನಾಗೇಂದ್ರ ಪ್ರಸಾದ್.‌

ಹೀಗಿದೆ ಆ ಕಾರಣ

ಫ್ರೆಂಡ್ಸ್‌ ಸಿನಿಮಾಕ್ಕೂ ಮುನ್ನ ಶ್ರೀ ಮಂಜುನಾಥ ಸಿನಿಮಾಕ್ಕೆ ನಾಗೇಂದ್ರ ಪ್ರಸಾದ್‌ ಕೆಲಸ ಮಾಡಿದ್ದರು. ಭಕ್ತಿ ಪ್ರಧಾನ ಈ ಸಿನಿಮಾಕ್ಕೆ ಸಂಭಾಷಣೆಯ ಜತೆಗೆ ಹಾಡುಗಳಿಗೂ ಸಾಹಿತ್ಯ ಒದಗಿಸಿದ್ದರು. ಸಿನಿಮಾ ಹಿಟ್‌ ಆಗುತ್ತಿದ್ದಂತೆ, ಹೋದಲೆಲ್ಲ ಶ್ರೀ ಮಂಜುನಾಥ ಸಿನಿಮಾ ರೈಟರ್‌ ಎಂದೇ ಅವರನ್ನು ಗುರುತಿಸುತ್ತಿದ್ದರು. ನಾಗೇಂದ್ರ ಪ್ರಸಾದ್‌ಗೆ ಮೆಚ್ಚುಗೆಯ ಮಹಾಪೂರವೇ ಸಿಗುತ್ತಿತ್ತು. ಕೆಲ ಹಿರಿಯರು ಇವರ ಕಾಲಿಗೆ ಬಿದ್ದ ಉದಾಹರಣೆಯೂ ಇದೆ. ಹೀಗಿರುವಾಗ ಎಲ್ಲರಿಂದ ಮೆಚ್ಚುಗೆ ಪಡೆದ ಶ್ರೀ ಮಂಜುನಾಥದಂಥ ಸಿನಿಮಾ ನೀಡಿದ್ದ ಬರಹಗಾರ, ಇದೀಗ ಅಡಲ್ಟ್‌ ಕಂಟೆಂಟ್‌ ಇರುವ, ಪೋಲಿ ಪೋಲಿ ಡೈಲಾಗ್‌ಗಳಿರುವ ಸಿನಿಮಾಕ್ಕೆ ಸಂಭಾಷಣೆ ಬರೆದ್ರಾ? ಎಂಬ ಪ್ರಶ್ನೆ ಬರಬಾರದು ಎಂಬ ಕಾರಣಕ್ಕೆ ಸಿನಿಮಾದಲ್ಲಿ ಎಲ್ಲಿಯೂ ತಮ್ಮ ಹೆಸರನ್ನು ಅವರು ಸೇರಿಸಿರಲಿಲ್ಲ ಎಂಬ ವಿಚಾರವನ್ನು ವೀಕೆಂಡ್‌ ವಿಥ್‌ ರಮೇಶ್‌ ಶೋನಲ್ಲಿ ಹೇಳಿಕೊಂಡಿದ್ದಾರೆ.

ನಟ ವಾಸು ಬಿಚ್ಚಿಟ್ಟ ಅಂದಿನ ಗುಟ್ಟು..

ಫ್ರೆಂಡ್ಸ್‌ ಸಿನಿಮಾದಲ್ಲಿ ನಟಿಸಿದ್ದ ವಾಸು ಸಹ ವಿಕೇಂಡ್‌ ವಿಥ್‌ ರಮೇಶ್‌ ಶೋಕ್ಕೆ ಆಗಮಿಸಿದ್ದರು. ಈ ವೇಳೆ ಆ ದಿನಗಳನ್ನು ನೆನಪು ಮಾಡಿ ಈ ಪ್ರಹಸನವನ್ನು ವಿವರಿಸಿದರು. 5ಸ್ಟಾರ್‌ ಹೊಟೇಲ್‌ನಲ್ಲಿ ಸಕ್ಸಸ್‌ ಮೀಟ್‌ ಮಾಡಿದಾಗಲೂ ಈ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾದ ಕಾರಣಕ್ಕೆ ಚಿತ್ರತಂಡದ ಎಲ್ಲರಿಗೂ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಲಾಗಿತ್ತು. ನಾಗೇಂದ್ರ ಪ್ರಸಾದ್‌ಗೂ ಸರವನ್ನು ಉಡುಗೊರೆಯಾಗಿ ನೀಡಲಾಗಿತ್ತು ಎಂಬ ವಿಚಾರವನ್ನು ವಾಸು ಹೇಳಿಕೊಂಡಿದ್ದಾರೆ.

IPL_Entry_Point