logo
ಕನ್ನಡ ಸುದ್ದಿ  /  ಮನರಂಜನೆ  /  ‘ಕಬ್ಜ ಚಿತ್ರ ಮಾಡಿದ್ದಕ್ಕೆ ಸರ್ಕಾರಕ್ಕೆ 20 ಕೋಟಿ ಟ್ಯಾಕ್ಸ್‌ ಕಟ್ಟಿದ್ದೇನೆ, ಇದು ಸೋಲಲ್ಲ ಸಕ್ಸಸ್‌!’ ಐದು ಸಿನಿಮಾ ಘೋಷಿಸಿದ ಆರ್‌ ಚಂದ್ರು

‘ಕಬ್ಜ ಚಿತ್ರ ಮಾಡಿದ್ದಕ್ಕೆ ಸರ್ಕಾರಕ್ಕೆ 20 ಕೋಟಿ ಟ್ಯಾಕ್ಸ್‌ ಕಟ್ಟಿದ್ದೇನೆ, ಇದು ಸೋಲಲ್ಲ ಸಕ್ಸಸ್‌!’ ಐದು ಸಿನಿಮಾ ಘೋಷಿಸಿದ ಆರ್‌ ಚಂದ್ರು

Jan 25, 2024 04:03 PM IST

‘ಕಬ್ಜ ಮಾಡಿದ್ದಕ್ಕೆ ಸರ್ಕಾರಕ್ಕೆ 20 ಕೋಟಿ ಟ್ಯಾಕ್ಸ್‌ ಕಟ್ಟಿದ್ದೇನೆ, ಇದು ಸೋಲಲ್ಲ ಸಕ್ಸಸ್‌!’ ಐದು ಸಿನಿಮಾ ಘೋಷಿಸಿದ ಆರ್‌ ಚಂದ್ರು

    • ಸಿನಿಮಾ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮುಂದಿರುವ ಆರ್‌. ಚಂದ್ರು, ಇದೀಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಒಂದಲ್ಲ ಎರಡಲ್ಲ ಒಟ್ಟು ಐದು ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ನಿರ್ದೇಶಕ ಚಂದ್ರು ಅವರ ಈ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  
‘ಕಬ್ಜ ಮಾಡಿದ್ದಕ್ಕೆ ಸರ್ಕಾರಕ್ಕೆ 20 ಕೋಟಿ ಟ್ಯಾಕ್ಸ್‌ ಕಟ್ಟಿದ್ದೇನೆ, ಇದು ಸೋಲಲ್ಲ ಸಕ್ಸಸ್‌!’ ಐದು ಸಿನಿಮಾ ಘೋಷಿಸಿದ ಆರ್‌ ಚಂದ್ರು
‘ಕಬ್ಜ ಮಾಡಿದ್ದಕ್ಕೆ ಸರ್ಕಾರಕ್ಕೆ 20 ಕೋಟಿ ಟ್ಯಾಕ್ಸ್‌ ಕಟ್ಟಿದ್ದೇನೆ, ಇದು ಸೋಲಲ್ಲ ಸಕ್ಸಸ್‌!’ ಐದು ಸಿನಿಮಾ ಘೋಷಿಸಿದ ಆರ್‌ ಚಂದ್ರು

R Chandru: ಸ್ಯಾಂಡಲ್‌ವುಡ್‌ ಸಿನಿಮಾರಂಗದಲ್ಲಿ ತಮ್ಮ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡಿರುವ ನಿರ್ದೇಶಕ, ನಿರ್ಮಾಪಕ ಆರ್ ಚಂದ್ರು ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 5 ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಆರ್‌ ಚಂದ್ರು ಅವರ ಆರ್.ಸಿ ಸ್ಟುಡಿಯೋಸ್ ಸಂಸ್ಥೆ ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಯಾಗಿದೆ. ಇದೇ ವೇಳೆ ಮುಂದಿನ ಐದು ಸಿನಿಮಾಗಳನ್ನೂ ಅವರು ಘೋಷಣೆಯನ್ನೂ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

‘ಶ್ರೀ ರಾಮ ಬಾಣ’, ‘ಕಬ್ಜ 2’, ‘ಪಿಓಕೆ’, ‘ಫಾದರ್’ ಮತ್ತು ‘ಡಾಗ್’ ಚಿತ್ರಗಳ ಅಧಿಕೃತ ಘೋಷಣೆ ಈ ಸಂದರ್ಭದಲ್ಲಿ ಆಗಿದೆ. ಈ ಪೈಕಿ ‘ಕಬ್ಜ 2’ ಚಿತ್ರವನ್ನು ಮಾತ್ರ ಆರ್ ಚಂದ್ರು ಅವರು ನಿರ್ದೇಶಿಸುತ್ತಿದ್ದು, ಮಿಕ್ಕ ಚಿತ್ರಗಳನ್ನು ಬೇರೆಬೇರೆ ನಿರ್ದೇಶಕರು ನಿರ್ದೇಶಿಸಲಿದ್ದಾರೆ. ಈ ಎಲ್ಲಾ ಚಿತ್ರಗಳನ್ನು ಆರ್.ಸಿ. ಸ್ಟುಡಿಯೋಸ್‍ ನಿರ್ಮಿಸಲಿದೆ. ಈ ಬಗ್ಗೆ ನಿರ್ಮಾಪಕ ಆರ್‌ ಚಂದ್ರು ಮಾಹಿತಿ ಹಂಚಿಕೊಂಡರು.

ಇದು ನನ್ನೊಬ್ಬನ ಸಂಸ್ಥೆಯಲ್ಲ...

"ನಮ್ಮ ಆರ್ ಸಿ ಸ್ಟುಡಿಯೋಸ್ ಗೆ ಇಂದು ಸಿಎಂ ಅವರು ಚಾಲನೆ ನೀಡಿದ್ದಾರೆ. ಈ ಸಂಸ್ಥೆಯಿಂದ ಏಕಕಾಲಕ್ಕೆ ನಿರ್ಮಾಣವಾಗಲಿರುವ ಐದು ಚಿತ್ರಗಳು ಅಧಿಕೃತವಾಗಿ ಆರಂಭವಾಗಿದೆ. ಆರ್ ಸಿ ಸ್ಟುಡಿಯೋಸ್ ನನ್ನದೊಬ್ಬನ್ನದಲ್ಲ. ಇಲ್ಲಿರುವ ಮಂಜುನಾಥ ಹೆಗಡೆ, ಸೋದರ ಸಮಾನರಾದ ರಾಮಚಂದ್ರೇ ಗೌಡರು, ಮುಂಬೈನಿಂದ ಬಂದಿರುವ ಆನಂದ್ ಪಂಡಿತ್ ಹಾಗೂ ಅಲಂಕಾರ್ ಪಾಂಡಿಯನ್ ಎಲ್ಲರೂ ನಮ್ಮ ಸಂಸ್ಥೆಯ ಆಧಾರ ಸ್ತಂಭಗಳು. ಅವರೆಲ್ಲರ ಸಹಕಾರಕ್ಕೆ ನಾನು ಚಿರ ಋಣಿ.

ಕಬ್ಜ ಚಿತ್ರದ್ದು ಸೋಲಲ್ಲ ಸಕ್ಸಸ್‌!

ಕಲ್ಲು ಹೊಡೆದರೆ ಲೈಟ್ ಕಂಬಕ್ಕೆ ಹೊಡೆಯಬಾರದು.‌ ಚಂದ್ರನಿಗೆ ಹೊಡೆಯಬೇಕು. ನಾನು ಸಹ ‘ಕಬ್ಜ’ ಮೂಲಕ ಅದೇ ರೀತಿ ಪ್ರಯತ್ನಪಟ್ಟೆ. ನಾನು ನನ್ನದೇ ಹಣದಿಂದ ಪ್ರಯತ್ನಪಟ್ಟೆ. ಲ್ಯಾಂಡಿಂಗ್‍ ವೇಳೆ ಚಿಕ್ಕ ಕ್ರಾಶ್‍ ಆಯ್ತು. ಅದು ಸೋಲಲ್ಲ. ಮಿಕ್ಕಂತೆ ಎಲ್ಲವೂ ಸಕ್ಸಸ್‍ ಆಯಿತು. ಹಾಗಾಗಿದ್ದರಿಂದ ಇಂದು ಹೊಸ ನಿರ್ಮಾಣ ಸಂಸ್ಥೆ ಆರಂಭಿಸಿ ಐದು ಸಿನಿಮಾಗಳನ್ನು ಘೋಷಿಸಿದ್ದೀನಿ. ನಾನು ಸಹ ದುಡ್ಡನ್ನು ರಿಯಲ್‍ ಎಸ್ಟೇಟ್‍ಗೆ ಹಾಕಬಹುದಿತ್ತು. ಆದರೆ, ದೇವರು ನನ್ನನ್ನು ಇಲ್ಲಿ ತಂದು ಹಾಕಿದ್ದಾನೆ. ಇಲ್ಲಿರು ಅಂತ. ಸಿನಿಮಾ ಮಾಡಿದರೆ, ಚಿತ್ರರಂಗದ ಎಲ್ಲಾ ವಲಯದವರು ಅದರಿಂದ ಊಟ ಮಾಡುತ್ತಾರೆ’ ಎಂದರು.

ಕಬ್ಜ ಚಿತ್ರದಿಂದ 20 ಕೋಟಿ ಟ್ಯಾಕ್ಸ್‌

ಮೊದಲು ನಾವು ಎಲ್ಲರನ್ನು ಗೌರವಿಸುವುದನ್ನು ಕಲಿಯಬೇಕು ಎಂದ ಅವರು, 'ನಾವು ಒಳ್ಳೆಯ ಸಿನಿಮಾ ಮಾಡೋದಕ್ಕೆ ಪ್ರಯತ್ನ ಮಾಡೋಣ. ಮಾಡಿದ ಸಿನಿಮಾ ಎಲ್ಲಾ ದೊಡ್ಡ ಹಿಟ್‍ ಆಗುವುದಿಲ್ಲ. ದೊಡ್ಡ ದೊಡ್ಡ ಸ್ಟಾರ್ ಗಳ ಸಿನಿಮಾ ಸಹ ಫ್ಲಾಪ್‍ ಆಗುತ್ತದೆ. ನಮ್ಮದು ಸಹ ಸಣ್ಣ ಕ್ರಾಶ್‍ ಆಗಿರಬಹುದು. ಸರಕಾರಕ್ಕೆ ನಾನು 20 ಕೋಟಿ ಟ್ಯಾಕ್ಸ್ ಕಟ್ಟಿದ್ದೀನಿ. ಅದು ‘ಕಬ್ಜ’ದಿಂದ. ಇದನ್ನು ಯಾರೂ ಬಹಿರಂಗವಾಗಿ ಹೇಳುವುದಿಲ್ಲ. ನಾನು ಹೇಳುತ್ತೇನೆ. ಅದರಿಂದ ಎಷ್ಟು ಜನ ಊಟ ಮಾಡಿರುತ್ತಾರೆ. ಅದರಿಂದ ಚಿತ್ರರಂಗದಲ್ಲಿ ಎಷ್ಟು ಜನ ಬದುಕಬಹುದು? ಇದೆಲ್ಲವನ್ನೂ ಯೋಚಿಸಬೇಕು. ಸುಮ್ಮನೆ ಏನೇನೋ ಮಾತನಾಡಬಾರದು’ ಎಂದು ಹೇಳಿದರು.

ಕನ್ನಡ ನಿರ್ದೇಶಕರಿಗೆ ಅವಕಾಶ

ಎಲ್ಲರೂ ಚಿತ್ರವನ್ನು ಗೆಲ್ಲಿಸಬೇಕು ಅಂತಲೇ ಮಾಡುತ್ತಾರೆ, ಸೋಲಬೇಕು ಅಂತ ಯಾರೂ ಮಾಡುವುದಿಲ್ಲ ಎಂದ ಚಂದ್ರು, ಕನ್ನಡ ನಿರ್ದೇಶಕರಿಗೆ ಅವಕಾಶ ಕೊಡಬೇಕು ಎಂದು ಈ ಸಂಸ್ಥೆ ಕಟ್ಟಿದ್ದೇನೆ. ನಾನು ಬೇರೆ ಯಾವುದೋ ಭಾಷೆಗೆ ಹೋಗಿ ಈ ಸಂಸ್ಥೆ ಶುರು ಮಾಡಿಲ್ಲ. ಬೆಂಗಳೂರಿನಲ್ಲಿ ನಿಂತು ಆರ್.ಸಿ. ಸ್ಟುಡಿಯೋಸ್‍ ಪ್ರಾರಂಭಿಸಿದ್ದೇನೆ. ಈ ಸಂಸ್ಥೆಯ ಮೂಲಕ ನಿರಂತರವಾಗಿ ಚಿತ್ರ ಮಾಡುತ್ತೇನೆ’ ಎಂದರು

ಕಾರ್ಯಕ್ರಮದಲ್ಲಿ ಯಾರೆಲ್ಲ ಇದ್ರು

ಈ ವಿಶೇಷ ಕಾರ್ಯಕ್ರಮಕ್ಕೆ ರಿಯಲ್ ಸ್ಟಾರ್ ಉಪೇಂದ್ರ, ಮಾಜಿ ಸಚಿವ ಎಚ್‍.ಎಂ. ರೇವಣ್ಣ, ಮುಂಬೈನ ಖ್ಯಾತ ನಿರ್ಮಾಪಕ ಮತ್ತು ವಿತರಕರಾದ ಆನಂದ್‍ ಪಂಡಿತ್‍, ನಿರ್ಮಾಪಕ ಜಾಕ್‍ ಮಂಜು, ಅಲಂಕಾರ್ ಪಾಂಡಿಯನ್‍, ಉದ್ಯಮಿಗಳಾದ ರಾಮಚಂದ್ರೇ ಗೌಡ, ಮಂಜುನಾಥ ಹೆಗಡೆ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು. ಶಿವರಾಜಕುಮಾರ್, ಕಿಚ್ಚ ಸುದೀಪ್ ಹಾಗೂ ಗೀತಾ ಶಿವರಾಜಕುಮಾರ್ ವಿಡಿಯೋ ಮೂಲಕ ಆರ್ ಸಿ ಸ್ಟುಡಿಯೋಸ್‌ಗೆ ಶುಭ ಕೋರಿದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ