logo
ಕನ್ನಡ ಸುದ್ದಿ  /  ಮನರಂಜನೆ  /  Nithyananda: ನಿತ್ಯಾನಂದನ ಕೈಲಾಸ ದೇಶದಲ್ಲಿ ಜೋಗಯ್ಯ ಚಿತ್ರದ ಹಾಡು; ಕನ್ನಡ ಹಾಡಿಗೆ ಡ್ರಮ್ಸ್‌ ಬಾರಿಸಿ ಖುಷಿಪಟ್ಟ ಸ್ವಯಂ ಘೋಷಿತ ದೇವ ಮಾನವ

Nithyananda: ನಿತ್ಯಾನಂದನ ಕೈಲಾಸ ದೇಶದಲ್ಲಿ ಜೋಗಯ್ಯ ಚಿತ್ರದ ಹಾಡು; ಕನ್ನಡ ಹಾಡಿಗೆ ಡ್ರಮ್ಸ್‌ ಬಾರಿಸಿ ಖುಷಿಪಟ್ಟ ಸ್ವಯಂ ಘೋಷಿತ ದೇವ ಮಾನವ

Rakshitha Sowmya HT Kannada

Aug 14, 2023 10:12 AM IST

ಜೋಗಯ್ಯ ಚಿತ್ರದ ಹಾಡಿಗೆ ಡ್ರಮ್ಸ್‌ ಬಾರಿಸುತ್ತಿರುವ ನಿತ್ಯಾನಂದ

  • ಪ್ರೇಮ್‌ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್‌ ಅಭಿನಯಿಸಿರುವ 'ಜೋಗಯ್ಯ' ಚಿತ್ರದ ಟೈಟಲ್‌ ಹಾಡಿಗೆ ನಿತ್ಯಾನಂದ ಡ್ರಮ್ಸ್‌ ಬಾರಿಸುತ್ತಿದ್ದಾರೆ. ಪುಟ್ಟ ಮಕ್ಕಳಂತೆ ಡ್ರಮ್ಸ್‌ ಬಾರಿಸುತ್ತಾ ಎಂಜಾಯ್‌ ಮಾಡುತ್ತಿದ್ದಾರೆ.

ಜೋಗಯ್ಯ ಚಿತ್ರದ ಹಾಡಿಗೆ ಡ್ರಮ್ಸ್‌ ಬಾರಿಸುತ್ತಿರುವ ನಿತ್ಯಾನಂದ
ಜೋಗಯ್ಯ ಚಿತ್ರದ ಹಾಡಿಗೆ ಡ್ರಮ್ಸ್‌ ಬಾರಿಸುತ್ತಿರುವ ನಿತ್ಯಾನಂದ (PC: KAILASA's SPH Nithyananda Paramashivam Twitter)

ಭಾರತದಿಂದ ತಲೆ ಮರೆಸಿಕೊಂಡು ಹೋಗಿ ವಿದೇಶದಲ್ಲಿ ನೆಲೆಸಿದ್ದರೂ ನಿತ್ಯಾನಂದ ಮಾತ್ರ ಪ್ರತಿದಿನ ಅಲ್ಲಿಂದಲೇ ಸುದ್ದಿಯಾಗುತ್ತಿದ್ದಾರೆ. ಅತ್ಯಾಚಾರ, ಅಪಹರಣ ಕೇಸ್‌ ಆರೋಪ ಹೊತ್ತಿರುವ ನಿತ್ಯಾನಂದ ಕಳೆದ 4 ವರ್ಷಗಳ ಹಿಂದೆ ರಾತ್ರೋ ರಾತ್ರಿ ಭಾರದಿಂದ ಪರಾರಿಯಾಗಿ ಈಕ್ವೆಡಾರ್‌ ಕರಾವಳಿ ದ್ವೀಪದಲ್ಲಿ ಕೈಲಾಸ ಹೆಸರಿನ ತನ್ನದೇ ಲೋಕವನ್ನು ಕಟ್ಟಿಕೊಂಡಿರುವುದು ತಿಳಿದಿರುವ ವಿಚಾರ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ರಂಜಿತಾ, ಕೈಲಾಸ ದೇಶದ ಪ್ರಧಾನಿ

ಇತ್ತೀಚೆಗೆ ತನ್ನ ಪ್ರೀತಿಯ ಶಿಷ್ಯೆ, ನಟಿ ರಂಜಿತಾಳನ್ನು ತನ್ನ ಕೈಲಾಸ ದೇಶದ ಪ್ರಧಾನಿಯನ್ನಾಗಿ ಘೋಷಿಸಿ ಕೂಡಾ ನಿತ್ಯಾನಂದ ಸುದ್ದಿಯಾಗಿದ್ದರು. ರಂಜಿತಾ ಮಾತ್ರವಲ್ಲ ಆಕೆಯ ಅಕ್ಕ ಕೂಡಾ ಪತಿಯಿಂದ ದೂರಾಗಿ ನಿತ್ಯಾನಂದ ಆಶ್ರಮದಲ್ಲೇ ನೆಲೆಸಿದ್ದಾರೆ. ರಂಜಿತಾ ತಂದೆ ಇತ್ತೀಚೆಗೆ ಈ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡು ಕಣ್ಣೀರಿಟ್ಟಿದ್ದರು. ತಾನು ಕಟ್ಟಿರುವ ಕೈಲಾಸ ದೇಶಕ್ಕಾಗಿ ಅದ್ದರದ್ದೇ ಪ್ರತ್ಯೇಕ ಲಾಂಛನ, ಧ್ವಜ, ಪಾಸ್‌ಪೋರ್ಟ್‌ ಕೂಡಾ ಸೃಷ್ಟಿ ಮಾಡಲಾಗಿದೆ. ಇದು ಸಂಪೂರ್ಣ ಹಿಂದೂ ದೇಶ ಎಂದು ಹೇಳಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ನಿತ್ಯಾನಂದ ಖಾತೆ ಇದ್ದು ಕೈಲಾಸದಲ್ಲಿ ನಡೆಯುವ ಚಟುವಟಿಕೆಗಳನ್ನು ಫೋಟೋ, ವಿಡಿಯೋಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಇದೀಗ ನಿತ್ಯಾನಂದ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಬಹಳ ವೈರಲ್‌ ಆಗುತ್ತಿದೆ.

ಕನ್ನಡ ಹಾಡಿಗೆ ನಿತ್ಯಾನಂದ ಭಕ್ತರ ಭಜನೆ

ನಿತ್ಯಾನಂದ ಸೃಷ್ಟಿಸಿರುವ ಕೈಲಾಶ ಆಶ್ರಮದಲ್ಲಿ ಭಜನೆಯೂ ನಡೆಯುತ್ತದೆ. ಆದರೆ ಇದು ಅಂತಿಂಥ ಭಜನೆ ಅಲ್ಲ, ಸಿನಿಮಾ ಹಾಡುಗಳಿಗೆ ಭಕ್ತರು ಕುಣಿದ ಕುಪ್ಪಳಿಸುವಂಥ ಭಜನೆ. ರಜನಿಕಾಂತ್‌ 'ಪಡಯಪ್ಪ' ಚಿತ್ರದ ಹಾಡಿಗೆ ನಿತ್ಯಾನಂದನ ಭಕ್ತರು ಕುಣಿದಾಡಿದ್ದ ವಿಡಿಯೋ 3 ವರ್ಷಗಳ ಹಿಂದೆ ವೈರಲ್‌ ಆಗಿತ್ತು. ಇದೀಗ ನಿತ್ಯಾನಂದ ತಮ್ಮ ಆಶ್ರಮದಲ್ಲಿ ಕನ್ನಡದ ಹಾಡಿಗೆ ಡ್ರಮ್ಸ್‌ ಬಾರಿಸುತ್ತಿರುವ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕೈಲಾಸದಲ್ಲಿ ಜೋಗಯ್ಯ ಚಿತ್ರದ ಹಾಡು

KAILASA's SPH Nithyananda Paramashivam ಹೆಸರಿನ ಟ್ವಿಟ್ಟರ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ನಿತ್ಯಾನಂದ, ಪ್ರೇಮ್‌ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್‌ ಅಭಿನಯಿಸಿರುವ 'ಜೋಗಯ್ಯ' ಚಿತ್ರದ ಟೈಟಲ್‌ ಹಾಡಿಗೆ ಡ್ರಮ್ಸ್‌ ಬಾರಿಸುತ್ತಿದ್ದಾರೆ. ಪುಟ್ಟ ಮಕ್ಕಳಂತೆ ಡ್ರಮ್ಸ್‌ ಬಾರಿಸುತ್ತಾ ಎಂಜಾಯ್‌ ಮಾಡುತ್ತಿದ್ದಾರೆ. ಸುತ್ತ ಮುತ್ತ ಇರುವವರು ಕೇಕೆ ಹಾಕುತ್ತಿದ್ದಾರೆ. ''ದೈವಿಕ ತಾಳಕ್ಕೆ ಕುಣಿಯಲು ಸಿದ್ಧರಾಗಿ'' ಎಂದು ಕ್ಯಾಪ್ಷನ್‌ ಬರೆಯಲಾಗಿದೆ. ವಿಡಿಯೋಗೆ ಶಿವರಾಜ್‌ಕುಮಾರ್‌, ಪ್ರೇಮ್‌ ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ. ಆಶ್ರಮದಲ್ಲಿ ಸಿನಿಮಾ ಹಾಡಿಗೆ ಭಜನೆ ಮಾಡುತ್ತಿರುವುದನ್ನು ನೋಡಿ ಕೆಲವರು ಮುಸಿ ಮುಸಿ ನಕ್ಕರೆ, ಇನ್ನೂ ಕೆಲವರು ನಿತ್ಯಾನಂದನ ಆಶ್ರಮದಲ್ಲಿ ಕನ್ನಡ ಹಾಡು ಕೇಳಿ ಬಂದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

ಪ್ರೇಮ್‌ ನಿರ್ದೇಶನದ ಜೋಗಯ್ಯ

'ಜೋಗಯ್ಯ' ಸಿನಿಮಾ 2011ರಲ್ಲಿ ತೆರೆ ಕಂಡಿತ್ತು. ಪ್ರೇಮ್‌ ನಿರ್ದೇಶನದ ಈ ಚಿತ್ರವನ್ನು ರಕ್ಷಿತಾ ನಿರ್ಮಿಸಿದ್ದರು. ಚಿತ್ರದ ಹಾಡುಗಳಿಗೆ ವಿ. ಹರಿಕೃಷ್ಣ ಸಂಗೀತ ನೀಡಿದ್ದರು. ಚಿತ್ರದಲ್ಲಿ ಶಿವರಾಜ್‌ಕುಮಾರ್‌ಗೆ ಸುಮಿತ್‌ ಕೌರ್‌ ನಾಯಕಿಯಾಗಿ ನಟಿಸಿದ್ದರು. ಉಳಿದಂತೆ ಪೂಜಾ ಗಾಂಧಿ, ರವಿಶಂಕರ್‌ ಗೌಡ, ಮಾಸ್‌ ಮಾದ, ಗುರುರಾಜ್‌ ಹೊಸಕೋಟೆ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದರು. ಪ್ರೇಮ್‌, ಸದ್ಯಕ್ಕೆ 'ಕೆಡಿ' ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ