logo
ಕನ್ನಡ ಸುದ್ದಿ  /  ಮನರಂಜನೆ  /  ಉಪೇಂದ್ರ Ui ಚಿತ್ರದ ಚೀಪ್‌ ಹಾಡು ಕೇಳಿ, ‘ಏನ್‌ ಗುರೂ ಇದು, ಹಿಂಗೆಲ್ಲ ಇದೆ’ ಎಂದು ತಲೆ ಚಚ್ಚಿಕೊಂಡ ಫ್ಯಾನ್ಸ್‌

ಉಪೇಂದ್ರ UI ಚಿತ್ರದ ಚೀಪ್‌ ಹಾಡು ಕೇಳಿ, ‘ಏನ್‌ ಗುರೂ ಇದು, ಹಿಂಗೆಲ್ಲ ಇದೆ’ ಎಂದು ತಲೆ ಚಚ್ಚಿಕೊಂಡ ಫ್ಯಾನ್ಸ್‌

Feb 14, 2024 12:25 PM IST

ಉಪೇಂದ್ರ UI ಚಿತ್ರದ ಚೀಪ್‌ ಹಾಡು ಕೇಳಿ, ‘ಏನ್‌ ಗುರೂ ಇದು ಹಿಂಗೆಲ್ಲ ಇದೆ’ ಎಂದು ತಲೆ ಚಚ್ಚಿಕೊಂಡ ಫ್ಯಾನ್ಸ್‌

    • ಉಪೇಂದ್ರ ನಿರ್ದೇಶನದ UI ಚಿತ್ರದ ಚೀಪ್‌ ಹಾಡಿನ ಪ್ರೋಮೋ ಪ್ರೇಮಿಗಳ ದಿನದ ನಿಮಿತ್ತ ಬಿಡುಗಡೆ ಆಗಿದೆ. ಹಾಡಿನ ಸಾಹಿತ್ಯ ಕೇಳಿದ ಅವರ ಫ್ಯಾನ್ಸ್‌ ಮತ್ತೆ ತಲೆ ಕೆರೆದುಕೊಂಡಿದ್ದಾರೆ. ಎಂದಿನಂತೆ ಪ್ರೇಕ್ಷಕರ ತಲೆಗೆ ಹುಳ ಬಿಡುವ ಕೆಲಸವನ್ನು ಇಲ್ಲಿಯೂ ಮುಂದುವರಿಸಿದ್ದಾರೆ. 
ಉಪೇಂದ್ರ UI ಚಿತ್ರದ ಚೀಪ್‌ ಹಾಡು ಕೇಳಿ, ‘ಏನ್‌ ಗುರೂ ಇದು ಹಿಂಗೆಲ್ಲ ಇದೆ’ ಎಂದು ತಲೆ ಚಚ್ಚಿಕೊಂಡ ಫ್ಯಾನ್ಸ್‌
ಉಪೇಂದ್ರ UI ಚಿತ್ರದ ಚೀಪ್‌ ಹಾಡು ಕೇಳಿ, ‘ಏನ್‌ ಗುರೂ ಇದು ಹಿಂಗೆಲ್ಲ ಇದೆ’ ಎಂದು ತಲೆ ಚಚ್ಚಿಕೊಂಡ ಫ್ಯಾನ್ಸ್‌

UI Cheap Song Promo Kannada: ಸ್ಯಾಂಡಲ್‌ವುಡ್‌ ನಟ ರಿಯಲ್‌ ಸ್ಟಾರ್‌ ಉಪೇಂದ್ರ ಸಿನಿಮಾಗಳೆಂದರೆ ಅಲ್ಲಿ ಒಂದಷ್ಟು ಕುತೂಹಲಗಳು ಸಹಜ. ಅದರಲ್ಲೂ ಅವರದೇ ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಎಂದಾಗ ಆ ಕೌತುಕ ಆಕಾಶ ಮುಟ್ಟಿರುತ್ತದೆ. ಇದೀಗ UI ಸಿನಿಮಾ ಘೋಷಣೆ ಮಾಡಿದ ದಿನದಿಂದ ಒಂದಿಲ್ಲೊಂದು ರೀತಿಯಲ್ಲಿ ಕ್ಯೂರಿಯಾಸಿಟಿ ಹೆಚ್ಚಿಸುತ್ತಲೇ ಇದ್ದಾರೆ ಉಪೇಂದ್ರ. ಇದೀಗ ಪ್ರೇಮಿಗಳ ದಿನದ ಪ್ರಯುಕ್ತ ಹೊಸ ಹಾಡಿನ ಪ್ರೋಮೋ ಮೂಲಕ ಆಗಮಿಸಿದ್ದಾರೆ ಉಪೇಂದ್ರ. ಅಚ್ಚರಿಯ ವಿಚಾರ ಏನೆಂದರೆ ಈ ಹಾಡು ಬರೆದಿದ್ದು ಸ್ವತಃ ಉಪ್ಪಿ!

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಲಹರಿ ಫಿಲಂಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ UI ಚಿತ್ರದ ಮೊದಲ ಹಾಡಿನ ಪ್ರೋಮೋ ರಿಲೀಸ್‌ ಆಗಿದೆ. ಈ ಪ್ರೋಮೋದಲ್ಲಿ ‘ನಂದು ತುಂಬ ದೊಡ್ಡದು. ಅವನಿಗಿಂತ ನಿಂದು ಚಿಕ್ಕದು. ನಿಂದು ತುಂಬ ಚಿಕ್ಕದು. ಇವನಿಗಿಂತ ಅವನದು ದೊಡ್ಡದು. ಎಲ್ಲ ಚೀಪ್​ ಚೀಪ್​...’ ಎಂಬ ಸಾಹಿತ್ಯವುಳ್ಳ ಹಾಡು ಕೇಳಿದ ಫ್ಯಾನ್ಸ್‌ ಮತ್ತೆ ತಲೆ ಕೆರೆದುಕೊಳ್ಳುತ್ತಿದ್ದಾರೆ. ಈ ಮೂಲಕ ಮತ್ತೆ ತಮ್ಮತನವನ್ನು ಪ್ರೇಕ್ಷಕರ ತಟ್ಟೆಗೆ ಬಡಿಸಿದ್ದಾರೆ. ಮತ್ತೆ ಹೊಸ ಕಿಕ್‌ ನೀಡಿದ್ದಾರೆ.

ಲಹರಿ ಫಿಲಂಸ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಉಪೇಂದ್ರ ಸಾಹಿತ್ಯ ಒದಗಿಸಿದರೆ, ವಿಜಯ್‌ ಪ್ರಕಾಶ್, ನಕಾಶ್‌ ಅಜೀಜ್‌, ದೀಪಕ್‌ ಬ್ಲೂ ಈ ಹಾಡಿಗೆ ಧ್ವನಿಯಾಗಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಚಿನ್ನಿ ಪ್ರಕಾಶ್‌ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಚೀಪ್‌ ಹಾಡಿಗೆ ಫ್ಯಾನ್ಸ್‌ ವಲಯದಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲವರು ಚಿಕ್ಕದು, ದೊಡ್ಡದು ಎಂಬ ಸಾಹಿತ್ಯಕ್ಕೆ ಉಪೇಂದ್ರ ಅವರಿಗೆ ಜೈ ಎಂದಿದ್ದಾರೆ.

ಹಾಡಿಗೆ ನೆಟ್ಟಿಗರು ಹೀಗಂದ್ರು

"ಎಲ್ರೂ ಮಾಡೋದನ್ನ ಉಪೇಂದ್ರ ಮಾಡಲ್ಲ..ಉಪೇಂದ್ರ ಮಾಡೋದನ್ನ ಯಾರೂ ಮಾಡಲ್ಲ. ಬುದ್ದಿವಂತನ ಮಾಯಾ ಪ್ರಪಂಚ"

"ನಾವು ಹೇಗೆ ಥಿಂಕ್ ಮಾಡ್ತೀವಿ ಅನ್ನೋದರ ಮೇಲೆ ಯಾರು ಚೀಪ್ ಅನ್ನೋದು ಗೊತ್ತಾಗತ್ತೆ ಸೂಪರ್ ಸ್ಟಾರ್ ಉಪ್ಪಿ ಸರ್"

"ಉಪ್ಪಿ ಸರ್ ನಿಮ್ಮ ಸಾಹಿತ್ಯದಿಂದ ನೋಡೋರಿಗೆ ಮತ್ತೆ ಕುತೂಹಲ ಜಾಸ್ತಿ ಆಯ್ತು. ಯಾಕೆಂದರೆ ಏನ್ ಚಿಕ್ಕದು ಏನ್ ದೊಡ್ಡದು ಅಂತ ಮೂವೀ ನೋಡೇ ತಿಳ್ಕೊಬೇಕು ಅನ್ಸುತ್ತೆ"

"ವಿಶ್ವದ 17ನೇ ಅತ್ಯದ್ಭುತ ನಿರ್ದೇಶಕ.. ಉಪ್ಪಿ ಡೈರೆಕ್ಷನ್ ಯಾವತ್ತೂ ನಿರಾಸೆಗೊಳಿಸಲ್ಲ.. ರವಿ ಕಾಣದ್ದನ್ನು.. ಕವಿ ಕಂಡ.. ಕವಿ ಕಾಣದ್ದನ್ನು ಉಪೇಂದ್ರ ಕಂಡ.. ಉಪ್ಪಿ ನಡೆದದ್ದೆ ಹಾದಿ"

ಚೀಪ್‌ ಸಾಂಗ್ ಕೇಳ್ತಿದ್ರೆ ನಗು ಬರ್ತಿದೆ. ಆದ್ರೆ ಟ್ರೆಂಡಿಂಗ್‌ ಆಗೊದ್ರಲ್ಲಿ ಡೌಟ್ ಇಲ್ಲಾ. ಉಪ್ಪಿ ಬಾಸ್ ಕೈಲಿ ಮಾತ್ರಾ ಸಾಧ್ಯ"

ಏನಿಲ್ಲ ಏನಿಲ್ಲ ಹಾಡು ಟ್ರೆಂಡಿಂಗ್‌..

ಈಗಾಗಲೇ ನಟನೆ ಮಾತ್ರವಲ್ಲದೆ, ನಿರ್ದೇಶನದಲ್ಲಿಯೂ ಉಪ್ಪಿ ಸೈ ಎನಿಸಿಕೊಂಡಿದ್ದಾರೆ. ಕನ್ನಡಕ್ಕೆ ಒಂದಷ್ಟು ಕ್ಲಾಸಿಕ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. 2015ರಲ್ಲಿ ತೆರೆಗೆ ಬಂದಿದ್ದ ಉಪ್ಪಿ 2 ಸಿನಿಮಾ ಬಳಿಕ ಅವರ ಬೇರಾವ ಸಿನಿಮಾ ತೆರೆಗೆ ಬಂದಿಲ್ಲ. ಈಗ ಸುದೀರ್ಘ 8 ವರ್ಷಗಳ ಬಳಿಕ ಮತ್ತೆ ನಿರ್ದೇಶಕನ ಕ್ಯಾಪ್‌ ಧರಿಸಿದ್ದಾರೆ. UI ಸಿನಿಮಾ ಬಹುತೇಕ ಕೊನೇ ಹಂತಕ್ಕೆ ಬಂದು ನಿಂತಿದೆ. ಬೇರೊಂದು ಲೋಕವನ್ನು ಈ ಸಿನಿಮಾದಲ್ಲಿ ತೋರಿಸಲು ಹೊರಟಿದ್ದಾರೆ ಉಪೇಂದ್ರ. ಜಿ ಮನೋಹರನ್‌ ಮತ್ತು ಕೆ.ಪಿ ಶ್ರೀಕಾಂತ್‌ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇನ್ನುಳಿದಂತೆ ಈ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎಂಬ ಬಗ್ಗೆಯೂ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ಕನ್ನಡದ ಜತೆಗೆ ಹಲವು ಭಾಷೆಗಳಲ್ಲೂ ಈ ಸಿನಿಮಾ ರಿಲೀಸ್‌ ಆಗಲಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ