logo
ಕನ್ನಡ ಸುದ್ದಿ  /  ಮನರಂಜನೆ  /  ದ ಸೂಟ್‌ ಕನ್ನಡ ಸಿನಿಮಾ ಮೇ 17ರಂದು ಬಿಡುಗಡೆ; ಟ್ರೇಲರ್‌ ನೋಡಿ ಖುಷಿಪಟ್ಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ದ ಸೂಟ್‌ ಕನ್ನಡ ಸಿನಿಮಾ ಮೇ 17ರಂದು ಬಿಡುಗಡೆ; ಟ್ರೇಲರ್‌ ನೋಡಿ ಖುಷಿಪಟ್ಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

Praveen Chandra B HT Kannada

May 07, 2024 03:33 PM IST

ದ ಸೂಟ್‌ ಕನ್ನಡ ಸಿನಿಮಾ ಮೇ 17ರಂದು ಬಿಡುಗಡೆ

    • Upcoming Kannada Movies: ಮುಂದಿನ ವಾರ ಮೇ 17ರಂದು ದ ಸೂಟ್‌ ಎಂಬ ಕನ್ನಡ ಸಿನಿಮಾ ರಿಲೀಸ್‌ ಆಗಲಿದೆ. ಇದೀಗ ಈ ಚಿತ್ರದ ಟ್ರೇಲರ್‌ ರಿಲೀಸ್‌ ಬಾಲಿವುಡ್‌ನ ಕಮಲ್‌ ನಟನೆಯ ಈ ಚಿತ್ರದ ಟ್ರೇಲರ್‌ ನೋಡಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ದ ಸೂಟ್‌ ಕನ್ನಡ ಸಿನಿಮಾ ಮೇ 17ರಂದು ಬಿಡುಗಡೆ
ದ ಸೂಟ್‌ ಕನ್ನಡ ಸಿನಿಮಾ ಮೇ 17ರಂದು ಬಿಡುಗಡೆ

ಬೆಂಗಳೂರು: ನಾವು ಧರಿಸುವ ಉಡುಗೆಗಳಲ್ಲಿ "ಸೂಟ್"ಗೆ ಅದರದೆ ಆದ ವಿಶೇಷತೆ ಇದೆ. ಈ "ಸೂಟ್" ನ ಕುರಿತಂತೆ "ದ ಸೂಟ್" ಎಂಬ ಸಿನಿಮಾ ಸದ್ಯದಲ್ಲಿಯೇ ರಿಲೀಸ್‌ ಆಗಲಿದೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ "ದ ಸೂಟ್" ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಮೇ 17 ಚಿತ್ರ ಬಿಡುಗಡೆಯಾಗುತ್ತಿದೆ.‌

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಮಾಲತಿ ಗೌಡ ಹಾಗೂ ರಾಮಸ್ವಾಮಿ ಅವರು ನಿರ್ಮಿಸಿರುವ, ಎಸ್ ಭಗತ್ ರಾಜ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಬಾಲಿವುಡ್‌ನಿಂದ ಬಂದಿರುವ ಕಮಲ್ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. "ದ ಸೂಟ್" ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಶಾಸಕ ಗೋಪಾಲಯ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಪ್ರಶಾಂತ್ ಚಕ್ರವರ್ತಿ ಮುಂತಾದ ಗಣ್ಯರು "ದ ಸೂಟ್" ಆಗಮಿಸಿ ಶುಭ ಕೋರಿದರು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಈ ಚಿತ್ರದ ಟ್ರೇಲರ್ ನೋಡಿ ಖುಷಿಪಟ್ಟಿದ್ದಾರೆ‌. ಚಿತ್ರ ಯಶಸ್ವಿಯಾಗಲಿ ಎಂದು ವಿಡಿಯೋ ಮೂಲಕ ಶುಭ ಹಾರೈಸಿದ್ದಾರೆ.

"ನಾನು ಖ್ಯಾತ ನಟ, ನಿರ್ದೇಶಕ ಕಾಶಿನಾಥ್ ಅವರ ಬಳಿ ನಿರ್ದೇಶನ ಕಲಿತಿದ್ದೀನಿ. ಅವರು ನನ್ನ ಗುರುಗಳು ." ದ ಸೂಟ್" ನನ್ನ ಮೊದಲ ನಿರ್ದೇಶನದ ಚಿತ್ರ. "ಸೂಟ್", ಬದುಕು ಹಾಗೂ ಭಾವನೆಗಳ ಸಂಗಮ. ನಮ್ಮ ಚಿತ್ರಕ್ಕೆ ಸೂಟೇ ಕಥಾನಾಯಕ. ಕಥೆ ಕೇಳಿದ ಕೆಲವರು ಈ ವಿಷಯ ಕೇಳಿ ಆಶ್ಚರ್ಯಪಟ್ಟಿದ್ದು ಉಂಟು. ಆದರೆ ನಮ್ಮ ಚಿತ್ರದಲ್ಲಿ " ಸೂಟ್" ನ ಪಾತ್ರವೇನು? ಎಂಬುದು ಮೇ 17 ರಂದು ತಿಳಿಯಲಿದೆ. "ಸೂಟ್" ಅನ್ನು ಬರೀ ಬಟ್ಟೆಯಂತೆ ತೋರಿಸಿಲ್ಲ. ಮನುಷ್ಯನ ಹೊರಗಿನ ಮನಸ್ಸನ್ನು "ಸೂಟ್" ನ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇನೆ" ಎಂದು ನಿರ್ದೇಶಕ ಎಸ್. ಭಗತ್ ರಾಜ್ ಹೇಳಿದ್ದಾರೆ.

"ಈ ಚಿತ್ರಕ್ಕೆ ಅತಿಥಿದೇವೋಭವ ಎಂಬ ಅಡಿಬರಹವಿದೆ. "ಸೂಟ್" ಚಿತ್ರದ ಪ್ರಚಾರವನ್ನು ವಿನೂತನವಾಗಿ ಮಾಡಿದ್ದೇವೆ‌. "ಸೂಟ್" ನ ಬಗ್ಗೆ ಅನೇಕ ಗಣ್ಯರು ತಮ್ನಗನಿಸಿದನ್ನು ಕವನಗಳ ಮೂಲಕ ಬರೆದಿದ್ದಾರೆ. ಅದನ್ನು ಸಂಕಲನವಾಗಿ ಹೊರ ತಂದಿದ್ದೇವೆ. ನಮ್ಮ ಚಿತ್ರದಲ್ಲಿ ಮೂರು ಕಿರಣ ಇದೆ. ಸಂಗೀತ ನಿರ್ದೇಶಕ ಕಿರಣ್ ಶಂಕರ್, ಛಾಯಾಗ್ರಾಹಕ ಕಿರಣ್ ಹಂಪಾಪುರ ಹಾಗೂ ರೇಖಾಚಿತ್ರಗಳ ಮೂಲಕ ನಮ್ಮ ಚಿತ್ರಕ್ಕೆ ಜೀವ ತುಂಬಿರುವ ಕಿರಣ್ ಎಂಬ ಮೂವರು ಕಿರಣರು ಇದ್ದಾರೆ. ಈ ಚಿತ್ರದಲ್ಲಿ ಕಮಲ್, ಉಮೇಶ್ ಬಣಕಾರ್, ವಿ.ನಾಗೇಂದ್ರ ಪ್ರಸಾದ್, ಜೋಸೆಫ್, ಸುಜಯ್, ಭೀಷ್ಮ ರಾಮಯ್ಯ, ಗಡ್ಡ ವಿಜಿ. ಪ್ರಣಯ ಮೂರ್ತಿ ಸೇರಿದಂತೆ ಐವತ್ತಕ್ಕೂ ಅಧಿಕ ಕಲಾವಿದರು ನಟಿಸಿದ್ದಾರೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ದುಬೈನಿಂದ ಬಂದು ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಅವರಿಗೆ ಮ್ಯಾನೇಜರ್ ಆಗಿದ್ದ ನಟ ಕಮಲ್ ಅವರು "ದ ಸೂಟ್" ಚಿತ್ರದ ತಮ್ಮ ಜರ್ನಿಯ ಬಗ್ಗೆ ವಿವರಣೆ ನೀಡಿದ್ದಾರೆ. ಪ್ರೊಡಕ್ಷನ್ ಎಕ್ಸಿಕ್ಯುಟಿವ್ ರವಿಶಂಕರ್, ಕಲಾವಿದರಾದ ಮಂಜು ಪಾಟೀಲ್. ಸುಜಯ್, ಭೀಷ್ಮ ರಾಮಯ್ಯ ಮುಂತಾದವರು ಚಿತ್ರದ ಕುರಿತು ಮಾತನಾಡಿದ್ದಾರೆ. ಮುಂದಿನ ವಾರ ಬಿಡುಗಡೆಯಾಗುವ ಈ ಕನ್ನಡ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಾಗಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ