logo
ಕನ್ನಡ ಸುದ್ದಿ  /  ಮನರಂಜನೆ  /  Rakshit Shetty: ‘ಉಡುಪಿ ನನ್ನೂರು, ಬಕೆಟ್‌ ಅಲ್ಲ ಟ್ಯಾಂಕರ್‌ ಹಿಡೀತಿನಿ!’; ಕೈ ಮುಖಂಡನ ‘ನಾನ್‌ಸೆನ್ಸ್‌’ ಮಾತಿಗೆ ರಕ್ಷಿತ್‌ ತಿರುಗೇಟು!

Rakshit Shetty: ‘ಉಡುಪಿ ನನ್ನೂರು, ಬಕೆಟ್‌ ಅಲ್ಲ ಟ್ಯಾಂಕರ್‌ ಹಿಡೀತಿನಿ!’; ಕೈ ಮುಖಂಡನ ‘ನಾನ್‌ಸೆನ್ಸ್‌’ ಮಾತಿಗೆ ರಕ್ಷಿತ್‌ ತಿರುಗೇಟು!

Mar 11, 2023 02:28 PM IST

‘ಉಡುಪಿ ನನ್ನೂರು, ಬಕೆಟ್‌ ಅಲ್ಲ ಟ್ಯಾಂಕರ್‌ ಹಿಡೀತಿನಿ!’; ಕೈ ಮುಖಂಡನ ‘ನಾನ್‌ಸೆನ್ಸ್‌’ ಮಾತಿಗೆ ರಕ್ಷಿತ್‌ ತಿರುಗೇಟು!

    • ಉಡುಪಿ ಕೃಷ್ಣ ಮಠಕ್ಕೆ ಜಾಗವನ್ನು ಮುಸ್ಲಿಂ ರಾಜರು ನೀಡಿದ್ದಾರೆ ಎಂಬ ಕಾಂಗ್ರೆಸ್‌ ಮುಖಂಡನ ಹೇಳಿಕೆಯನ್ನು ರಕ್ಷಿತ್‌ ಶೆಟ್ಟಿ ಖಂಡಿಸಿದ್ದಾರೆ. 
‘ಉಡುಪಿ ನನ್ನೂರು, ಬಕೆಟ್‌ ಅಲ್ಲ ಟ್ಯಾಂಕರ್‌ ಹಿಡೀತಿನಿ!’; ಕೈ ಮುಖಂಡನ ‘ನಾನ್‌ಸೆನ್ಸ್‌’ ಮಾತಿಗೆ ರಕ್ಷಿತ್‌ ತಿರುಗೇಟು!
‘ಉಡುಪಿ ನನ್ನೂರು, ಬಕೆಟ್‌ ಅಲ್ಲ ಟ್ಯಾಂಕರ್‌ ಹಿಡೀತಿನಿ!’; ಕೈ ಮುಖಂಡನ ‘ನಾನ್‌ಸೆನ್ಸ್‌’ ಮಾತಿಗೆ ರಕ್ಷಿತ್‌ ತಿರುಗೇಟು!

Rakshit Shetty: ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಸದ್ಯ ಹಲವು ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ನಟನೆಯ ಜತೆಗೆ ನಿರ್ದೇಶನದ ಕೆಲಸಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ಈ ನಡುವೆ ವಿವಾದಗಳಿಂದ ಸದಾ ಅಂತರ ಕಾಯ್ದುಕೊಳ್ಳುವ ಈ ನಟ, ಇದೀಗ ಹುಟ್ಟಿದೂರಿನ ಬಗ್ಗೆ ರಾಜಕಾರಣಿಯೊಬ್ಬ ನೀಡಿದ ಹೇಳಿಕೆಗೆ ಗರಂ ಆಗಿದ್ದಾರೆ. ಟ್ವಿಟರ್‌ನಲ್ಲಿ ತಿರುಗೇಟು ಕೊಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಮತ್ತಷ್ಟು ಹಿರಿದಾಯ್ತು ಕಣ್ಣಪ್ಪ ಸಿನಿಮಾ ತಾರಾಬಳಗ; ಅಕ್ಷಯ್‌ ಕುಮಾರ್‌, ಪ್ರಭಾಸ್‌ ಬಳಿಕ ಕಾಜಲ್‌ ಅಗರ್ವಾಲ್ ಎಂಟ್ರಿ

ಕಾಂಗ್ರೆಸ್‌ ಮುಖಂಡ ಮಿಥುನ್‌ ರೈ ಅವರ ಹೇಳಿಕೆಯ ವಿರುದ್ಧ ಇದೀಗ ರಕ್ಷಿತ್‌ ಶೆಟ್ಟಿ ಕೆಂಡಾಮಂಡಲರಾಗಿದ್ದಾರೆ. ಹಾಗಾದರೆ ಅಷ್ಟಕ್ಕೂ ಆಗಿದ್ದೇನು? ಮುಸ್ಲಿಂ ರಾಜರು ಉಡುಪಿಯ ಕೃಷ್ಣ ಮಠಕ್ಕೆ ಜಾಗ ನೀಡಿದ್ದರು ಎಂಬ ಹೇಳಿಕೆ ನೀಡಿದ್ದರು ಮಿಥುನ್‌ ರೈ. ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಇದಕ್ಕೆ ಪ್ರತಿಯಾಗಿ ರಕ್ಷಿತ್‌ ಶೆಟ್ಟಿ ಸಹ ಪ್ರತ್ಯುತ್ತರ ನೀಡಿದ್ದಾರೆ.

ರಕ್ಷಿತ್‌ ಹೇಳಿದ್ದೇನು?

ಮಿಥುನ್‌ ರೈ ಅವರ ಮಾತಿಗೆ ಪ್ರತಿಯಾಗಿ, "ಉಡುಪಿ ಮಠದ ಇತಿಹಾಸದ ಬಗ್ಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಿಮಗೆ ಆ ಬಗ್ಗೆ ಮಾಹಿತಿ ಇಲ್ಲವಾದರೆ, ನೀವು ಸಾರ್ವಜನಿಕ ವೇದಿಕೆಯಲ್ಲಿ ಅಸಂಬದ್ಧವಾಗಿ ಯಾಕೆ ಮಾತನಾಡ್ತೀರಿ?" ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮೂಲಕ ಕುಟುಕಿದ್ದಾರೆ. ಇದಾದ ಬಳಿಕ ಕಾಂಗ್ರೆಸ್‌ನ ಮತ್ತೋರ್ವ ಮುಖಂಡ ಅರ್ಮಾನ್‌ ಸಹ ಟೀಕೆ ಮಾಡಿದ್ದಾರೆ. "ರಕ್ಷಿತ್ ಶೆಟ್ಟಿ ಅವರೇ ಸಾರ್ವಜನಿಕ ವೇದಿಕೆಯಲ್ಲಿ ಏಕೆ ಅಸಂಬದ್ಧವಾಗಿ ಮಾತನಾಡುತ್ತಿದ್ದೀರಿ? ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿರುವುದು ಏಕೆ?" ಎಂದಿದ್ದಾರೆ.

ಇನ್ನು ಕೆಲವರು ರಕ್ಷಿತ್‌ ಅವರ ಟ್ವಿಟ್‌ ನೋಡಿ "ರಕ್ಷಿತ್ ಶೆಟ್ರೆ ಜಾಸ್ತಿ ಯಾರಿಗೂ ಬಕೆಟ್ ಹಿಡಿಯೋಕೆ ಹೋಗ್ಬೇಡಿ ದೇವರು ಮೆಚ್ಚುವಂಥ ಕೆಲಸ ಮಾಡಿ ಅಷ್ಟು ಸಾಕು" ಎಂದಿದ್ದಾರೆ. ಇದಕ್ಕೂ ಉತ್ತರಿಸಿದ ರಕ್ಷಿತ್‌, ಮೂರು ಅಂಶಗಳಲ್ಲಿ ಉತ್ತರ ನೀಡಿದ್ದಾರೆ.

  • ಉಡುಪಿ ನನ್ನ ಜನ್ಮಸ್ಥಳ... ಬಕೆಟ್ ಅಲ್ಲಾ, ಟ್ಯಾಂಕರ್ ಹಿಡಿತೀನಿ...
  • ಎಲ್ಲ ಗೌರವಗಳೊಂದಿಗೆ, ಅವರು ಯಾವ ಭೂಮಿಯ ಬಗ್ಗೆ ಮಾತನಾಡುತ್ತಿದ್ದಾರೆಂದು ಖಚಿತವಾಗಿಲ್ಲ, ಆದರೆ ಕಾರ್ ಸ್ಟ್ರೀಟ್‌ನಲ್ಲಿರುವ ಜಮೀನು ಖಂಡಿತವಾಗಿಯೂ ಅಲ್ಲ...
  • ಅನಂತೇಶ್ವರ ದೇವಸ್ಥಾನವು ಕೃಷ್ಣಮಟ್ಟಕ್ಕಿಂತಲೂ ಹಳೆಯದು ಮತ್ತು ಚಂದ್ರಮೌಳೀಶ್ವರ ದೇವಸ್ಥಾನ ಇನ್ನೂ ಹಳೆಯದು... ಎಂದಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ