logo
ಕನ್ನಡ ಸುದ್ದಿ  /  Entertainment  /  Taran Adarsh Shares New Poster Of Kabzaa Movie Here Is The Look

Kabzaa Movie Craze: ‘ಕಬ್ಜ’ ಬಿಡುಗಡೆ ದಿನಾಂಕಕ್ಕೆ ಕಾಯುತ್ತಿದೆ ಬಾಲಿವುಡ್​; ನಿರ್ದೇಶಕರ ಪ್ಲಾನ್‌ ಏನು?

HT Kannada Desk HT Kannada

Nov 05, 2022 12:38 PM IST

‘ಕಬ್ಜ’ ಬಿಡುಗಡೆ ದಿನಾಂಕಕ್ಕೆ ಕಾಯುತ್ತಿದೆ ಬಾಲಿವುಡ್​; ನಿರ್ದೇಶಕರ ಪ್ಲಾನ್‌ ಏನು..

    • ಆರ್‌ ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದ ಚಿತ್ರೀಕರಣ ಮುಗಿದು, ಇತ್ತೀಚೆಗೆ ಟೀಸರ್​ ಸಹ ಬಿಡುಗಡೆಯಾಗಿದೆ. ಟೀಸರ್​ಗೆ ಎಲ್ಲಡೆಯಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರದ ಬಿಡುಗಡೆಗೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
‘ಕಬ್ಜ’ ಬಿಡುಗಡೆ ದಿನಾಂಕಕ್ಕೆ ಕಾಯುತ್ತಿದೆ ಬಾಲಿವುಡ್​; ನಿರ್ದೇಶಕರ ಪ್ಲಾನ್‌ ಏನು..
‘ಕಬ್ಜ’ ಬಿಡುಗಡೆ ದಿನಾಂಕಕ್ಕೆ ಕಾಯುತ್ತಿದೆ ಬಾಲಿವುಡ್​; ನಿರ್ದೇಶಕರ ಪ್ಲಾನ್‌ ಏನು..

ಕನ್ನಡ ಚಿತ್ರಗಳು ಈ ವರ್ಷ ರಾಷ್ಟ್ರಮಟ್ಟದಲ್ಲಿ ದೊಡ್ಡ ಹೆಸರು ಮಾಡಿವೆ. 'ಕೆಜಿಎಫ್​ 2' ಮತ್ತು 'ಕಾಂತಾರ' ಚಿತ್ರಗಳು ಬಾಲಿವುಡ್​ ಚಿತ್ರಗಳ ಗಳಿಕೆಯನ್ನೂ ಮೀರಿಸಿ ಹೊಸ ದಾಖಲೆಯನ್ನು ನಿರ್ಮಿಸಿವೆ. ಈ ಎರಡು ಚಿತ್ರಗಳ ನಂತರ ಬಾಲಿವುಡ್​ನ ಕಣ್ಣು ಇದೀಗ ಉಪೇಂದ್ರ ಮತ್ತು ಸುದೀಪ್​ ಅಭಿನಯದ ಅದ್ಧೂರಿ ಚಿತ್ರ 'ಕಬ್ಜ' ಮೇಲೆ ಬಿದ್ದಿದೆ.

ಟ್ರೆಂಡಿಂಗ್​ ಸುದ್ದಿ

ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್‌ನಲ್ಲಿ ‘ಕೆಂಡ’ಕ್ಕೆ ಪ್ರಶಸ್ತಿ; ಸಹದೇವ್ ಕೆಲವಡಿಗೆ ಬೆಸ್ಟ್ ಡೆಬ್ಯೂ ಡೈರೆಕ್ಟರ್ ಅವಾರ್ಡ್

ರಿಷಿಯ ‘ರುದ್ರ ಗರುಡ ಪುರಾಣ’ ಚಿತ್ರಕ್ಕೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಸಾಥ್‌; ಫಸ್ಟ್‌ ಲುಕ್‌ ರಿಲೀಸ್‌ ಮಾಡಿದ ದೊಡ್ಮನೆ ಸೊಸೆ

ಮದುವೆಗೆ ಒಪ್ಪಿಗೆ ಸಿಕ್ಕರೂ, ರಾಮ್‌ ಜತೆ ಮಕ್ಕಳು ಮಾಡಿಕೊಳ್ಳಲ್ವಂತೆ ಸ್ವಾರ್ಥಿ ಸೀತಾ! ಸೀತಮ್ಮ ನಿಂದ್ಯಾಕೋ ಓವರ್‌ ಆಯ್ತಮ್ಮ ಎಂದ ವೀಕ್ಷಕ

‘ಆಕೆ ಹಸಿದಾಗ ಅವಳ ಬಾಯಿಗೆ ಅನ್ನ ಹಾಕಿ, ಅದನ್ನಲ್ಲ!’ ಪ್ರಜ್ವಲ್‌ ರೇವಣ್ಣ ಕೇಸ್‌ ಬೆನ್ನಲ್ಲೇ ನಟಿಯ ಶಾಕಿಂಗ್‌ ಪೋಸ್ಟ್‌

ಆರ್‌ ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದ ಚಿತ್ರೀಕರಣ ಮುಗಿದು, ಇತ್ತೀಚೆಗೆ ಟೀಸರ್​ ಸಹ ಬಿಡುಗಡೆಯಾಗಿದೆ. ಟೀಸರ್​ಗೆ ಎಲ್ಲಡೆಯಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರದ ಬಿಡುಗಡೆಗೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಬರೀ ಪ್ರೇಕ್ಷಕರಷ್ಟೇ ಅಲ್ಲ, ಬೇರೆ ಚಿತ್ರರಂಗಗಳು ಸಹ ಈ ಚಿತ್ರವನ್ನು ಎದುರು ನೋಡುತ್ತಿವೆ.

ಇತ್ತೀಚೆಗೆ ಇದೇ ವಿಚಾರವಾಗಿ ಬಾಲಿವುಡ್​ನ ಖ್ಯಾತ ಸಿನಿಮಾ ವಿಶ್ಲೇಷಕ ತರಣ್​ ಆದರ್ಶ್​ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟರ್​ ಹಂಚಿಕೊಳ್ಳುವುದರ ಜತೆಗೆ ಚಿತ್ರದ ಬಿಡುಗಡೆ ದಿನಾಂಕಕ್ಕೆ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಚಿತ್ರತಂಡದವರು ಇನ್ನಷ್ಟೇ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.

ಆರ್​. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರವು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ಮರಾಠಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಉಪೇಂದ್ರ ಜತೆಗೆ ಸುದೀಪ್​ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶ್ರೀಯಾ ಶರಣ್, ನವಾಬ್​ ಷಾ, ಕಬೀರ್​ ಸಿಂಗ್​ ದುಹಾನ್​, ಪ್ರಮೋದ್​ ಶೆಟ್ಟಿ, ಮುರಳಿ ಶರ್ಮ ಹಲವರು ಅಭಿನಯಿಸಿದ್ದಾರೆ. 'ಕೆಜಿಎಫ್​' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಡಿಸೆಂಬರ್‌ ಕೊನೆಗೆ ಬಿಡುಗಡೆ ಆಗಬಹುದೇ?

ಒಂದು ಮೂಲಗಳ ಪ್ರಕಾರ ಡಿಸೆಂಬರ್‌ ಕೊನೇ ವಾರ ಕಬ್ಜ ಸಿನಿಮಾ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ. ಹೆಚ್ಚು ರಜಾ ದಿನಗಳು ಸಿಗುವುದರಿಂದ, ಮತ್ತು ಬೇರೆ ಸಿನಿಮಾಗಳ ಟ್ರಾಫಿಕ್‌ ಕಡಿಮೆ ಇರುವುದರಿಂದ ಡಿಸೆಂಬರ್‌ ಕೊನೆಯ ಅಥವಾ ಜನವರಿ ಮೊದಲ ವಾರದಲ್ಲಿಯೂ ಚಿತ್ರ ಬಿಡುಗಡೆ ಆಗುವ ಸಾಧ್ಯತೆಗಳು ಹೆಚ್ಚು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು