ಭೂಮಿಕಾ ಟ್ಯೂಟರ್ ಜಾಬ್‌ಗೆ ಹೋಗಲು ಗೌತಮ್ ಗ್ರೀನ್ ಸಿಗ್ನಲ್; ಶಕುಂತಲಾ ಕುತಂತ್ರದಿಂದ ಕೆಲಸಕ್ಕೆ ಕುತ್ತು- ಅಮೃತಧಾರೆ ಸೀರಿಯಲ್ ಕಥೆ
May 02, 2024 08:41 AM IST
ಭೂಮಿಕಾ ಟ್ಯೂಟರ್ ಜಾಬ್‌ಗೆ ಹೋಗಲು ಗೌತಮ್ ಗ್ರೀನ್ ಸಿಗ್ನಲ್
- Amruthadhaare Serial Yesterday episode: ಅಮೃತಧಾರೆ ಸೀರಿಯಲ್‌ನಲ್ಲಿ ಅಡವಿಟ್ಟ ಒಡವೆ ಬಿಡಿಸುವ ಸಲುವಾಗಿ ಭೂಮಿಕಾ ಟ್ಯೂಟರ್ ಜಾಬ್‌ಗೆ ಹೋಗಲು ಮುಂದಾಗಿದ್ದಾರೆ. ಈಕೆ ಜಾಬ್‌ಗೆ ಹೋಗುವುದನ್ನು ತಡೆಯಲು ಶಕುಂತಲಾದೇವಿ ಕ್ರಿಮಿನಲ್ ಪ್ಲ್ಯಾನ್ ಮಾಡಿದ್ದಾಳೆ.
ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನ ಬುಧವಾರದ ಸಂಚಿಕೆಯಲ್ಲಿ ಕೆಲವೊಂದು ಘಟನೆಗಳು ನಡೆದಿವೆ. ನೆಕ್ಲೆಸ್ ವಿಚಾರವಾಗಿ ಭೂಮಿಕಾ ಚಿಂತಿಸುತ್ತಿದ್ದಾಳೆ. ಹಳೆಯ ಕೆಲಸಕ್ಕೆ ಹಿಂತುರುಗುವ ಕುರಿತು ಆಲೋಚಿಸುತ್ತಿದ್ದಾರೆ. ನಾನು ಹೇಳಿದ ನೆಕ್ಲೆಸ್ ಹಾಕಿಕೊಂಡಿಲ್ಲ ಮತ್ತು ಮಂದಾಕಿನಿ ರೋಲ್ಡ್ ಗೋಲ್ಡ್ ಕೊಟ್ಟ ವಿಚಾರದಿಂದ ಭೂಮಿಕಾ ಚಿಂತಿಸುತ್ತಿದ್ದಾರೆ. ಆದಷ್ಟು ಬೇಗ ಅಡವಿಟ್ಟ ಒಡವೆ ಬಿಡಿಸಬೇಕು ಹೇಗೆ ಎಂದು ಯೋಚಿಸುತ್ತಾರೆ. ಮತ್ತೊಂದೆಡೆ ಮಲ್ಲಿಗೆ ಜೈದೇವ್ ಸಮಧಾನ ಹೇಳುತ್ತಾನೆ. ಅಳಬೇಡ ಎಂದೆಲ್ಲ ನಾಟಕವಾಡುತ್ತಾನೆ. "ನೀನಂದ್ರೆ ತುಂಬಾ ಇಷ್ಟ. ನನಗೆ ನಿನ್ನ ಬಗ್ಗೆ ಏನೂ ಕೆಟ್ಟ ಅಭಿಪ್ರಾಯವಿಲ್ಲ" ಎಂದೆಲ್ಲ ನಾಟಕೀಯ ಮಾತುಗಳನ್ನಾಡುತ್ತಾನೆ. ಈತನ ನಾಟಕವನ್ನು ನಿಜವೆಂದು ನಂಬಿರುವ ಮಲ್ಲಿ ಕರಗುತ್ತಾಳೆ.
ಡೈರಿ ಬರೆಯಲು ಆರಂಭಿಸಿದ ಗೌತಮ್
ಗೌತಮ್ ಮನೆಯಲ್ಲಿ ಕುಳಿತು ತನ್ನ ಡೈರಿಯಲ್ಲಿ ಬರೆಯುತ್ತಾನೆ. ಭೂಮಿ ಕೊಟ್ಟ ಗಿಫ್ಟ್‌ನ ನೆನಪಲ್ಲಿ ಖುಷಿಯಲ್ಲಿ ಇರುತ್ತಾನೆ. "ಇವತ್ತು ನನ್ನ ಜೀವನದಲ್ಲಿ ಮರೆಯಲು ಆಗದ ದಿನ. ಭೂಮಿಕಾಳಿಂದ ನನಗೆ ಬಾಲ್ಯದ ನೆನಪಾಯ್ತು. ಇದಕ್ಕೆ ಕಾರಣವಾದ ಭೂಮಿಕಾಳಿಗೆ ಥ್ಯಾಂಕ್ಸ್" ಎಂದು ಡೈರಿಯಲ್ಲಿ ಬರೆಯುತ್ತಾನೆ. ಆಗ ಭೂಮಿಕಾ ಅಲ್ಲಿಗೆ ಬರುತ್ತಾಳೆ. "ನಿಮ್ಮಿಂದ ಡೈರಿ ಬರೆಯಲು ಕಲಿತೆ" ಎಂದು ಹೇಳುತ್ತಾನೆ. "ಯಾರಾದರೂ ಅದನ್ನು ಓದಿಬಿಟ್ಟರೆ... ನಾನು ಓದಿಬಿಟ್ಟರೆ" ಎಂದೆಲ್ಲ ಹೇಳುತ್ತಾಳೆ. "ಎಲ್ಲಾ ಗುಟ್ಟು ಒಂದಲ್ಲ ಒಂದು ದಿನ ರಟ್ಟಾಗುತ್ತದೆ" ಎಂದು ಗೌತಮ್ ಹೇಳುತ್ತಾನೆ.
ಭೂಮಿಕಾ ಟ್ಯೂಟರ್ ಜಾಬ್‌ಗೆ ಹೋಗಲು ಗೌತಮ್ ಗ್ರೀನ್ ಸಿಗ್ನಲ್
"ಅಂದಹಾಗೆ ಗೌತಮ್ ಅವರೇ ನಿಮ್ಮಲ್ಲಿ ಒಂದು ಕೇಳಬೇಕಿತ್ತು. ಮನೆಯಲ್ಲಿ ಟೈಮ್ ಪಾಸ್ ಆಗ್ತಾ ಇಲ್ಲ. ನಾನು ನನ್ನ ಹಳೆಯ ಜಾಬ್‌ಗೆ ಮತ್ತೆ ಜಾಯ್ನ್ ಆಗಬಹುದಾ?" ಎಂದು ಕೇಳುತ್ತಾಳೆ. "ನೀವು ಕೆಲಸಕ್ಕೆ ಹೋಗಬಾರದು ಎಂದಲ್ಲ. ಫ್ರೀ ಟೈಮ್‌ನಲ್ಲಿ ಮನೆಯಲ್ಲಿದ್ದು ಏನಾದ್ರೂ ಮಾಡಬಹುದು" ಎಂದು ಹೇಳುತ್ತಾನೆ. "ನನ್ನ ಅಪ್ಪ ನನಗೆ ಓದಿಸಿದ್ದು ವೇಸ್ಟ್ ಆಗಬಾರದಲ್ವ. ನನಗೆ ಆ ಜಾಬ್ ಖುಷಿ ಕೊಡುತ್ತದೆ" ಎಂದು ಭೂಮಿಕಾ ಹೇಳಿದಾಗ "ಓಕೆ, ಹೋಗಿ" ಎಂದು ಒಪ್ಪುತ್ತಾನೆ. ಈ ಮೂಲಕ ಅಡವಿಟ್ಟ ಬಂಗಾರ ಬಿಡಿಸಿಕೊಳ್ಳಲು ಕೆಲಸಕ್ಕೆ ಹೋಗಲು ಮುಂದಾಗುತ್ತಾರೆ ಭೂಮಿಕಾ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಭೂಮಿಕಾ ಕೆಲಸಕ್ಕೆ ಹೋಗುವುದನ್ನು ಅಶ್ವಿನಿ ನೋಡುತ್ತಾಳೆ. "ನಾನು ಕೋಚಿಂಗ್ ಸೆಂಟರ್‌ಗೆ ಹೋಗುತ್ತೇನೆ. ಆ ಕೆಲಸಕ್ಕೆ ಮತ್ತೆ ಜಾಯ್ನ್ ಆಗ್ತಾ ಇದ್ದೇನೆ" ಎನ್ನುತ್ತಾಳೆ. "ನೀವು ಕೋಚಿಂಗ್ ಸೆಂಟರ್‌ನಲ್ಲಿ ಕೆಲಸ ಮಾಡ್ತೀರ" ಎಂದು ಅಶ್ವಿನಿ ಕೇಳುತ್ತಾಳೆ. ಈ ಕುರಿತು ಒಂದಿಷ್ಟು ಮಾತುಕತೆ ನಡೆಯುತ್ತದೆ. ಇದಾದ ಬಳಿಕ ಅಶ್ವಿನಿ ಸಹಜವಾಗಿ ಅಮ್ಮನಲ್ಲಿ ಹೇಳಲು ಹೋಗುತ್ತಾಳೆ. "ಈಗಾದ್ರೆ ಕಷ್ಟವಾಗುತ್ತದೆ. ಅತ್ತಿಗೆ ಕೆಲಸಕ್ಕೆ ಹೋಗ್ತಾ ಇದ್ದಾರೆ" ಎಂಬ ಸುದ್ದಿ ಹೇಳುತ್ತಾಳೆ. "ಟ್ಯೂಟರ್ ಕೆಲಸಕ್ಕೆ ಹೋಗ್ತಾ ಇದ್ದಾರೆ" ಎಂದು ಹೇಳಿದಾಗ ಶಕುಂತಲಾದೇವಿಗೆ ಟೆನ್ಷನ್ ಆಗುತ್ತದೆ. "ಈ ಮಾತು ನನಗೆ ಹೇಳಿಲ್ಲ" ಎಂದು ಕೋಪಗೊಳ್ಳುತ್ತಾಳೆ.
"ಈಗ ಗೌತಮ್ ಯಾವುದೇ ವಿಚಾರ ನಿನ್ನ ಹತ್ರ ಹೇಳ್ತಾ ಇಲ್ಲ" ಎಂದು ಮಾವ ಹೇಳುತ್ತಾನೆ. "ಈ ಮನೆಯಲ್ಲಿ ನಿನಗೆ ಯಾವುದೇ ಸ್ಥಾನಮಾನ ಇಲ್ಲ" ಎಂದು ಕಿವಿ ಊದುತ್ತಾರೆ. ಇದಾದ ಬಳಿಕ ಶಕುಂತಲಾದೇವಿ ಗೌತಮ್‌ನಲ್ಲಿ ಮಾತನಾಡುತ್ತಾಳೆ. "ಅವಳು ಕೆಲಸಕ್ಕೆ ಏಕೆ ಹೋಗಬೇಕಿತ್ತು?" ಎಂದು ಪ್ರಶ್ನಿಸುತ್ತಾಳೆ. "ಅವಳು ಹೋಗ್ತಿನಿ ಅಂದಾಗ ನೀನು ಓಕೆ ಅನ್ನೋದ? ನಮ್ಮ ಪ್ರೆಸ್ಟೀಜ್ ಏನಾಗಬೇಡ?" ಎಂದು ಶಕುಂತಲಾದೇವಿ ಹೇಳಿದಾಗ "ನನಗೆ ಅವರ ನಿರ್ಧಾರ ಸರಿ ಅನಿಸಿತ್ತು" ಎನ್ನುತ್ತಾನೆ. "ಮಹಿಮಾ ಕೆಲಸ ಮಾಡ್ತಾ ಇದ್ದಾಳೆ. ಅವಳಿಗೆ ಇರುವ ಫ್ರೀಡಂ ಇವರಿಗೆ ಏಕೆ ಇಲ್ಲ" ಎಂದು ಹೇಳುತ್ತಾನೆ. "ನಿಮಗೆ ಹೇಳುವಷ್ಟು ಇಂಪಾರ್ಟೆಂಟ್ ವಿಚಾರ ಅಂತ ಅನಿಸಲಿಲ್ಲ" ಎನ್ನುತ್ತಾಣೆ. ಈ ಮೂಲಕ ಶಕುಂತಲಾದೇವಿಯ ಬಾಯಿ ಮುಚ್ಚಿಸುತ್ತಾನೆ. ಈ ಭೂಮಿಕಾ ಮತ್ತೆ ಏಕೆ ಕೆಲಸಕ್ಕೆ ಹೋಗುತ್ತಾಳೆ. ಮೊದಲು ಅದನ್ನು ತಿಳಿದುಕೊಳ್ಳಬೇಕು ಎಂದು ಶಕುಂತಲಾ ಮನಸ್ಸಲ್ಲಿ ಅಂದುಕೊಳ್ಳುತ್ತಾಳೆ.
ಗೌತಮ್ ಮತ್ತು ಆನಂದ್ ಮಾತನಾಡುತ್ತಾರೆ. "ಭೂಮಿಕಾ ಕೆಲಸಕ್ಕೆ ಹೋಗ್ತಾ ಇದ್ದಾರೆ" ಎಂದು ಹೇಳುತ್ತಾನೆ. "ಅವರಿಗೆ ಏನಾದ್ರೂ ಸಮಸ್ಯೆಯಾಗಿದೆಯಾ?" ಎಂದು ಗೌತಮ್ ಹೇಳುತ್ತಾನೆ. "ಗಂಡ ಶ್ರೀಮಂತ ಅಂತ ಎಟಿಎಂ ಅಂತ ಬಳಸುವವರು ಅವರಲ್ಲ. ಅವರಿಗೆ ಏನಾದ್ರೂ ಸಮಸ್ಯೆಯಾಗಿದೆಯಾ ಎಂದು ಯೋಚಿಸುತ್ತಿದ್ದೇನೆ" ಎಂದು ಗೌತಮ್ ಹೇಳುತ್ತಾನೆ. "ಕೆಲಸ ಮಾಡುವ ಅನಿವಾರ್ಯತೆ ಅವರಿಗೆ ಏಕೆ ಬಂತು" ಎಂದೆಲ್ಲ ಹೇಳುತ್ತಾನೆ. "ಆಕೆಗೆ ಬೋರ್ ಆಗಿರಬಹುದು" ಎಂದು ಆನಂದ್ ಹೇಳುತ್ತಾನೆ. "ನನ್ನ ಮನಸ್ಸು ಹೇಳ್ತಾ ಇದೆ. ಸಮ್‌ಥಿಂಗ್ ರಾಂಗ್" ಎಂದು ಹೇಳುತ್ತಾನೆ ಗೌತಮ್. "ಅತ್ತಿಗೆ ನಿನ್ನಲ್ಲಿ ಯಾವುದೇ ವಿಷಯ ಮುಚ್ಚಿಡುವುದಿಲ್ಲ. ಅಂತಹದ್ದು ಏನಾದ್ರೂ ಇದ್ರೆ ಅವರೇ ಸಮಯ ಬಂದಾಗ ನಿನ್ನಲ್ಲಿ ಹೇಳ್ತಾರೆ. ನೀನು ತಲೆಕೆಡಿಸಿಕೊಳ್ಳಬೇಡ" ಎಂದು ಸತ್ಯ ಗೊತ್ತಿರುವ ಆನಂದ್ ಸಮಧಾನ ಹೇಳುತ್ತಾನೆ.
ಶಕುಂತಲಾ ಕುತಂತ್ರದಿಂದ ಕೆಲಸಕ್ಕೆ ಕುತ್ತು
ಇನ್ನೊಂದೆಡೆ ಮನೆಹಾಳ ಮಾವ ಶಕುಂತಲಾದೇವಿಯ ಕೋಪಕ್ಕೆ ಇನ್ನಷ್ಟು ಬೆಂಕಿ ಹಾಕ್ತಾ ಇರ್ತಾನೆ. "ನಿನ್ನ ಸಾಮ್ರಾಜ್ಯ ನಿನಗೆ ಮತ್ತೆ ಸಿಗಬೇಕು. ಏನಾದರೂ ಮಾಡು" ಎಂದು ಹೇಳುತ್ತಾಳೆ. "ಅವಳು ಕೆಲಸಕ್ಕೆ ಹೋಗುವುದು ನನಗೆ ತಡೆಯಲು ಆಗ್ತಾ ಇಲ್ಲ. ಅವಳಿಗೆ ಇಷ್ಟಪಡುವುದು ಅವಳಿಗೆ ದೊರಕಬಾರದು. ಅವಳಿಗೆ ಖುಷಿ ನೀಡುವ ಕೆಲಸ ದುಃಖ ನೀಡಬೇಕು" ಎಂದು ಹೇಳುತ್ತಾಳೆ. "ಆ ಕೋಚಿಂಗ್ ಸೆಂಟರ್‌ನವರು ನೀನು ಹೇಳಿದ್ರೂ ಕೇಳ್ತಾರೆ" ಎಂದು ಮಾವ ಹೇಳುತ್ತಾನೆ. ತಕ್ಷಣ ಆ ಕೋಚಿಂಗ್ ಸೆಂಟರ್‌ನವರಿಗೆ ಶಕುಂತಲಾ ಕಾಲ್ ಮಾಡುತ್ತಾಳೆ. "ಮೊದಲಿನಿಂದ ನಮ್ಮ ಸೊಸೆ ಕೋಚಿಂಗ್ ಸೆಂಟರ್‌ನಲ್ಲಿ ಕೆಲಸ ಮಾಡ್ತಾ ಇದ್ದಳು. ಈಗ ಅವಳು ನಿಮ್ಮಲ್ಲಿ ಕೆಲಸ ಮಾಡಬಾರದು" ಎಂದು ಹೇಳುತ್ತಾಳೆ. ಈಗ ಅವಳು ಕೇವಲ ಟೀಚರ್ ಆಗಿದ್ರೆ ಸಾಕಾಗೋದಿಲ್ಲ ಎನ್ನುತ್ತಾಳೆ. ಆಟೋದಲ್ಲಿ ಕೋಚಿಂಗ್ ಸೆಂಟರ್‌ಗೆ ಬರುತ್ತಿರುವುದನ್ನು ಜೀವನ್ ನೋಡುತ್ತಾನೆ. "ನಾನು ಮತ್ತೆ ಜಾಬ್‌ಗೆ ಜಾಯ್ನ್ ಆಗಿದ್ದೀನಿ" ಎಂದು ಜೀವನ್‌ಗೆ ಹೇಳುತ್ತಾಳೆ. "ನನ್ನಿಂದ ಏನಾದ್ರೂ ತೊಂದರೆ ಆಯ್ತ. ಇದಕ್ಕೆ ನಾನೇ ಕಾರಣ" ಎಂದು ಹೇಳುತ್ತಾನೆ. "ನಿನ್ನಿಂದ ಏನೂ ಸಮಸ್ಯೆಯಾಗಿಲ್ಲ" ಎಂದು ಹೇಳುತ್ತಾಳೆ.
ಇನ್ನೊಂದೆಡೆ ಮಂದಾಕಿನಿ ಚೀಟಿ ದುಡ್ಡು ತೆಗೆದುಕೊಂಡು ಬರುತ್ತಾಳೆ. ಅಳಿಯಂದ್ರಿಗೆ ಚೀಟಿ ದುಡ್ಡಿನಿಂದ ಸರ ಕೊಡ್ತಿನಿ ಅನ್ತಾಳೆ. "ಅಣ್ಣ ಕೊಟ್ಟಿಲ್ಲ ಅಂದ್ರೆ ಅತ್ತಿಗೆ ಕೈಯಿಂದ ಕೊಡಿಸೋಣ" ಎಂದು ಮಹಿಮಾ ಸಲಹೆ ನೀಡುತ್ತಾಳೆ.
ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ