logo
ಕನ್ನಡ ಸುದ್ದಿ  /  ಮನರಂಜನೆ  /  ಸತ್ಯಭಾಮಾ ಟೀಸರ್‌: ಖಡಕ್‌ ಪೊಲೀಸ್‌ ಅಧಿಕಾರಿಯಾದ ಕಾಜಲ್‌ ಅಗರ್‌ವಾಲ್‌; ದೀಪಾವಳಿ ಪಟಾಕಿ ನಡುವೆ ಕಾಜಲ್‌ ಖದರ್‌

ಸತ್ಯಭಾಮಾ ಟೀಸರ್‌: ಖಡಕ್‌ ಪೊಲೀಸ್‌ ಅಧಿಕಾರಿಯಾದ ಕಾಜಲ್‌ ಅಗರ್‌ವಾಲ್‌; ದೀಪಾವಳಿ ಪಟಾಕಿ ನಡುವೆ ಕಾಜಲ್‌ ಖದರ್‌

Praveen Chandra B HT Kannada

Nov 10, 2023 06:39 PM IST

ಸತ್ಯಭಾಮಾ ಟೀಸರ್‌: ಖಡಕ್‌ ಪೊಲೀಸ್‌ ಅಧಿಕಾರಿಯಾದ ಕಾಜಲ್‌ ಅಗರ್‌ವಾಲ್‌

    • Satyabhama teaser: ಈ ದೀಪಾವಳಿ ಹಬ್ಬದ ಸಮಯದಲ್ಲಿ ಬಾಲಿವುಡ್‌ ನಟಿ ಕಾಜಲ್‌ ಅಗರ್‌ವಾಲ್‌ ನಟನೆಯ ತೆಲುಗು ಚಿತ್ರ ಸತ್ಯಭಾಮಾದ ಟೀಸರ್‌ ಹೊರಬಿದ್ದಿದೆ. ಈ ಚಿತ್ರದಲ್ಲಿ ಕಾಜಲ್‌ ಅಗರ್‌ವಾಲ್‌ ಅವರು ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಸತ್ಯಭಾಮಾ ಟೀಸರ್‌: ಖಡಕ್‌ ಪೊಲೀಸ್‌ ಅಧಿಕಾರಿಯಾದ ಕಾಜಲ್‌ ಅಗರ್‌ವಾಲ್‌
ಸತ್ಯಭಾಮಾ ಟೀಸರ್‌: ಖಡಕ್‌ ಪೊಲೀಸ್‌ ಅಧಿಕಾರಿಯಾದ ಕಾಜಲ್‌ ಅಗರ್‌ವಾಲ್‌

ಬೆಂಗಳೂರು: ಈ ದೀಪಾವಳಿ ಹಬ್ಬದ ಸಮಯದಲ್ಲಿ ಬಾಲಿವುಡ್‌ ನಟಿ ಕಾಜಲ್‌ ಅಗರ್‌ವಾಲ್‌ ನಟನೆಯ ತೆಲುಗು ಚಿತ್ರ ಸತ್ಯಭಾಮಾದ ಟೀಸರ್‌ ಹೊರಬಿದ್ದಿದೆ. ಈ ಚಿತ್ರದಲ್ಲಿ ಕಾಜಲ್‌ ಅಗರ್‌ವಾಲ್‌ ಅವರು ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ದೀಪಾವಳಿ ಹಬ್ಬದ ಪಟಾಕಿ ನಡುವೆ ಶತ್ರುಗಳನ್ನು ಬ್ಲಾಸ್ಟ್‌ ಮಾಡುತ್ತ ಸಾಗುವ ಈ ಚಿತ್ರವು ನಿಗೂಢ ಅಪರಾಧಿ ಪತ್ತೆದಾರಿಕೆಯ ಚಿತ್ರಣವನ್ನು ಹೊಂದಿದೆ. ಈ ಕ್ರೈಮ್‌ ಥ್ರಿಲ್ಲರ್‌ ಮೂಲಕ ಕಾಜಲ್‌ ಅಗರ್‌ವಾಲ್‌ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅವ್ರಿಗೊಂದು ದೊಡ್ಡ ನಮಸ್ಕಾರ! ಈಜುಡುಗೆ ಬಗ್ಗೆ ತಮಗಿದ್ದ ಭಯ ಎಷ್ಟು ಎಂಬುದನ್ನು ಮುಚ್ಚುಮರೆಯಿಲ್ಲದೇ ಹೇಳಿದ ಮೀನಾ

10 ವರ್ಷಗಳಲ್ಲಿ ಭಾರತ ಬದಲಾಗಿದೆ ಎಂದಿದ್ದ ರಶ್ಮಿಕಾ ಮಂದಣ್ಣಗೆ ಪರೋಕ್ಷವಾಗಿ ‘ಅಜ್ಞಾನಿ’ ಎಂದು ತಿವಿದ ಚೇತನ್‌ ಅಹಿಂಸಾ

ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರು ಬಂದರೂ ಅದು ಮಹಾಪಾಪ! ಮೋದಿ ವಿರುದ್ಧ ತಿರುಗಿ ಬಿದ್ದ ಕಿಶೋರ್‌

ಮಲಯಾಳಂ ಸಿನಿಮಾದವರು ಏನು ಮಾಡಿದ್ರೂ ಉಘೇ ಉಘೇ, ಕನ್ನಡ ಸಿನಿಮಾದಲ್ಲಿ ಟ್ಯೂನ್‌ ಹೋಲಿಕೆ ಇದ್ರೂ ಕೇಸ್‌, ಯಾಕೆ ಹೀಗೆ? ಕವಿರಾಜ್‌ ಪ್ರಶ್ನೆ

ಕಾಜಲ್‌ ಅಗರ್‌ವಾಲ್‌ ಅವರು ಈ ಚಿತ್ರದ ಕುರಿತು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "ಸತ್ಯಭಾಮಾ ಟೀಸರ್‌ ಬಿಡುಗಡೆ ಮಾಡಿದ್ದೇವೆ. ಮಾಸ್‌ ಕ್ವೀನ್‌ ಕಾಜಲ್‌ ಅಗರ್‌ವಾಲ್‌ ಅವರನ್ನು ನೀವು ಹೊಸ ಲುಕ್‌ನಲ್ಲಿ, ಪೊಲೀಸ್‌ ಅಧಿಕಾರಿಯಾಗಿ ನೋಡಬಹುದು" ಎಂದು ಕ್ಯಾಪ್ಷನ್‌ ಬರೆಯಲಾಗಿದೆ.

ಸತ್ಯಭಾಮಾ ಟೀಸರ್‌ ಹೇಗಿದೆ?

ದೀಪಾವಳಿ ಹಬ್ಬಕ್ಕೆ ಮೂರ್ನಾಲ್ಕು ದಿನ ಇರುವಾಗ ಬಿಡುಗಡೆಗೊಂಡ ಸತ್ಯಭಾಮಾ ಚಿತ್ರದ ಟ್ರೈಲರ್‌ನಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಜಲ್‌ ಅಗರ್‌ವಾಲ್‌ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ನಾಯಕಿಯ ಹೆಸರು ಸತ್ಯಭಾಮಾ. ಆಕೆ ಖಡಕ್‌ ಪೊಲೀಸ್‌ ಅಧಿಕಾರಿ. ಆಕೆಗೆ ನಿಗೂಢ ಕೊಲೆ ಪ್ರಕರಣವೊಂದನ್ನು ಪತ್ತೆಹಚ್ಚುವ ಹೊಣೆ ಇರುತ್ತದೆ. ಕಾಡಿನ ನಡುವೆ ಫೈಟಿಂಗ್‌ ಸೀನ್‌ಗಳಿವೆ. ಒಟ್ಟಾರೆ, ಸಾಕಷ್ಟು ಥ್ರಿಲ್ಲಿಂಗ್‌ ಅನುಭವ ನೀಡುವ ಭರವಸೆಯನ್ನು ಸತ್ಯಭಾಮಾ ಟೀಸರ್‌ ನೀಡಿದೆ.

ಸತ್ಯಭಾಮಾ ಚಿತ್ರದ ಕುರಿತು

"ಎಸಿಪಿ ಸತ್ಯಭಾಮಾ ಅವರಿಗೆ ಭೂತಕಾಲದ ತೊಂದರೆಗಳು ಕಾಣಿಸುತ್ತದೆ. ಕಾಣೆಯಾದ ವ್ಯಕ್ತಿಯ ಹುಡುಕಾಟಕ್ಕೆ ಉನ್ನತ ಮಟ್ಟದ ತನಿಖೆಗೆ ಮುಂದಾಗುತ್ತಾರೆ. ಆಕೆಯ ನೆರಳುಗಳಲ್ಲಿ ಮುಚಚ್ಚಿರುವ ಹಲವು ಪಟ್ಟಣಗಳ ರಹಸ್ಯಗಳು ಎದುರಾಗುತ್ತವೆ. ಆಕೆಗೆ ಗತಕಾಲದ ತೊಂದರೆಗಳು ಎದುರಾಗುತ್ತವೆ. ಈ ಭೂತಕಾಲದ ತೊಂದರೆಗಳಿಂದ ಈಕೆ ಪಾರಾಗುತ್ತಾಳೆಯೇ, ಅಪರಾಧಿಗಳನ್ನು ಮಟ್ಟ ಹಾಕುತ್ತಾಳೆಯೇ? ಸತ್ಯಭಾಮಾ ಸಿನಿಮಾಕ್ಕೆ ಕಾಯಿರಿ" ಎಂದು ಯೂಟ್ಯೂಬ್‌ನಲ್ಲಿ ಹಂಚಿಕೊಂಡ ಟೀಸರ್‌ನಲ್ಲಿ ಮಾಹಿತಿ ಬರೆಯಲಾಗಿದೆ.

ಸತ್ಯಭಾಮಾ ಎನ್ನುವುದು ಅಖಿಲಾ ದೆಗಲಾ ನಿರ್ದೇಶನದ ಕ್ರೈಮ್‌ ಥ್ರಿಲ್ಲರ್‌ ಸಿನಿಮಾ. ಶ್ರೀ ಚರನ್‌ ಪಕಳ ಅವರ ಸಂಗೀತ ನಿರ್ದೇಶನ ಇರುವ ಈ ಚಿತ್ರವನ್ನು ಬಾಬಿ ಟಿಕ್ಕಾ ಮತ್ತು ಶ್ರೀನಿವಾಸ್‌ ರಾವ್‌ ತಕ್ಕಳಪಳ್ಳಿ ಅವರು ಅರೂಮ್‌ ಆರ್ಟ್ಸ್‌ ಲಾಂಛನದಡಿ ನಿರ್ಮಾಣ ಮಾಡಿದ್ದಾರೆ. ಕಾಜಲ್‌ ಅಗರ್‌ವಾಲ್‌ ನಟನೆಯ ಈ ಚಿತ್ರವು ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಇದು ಕಾಜಲ್‌ ಅಗರ್‌ವಾಲ್‌ ನಟನೆಯ 60ನೇ ಸಿನಿಮಾ. ಈ ಚಿತ್ರದ ಟೈಟಲ್‌ ಅನ್ನು ಈ ವರ್ಷದ ಜೂನ್‌ ತಿಂಗಳಲ್ಲಿ ಲಾಂಚ್‌ ಮಾಡಲಾಗಿತ್ತು.

ಕಾಜಲ್‌ ಅಗರ್‌ವಾಲ್‌ ಅವರ ಇತ್ತೀಚಿನ ಪ್ರಾಜೆಕ್ಟ್‌ಗಳು

ಬಾಲಿವುಡ್‌ ನಟಿ ಕಾಜಲ್‌ ಅಗರ್‌ವಾಲ್‌ ಈಗ ದಕ್ಷಿಣ ಭಾರತದ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಕರುನಗಪಿಯಂ ಎಂಬ ತಮಿಳು ಹಾರರ್‌ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಡಿ. ಕಾರ್ತಿಕೇಯನ್‌ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದಲ್ಲಿ ರಾಗಿನಾ ಕ್ಯಾಸೆಂದ್ರ, ಜನನಿ ಐಯ್ಯರ್‌ ಮತ್ತು ಆಧವ್‌ ಕಂಡಸನ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಮುಂಬರುವ ಬಹುನಿರೀಕ್ಷಿತ ಚಿತ್ರ ಇಂಡಿಯನ್‌ 2ನಲ್ಲೂ ಕಾಜಲ್‌ ಅಗರ್‌ವಾಲ್‌ ಅವರನ್ನು ನೋಡಬಹುದು. ಈ ಚಿತ್ರದಲ್ಲಿ ಕಮಲ್‌ ಹಾಸನ್‌, ಸಿದ್ಧಾರ್ಥ್‌, ರಾಕುಲ್‌ ಪ್ರೀತ್‌ ಸಿಂಗ್‌, ಬಾಬಿ ಸಿಂಹ, ಪ್ರಿಯಾ ಭವನಿ ಶಂಕರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಂಡಿಯನ್‌ ಭಾಗ 1 ಸಿನಿಮಾವು 1996ರಲ್ಲಿ ಬಿಡುಗಡೆಯಾಗಿತ್ತು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ