logo
ಕನ್ನಡ ಸುದ್ದಿ  /  ಮನರಂಜನೆ  /  ಮಿಸ್ಟರಿ ಥ್ರಿಲ್ಲರ್‌ ದಿ ರೋಡ್‌ ಸಿನಿಮಾ ಇಂದು ರಿಲೀಸ್‌; ಪೊನ್ನಿಯಿನ್‌ ಸೆಲ್ವನ್‌ ನಂತರ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ತ್ರಿಶಾ ಕೃಷ್ಣನ್

ಮಿಸ್ಟರಿ ಥ್ರಿಲ್ಲರ್‌ ದಿ ರೋಡ್‌ ಸಿನಿಮಾ ಇಂದು ರಿಲೀಸ್‌; ಪೊನ್ನಿಯಿನ್‌ ಸೆಲ್ವನ್‌ ನಂತರ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ತ್ರಿಶಾ ಕೃಷ್ಣನ್

HT Kannada Desk HT Kannada

Oct 06, 2023 07:00 AM IST

ತ್ರಿಶಾ ಕೃಷ್ಣನ್‌ ಅಭಿನಯದ ದಿ ರೋಡ್‌ ಸಿನಿಮಾ ಅಕ್ಟೋಬರ್‌ 6ಕ್ಕೆ ರಿಲೀಸ್

  • ತ್ರಿಶಾ ಅಭಿನಯದ 'ದಿ ರೋಡ್‌' ಚಿತ್ರವನ್ನು ಎಎಎ ಸಿನಿಮಾ ಪ್ರೈವೇಟ್‌ ಲಿಮಿಟೆಡ್‌ ಬ್ಯಾನರ್‌ ಅಡಿ ಅರುಣ್‌ ವಶೀಕರಣ್‌ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಸ್ಯಾಮ್‌ ಸಿಎಸ್‌ ಸಂಗೀತ ನೀಡಿದ್ದಾರೆ.

ತ್ರಿಶಾ ಕೃಷ್ಣನ್‌ ಅಭಿನಯದ ದಿ ರೋಡ್‌ ಸಿನಿಮಾ ಅಕ್ಟೋಬರ್‌ 6ಕ್ಕೆ ರಿಲೀಸ್
ತ್ರಿಶಾ ಕೃಷ್ಣನ್‌ ಅಭಿನಯದ ದಿ ರೋಡ್‌ ಸಿನಿಮಾ ಅಕ್ಟೋಬರ್‌ 6ಕ್ಕೆ ರಿಲೀಸ್

ಖ್ಯಾತ ನಟಿ ತ್ರಿಶಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ದಿ ರೋಡ್‌' ಸಿನಿಮಾ ಇಂದು ರಿಲೀಸ್‌ ಆಗುತ್ತಿದೆ. ಈಗಾಗಲೇ ರಿಲೀಸ್‌ ಆಗಿರುವ ಟ್ರೇಲರ್‌ ಕುತೂಹಲ ಮೂಡಿಸಿದೆ. ಪೊನ್ನಿಯಿನ್‌ ಸೆಲ್ವನ್‌ ಸಿನಿಮಾ ನಂತರ ತ್ರಿಶಾ ಕೃಷ್ಣನ್‌ ಮಿಸ್ಟರಿ ಥ್ರಿಲ್ಲರ್‌ ಸಿನಿಮಾ ಮೂಲಕ ಸಿನಿಪ್ರಿಯರ ಮುಂದೆ ಬರುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ನೈಜ ಘಟನೆ ಆಧಾರಿತ ಚಿತ್ರ 'ದಿ ರೋಡ್‌'

ಮಣಿರತ್ನಂ ನಿರ್ದೇಶನದ ಪೊನ್ನಿಯಿನ್‌ ಸೆಲ್ವನ್‌ ಚಿತ್ರದಲ್ಲಿ ತ್ರಿಶಾ ಚೋಳ ರಾಜಕುಮಾರಿ ಕುಂಡೈ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ದಿ ರೋಡ್‌ ಚಿತ್ರದ ಮೂಲಕ ಮತ್ತೆ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ಧಾರೆ. ಇದೊಂದು ನೈಜ ಘಟನೆ ಆಧರಿಸಿದ ಸಿನಿಮಾ ಎಂದು ಚಿತ್ರತಂಡ ಹೇಳಿದೆ. NH 44 ರಸ್ತೆಯ ನಿರ್ದಿಷ್ಟ ಜಾಗವೊಂದರಲ್ಲಿ ಆಗ್ಗಾಗ್ಗೆ ಅಪಘಾತಗಳು ಸಂಭವಿಸುತ್ತಿರುತ್ತದೆ. ಈ ಅಪಘಾತಕ್ಕೆ ಕಾರಣ ಏನು? ಇದರಲ್ಲಿ ಯಾರದ್ದಾದರೂ ಕೈವಾಡ ಇದೆಯೇ ಎಂಬುದರ ಬಗ್ಗೆ ನಾಯಕಿ ಮೀರಾ ಬಹಳ ಗಂಭೀರವಾಗಿ ಯೋಚಿಸುತ್ತಾಳೆ. ಇದರ ಬಗ್ಗೆ ಪೊಲೀಸರಿಗೆ ದೂರು ಕೂಡಾ ನೀಡುತ್ತಾಳೆ. ಚಿತ್ರತಂಡ 2 ವಾರಗಳ ಹಿಂದೆ 'ದಿ ರೋಡ್‌' ಚಿತ್ರದ ಟ್ರೇಲರ್‌ ರಿಲೀಸ್‌ ಮಾಡಿತ್ತು.

ಅರುಣ್‌ ವಶೀಕರಣ್‌ ನಿರ್ದೇಶನದ ಸಿನಿಮಾ

ದಿ ರೋಡ್‌ ಚಿತ್ರವನ್ನು ಎಎಎ ಸಿನಿಮಾ ಪ್ರೈವೇಟ್‌ ಲಿಮಿಟೆಡ್‌ ಬ್ಯಾನರ್‌ ಅಡಿ ಅರುಣ್‌ ವಶೀಕರಣ್‌ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಸ್ಯಾಮ್‌ ಸಿಎಸ್‌ ಸಂಗೀತ ನೀಡಿದ್ದಾರೆ. ದಿ ರೋಡ್‌ ಚಿತ್ರದಲ್ಲಿ ತ್ರಿಶಾ, ಡ್ಯಾನ್ಸಿಂಗ್‌ ರೋಸ್‌ ಶಬೀರ್‌, ಸಂತೋಷ್‌ ಪ್ರತಾಪ್‌, ಮಿಯಾ ಜಾರ್ಜ್‌, ಎಂಎಸ್‌ ಭಾಸ್ಕರ್‌, ವಿವೇಕ್‌ ಪ್ರಸನ್ನ, ವೇಲಾ ರಾಮಮೂರ್ತಿ, ಲಕ್ಷ್ಮಿಪ್ರಿಯ ಹಾಗೂ ಇನ್ನಿತರರು ನಟಿಸಿದ್ದಾರೆ.

ಲಿಯೋ ಸಿನಿಮಾದಲ್ಲೂ ತ್ರಿಶಾ ನಟನೆ

ಈ ಸಿನಿಮಾ ಹೊರತುಪಡಿಸಿ ತ್ರಿಶಾ, ದಳಪತಿ ವಿಜಯ್‌ ಜೊತೆ ಲಿಯೋ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಟ್ರೇಲರ್‌ ಗುರುವಾರ ತಮಿಳು, ತೆಲುಗು, ಕನ್ನಡ, ಹಿಂದಿ ನಾಲ್ಕು ಭಾಷೆಗಳಲ್ಲಿ ರಿಲೀಸ್‌ ಆಗಿದೆ. 'ಲಿಯೋ' ಚಿತ್ರವನ್ನು ಸೆವೆನ್‌ ಸ್ಕ್ರೀನ್‌ ಸ್ಟುಡಿಯೋಸ್‌ ಬ್ಯಾನರ್‌ ಅಡಿ ಲಲಿತ್‌ ಕುಮಾರ್‌ ನಿರ್ಮಿಸಿದ್ದು ಲೋಕೇಶ್‌ ಕನಕರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್‌ ರವಿಚಂದರ್‌ ಸಂಗೀತ ನೀಡಿದ್ದಾರೆ.

ಇನ್ನಷ್ಟು ಮನರಂಜನೆ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ