logo
ಕನ್ನಡ ಸುದ್ದಿ  /  ಮನರಂಜನೆ  /  Friday Release: ನಾಳೆ ಬಿಡುಗಡೆಯಾಗಲಿವೆ 20+ ಸಿನಿಮಾ; ಬ್ಯಾಡ್‌ ಮ್ಯಾನರ್ಸ್‌ನಿಂದ ಮಮ್ಮುಟ್ಟಿ ಕಾಥಲ್‌ವರೆಗೆ, ಕನ್ನಡದಲ್ಲಿ 5 ಸಿನಿಮಾ ರಿಲೀಸ್

Friday Release: ನಾಳೆ ಬಿಡುಗಡೆಯಾಗಲಿವೆ 20+ ಸಿನಿಮಾ; ಬ್ಯಾಡ್‌ ಮ್ಯಾನರ್ಸ್‌ನಿಂದ ಮಮ್ಮುಟ್ಟಿ ಕಾಥಲ್‌ವರೆಗೆ, ಕನ್ನಡದಲ್ಲಿ 5 ಸಿನಿಮಾ ರಿಲೀಸ್

Praveen Chandra B HT Kannada

Nov 23, 2023 05:24 PM IST

Friday Release: ನಾಳೆ ಬಿಡುಗಡೆಯಾಗಲಿವೆ 20+ ಸಿನಿಮಾ; ಕನ್ನಡದಲ್ಲಿ 5 ಸಿನಿಮಾ ರಿಲೀಸ್

    • November 24th movie releases: ನವೆಂಬರ್‌ 24 ಶುಕ್ರವಾರ ದೇಶಾದ್ಯಂತ 20ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಲಿವೆ. ಕನ್ನಡದಲ್ಲಿ ಬ್ಯಾಡ್‌ ಮ್ಯಾನರ್ಸ್‌, ಶುಗರ್‌ ಪ್ಯಾಕ್ಟರಿ, ಸ್ವಾತಿ ಮುತ್ತಿನ... ಸೇರಿದಂತೆ ಐದು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ತಮಿಳಿನಲ್ಲಿ ವಿಕ್ರಮ್‌ ಮತ್ತು ಮಲಯಾಳಂನಲ್ಲಿ ಮಮ್ಮುಟ್ಟಿ ನಟನೆಯ ಚಿತ್ರಗಳು ಬಿಡುಗಡೆಯಾಗಲಿವೆ.
Friday Release: ನಾಳೆ ಬಿಡುಗಡೆಯಾಗಲಿವೆ 20+ ಸಿನಿಮಾ; ಕನ್ನಡದಲ್ಲಿ 5 ಸಿನಿಮಾ ರಿಲೀಸ್
Friday Release: ನಾಳೆ ಬಿಡುಗಡೆಯಾಗಲಿವೆ 20+ ಸಿನಿಮಾ; ಕನ್ನಡದಲ್ಲಿ 5 ಸಿನಿಮಾ ರಿಲೀಸ್

November 24th movie releases: ಈ ಶುಕ್ರವಾರ ಯಾವ ಸಿನಿಮಾ ಬಿಡುಗಡೆಯಾಗುತ್ತಿದೆ, ಈ ವಾರಾಂತ್ಯದಲ್ಲಿ ಯಾವ ಸಿನಿಮಾ ನೋಡುವುದು ಎಂದು ಯೋಜಿಸುವವರಿಗೆ ಹಲವು ಆಯ್ಕೆಗಳಿವೆ. ನಾಳೆ ಬರೋಬ್ಬರಿ ಐದು ಕನ್ನಡ ಸಿನಿಮಾಗಳು ಬಿಡುಗಡೆಯಾಗಲಿವೆ. ಅಭಿಷೇಕ್‌ ಅಂಬರೀಶ್‌ ನಟನೆಯ ಬ್ಯಾಡ್‌ ಮ್ಯಾನರ್ಸ್‌, ರಾಜ್‌ ಬಿ ಶೆಟ್ಟಿಯ ಸ್ವಾತಿ ಮುತ್ತಿನ ಮಳೆಯೇ ಸೇರಿದಂತೆ ಐದು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ. ಮಲಯಾಳಂ ಸಿನಿಪ್ರೇಕ್ಷಕರಿಗೆ ಮಮ್ಮುಟ್ಟಿ ನಟನೆಯ ಕಾಥಲ್‌- ದಿ ಕೋರ್‌ ಬಿಡುಗಡೆಯಾಗಲಿದೆ. ಇದೇ ಸಮಯದಲ್ಲಿ ತಮಿಳಿನಲ್ಲಿ ವಿಕ್ರಮ್‌ ನಟನೆಯ ದ್ರುವ ನಾಚತಿರಾಮ್‌ ಚಿತ್ರ ಬಿಡುಗಡೆಯಾಗಲಿದೆ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಬ್ಯಾಡ್‌ ಮ್ಯಾನರ್ಸ್‌ (ಕನ್ನಡ)

ಅಭಿಷೇಕ್‌ ಅಂಬರೀಶ್‌ ನಟನೆಯ ಬ್ಯಾಡ್‌ಮ್ಯಾಟರ್ಸ್‌ ಇಂದು ಬಿಡುಗಡೆಯಾಗಲಿದೆ. ದುನಿಯಾ ಸೂರಿ ನಿರ್ದೇಶನದ ಸಾಹಸಭರಿತ ಸಿನಿಮಾ ಇದಾಗಿದೆ. ರಾಜ್ಯಾದ್ಯಂತ ನಾಳೆ 300 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಕುರಿತು ವಿಶೇಷ ಸುದ್ದಿ ಲೇಖನ ಇಲ್ಲಿದೆ.

ಸ್ವಾತಿ ಮುತ್ತಿನ ಮಳೆ ಹನಿಯೇ (ಕನ್ನಡ)

ನವೆಂಬರ್‌ 24ರಂದು ನಾಳೆ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ರಾಜ್‌ ಬಿ ಶೆಟ್ಟಿ ಮತ್ತು ಸಿರಿ ರವಿಕುಮಾರ್‌ ನಾಯಕ-ನಾಯಕಿಯಾಗಿ ನಟಿಸಿದ ಈ ಚಿತ್ರವನ್ನು ರಮ್ಯಾ ನಿರ್ಮಿಸುತ್ತಿದ್ದಾರೆ. ರೇಖಾ ಕೂಡ್ಲಿಗಿ, ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ತುಮ್ಮಿನಾಡು, ಸ್ನೇಹಾ ಶರ್ಮ, ಗೋಪಾಲಕೃಷ್ಣ ದೇಶಪಾಂಡೆ ಸೇರಿ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಶುಗರ್‌ ಫ್ಯಾಕ್ಟರಿ (ಕನ್ನಡ)

ನವೆಂಬರ್‌ 24ರಂದು ಚಿತ್ರಮಂದಿರಗಳಲ್ಲಿ ಶುಗರ್‌ ಫ್ಯಾಕ್ಟರಿ ಎಂಬ ಕನ್ನಡ ಚಲನಚಿತ್ರ ಬಿಡುಗಡೆಯಾಗಲಿದೆ. ಇದು ದೀಪಕ್‌ ಅರಸ್‌ ನಿರ್ದೇಶನದ, ಡಾರ್ಲಿಂಗ್‌ ಕೃಷ್ಣ ನಟನೆಯ ಚಿತ್ರ. ಈದು ಒಂದು ಪಬ್‌ಗೆ ಸಂಬಂಧಪಟ್ಟ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ರೋಮ್ಯಾಂಟಿಕ್‌ ಪ್ರೇಮಕಥೆ, ಸಾಹಸ, ಸೆಂಟಿಮೆಂಟ್‌ ಎಲ್ಲವೂ ಇದೆ ಎಂದು ದೀಪಕ್‌ ಅರಸ್‌ ಹೇಳಿದ್ದಾರೆ.

ಎಲೆಕ್ಟ್ರಾನಿಕ್‌ ಸಿಟಿ (ಕನ್ನಡ)

ಐಟಿ ಉದ್ಯೋಗಿ ಆರ್‌ ಚಿಕ್ಕಣ್ಣ ನಿರ್ಮಿಸಿದ ಎಲೆಕ್ಟ್ರಾನಿಕ್‌ ಸಿಟಿ ಹೆಸರಿನ ಚಿತ್ರವೊಂದು ನಾಳೆ ಬಿಡುಗಡೆಯಾಗಲಿದೆ. ವಿಶೇಷವಾಗಿ ಐಟಿ ಉದ್ಯೋಗಗಳಲ್ಲಿ ಯುವ ಜನತೆ ಪಡುವ ಕಷ್ಟವನ್ನು ಮನಗಂಡು ಅವರ ಜೀವನದ ಕುರಿತು ಎಲೆಕ್ಟ್ರಾನಿಕ್‌ ಸಿಟಿ ಚಿತ್ರ ಮಾಡಲಾಗಿದೆ. ಈ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆಯೂ ಇದೆ ಎಂದು ಚಿತ್ರತಂಡ ತಿಳಿಸಿದೆ. ಸ್ಯಾಂಡಲ್‌ವುಡ್‌ನ ನೂತನ ಚಿತ್ರ ಎಲೆಕ್ಟ್ರಾನಿಕ್‌ ಸಿಟಿ ಈಗಾಗಲೇ ಹಲವು ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡು ಹಲವು ಪ್ರಶಸ್ತಿ ಪಡೆದಿದೆ. ಎಲೆಕ್ಟ್ರಾನಿಕ ಸಿಟಿ ಚಿತ್ರದಲ್ಲಿ ಆರ್ಯುನ್‌ ಹರ್ಷ ನಾಯಕ. ದಿಯಾ ಆಶ್ಲೇಶ, ರಕ್ಷಿತ ಕೆರೆಮನೆ ನಾಯಕಿಯರು. ರಶ್ಮಿ ಶೆಟ್ಟಿ, ಭವ್ಯ ರುತ್ವಿಕ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸ್ಕೂಲ್‌ ಡೇಸ್‌ (ಕನ್ನಡ)

ಈ ಮೂರು ಸಿನಿಮಾಗಳು ಮಾತ್ರವಲ್ಲದೆ ಸ್ಕೂಲ್‌ ಡೇಸ್‌ ಎಂಬ ಕನ್ನಡ ಸಿನಿಮಾವೂ ಇಂದು ಬಿಡುಗಡೆಯಾಗಲಿದೆ. ಉಮೇಶ್ ಎಸ್. ಹಿರೇಮಠ ನಿರ್ಮಾಣ ಮತ್ತು ಸಂಜಯ್ .ಹೆಚ್ ನಿರ್ದೇಶನದ ಈ ಚಿತ್ರವು ಉತ್ತರ ಕರ್ನಾಟಕದ ಭಾಷಾ ಸೊಗಡಿನಲ್ಲಿ ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ: Kaiva Song Lyrics: ಕೈವ ಸಿನಿಮಾದ ಸಂಕ್ರಾಂತಿ ಸಂಜೇಲಿ ಹಚ್ಚಿಟ್ಟ ದೀಪ ಹಾಡಿನ ಲಿರಿಕ್ಸ್‌ ಇಲ್ಲಿದೆ ನೋಡಿ; ಓ ದೇವರೆ ನೀನಿದ್ದರೆ ನೋಡು

ನವೆಂಬರ್‌ 24ರಂದು ಬಿಡುಗಡೆಯಾಗುವ ಹಿಂದಿ ಚಿತ್ರಗಳು

- ನೆಪೊಲಿಯನ್‌

- ಫಾರೆ

- ಅನಾರಿ ಈಸ್‌ ಬ್ಯಾಕ್‌

- ಸ್ಟಾರ್‌ ಫಿಶ್‌

ನವೆಂಬರ್‌ 24ರಂದು ಬಿಡುಗಡೆಯಾಗುವ ತಮಿಳು ಸಿನಿಮಾಗಳು

- 80 ಬಿಲ್ಡಪ್‌

- ದ್ರುವ ನಾಚತಿರಾಮ್‌ (ವಿಕ್ರಮ್‌ ನಟನೆಯ ಬಹುನಿರೀಕ್ಷಿತ ಸಿನಿಮಾ) ಈ ಸಿನಿಮಾ ನಾಳೆ ಬಿಡುಗಡೆಯಾಗಲಿದೆ. ಹಣಕಾಸು ವಿಷಯದ ವಿವಾದವೊಂದು ಕೋರ್ಟ್‌ನಲ್ಲಿರುವುದರಿಂದ ಈ ಸಿನಿಮಾದ ಟಿಕೆಟ್‌ ಬುಕ್ಕಿಂಗ್‌ ಈ ವರದಿ ಬರೆಯುವವರೆಗೆ ಓಪನ್‌ ಆಗಿರಲಿಲ್ಲ.

- ಜಾಯ್‌

- ಸಿಲಾ ನೊಡಿಗಲಿಲ್‌

ನವೆಂಬರ್‌ 24ರಂದು ಬಿಡುಗಡೆಯಾಗುವ ತೆಲುಗು ಸಿನಿಮಾಗಳು

- ಕೋಟಬೊಮ್ಮಲಿ ಪಿಎಸ್

- ಆದಿಕೇಶವ

- ಸೌಂಡ್‌ ಪಾರ್ಟಿ

ನವೆಂಬರ್‌ 24ರಂದು ಬಿಡುಗಡೆಯಾಗುವ ಮಲಯಾಳಂ ಸಿನಿಮಾಗಳು

- ಕಾಥಲ್‌-ದಿ ಕೋರ್‌: ಮಮ್ಮುಟ್ಟಿ ನಟನೆಯ ಬಹುನಿರೀಕ್ಷಿತ ಸಿನಿಮಾ ನಾಳೆ ಬಿಡುಗಡೆಯಾಗಲಿದೆ. ಮಮ್ಮುಟ್ಟಿ ಜತೆ ಜ್ಯೋತಿಕಾ, ಲಾಲು ಅಲೆಕ್ಸ್‌, ಮುತ್ತುಮಣಿ ಮುಂತಾದವರು ಈ ಚಿತ್ರದ ತಾರಾಗಣದಲ್ಲಿದ್ದಾರೆ.

- ಅದೃಶ್ಯ ಜಾಲಕಂಗಲ್‌

ಇನ್ನುಳಿದಂತೆ ಮರಾಠಿ, ಪಂಜಾಬಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಕುರ್ಬನ್‌ 2023, ಬೋಗ್ಲಾ ಮಾಮಾ ಸೇರಿದಂತೆ ಹಲವು ಸಿನಿಮಾಗಳು ನಾಳೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ