logo
ಕನ್ನಡ ಸುದ್ದಿ  /  ಕರ್ನಾಟಕ  /  Aero India 2023 Bangalore: ಏರ್‌ ಶೋ ಉದ್ಘಾಟಸಲು ಬೆಂಗಳೂರಿಗೆ ಆಗಮಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ, ಬೊಮ್ಮಾಯಿ ಮಾಹಿತಿ

Aero India 2023 Bangalore: ಏರ್‌ ಶೋ ಉದ್ಘಾಟಸಲು ಬೆಂಗಳೂರಿಗೆ ಆಗಮಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ, ಬೊಮ್ಮಾಯಿ ಮಾಹಿತಿ

Praveen Chandra B HT Kannada

Dec 07, 2022 08:55 PM IST

Aero India 2023 Bangalore: ಏರ್‌ ಶೋ ಉದ್ಘಾಟಸಲು ಬೆಂಗಳೂರಿಗೆ ಆಗಮಿಸಲಿದ್ದಾರೆ ಮೋದಿ

    • 2023ರ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಏಷ್ಯಾದ ಅತಿದೊಡ್ಡ ಏರ್‌ ಶೋ ‘ಏರೋ ಇಂಡಿಯಾ- 2023’ವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ.
Aero India 2023 Bangalore: ಏರ್‌ ಶೋ ಉದ್ಘಾಟಸಲು ಬೆಂಗಳೂರಿಗೆ ಆಗಮಿಸಲಿದ್ದಾರೆ ಮೋದಿ
Aero India 2023 Bangalore: ಏರ್‌ ಶೋ ಉದ್ಘಾಟಸಲು ಬೆಂಗಳೂರಿಗೆ ಆಗಮಿಸಲಿದ್ದಾರೆ ಮೋದಿ

ಬೆಂಗಳೂರು: ಈ ಬಾರಿ ಬೆಂಗಳೂರಿನಲ್ಲಿ ಆಕಾಶದಲ್ಲಿ ಉಕ್ಕಿನ ಹಕ್ಕಿಗಳ ಕಲರವ "ಏರೋ ಇಂಡಿಯಾ 2023ʼʼ ನಡೆಯಲಿದೆ. ವಿಶೇಷವೆಂದರೆ, ಬೆಂಗಳೂರಿನಲ್ಲಿ 2023ರ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಏಷ್ಯಾದ ಅತಿದೊಡ್ಡ ಏರ್‌ ಶೋ ‘ಏರೋ ಇಂಡಿಯಾ- 2023’ವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದು, "ಈ ಬಾರಿ ಬೆಂಗಳೂರಿನಲ್ಲಿ ಏರ್ ಶೋ ಆಯೋಜಿಸಲಾಗಿದ್ದು, ಪ್ರಧಾನಿ‌ ಮೋದಿಯವರು ಏರ್ ಶೋಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Ambulance Strike: ಅನಿರ್ಧಿಷ್ಟಾವಧಿ ಮುಷ್ಕರದಿಂದ ಹಿಂದೆ ಸರಿದ 108 ಆರೋಗ್ಯ ಕವಚ ಸಿಬ್ಬಂದಿ; ಸಚಿವರ ಮಾತುಕತೆ ಯಶಸ್ವಿ

ಕೈಮಗ್ಗ ಜವಳಿ ತಂತ್ರಜ್ಞಾನ ಡಿಪ್ಲೋಮಾ (ಡಿ.ಹೆಚ್.ಟಿ.ಟಿ) ಕೋರ್ಸ್ ಪ್ರವೇಶ, ಯಾರಿಗೆ ಉಂಟು ಅವಕಾಶ

ಕರ್ನಾಟಕದ 2ನೇ ಹಂತದ ಮತದಾನ ಮುಕ್ತಾಯ, ಘರ್ಷಣೆ, ಬಿಸಿಲ ನಡುವೆ ಭಾರೀ ಹಕ್ಕು ಚಲಾವಣೆ

Bangalore News: ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ಬಂಧನ; ಎಸ್‌ಐಟಿ ವಿಚಾರಣೆಗೆ ತಪ್ಪಿಸಿಕೊಳ್ಳುತ್ತಿದ್ದ ಆರೋಪಿ

ಬೆಂಗಳೂರಿನಲ್ಲಿ ಇಂದು ಕಾಲಿನ್ಸ್ ಏರೋಸ್ಪೇಸ್ ಗ್ಲೋಬಲ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್ ಉದ್ಘಾಟಿಸಿದ ಬಳಿಕ ಬಸವರಾಜ ಬೊಮ್ಮಾಯಿ ಈ ಮಾಹಿತಿ ನೀಡಿದ್ದಾರೆ.

ಈ ಏರ್ ಶೋ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿರುವ ಏರೋಸ್ಪೇಸ್ ಸಂಶೋಧನಾ ಕೇಂದ್ರದ ಬಗ್ಗೆ, ವಿಮಾನಯಾನ, ವಿಮಾನ ಉತ್ಪಾದನಾ ರಂಗಗಳಲ್ಲಿನ ಅವಕಾಶಗಳು ಹಾಗೂ ಸಾಧ್ಯತೆಗಳ ಬಗ್ಗೆ ಬಗ್ಗೆ ಬೆಳಕು ಚೆಲ್ಲಬೇಕು. ಏರ್ ಶೋ ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರ : ಭಾರತದ ಎಂಜನೀಯರಗಳ ಸಾಮರ್ಥ್ಯ ಉತ್ತಮ ವಾಗಿದೆ.ಮುಂದಿನ ದಿನಗಳಲ್ಲಿ ಎಲ್ಲ ಭಾಗಗಳನ್ನೂ ಒಳಗೊಂಡ ಸಂಪೂರ್ಣ ವಿಮಾನದ ಉತ್ಪಾದನೆಯನ್ನು ಬೆಂಗಳೂರಿನಲ್ಲಿಯೇ ಆಗಬೇಕೆಂಬುದು ನನ್ನ ಕನಸಾಗಿದೆ. ಏರೊಸ್ಪೇಸ್ ಕ್ಷೇತ್ರಕ್ಕೆ ಬೆಂಗಳೂರು ಉತ್ತಮ ಸ್ಥಳವಾಗಿದ್ದು, ಇಲ್ಲಿ ಡಿಆರ್ ಡಿ ಒ, ಎನ್ ಎ ಎಲ್, ಎಚ್ ಎ ಎಲ್ ನಂತಹ ಸಂಸ್ಥೆಗಳಿವೆ.ಬೆಂಗಳೂರಿನಲ್ಲಿ ಏರೋಸ್ಪೇಸ್, ಕೃತಕ ಬುದ್ಧಿಮತ್ತೆ, ನವೀಕರಿಸಬಹುದಾದ ಇಂಧನ, ಸೆಮಿ ಕಂಡಕ್ಟರ್ ಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರಗಳಿವೆ ಎಂದರು.

ಶ್ರಮದ ಫಲ: ಕೊಲಿನ್ಸ್ ಏರೊಸ್ಪೆಸ್ ಎಂಜನೀಯರಿಂಗ್ ಸಂಸ್ಥೆಯನ್ನು ಆರಂಭಿಸಿದ್ದು ಸಂತಸವಾಗಿದೆ. ಈ ಸಂಸ್ಥೆ ಬೆಂಗಳೂರಿನಲ್ಲಿ 25 ವರ್ಷ ಪೂರೈಸಿದೆ. ಇದು ಸಂಸ್ಥೆಯ ಸಾಧನೆಯನ್ನು ತೋರಿಸುತ್ತದೆ‌. ಈ ಸಂಸ್ಥೆ ಬೆಂಗಳೂರಿನ ಪ್ರಮುಖ ಇಂಜಿನಿಯರಿಂಗ್ ಕೇಂದ್ರವಾಗಿದೆ ಇದು ನಿಮ್ಮ ಶ್ರಮದ ಫಲ. ಬೆಂಗಳೂರು, ಕರ್ನಾಟಕ, ಭಾರತ ಹೆಮ್ಮೆ ಪಡುವಂತೆ ಸಂಸ್ಥೆ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.

ಏರೋ ಸ್ಪೇಸ್ ಅತ್ಯಂತ ವಿಶೇಷ ಇದು ಮನುಷ್ಯನನ್ನು ಮತ್ತೊಂದು ಲೋಕಕ್ಕೆ ತೆಗೆದುಕೊಂಡು ಹೋಗುತ್ತದೆ. ಮನುಷ್ಯನ ಮನಸ್ಸನ್ನು ಒಂದು ಹಂತದವರೆಗೆ ವಿಸ್ತರಣೆ ಮಾಡಬಹುದು. ಮನುಷ್ಯನ ಬುದ್ದಿ ಶಕ್ತಿ ಶೇ 80 ರಷ್ಟು ಬಳಕೆಯಾಗುವುದಿಲ್ಲ. ಪರಮಹಂಸ ಅತ್ಯಂತ ಭಾರವಾದ ಮತ್ತು ಶುಭ್ರ ಪಕ್ಷಿ ಅದು ಅತಿ ಎತ್ತರದಲ್ಲಿ ಹಾರಬಹುದು. ಅದು ಮಾನಸ ಸರೋವರದಲ್ಲಿ ಇರುತ್ತದೆ. ಅದೇ ರೀತಿ ಏರೊಸ್ಪೇಸ್ ಅತ್ಯಂತ ಎತ್ತರದಲ್ಲಿ ಹಾರಬಹುದು. ಈ ಸಂದರ್ಭದಲ್ಲಿ ಕಾಲಿನ್ಸ್ ಸಂಸ್ಥೆಯ ಅಧ್ಯಕ್ಷ ಸ್ಟೀಫನ್ ಟಿಮ್ಸ್ , ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ ಮತ್ತಿತರರು ಉಪಸ್ಥಿತರಿದ್ದರು.

ಯಾವಾಗ ಏರ್‌ಶೋ?

ಏಷ್ಯಾದ ಅತಿದೊಡ್ಡ ಏರ್‌ ಶೋ ‘ಏರೋ ಇಂಡಿಯಾ- 2023’ ಫೆಬ್ರವರಿ 13 ರಿಂದ 17 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಏರ್‌ ಶೋಗೆ ಆತಿಥ್ಯ ವಹಿಸಿರುವ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 14ನೇ ಆವೃತ್ತಿಯೂ ನಡೆಯಲಿದೆ ಎಂದು ರಕ್ಷಣಾ ಉತ್ಪಾದನಾ ಸಂಸ್ಥೆ ಹೇಳಿದೆ. ಕೇಂದ್ರ ರಕ್ಷಣಾ ಇಲಾಖೆಯು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುವ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಇದಾಗಿದ್ದು, ಏರ್‌ ಶೋ ಪ್ರದರ್ಶನ ಸಿಲಿಕಾನ್‌ ಸಿಟಿ ಬೆಂಗಳೂರಿನ ಹೆಗ್ಗಳಿಕೆಗಳಲ್ಲೊಂದಾಗಿದೆ.

ಕೇಂದ್ರ ರಕ್ಷಣಾ ಸಚಿವಾಲಯದ ಭಾಗವಾದ ‘ಡಿಫೆನ್ಸ್‌ ಎಕ್ಸಿಬಿಷನ್‌ ಆರ್ಗನೈಸೇಷನ್‌’ ವತಿಯಿಂದ ಈ ವೈಮಾನಿಕ ಪ್ರದರ್ಶನ ನಡೆಯಲಿದೆ. ಹಲವು ದೇಶ, ವಿದೇಶಗಳ ಯುದ್ಧ ವಿಮಾನಗಳ ಮೈನವಿರೇಳಿಸುವ ಹಲವು ವೈಶಿಷ್ಟ್ಯಗಳೊಂದಿಗೆ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಬಾನಂಗಳದಲ್ಲಿ ಲೋಹದ ಹಕ್ಕಿಗಳು ಬಣ್ಣದ ಚಿತ್ತಾರ ಬಿಡಿಸಲಿವೆ. 2019 ರಲ್ಲಿ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ವೇಳೆ ಸಂಭವಿಸಿದ ಅಗ್ನಿ ಅವಗಢದಲ್ಲಿ ಕಾರುಗಳು ಬೆಂಕಿ ಗಾಹುತಿಯಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕರಿಗೆ ವಿಮಾ ಕಂಪನಿಗಳು ಪರಿಹಾರ ವಿತರಣೆ ಮಾಡಿದ್ದವು.

    ಹಂಚಿಕೊಳ್ಳಲು ಲೇಖನಗಳು