Hassan Scandal: ಪ್ರಜ್ವಲ್ ರೇವಣ್ಣ ಪ್ರಕರಣ, ಎಸ್‌ಐಟಿಯಿಂದ ಸಹಾಯವಾಣಿ, ಈ ಸಂಖ್ಯೆಗೆ ಮಾಹಿತಿ ನೀಡಿ
May 05, 2024 08:39 PM IST
ಪ್ರಜ್ವಲ್ ರೇವಣ್ಣ ಪ್ರಕರಣದ ಮಾಹಿತಿ ನೀಡಲು ಸಹಾಯವಾಣಿಯೂ ಬಂದಿದೆ.
- ಹಾಸನದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತು ತನಿಖೆ ನಡೆಸಲು ರಚಿಸಿರುವ ವಿಶೇಷ ತನಿಖಾ ತಂಡವು ಸಹಾಯವಾಣಿಯನ್ನು ರಚಿಸಿದೆ.
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ದ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆ ಕುರಿತು ಈಗಾಗಲೇ ಸ್ಥಾಪಿಸಲಾಗಿರುವ ವಿಶೇಷ ತನಿಖಾ ತಂಡ( SIT)ವು ಸಹಾಯವಾಣಿಯನ್ನು ಸ್ಥಾಪಿಸಿದೆ. ಇದೇ ಪ್ರಕರಣದಲ್ಲಿ ಮಾಹಿತಿ ನೀಡುವವರು, ಬಾತ್ಮೀದಾರರು, ಸಂತ್ರಸ್ಥರು ಮಾಹಿತಿ ನೀಡಲು ಸಹಕಾರಿಯಾಗವಂತೆ ಸಹಾಯವಾಣಿಯನ್ನು ಅಪರ ಪೊಲೀಸ್ ಮಹಾನಿರ್ದೇಶಕ ಬಿ.ಕೆ.ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡವು ಸಹಾಯವಾಣಿಯನ್ನು ರೂಪಿಸಿದೆ. ಸಹಾಯವಾಣಿ ಮೂಲಕ ತಮಗೆ ತಿಳಿದಿರುವ ಮಾಹಿತಿಯನ್ನು ನೀಡಬಹುದು ಎಂದು ತಿಳಿಸಲಾಗಿದೆ.
ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಕುರಿತು ಈಗಾಗಲೇ ವಿಶೇಷ ತನಿಖಾ ರಚನೆಯಾಗಿ ತನಿಖೆಯೂ ಶುರುವಾಗಿದೆ. ತನಿಖಾ ಕಾಲದಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಕೆಲವು ಸಂತ್ರಸ್ತರು ದೂರು ನೀಡಿದ್ದಾರೆ. ಇನ್ನೂ ಹಲವಾರು ಸಂತ್ರಸ್ತರು ಇರುವುದು ಗೊತ್ತಾಗಿದೆ. ಯಾರೇ ಸಂತ್ರಸ್ತರು ಅಥವಾ ಬಾತ್ಮೀದಾರರಿಗೆ ಕಾನೂನಿನ ನೆರವು ಮತ್ತು ರಕ್ಷಣೆ ಬೇಕಿದ್ದರೆ ಕರೆ ಮಾಡಬಹುದು. ಇದಲ್ಲದೇ ಇನ್ನಿಲ್ಲದ ಯಾವುದೇ ಸಹಾಯ ಬೇಕಾದಲ್ಲಿ ಸಹಾಯವಾಣಿ ಸಂಖ್ಯೆ 6360938947 ಗೆ ಕರೆ ಮಾಡಬಹುದು ವಿಶೇಷ ತನಿಖಾ ತಂಡದ ಮುಖ್ಯಸ್ಥರಾದ ಬಿ.ಕೆ.ಸಿಂಗ್ ತಿಳಿಸಿದ್ದಾರೆ.
ಈ ಸಹಾಯವಾಣಿಗೆ ಕರೆ ಮಾಡುವವರು, ಮಾಹಿತಿ ನೀಡುವವರು ಅಥವಾ ಬಾತ್ಮೀದಾರರ ವಿವರಗಳನ್ನು ಕರ್ನಾಟಕ ಪೊಲೀಸ್ ಇಲಾಖೆಯ ವಿಶೇಷ ತಂಡವು ಸಂಪೂರ್ಣವಾಗಿ ಗುಪ್ತವಾಗಿ ಇಡಲಿದೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಕಳೆದ ವಾರ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಎಚ್.ಡಿ.ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿತ್ತು. ಪೆನ್ ಡ್ರೈವ್ ಕೂಡ ಬಿಡುಗಡೆ ಮಾಡಲಾಗಿತ್ತು. ಪ್ರಕರಣದ ಗಂಭೀರತೆ ಅರಿತ ಸರ್ಕಾರವು ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದೆ. ಎಸ್ಪಿಗಳಾದ ಸೀಮಾ ಲಾಟ್ಕರ್ ಹಾಗೂ ಡಾ.ಸುಮನ್ ಡಿ.ಪನ್ನೇಕರ್ ಅವರು ತಂಡದಲ್ಲಿದ್ದಾರೆ. ಇವರೊಂದಿಗೆ ತಜ್ಞ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಿಸಲಾಗಿದೆ. ಈಗಾಗಲೇ ತಂಡಗಳು ಹಾಸನ, ಹೊಳೆ ನರಸೀಪುರದಲ್ಲಿ ಬೀಡುಬಿಟ್ಟು ಮಾಹಿತಿ ಕಲೆ ಹಾಕುತ್ತಿವೆ.
ಹಲವರು ದೂರು ನೀಡಲು ಮುಂದೆ ಬಂದರೂ ಭಯದ ವಾತಾವರಣವಿದೆ. ದೌರ್ಜನ್ಯಕ್ಕೆ ಒಳಗಾದ ಜಿಲ್ಲಾಪಂಚಾಯತಿ ಮಾಜಿ ಸದಸ್ಯೆ, ಮನೆ ಕೆಲಸದಾಕೆ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಅಪಹರಣದ ಪ್ರಕರಣಗಳು ದಾಖಲಾಗಿವೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಎಸ್‌ಐಟಿ ತಂಡ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದೆ. ಮತ್ತೊಂದು ಕಡೆ ತಲೆ ಮರೆಸಿಕೊಂಡು ವಿದೇಶಕ್ಕೆ ಹಾರಿರುವ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಬ್ಲೂಕಾರ್ನರ್ ನೊಟೀಸ್
ತನಿಖೆ ನಡೆಸುವಾಗ ಬರುತ್ತಿರುವ ಮಾಹಿತಿ, ಪ್ರಕರಣವನ್ನು ನೋಡುತ್ತಾ ಹೋದರೆ ಬಹಳಷ್ಟು ಮಹಿಳೆಯರು ತೊಂದರೆಗೆ ಸಿಲುಕಿರುವುದು. ಕುಟುಂಬಗಳು ದೌರ್ಜನ್ಯಕ್ಕೆ ಒಳಗಾಗಿರುವುದು ಕಂಡು ಬರುತ್ತಿದೆ. ಜತೆಗೆ ಬಹಳಷ್ಟು ಜನರು ಮಾಹಿತಿ ನೀಡಲು ಭಯ ಬೀಳುತ್ತಿದ್ದಾರೆ. ಈ ಕಾರಣದಿಂದಲೇ ಅವರಲ್ಲಿರುವ ಮಾಹಿತಿಯನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಇದರಿಂದ ಇನ್ನಷ್ಟು ಮಾಹಿತಿ ಸಿಗಬಹುದು ಎನ್ನುವುದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ವಿವರಣೆ.
ಹಾಸನ, ಹೊಳೆ ನರಸೀಪುರ ಮಾತ್ರವಲ್ಲದೇ ಮೈಸೂರು ಜಿಲ್ಲೆಯ ಕೆಆರ್‌ನಗರ, ಹುಣಸೂರು ಭಾಗದಲ್ಲೂ ಸಂತ್ರಸ್ತರು ಇರುವ ಮಾಹಿತಿ ಲಭಿಸುತ್ತಿದೆ. ಈಗಾಗಲೇ ಕೆಆರ್‌ನಗರದ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿಯೇ ರೇವಣ್ಣ ಬಂಧನವಾಗಿದೆ. ಅವರ ಆಪ್ತ ಕಾರ್ಯದರ್ಶಿ ಕೂಡ ಬೆಂಬಲ ನೀಡುವುದರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)