logo
ಕನ್ನಡ ಸುದ್ದಿ  /  ಕರ್ನಾಟಕ  /  Deepfake: ಡೀಪ್‌ಫೇಕ್ ಕಿರಿಕಿರಿಗೆ ಒಳಗಾಗಿದ್ರೆ 1930ಕ್ಕೆ ಕರೆ ಮಾಡಿ, ನಿಮ್ಮ ನೆರವಿಗೆ ನಾವಿದ್ದೇವೆ ಎಂದಿದ್ದಾರೆ ಬೆಂಗಳೂರು ಪೊಲೀಸರು

Deepfake: ಡೀಪ್‌ಫೇಕ್ ಕಿರಿಕಿರಿಗೆ ಒಳಗಾಗಿದ್ರೆ 1930ಕ್ಕೆ ಕರೆ ಮಾಡಿ, ನಿಮ್ಮ ನೆರವಿಗೆ ನಾವಿದ್ದೇವೆ ಎಂದಿದ್ದಾರೆ ಬೆಂಗಳೂರು ಪೊಲೀಸರು

HT Kannada Desk HT Kannada

Nov 20, 2023 01:23 PM IST

ಡೀಪ್‌ಫೇಕ್ ಕಿರಿಕಿರಿಯಾದರೆ ಸುಮ್ಮನಿರಬೇಡಿ, 1930ಕ್ಕೆ ಕರೆ ಮಾಡಿ ದೂರು ಸಲ್ಲಿಸಬೇಕು ಎಂದು ಬೆಂಗಳೂರು ನಗರ ಪೊಲೀಸರು ಹೇಳಿದ್ದಾರೆ.

  • ಡೀಪ್‌ಫೇಕ್ ಸಮಸ್ಯೆ ಸದ್ಯ ಎಲ್ಲೆಡೆ ಚರ್ಚೆಯಲ್ಲಿರುವ ಹಾಟ್ ಟಾಪಿಕ್. ಬಹುತೇಕ ಸೆಲೆಬ್ರಿಟಿಗಳು, ಸಾಮಾನ್ಯರು ಕೂಡ ಡೀಪ್‌ಫೇಕ್‌ ಸಮಸ್ಯೆಯಿಂದ ಕಿರಿಕಿರಿ ಅನುಭವಿಸುತ್ತಿರುವುದು ವಾಸ್ತವ. ಈ ಕಿರಿಕಿರಿ ಅನುಭವಿಸುತ್ತ ಸುಮ್ಮನಿರಬೇಡಿ ಎಂದು ಬೆಂಗಳೂರು ನಗರ ಪೊಲೀಸರು ಜಾಗೃತಿ ಮೂಡಿಸಲಾರಂಭಿಸಿದ್ದಾರೆ.

ಡೀಪ್‌ಫೇಕ್ ಕಿರಿಕಿರಿಯಾದರೆ ಸುಮ್ಮನಿರಬೇಡಿ, 1930ಕ್ಕೆ ಕರೆ ಮಾಡಿ ದೂರು ಸಲ್ಲಿಸಬೇಕು ಎಂದು ಬೆಂಗಳೂರು ನಗರ ಪೊಲೀಸರು ಹೇಳಿದ್ದಾರೆ.
ಡೀಪ್‌ಫೇಕ್ ಕಿರಿಕಿರಿಯಾದರೆ ಸುಮ್ಮನಿರಬೇಡಿ, 1930ಕ್ಕೆ ಕರೆ ಮಾಡಿ ದೂರು ಸಲ್ಲಿಸಬೇಕು ಎಂದು ಬೆಂಗಳೂರು ನಗರ ಪೊಲೀಸರು ಹೇಳಿದ್ದಾರೆ. (Bengaluru City Police)

ಡೀಪ್‌ಫೇಕ್ ತಂತ್ರಗಳ ಮೂಲಕ ರಚಿಸಲಾದ ಮೋಸಗೊಳಿಸುವ ಕರೆಗಳು ಅಥವಾ ವೀಡಿಯೊಗಳಿಂದ ತೊಂದರೆಗೆ ಒಳಗಾಗಿರುವವರು, ಸಮಸ್ಯೆ ಅನುಭವಿಸುತ್ತಿರುವವರು ಸೈಬರ್ ಅಪರಾಧ ನಿಗ್ರಹಕ್ಕೆ ಮೀಸಲಾದ ಸಹಾಯವಾಣಿಗೆ ಕರೆ ಮಾಡಿ ದೂರು ಸಲ್ಲಿಸಬೇಕು ಎಂದು ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

Hassan Scandal : ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ

Wildlife News: ಹುಲಿ ಉಗುರು ಪ್ರಕರಣ, ವನ್ಯಜೀವಿಗಳ ಅಂಗಾಂಗ ಹಸ್ತಾಂತರ ಇನ್ನಷ್ಟು ವಿಳಂಬ ಸಾಧ್ಯತೆ

ಬೆಂಗಳೂರು ನಗರ ಪೊಲೀಸರು 1930 ಎಂಬ ಸಹಾಯವಾಣಿ ಸಂಖ್ಯೆಯನ್ನು ಸೈಬರ್ ಅಪರಾಧ, ವಂಚನೆಗೆ ಸಂಬಂಧಿಸಿದ ದೂರು ದಾಖಲಿಸಲು, ಸಾರ್ವಜನಿಕರಿಗೆ ನೆರವಾಗಲು ಬಳಸುತ್ತಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಮಾಡುವ ಸೈಬರ್ ಅಪರಾಧದಿಂದ ಸಾರ್ವಜನಿಕರನ್ನು ಉದ್ದೇಶ ಈ ಉಪಕ್ರಮದ್ದು. ಡೀಪ್‌ಫೇಕ್ ತಂತ್ರಗಳ ಮೂಲಕ ರಚಿಸಲಾದ ಮೋಸಗೊಳಿಸುವ ಕರೆಗಳು ಅಥವಾ ವೀಡಿಯೊಗಳಿಂದ ಕಿರಿಕಿರಿ ಅನುಭವಿಸುತ್ತಿರುವವರು ಈ ಸಹಾಯವಾಣಿಯ ಉಪಯೋಗ ಪಡೆಯುವಂತೆ ಅವರು ಆಗ್ರಹಿಸಿದ್ದಾರೆ.

ಬೆಂಗಳೂರು ನಗರ ಪೊಲೀಸರ ಟ್ವೀಟ್‌ನಲ್ಲಿ ಏನಿದೆ

ಸೈಬರ್ ಅಪರಾಧ, ವಂಚನೆ ವಿಶೇಷವಾಗಿ ಡೀಪ್‌ಫೇಕ್‌ ಕಿರಿಕಿರಿ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಬೆಂಗಳೂರು ನಗರ ಪೊಲೀಸರು ಶುರುಮಾಡಿದ್ದಾರೆ. ಇದರಂತೆ, ಅವರು ಮಾಡಿದ ಟ್ವೀಟ್‌ನಲ್ಲಿ ಇದ್ದ ಮಾಹಿತಿ ಇಷ್ಟು -

“ಹಿಂಜರಿಯಬೇಡಿ, ಜಾಗೃತರಾಗಿ! ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಡೀಪ್ ಫೇಕ್ ಗೆ ಒಳಗಾಗಿದ್ದಲ್ಲಿ, 1930 ಗೆ ಕರೆಮಾಡಿ ಬೆಂಗಳೂರು ನಗರ ಪೊಲೀಸರನ್ನು ಸಂಪರ್ಕಿಸಿ. ಡಿಜಿಟಲ್ ವಂಚನೆಯಿಂದ ನಿಮ್ಮನ್ನು ರಕ್ಷಿಸಲು ನಾವು ನಿಮ್ಮೊಂದಿಗಿದ್ದೇವೆ”

ಸೈಬರ್ ಸುರಕ್ಷತೆಗೆ ಕಂಟಕವಾಗಿರುವ ಹಲವು ಸವಾಲುಗಳನ್ನು ಎದುರಿಸುತ್ತಿದೆ ಬೆಂಗಳೂರು

ಹೆಚ್ಚಿನ ಮಟ್ಟದ ಸೈಬರ್ ಸುರಕ್ಷಾ ಬೆದರಿಕೆ, ಸುಲಿಗೆ, ಡಿಜಿಟಲ್ ವಂಚನೆ, ಮೊಬೈಲ್ ಮಾಲ್ವೇರ್ ಹೀಗೆ ಹತ್ತು ಹಲವು ಸೈಬರ್ ಬೆದರಿಕೆ ಪ್ರಕರಣಗಳು ನಿತ್ಯವೂ ಬೆಂಗಳೂರಿನಲ್ಲಿ ದಾಖಲಾಗುತ್ತಿದೆ. ಈ ಎಲ್ಲ ಕಂಟಕಪ್ರಾಯ ಸವಾಲುಗಳನ್ನು ಬೆಂಗಳೂರು ಎದುರಿಸುತ್ತಿದೆ ಎಂದು ಕರ್ನಾಟಕದ ಗೃಹ ಸಚಿವ ಜಿ.ಪರಮೇಶ್ವರ ಅವರು ಶನಿವಾರ ಸಿನರ್ಜಿಯಾ ಫೌಂಡೇಶನ್‌ ಕಾರ್ಯಕ್ರಮದಲ್ಲಿ ಹೇಳಿದರು.

ಈ ಎಲ್ಲ ಸವಾಲುಗಳ ನಡುವೆಯೂ, ಬೆಂಗಳೂರು ಏರೋಸ್ಪೇಸ್ ತಂತ್ರಜ್ಞಾನ, ರಕ್ಷಣೆ, ಸೈಬರ್ ಭದ್ರತೆ, ಕೃತಕ ಬುದ್ಧಿಮತ್ತೆ, ಉಪಗ್ರಹಗಳು, ದೂರಸಂಪರ್ಕ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಉದ್ಯಮಗಳಲ್ಲಿ ಮುಂಚೂಣಿಯಲ್ಲಿದೆ. ಭದ್ರತಾ ವ್ಯವಹಾರ ಮತ್ತು ಅದಕ್ಕೆ ಸಂಬಂಧಿಸಿದ ಮೂರು ಆದ್ಯತೆಗಳನ್ನು ಗುರುತಿಸಿ ಅವುಗಳ ಬೆಳವಣಿಗೆಗೆ, ಅಭಿವೃದ್ಧಿಗೆ ಅವಕಾಶ ಕಲ್ಪಿಸಲು ಚಿಂತನೆ ನಡೆಸುವುದು ಸದ್ಯದ ಅಗತ್ಯ ಎಂದು ಅವರು ಹೇಳಿದ್ದರು.

ಕೇಂದ್ರ ಸಚಿವರು ಡೀಪ್‌ಫೇಕ್‌ ಕುರಿತು ನೀಡಿದ ಪ್ರತಿಕ್ರಿಯೆ ಹೀಗಿತ್ತು

ಡೀಪ್‌ಫೇಕ್‌ಗಳು ಇತ್ತೀಚಿನ ತಂತ್ರಜ್ಞಾನ. ಇದು ಅತ್ಯಂತ ಅಪಾಯಕಾರಿ. ಹಾನಿಕಾರಕವೆನಿಸುವ ತಪ್ಪು ಮಾಹಿತಿ ಹೊಂದಿರುತ್ತದೆ ಎಂದು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ರಾಜೀವ್‌ಚಂದ್ರಶೇಖರ್ ಅವರು, ಇಂಟರ್‌ನೆಟ್‌ ಬಳಸುವ ಡಿಜಿಟಲ್‌ ನಾಗರಿಕರ ಸುರಕ್ಷತೆ ಮತ್ತು ನಂಬಿಕೆ ಉಳಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಬದ್ಧವಾಗಿದೆ. 2023ರ ಏಪ್ರಿಲ್‌ನಲ್ಲಿ ಪ್ರಕಟಿಸಿದ ಮಾಹಿತಿ ತಂತ್ರಜ್ಞಾನ ನಿಯಮ ಪ್ರಕಾರ ಉಲ್ಲೇಖವಾಗಿರುವ ಮೂರು ಅಂಶಗಳನ್ನು ವಿವರಿಸಿದ್ದಾರೆ. ಅವು ಹೀಗಿವೆ -

1 ಸೋಷಿಯಲ್‌ ಮೀಡಿಯಾ ಅಥವಾ ಆನ್‌ಲೈನ್‌ನಲ್ಲಿ ಯಾವುದೇ ಪೋಸ್ಟ್‌ ಮಾಡುವಾಗ ಯಾವುದೇ ತಪ್ಪು ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು

2. ಯಾವುದೇ ಬಳಕೆದಾರರು ಅಥವಾ ಸರಕಾರವು ಇಂತಹ ತಪ್ಪು ಮಾಹಿತಿಗಳ ಕುರಿತು ವರದಿ ಮಾಡಿದರೆ, 36 ಗಂಟೆಗಳಲ್ಲಿ ಅಂತಹ ತಪ್ಪು ಮಾಹಿತಿಯನ್ನು ಡಿಲೀಟ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಬೇಕು.

3. ಡಿಜಿಟಲ್‌ ಫ್ಲಾಟ್‌ಫಾರ್ಮ್‌ಗಳು ಇದನ್ನು ಅನುಸರಿಸದೇ ಇದ್ದರೆ ಆಗ ನಿಯಮ 7 ಅನ್ವಯ ವಾಗುತ್ತದೆ. ಐಪಿಸಿ ಸೆಕ್ಷನ್‌ ಪ್ರಕಾರ, ಸಂತ್ರಸ್ತ ವ್ಯಕ್ತಿಯು ಇಂತಹ ವೇದಿಕೆಗಳ ವಿರುದ್ಧ ಕಾನೂನು ಸಮರ ಸಾರಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ