logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Crime: ಟ್ರಾಯ್‌, ಸಿಬಿಐ, ಮುಂಬೈ ಪೊಲೀಸ್ ಎನ್ನುತ್ತ ಯಾಮಾರಿಸಿದ ಸೈಬರ್ ವಂಚಕರು, 3.7 ಕೋಟಿ ರೂ ಕಳೆದುಕೊಂಡ ಇನ್ಫಿ ಉದ್ಯೋಗಿ

Bengaluru Crime: ಟ್ರಾಯ್‌, ಸಿಬಿಐ, ಮುಂಬೈ ಪೊಲೀಸ್ ಎನ್ನುತ್ತ ಯಾಮಾರಿಸಿದ ಸೈಬರ್ ವಂಚಕರು, 3.7 ಕೋಟಿ ರೂ ಕಳೆದುಕೊಂಡ ಇನ್ಫಿ ಉದ್ಯೋಗಿ

HT Kannada Desk HT Kannada

Nov 29, 2023 05:00 PM IST

ಟ್ರಾಯ್‌, ಸಿಬಿಐ, ಮುಂಬೈ ಪೊಲೀಸ್ ಎನ್ನುತ್ತ ಇನ್ಫೋಸಿಸ್ ಉದ್ಯೋಗಿಯನ್ನು ಯಾಮಾರಿಸಿದ ಸೈಬರ್ ವಂಚಕರು (ಸಾಂಕೇತಿಕ ಚಿತ್ರ)

  • ಸೈಬರ್ ವಂಚಕರು ಹೇಗೆಲ್ಲ ಯಾಮಾರಿಸುತ್ತಾರೆ ನೋಡಿ! ಟ್ರಾಯ್‌, ಸಿಬಿಐ, ಮುಂಬೈ ಪೊಲೀಸ್ ಎನ್ನುತ್ತ ಇನ್ಫೋಸಿಸ್ ಕಂಪನಿಯ ಹಿರಿಯ ಅಧಿಕಾರಿಯ ಖಾತೆಯಲ್ಲಿದ್ದ 3.7 ಕೋಟಿ ರೂಪಾಯಿ ಎಗರಿಸಿದ್ದಾರೆ. ಇನ್ಫೋಸಿಸ್ ಅಧಿಕಾರಿಯನ್ನು ಹೆದರಿಸಿ, ಬೆದರಿಸಿ ಗೊಂದಲಕ್ಕೆ ದೂಡಿದ ಸೈಬರ್ ವಂಚಕರು ತಮ್ಮ ಕೆಲಸ ಮುಗಿಸಿದ್ದಾರೆ. 

ಟ್ರಾಯ್‌, ಸಿಬಿಐ, ಮುಂಬೈ ಪೊಲೀಸ್ ಎನ್ನುತ್ತ ಇನ್ಫೋಸಿಸ್ ಉದ್ಯೋಗಿಯನ್ನು ಯಾಮಾರಿಸಿದ ಸೈಬರ್ ವಂಚಕರು (ಸಾಂಕೇತಿಕ ಚಿತ್ರ)
ಟ್ರಾಯ್‌, ಸಿಬಿಐ, ಮುಂಬೈ ಪೊಲೀಸ್ ಎನ್ನುತ್ತ ಇನ್ಫೋಸಿಸ್ ಉದ್ಯೋಗಿಯನ್ನು ಯಾಮಾರಿಸಿದ ಸೈಬರ್ ವಂಚಕರು (ಸಾಂಕೇತಿಕ ಚಿತ್ರ)

ಬೆಂಗಳೂರು: ಸೈಬರ್ ವಂಚಕರು ನಿತ್ಯವೂ ಒಂದಿಲ್ಲೊಂದು ರೀತಿಯಲ್ಲಿ ಜನರನ್ನು ವಂಚಿಸಿ ಹಣ ಎಗರಿಸುವ ಪ್ರಕರಣ ಹೆಚ್ಚುತ್ತಲೇ ಇದೆ. ಈ ಪಟ್ಟಿಗೆ ಸೇರಿದ ಹೊಸ ಪ್ರಕರಣ ಇದು. ಇನ್ಫೋಸಿಸ್ ಕಂಪನಿಯ ಹಿರಿಯ ಅಧಿಕಾರಿಯೊಬ್ಬರಿಗೆ ಕರೆ ಮಾಡಿದ ಸೈಬರ್ ವಂಚಕರು ಟ್ರಾಯ್‌, ಸಿಬಿಐ, ಮುಂಬೈ ಪೊಲೀಸ್ ಎನ್ನುತ್ತ ಅವರ ಖಾತೆಯಿಂದ 3.7 ಕೋಟಿ ರೂಪಾಯಿ ಎಗರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

Hassan Scandal : ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ

Wildlife News: ಹುಲಿ ಉಗುರು ಪ್ರಕರಣ, ವನ್ಯಜೀವಿಗಳ ಅಂಗಾಂಗ ಹಸ್ತಾಂತರ ಇನ್ನಷ್ಟು ವಿಳಂಬ ಸಾಧ್ಯತೆ

ವೈಟ್‌ಫೀಲ್ಡ್‌ನಲ್ಲಿರುವ ಇನ್ಫೋಸಿಸ್ ಉದ್ಯೋಗಿ ನೀಡಿದ ಪೊಲೀಸ್ ದೂರಿನ ಪ್ರಕಾರ, ಸೈಬರ್ ವಂಚಕರು ಕರೆ ಮಾಡಿ ಹೆದರಿಸಿ ಬೆದರಿಸಿ ಹಣವನ್ನು ದೋಚಿದ್ದಾರೆ. ನವೆಂಬರ್ 21ಕ್ಕೆ ಕರೆ ಮಾಡಿದ ವಂಚಕರು, ಅಕ್ರಮ ಹಣ ವರ್ಗಾವಣೆ ಸೇರಿ ಹಲವು ಅಪರಾಧ ಕೃತ್ಯಗಳಲ್ಲಿ ತಾವು ಭಾಗಿಯಾಗಿದ್ದು, ತಮ್ಮನ್ನು ಬಂಧಿಸಲಾಗುವುದು ಎಂದು ಬೆದರಿಸಿದ್ದರು. ಬಳಿಕ ಎರಡು ದಿನಗಳ ಅವಧಿಯಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ 3.7 ಕೋಟಿ ರೂಪಾಯಿಯನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಸೈಬರ್ ಅಪರಾಧ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕೇಸ್ ಅನ್ನು ಸಿಐಡಿಗೆ ವರ್ಗಾವಣೆ ಮಾಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೈಬರ್ ವಂಚಕರು ಇನ್ಫೋಸಿಸ್ ಅಧಿಕಾರಿಯನ್ನು ವಂಚಿಸಿದ್ದು ಹೀಗೆ

ಇನ್ಫೋಸಿಸ್‌ನ ಹಿರಿಯ ಅಧಿಕಾರಿಗೆ ಕರೆ ಮಾಡಿದ ಸೈಬರ್ ವಂಚಕ ತನ್ನನ್ನು ತಾನು ಟ್ರಾಯ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಅನ್ನು ಅಕ್ರಮ ಜಾಹೀರಾತು ಪ್ರಕಟಣೆಗೆ ಬಳಸಲಾಗುತ್ತಿದೆ ಎಂದು ಹೇಳಿದ್ದ. ಆಘಾತಕ್ಕೆ ಒಳಗಾದ ಇನ್ಫೋಸಿಸ್ ಅಧಿಕಾರಿ, ಆ ನಂಬರ್ ತನ್ನದಲ್ಲ ಎಂದು ಹೇಳಿದ್ದರು. ಆಗ ಆತ, ನಿಮ್ಮ ಆಧಾರ್ ಕಾರ್ಡ್ ಕೊಟ್ಟು ಈ ಸಿಮ್ ಪಡೆದುದರ ದಾಖಲೆ ಇದೆ ಎಂದು ಹೇಳಿದ್ದ.

ಇಷ್ಟಾದ ಕೂಡಲೇ ಆತ ಫೋನ್ ಅನ್ನು ಮತ್ತೊಬ್ಬನಿಗೆ ಹಸ್ತಾಂತರಿಸಿದ್ದ. ಆ ವ್ಯಕ್ತಿ ತಾನು ಮುಂಬೈ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಎಂದು ಹೇಳಿಕೊಂಡು, ಸಿಬಿಐ ಇದೇ ಕೇಸ್ ಸಂಬಂಧಿಸಿ ದೆಹಲಿ ಮತ್ತು ಮುಂಬೈನಲ್ಲಿ ತನಿಖೆ ನಡೆಸುತ್ತಿದೆ ಎಂದು ಹೇಳಿದ. ತಾವು ಹೇಳಿದಂತೆ ಕೇಳದೇ ಇದ್ದರೆ ಮನೆಗೆ ಬಂದು ಬಂಧಿಸುವುದಾಗಿ ಬೆದರಿಸುತ್ತಲೇ ಹೋದರು.

ಇಷ್ಟಾದ ಬಳಿಕ ವಿಡಿಯೋ ಕರೆ ಮಾಡಿದ ವಂಚಕರು ಇನ್ಫೋಸಿಸ್ ಅಧಿಕಾರಿಗೆ ಇನ್ನಷ್ಟು ಭಯ ಹುಟ್ಟುವಂತೆ ಮಾಡಿದ್ದಾರೆ. ವಿಡಿಯೋ ಕರೆಯಲ್ಲಿ ಪೊಲೀಸ್ ಠಾಣೆಯ ದೃಶ್ಯ ಮತ್ತು ಕೆಲವು ಪೊಲೀಸರು ಓಡಾಡುತ್ತಿದ್ದ ದೃಶ್ಯವನ್ನು ಇನ್ಫೋಸಿಸ್ ಅಧಿಕಾರಿ ಗಮನಿಸಿದ್ದರು. ಅವರಲ್ಲಿ ಒಂದಿಬ್ಬರು ತಮ್ಮ ಐಡಿ ಕಾರ್ಡ್ ತೋರಿಸಿ, ಅಧಿಕಾರಿ ವಿರುದ್ಧ ದಾಖಲಾಗಿದೆ ಎನ್ನಲಾದ ದೂರಿನ ಪ್ರತಿಯನ್ನೂ ಪ್ರದರ್ಶಿಸಿದ್ದರು.

ಇದಾಗಿ ಎರಡು ದಿನಗಳ ಅವಧಿಯಲ್ಲಿ ಇನ್ಫೋಸಿಸ್ ಅಧಿಕಾರಿಯ ಖಾತೆಯಲ್ಲಿದ್ದ 3.7 ಕೋಟಿ ರೂಪಾಯಿಯನ್ನು ಬೇರೆ ಬೇರೆ ಖಾತೆಗಳಿಗೆ ವಂಚಕರು ವರ್ಗಾಯಿಸಿಕೊಂಡಿದ್ದರು. ತೀವ್ರ ಗೊಂದಲ ಮತ್ತು ಆಘಾತಕ್ಕೆ ಒಳಗಾಗಿದ್ದ ಇನ್ಫೋಸಿಸ್ ಅಧಿಕಾರಿ ಆ ವಂಚಕರು ಹೇಳಿದಂತೆ ಮಾಡಿದ್ದರು. ಇವೆಲ್ಲವೂ ನವೆಂಬರ್ 21 ಮತ್ತು 23ರ ನಡುವೆ ನಡೆದಿತ್ತು.

ಆ ಆಘಾತದಿಂದ ಹೊರಬಂದ ಬಳಿಕ ತಾನು ಮೋಸ ಹೋಗಿರುವುದು ಇನ್ಫೋಸಿಸ್ ಅಧಿಕಾರಿಗೆ ಗೊತ್ತಾಗಿದೆ. ಬಳಿಕ ನವೆಂಬರ್ 25 ರಂದು ಪೊಲೀಸ್ ದೂರು ದಾಖಲಿಸಿದರು ಎಂದು ಪೊಲೀಸರು ತಿಳಿಸಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ