logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಮಾಲ್ಡಾ- ಬೆಂಗಳೂರು ನಡುವೆ ಜ 7ರಿಂದ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಸಂಚಾರ; ಇಲ್ಲಿದೆ ವೇಳಾಪಟ್ಟಿ ಮತ್ತು ಇತರೆ ವಿವರ

Bengaluru News: ಮಾಲ್ಡಾ- ಬೆಂಗಳೂರು ನಡುವೆ ಜ 7ರಿಂದ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಸಂಚಾರ; ಇಲ್ಲಿದೆ ವೇಳಾಪಟ್ಟಿ ಮತ್ತು ಇತರೆ ವಿವರ

Umesh Kumar S HT Kannada

Jan 01, 2024 02:51 PM IST

google News

ಅಮೃತ್ ಭಾರತ್ ಎಕ್ಸ್‌ಪ್ರೆಸ್‌ (ಸಾಂಕೇತಿಕ ಚಿತ್ರ)

  • ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ನಡುವೆ ಅಮೃತ್‌ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 30ರಂದು ಚಾಲನೆ ನೀಡಿದರು. ಮಾಲ್ಡಾ ಟೌನ್ - ಬೆಂಗಳೂರು ನಡುವಿನ ಈ ಅಮೃತ್‌ ಭಾರತ್ ರೈಲು ಸಾಪ್ತಾಹಿಕ ರೈಲು ಆಗಿದ್ದು, ಜನವರಿ 7ರಿಂದ ಶುರುವಾಗಲಿದೆ.

ಅಮೃತ್ ಭಾರತ್ ಎಕ್ಸ್‌ಪ್ರೆಸ್‌ (ಸಾಂಕೇತಿಕ ಚಿತ್ರ)
ಅಮೃತ್ ಭಾರತ್ ಎಕ್ಸ್‌ಪ್ರೆಸ್‌ (ಸಾಂಕೇತಿಕ ಚಿತ್ರ) (ANI)

ಬೆಂಗಳೂರು: ಪಶ್ಚಿಮ ಬಂಗಾಳ ಮತ್ತು ಕರ್ನಾಟಕದ ನಡುವಿನ ರೈಲ್ವೆ ಸಂಪರ್ಕ ಸುಧಾರಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಗಮನಹರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಶನಿವಾರ (ಡಿ.30) ಮಾಲ್ಡಾ ನಗರ - ಬೆಂಗಳೂರು ನಡುವಿನ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಹಸಿರು ನಿಶಾನೆ ತೋರಿದ್ದರು.

ಈ ಹೊಸ ರೈಲು ಸೇವೆಯು ಮಾಲ್ಡಾ ಟೌನ್ ಮತ್ತು ಬೆಂಗಳೂರು ನಡುವೆ ಜನವರಿ 7ರಿಂದ ಮತ್ತು ಬೆಂಗಳೂರು - ಮಾಲ್ಡಾ ಟೌನ್ ನಡುವೆ ಜನವರಿ 9ರಿಂದ ಶುರುವಾಗಲಿದೆ. ಈ ರೈಲು ಸಂಚಾರ ವಾರಕ್ಕೊಂದು ಸಲ ಮಾತ್ರ ಇರಲಿದೆ ಎಂದು ಭಾರತೀಯ ರೈಲ್ವೆ ಹೇಳಿದೆ.

ಅಮೃತ ಭಾರತ್ ಎಕ್ಸ್‌ಪ್ರೆಸ್‌ ಪ್ರತಿ ಭಾನುವಾರ ಬೆಳಗ್ಗೆ 8.50ಕ್ಕೆ ಹೊರಟು ಮಂಗಳವಾರ ಅಪರಾಹ್ನ 3 ಗಂಟೆಗೆ ಬೆಂಗಳೂರು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ತಲುಪುತ್ತದೆ. ಇನ್ನು ಬೆಂಗಳೂರಿನಿಂದ ಈ ರೈಲು ಪ್ರತಿ ಮಂಗಳವಾರ ಅಪರಾಹ್ನ 1.50ಕ್ಕೆ ಹೊರಟು ಮಾಲ್ಡಾ ಟೌನ್‌ಗೆ ಪ್ರತಿ ಗುರುವಾರ ಬೆಳಗ್ಗೆ 11 ಗಂಟೆಗೆ ತಲುಪುತ್ತದೆ. ಈ ರೈಲು ಜಲೇಶ್ವರ್‌, ಬಾಲಸೋರ್‌, ಸೋರೊ, ಭದ್ರಕ್‌, ಕಟಕ್‌, ಭುವನೇಶ್ವರ, ಖುರ್ದಾ ರೋಡ್ ಮತ್ತು ಬೆರ್ಹಾಂಪುರಗಳಲ್ಲಿ ನಿಲುಗಡೆ ಹೊಂದಿದೆ.

ಮಾಲ್ಡಾ ಟೌನ್‌ನಿಂದ ಬೆಂಗಳೂರಿಗೆ ಅಮೃತ್ ಭಾರತ್‌ನ ಉದ್ಘಾಟನಾ ಪ್ರಯಾಣ ಶುರುಮಾಡಿದ್ದು, ಭಾನುವಾರ ಒಡಿಶಾದ ಕಟಕ್ ರೈಲು ನಿಲ್ದಾಣದಲ್ಲಿ ಅಧಿಕಾರಿಗಳು, ಜನರು ಬರಮಾಡಿಕೊಂಡರು. ಈ ಉದ್ಘಾಟನಾ ರೈಲು ಕಟಕ್‌ಗೆ ರಾತ್ರಿ 10:50 ಕ್ಕೆ ಆಗಮಿಸಿತು. ಡಿಸೆಂಬರ್ 31 ರಂದು ಬೆಳಿಗ್ಗೆ 7 ಗಂಟೆಗೆ ನಿಲ್ದಾಣದಿಂದ ಹೊರಟಿದೆ. ಭಾನುವಾರ, ಈ ರೈಲು ಭುವನೇಶ್ವರದಿಂದ ಬೆಳಿಗ್ಗೆ 7:40 ಕ್ಕೆ, ಖುರ್ದಾ ರಸ್ತೆಯಿಂದ 8.20 ಕ್ಕೆ ಮತ್ತು ಬೆರ್ಹಾಂಪುರದಿಂದ 9:55 ಕ್ಕೆ ವಿಶಾಖಪಟ್ಟಣಂ ಕಡೆಗೆ ಹೊರಟಿದೆ. ಅಲ್ಲೂ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ.

ದೇಶದ ಸೂಪರ್‌ಫಾಸ್ಟ್ ಪ್ಯಾಸೆಂಜರ್ ರೈಲುಗಳ ಹೊಸ ವರ್ಗದಲ್ಲಿರುವ ರೈಲು ಈ ಅಮೃತ್ ಭಾರತ್ ಎಕ್ಸ್‌ಪ್ರೆಸ್‌. ಇದು ಹವಾನಿಯಂತ್ರಿತವಲ್ಲದ (AC) ಕೋಚ್‌ಗಳನ್ನು ಹೊಂದಿರುವ ಎಲ್‌ಎಚ್‌ಬಿ ಪುಶ್ ಪುಲ್ ರೈಲು. ಉತ್ತಮ ವೇಗವರ್ಧನೆ ಕಾಪಾಡಿಕೊಳ್ಳುವುದಕ್ಕಾಗಿ ಈ ರೈಲಿನ ಎರಡೂ ತುದಿಗಳಲ್ಲಿ ಎಂಜಿನ್‌ಗಳಿವೆ.

“ ಪ್ರಯಾಣಿಕರಿಗಾಗಿ ಸುಂದರ, ಆಕರ್ಷಕ ವಿನ್ಯಾಸದ, ಉತ್ತಮ ಲಗೇಜ್ ರಾಕ್‌, ಸೂಕ್ತ ಮೊಬೈಲ್ ಹೋಲ್ಡರ್, ಚಾರ್ಜಿಂಗ್ ಪಾಯಿಂಟ್‌, ಎಲ್‌ಇಡಿ ದೀಪ, ಸಿಸಿಟಿವಿ, ಸಾರ್ವಜನಿಕ ಮಾಹಿತಿ ವ್ಯವಸ್ಥೆ ಮುಂತಾದ ಸುಧಾರಿತ ಸೌಲಭ್ಯಗಳಿರುವ ರೈಲು ಇದು” ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ಅಮೃತ್ ಭಾರತ್ ರೈಲುಗಳನ್ನು ಹೆಮ್ಮೆಯಿಂದ ಫ್ಲ್ಯಾಗ್ ಆಫ್ ಮಾಡಿದ್ದೇವೆ. ದರ್ಭಾಂಗಾದಿಂದ ಅಯೋಧ್ಯೆಗೆ ದೆಹಲಿಗೆ (ಆನಂದ್ ವಿಹಾರ್ ಟರ್ಮಿನಲ್) ಮತ್ತು ಮಾಲ್ಡಾ ಟೌನ್‌ನಿಂದ ಬೆಂಗಳೂರಿಗೆ (ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್) ವೇಗವಾಗಿ ಈ ರೈಲುಗಳ ಮೂಲಕ ತಲುಪಬಹುದು. ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು, ಬಿಹಾರ, ಉತ್ತರ ಪ್ರದೇಶ ಮತ್ತು ದೆಹಲಿಯನ್ನು ಸಂಪರ್ಕಿಸುವುದು ಮತ್ತು ಪವಿತ್ರವಾದ ಶ್ರೀ ರಾಮಜನ್ಮ ಭೂಮಿ ತೀರ್ಥ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರವೇಶವನ್ನು ಸುಧಾರಿಸುವುದು ಈ ರೈಲು ಸೇವೆಗಳ ಉದ್ದೇಶ ಎಂದು ರೈಲ್ವೆ ಅಧಿಕಾರಿಗಳು ವಿವರಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ