ಕನ್ನಡ ಸುದ್ದಿ  /  ಕರ್ನಾಟಕ  /  Mangalore Goa Vande Bharat : ಮಂಗಳೂರು ಗೋವಾ ನಡುವೆ ವಂದೇ ಭಾರತ್‌ ರೈಲು: ಮಾಸಾಂತ್ಯಕ್ಕೆ ಚಾಲನೆ ಸಾಧ್ಯತೆ

Mangalore Goa Vande Bharat : ಮಂಗಳೂರು ಗೋವಾ ನಡುವೆ ವಂದೇ ಭಾರತ್‌ ರೈಲು: ಮಾಸಾಂತ್ಯಕ್ಕೆ ಚಾಲನೆ ಸಾಧ್ಯತೆ

Vande Bharat express ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಮಂಗಳೂರು( Mangalore) ಹಾಗೂ ಗೋವಾ( Goa) ನಡುವೆ ಸಂಚರಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತದೆ. ಹೊಸ ವರ್ಷಕ್ಕೆ ಈ ರೈಲು ಆರಂಭವಾಗಬಹುದು.

ಮಂಗಳೂರು ಹಾಗೂ ಗೋವಾ ನಡುವೆ ವಂದೇ ಭಾರತ್‌ ರೈಲು ಸಂಚಾರ ಆರಂಭಿಸುವ ಸಾಧ್ಯತೆಯಿದೆ.
ಮಂಗಳೂರು ಹಾಗೂ ಗೋವಾ ನಡುವೆ ವಂದೇ ಭಾರತ್‌ ರೈಲು ಸಂಚಾರ ಆರಂಭಿಸುವ ಸಾಧ್ಯತೆಯಿದೆ.

ಬೆಂಗಳೂರು: ಈಗಾಗಲೇ ಕರ್ನಾಟಕದ ಬೆಂಗಳೂರು, ಮೈಸೂರು,ಧಾರವಾಡ ಹಾಗೂ ಮಂಗಳೂರು ನಗರಗಳಿಗೆ ವಂದೇ ಭಾರತ್‌ ರೈಲು ಸಂಪರ್ಕವಿದೆ. ಈಗ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಸಂಚರಿಸುವ ಹೊಸ ವಂದೇ ಭಾರತ್‌ ರೈಲು ಸಂಚಾರಕ್ಕೆ ಸಿದ್ದತೆಗಳು ನಡೆದಿವೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದ ಕರಾವಳಿ ಕೇಂದ್ರ ಮಂಗಳೂರಿನಿಂದ ಆರಂಭಿಸಿ ಉಡುಪಿ-ಕಾರವಾರ ಮಾರ್ಗವಾಗಿ ಗೋವಾವನ್ನು ಸಂಪರ್ಕಿಸುವ ಮಂಗಳೂರು- ಗೋವಾ ವಂದೇ ಭಾರತ್‌ ರೈಲು ಸಂಚಾರ ಆರಂಭಿಸುವ ಯೋಜನೆಗಳಿದ್ದು., ಅಧಿಕೃತ ಘೋಷಣೆ ಬಾಕಿಯಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ ಒಳಗೆ ದೇಶದ ಇತರೆ ಕಡೆಯೂ ವಂದೇ ಭಾರತ್‌ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲಿದ್ದು. ಅದರಲ್ಲಿ ಮಂಗಳೂರು- ಗೋವಾದ ಮಡಗಾಂವ್‌ ನಡುವಿನ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಸದ್ಯ ಚೆನ್ನೈ- ಬೆಂಗಳೂರು- ಮೈಸೂರು ವಂದೇ ಭಾರತ್‌ ರೈಲು ಸಂಚಾರವಿದೆ. ಇದರೊಟ್ಟಿಗೆ ಬೆಂಗಳೂರು- ಧಾರವಾರ ವಂದೇ ಭಾರತ್‌ ಯಶಸ್ವಿಯಾಗಿ ಸಂಚರಿಸುತ್ತಿದೆ. ಬೆಂಗಳೂರಿಂದ ಹೈದ್ರಾಬಾದ್‌ಗೂ ವಂದೇ ಭಾರತ್‌ ರೈಲಿದೆ. ಇನ್ನು ಕಾಸರಗೋಡು-ತಿರುವನಂತಪುರಂ ವಂದೇ ಭಾರತ್‌ ರೈಲು ಮಂಗಳೂರಿನಿಂದ ಆರಂಭಿಸುವ ಬೇಡಿಕೆಯಿದ್ದರೂ ಅದೂ ಆಗಿಲ್ಲ. ಇದರೊಟ್ಟಿಗೆ ಮಂಗಳೂರು ಹಾಗೂ ಬೆಂಗಳೂರು, ಮಂಗಳೂರು ಹಾಗೂ ಗೋವಾ ವಂದೇ ಭಾರತ್‌ ರೈಲಿಗೆ ಬೇಡಿಕೆಯಿತ್ತು. ಮಂಗಳೂರು ಸಂಸದರಾದ ನಳಿನ್‌ ಕುಮಾರ್‌ ಕಟೀಲ್‌ ಅವರು ಈ ವಂದೇ ಭಾರತ್‌ ರೈಲಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹಾಗೂ ಇಲಾಖೆಯ ಅಧಿಕಾರಿಗಳ ಮೇಲೆ ನಿರಂತರ ಒತ್ತಡ ತಂದಿದ್ದರು. ಈ ಹಿನ್ನೆಲೆಯಲ್ಲಿ ಈ ವಂದೇ ಭಾರತ್‌ ರೈಲಿಗೆ ಅನುಮೋದನೆ ನೀಡಲಾಗಿದ್ದು, ಅಧಿಕೃತ ಘೋಷಣೆ ಬಾಕಿ ಇದೆ ಎನ್ನಲಾಗಿದೆ.

ಕರ್ನಾಟಕದ ಕರಾವಳಿ ಭಾಗ ಗೋವಾದೊಂದಿಗೆ ಒಡನಾಟ ಹೊಂದಿದೆ. ಈ ಭಾಗ ಪ್ರವಾಸೋದ್ಯಮದ ಪ್ರಮುಖ ಭಾಗವೂ ಹೌದು. ವಂದೇ ಭಾರತ್‌ ರೈಲು ಆರಂಭದಿಂದ ಪ್ರವಾಸೋದ್ಯಮ ಮತ್ತಷ್ಟು ಬೆಳೆಯಬಹುದು ಎಂದೇ ಹೇಳಲಾಗುತ್ತಿದೆ.

ಈಗಾಗಲೇ ಮಂಗಳೂರು ರೈಲ್ವೆ ನಿಲ್ದಾಣ ಅಭಿವೃದ್ದಿ ಕಾಣುತ್ತಿದೆ. ಅದರ ಉದ್ಘಾಟನೆ ಜತೆಗೆ ವಂದೇ ಭಾರತ್‌ ರೈಲು ಸಂಚಾರವನ್ನು ಆರಂಭಿಸಬಹುದು.

ವಂದೇ ಭಾರತ್‌ ರೈಲು ಬೆಳಿಗ್ಗೆ ಮಂಗಳೂರಿನಿಂದ ಹೊರಟು ಉಡುಪಿ. ಕುಂದಾಪುರ, ಕುಮಟಾ ಹಾಗೂ ಕಾರವಾರದಲ್ಲಿ ನಿಲುಗಡೆಯೊಂದಿಗೆ ಮಡಗಾಂವ್‌ ತಲುಪಬಹುದು. ಅಲ್ಲಿಂದ ಮಧ್ಯಾಹ್ನ ಹೊರಟು ರಾತ್ರಿ ಮಂಗಳೂರಿಗೆ ಆಗಮಿಸಬಹುದು. ಸಮಯ, ದರದ ಕುರಿತು ಅಂತಿಮ ಆದೇಶ ಹೊರ ಬೀಳಬಹುದು ಎನ್ನುವ ನಿರೀಕ್ಷೆಯೂ ಇದೆ.

IPL_Entry_Point