logo
ಕನ್ನಡ ಸುದ್ದಿ  /  ಕರ್ನಾಟಕ  /  ಕುಂಬಳಗೋಡು ರಾಮಸಂದ್ರದಲ್ಲಿ ಅಗ್ನಿದುರಂತದಲ್ಲಿ ಮೂವರು ಸಜೀವ ದಹನ; ಶಂಕಿತ ಪರ್ಫ್ಯೂಮ್ ಫಿಲ್ಲಿಂಗ್ ಘಟಕದಲ್ಲಿ ನಡೆದ ದುರಂತ

ಕುಂಬಳಗೋಡು ರಾಮಸಂದ್ರದಲ್ಲಿ ಅಗ್ನಿದುರಂತದಲ್ಲಿ ಮೂವರು ಸಜೀವ ದಹನ; ಶಂಕಿತ ಪರ್ಫ್ಯೂಮ್ ಫಿಲ್ಲಿಂಗ್ ಘಟಕದಲ್ಲಿ ನಡೆದ ದುರಂತ

Umesh Kumar S HT Kannada

Feb 19, 2024 05:53 PM IST

ಕುಂಬಳಗೋಡು ರಾಮಸಂದ್ರದಲ್ಲಿ ಶಂಕಿತ ಪರ್ಫ್ಯೂಮ್ ಫಿಲ್ಲಿಂಗ್ ಘಟಕದಲ್ಲಿ ನಿನ್ನೆ ಸಂಜೆ (ಫೆ.18) ನಡೆದ ದುರಂತ ಅಗ್ನಿದುರಂತದಲ್ಲಿ ಮೂವರು ಸಜೀವ ದಹನವಾಗಿದ್ದಾರೆ.

  • ಬೆಂಗಳೂರು ದಕ್ಷಿಣದ ಕುಂಬಳಗೋಡು ರಾಮಸಂದ್ರದಲ್ಲಿ ಅಗ್ನಿದುರಂತದಲ್ಲಿ ಮೂವರು ಸಜೀವ ದಹನವಾಗಿದ್ದಾರೆ. ಶಂಕಿತ ಪರ್ಫ್ಯೂಮ್ ಫಿಲ್ಲಿಂಗ್ ಘಟಕದಲ್ಲಿ ನಡೆದ ದುರಂತದ ಬಗ್ಗೆ ಪೊಲೀಸ್ ತನಿಖೆ ನಡೆದಿದೆ. 

ಕುಂಬಳಗೋಡು ರಾಮಸಂದ್ರದಲ್ಲಿ ಶಂಕಿತ ಪರ್ಫ್ಯೂಮ್ ಫಿಲ್ಲಿಂಗ್ ಘಟಕದಲ್ಲಿ ನಿನ್ನೆ ಸಂಜೆ (ಫೆ.18) ನಡೆದ ದುರಂತ ಅಗ್ನಿದುರಂತದಲ್ಲಿ ಮೂವರು ಸಜೀವ ದಹನವಾಗಿದ್ದಾರೆ.
ಕುಂಬಳಗೋಡು ರಾಮಸಂದ್ರದಲ್ಲಿ ಶಂಕಿತ ಪರ್ಫ್ಯೂಮ್ ಫಿಲ್ಲಿಂಗ್ ಘಟಕದಲ್ಲಿ ನಿನ್ನೆ ಸಂಜೆ (ಫೆ.18) ನಡೆದ ದುರಂತ ಅಗ್ನಿದುರಂತದಲ್ಲಿ ಮೂವರು ಸಜೀವ ದಹನವಾಗಿದ್ದಾರೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಹೊರವಲಯದ ಕುಂಬಳಗೋಡು ತಾಲೂಕಿನ ರಾಮಸಂದ್ರದಲ್ಲಿ ನಿನ್ನೆ ಸಂಜೆ ಸಂಭವಿಸಿದ ಅಗ್ನಿ ದುರಂತದಲ್ಲಿ ಮೂವರು ಸಜೀವ ದಹನವಾಗಿದ್ದಾರೆ. ಶಂಕಿತ ಪರ್ಫ್ಯೂಮ್ ಫಿಲ್ಲಿಂಗ್ ಘಟಕದಲ್ಲಿ ಈ ಅವಘಡ ಸಂಭವಿಸಿದ್ದು, ಮಾಲೀಕನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Raghunandan S Kamath Death: ಐಸ್ ಕ್ರೀಮ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ನ್ಯಾಚುರಲ್ ಐಸ್ ಕ್ರೀಂನ ರಘುನಂದನ್ ಕಾಮತ್ ಇನ್ನಿಲ್ಲ

ಬಂಟ್ವಾಳ: 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ, ಉಮೇಶ್ ಮಠದಬೆಟ್ಟು ಕಾರ್ಯಕ್ಕೆ ಶ್ಲಾಘನೆ

ಕರ್ನಾಟಕ ಹವಾಮಾನ ಮೇ 18; ಉತ್ತರ ಕನ್ನಡ, ತುಮಕೂರು, ಬೆಂಗಳೂರು ಸೇರಿ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌, ಉತ್ತರ ಒಳನಾಡಲ್ಲಿ ಹಲವೆಡೆ ಮಳೆ

ಬೆಂಗಳೂರಿನಲ್ಲಿ ಮೇ 18, 19ಕ್ಕೆ ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ; ಆರೆಂಜ್ ಅಲರ್ಟ್ ಘೋಷಣೆ -Bengaluru Rain

ಗುಜರಿ ಘಟಕವನ್ನು ಹೋಲುತ್ತಿದ್ದ ಪರ್ಫ್ಯೂಮ್‌ ಫಿಲ್ಲಿಂಗ್ ಘಟಕದಲ್ಲಿ ಪರ್ಫ್ಯೂಮ್ ಖಾಲಿ ಬಾಟಲಿಗಳನ್ನು ಕುಟ್ಟಿ ಹದ ಮಾಡುತ್ತಿದ್ದಾಗ ಬೆಂಕಿ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅವಘಡದಲ್ಲಿ ಮೃತಪಟ್ಟವರನ್ನು ಸಲೀಂ, ಮೆಹಬೂಬ್ ಪಾಷ ಹಾಗೂ ಅರ್ಬಜ್ ಎಂದು ಗುರುತಿಸಲಾಗಿದೆ. ಎಲ್ಲರೂ ಚಿಕ್ಕಬಸ್ತಿ ನಿವಾಸಿಗಳು. ಈ ಬೆಂಕಿ ಅನಾಹುತದಲ್ಲಿ ಕನಿಷ್ಠ 6 ಮಂದಿ ಗಾಯಗೊಂಡಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕಿನ ಕುಂಬಳಗೋಡು ಬಳಿಯ ರಾಮಸಂದ್ರದಲ್ಲಿ ವಿಠ್ಠಲ್ ಎಂಬುವವರ ಜಾಗವನ್ನು ಸಲೀಂ ಪಡೆದು ಗೋದಾಮು ಮಾಡಿಕೊಂಡಿದ್ದರು. ಅಲ್ಲಿ, ಪರ್ಫ್ಯೂಮ್ ಖಾಲಿ ಬಾಟಲಿಗಳನ್ನು ಸಂಗ್ರಹಿಸಿಟ್ಟಿದ್ದರು. ಆ ಬಾಟಲಿಗಳನ್ನು ಗುಜರಿಗೆ ಹಾಕಲು ನಿನ್ನೆ ಸಂಜೆ ಕಾರ್ಮಿಕರ ಜೊತೆ ಸೇರಿ ಸಲೀಂ ಸಹ ಬಾಟಲಿಗಳನ್ನು ಕುಟ್ಟಿ ಹದ ಮಾಡುತ್ತಿದ್ದಾಗ ಏಕಾಕಿ ಸ್ಪೋಟಗೊಂಡು ಬೆಂಕಿ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದರು. ಆದಾರೂ ಮೂವರು ಸಜೀವ ದಹನವಾಗಿದ್ದರು. ಬೆಂಕಿಯ ತೀವ್ರತೆಯಿಂದಾಗಿ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ಎಫ್‍ಎಸ್‍ಎಲ್ ತಜ್ಞರು ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಸಾಕ್ಷ್ಯ ಕಲೆಹಾಕುತ್ತಿದ್ದಾರೆ. ಆ ನಂತರ ದುರಂತಕ್ಕೆ ಕಾರಣವೇನು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಲಕ್ಷ ರೂಪಾಯಿ ಕಳವು ಮಾಡಿದ ಹೋಟೆಲ್ ಕ್ಯಾಷಿಯರ್‌

ಬೆಂಗಳೂರಿನ ಕೆ ಆರ್‌ಪುರದಲ್ಲಿ ಹೋಟೆಲ್ ಕ್ಯಾಷಿಯರ್‌ ಒಂದು ಲಕ್ಷ ರೂಪಾಯಿ ಕಳವು ಮಾಡಿ ಪೊಲೀಸರ ಬಲೆಗೆ ಬಿದ್ದಿದಾನೆ. ಬಂಧಿತನನ್ನು ಬನಶಂಕರಿ ನಿವಾಸಿ ಎಂ ಎಸ್ ರವಿಕುಮಾರ್ ಎಂದು ಗುರುತಿಸಲಾಗಿದೆ. ಆತ ಕೆಲಸ ಕೊಟ್ಟ ಮಾಲೀಕರ ಕಣ್ತಪ್ಪಿಸಿ ಹಣ ಕದಿಯುತ್ತಿದ್ದ.

ವಯಸ್ಸಾಗಿದೆ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ, ಕ್ಯಾ‍ಷಿಯರ್ ಕೆಲಸ ಕೊಡಿ ಎಂದು ಭಟ್ಟರಹಳ್ಳಿ ಸತೀಶ್ ಶೆಟ್ಟಿ ಅವರ ಹೋಟೆಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡು ರವಿಕುಮಾರ್‌, ಬಳಿಕ ಅಲ್ಲೇ ಕಳ್ಳತನ ಶುರುಮಾಡಿದ್ದ. ಮಾಲೀಕರ ಗಮನ ಇಲ್ಲದೇ ಇದ್ದಾಗ ಕ್ಯಾಷ್ ಕೌಂಟರ್‌ನಿಂದ ಹಣ ಜೇಬಿಗಿಳಿಸುತ್ತಿದ್ದ. ಒಟ್ಟು ಒಂದು ಲಕ್ಷ ರೂಪಾಯಿತನಕ ಹಣ ಕಳವು ಮಾಡಿದ್ದಾನೆ ಎಂದು ಸತೀಶ್ ಶೆಟ್ಟಿ ದೂರು ನೀಡಿದ್ದರು.

ಪೊಲೀಸರು ಆರೋಪಿ ಎಂ ಎಸ್ ರವಿಕುಮಾರ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಫುಡ್ ಡೆಲಿವರಿ ಬಾಯ್‌ಗೆ ಲಾಂಗ್ ತೋರಿಸಿ ದರೋಡೆ

ಬೆಂಗಳೂರಿನ ಪುಲಕೇಶಿ ನಗರದಲ್ಲಿ ಜೊಮ್ಯಾಟೊ ಫುಡ್ ಡೆಲಿವರಿ ಬಾಯ್‌ಗೆ ಲಾಂಗ್‌ ತೋರಿಸಿ ಬೆದರಿಕೆಯೊಡ್ಡಿ ಒಂದೂವರೆ ಸಾವಿರ ರೂಪಾಯಿ ದೋಚಿದ ಘಟನೆ ಇಂದು (ಫೆ.19) ನಸುಕಿನಲ್ಲಿ ನಡೆದಿದೆ.

ಪುಲಕೇಶಿ ನಗರದ ಪ್ರಾಮಿನೆಂಟ್ ರಸ್ತೆಯ ಮನೆಯವರೊಬ್ಬರು ಆರ್ಡರ್‌ ನೀಡಿದ್ದನ್ನು ಅನುಸರಿಸಿ ಫುಡ್ ಡೆಲಿವರಿ ಬಾಯ್ ಅಲ್ಲಿಗೆ ನಸುಕಿನ 1 ಗಂಟೆಗೆ ಹೋಗಿದ್ದು, ದೂರವಾಣಿ ಕರೆ ಮಾಡಿ ಅವರಿಗಾಗಿ ಕಾಯುತ್ತಿದ್ದ. ಆಗ, ಬೈಕ್‌ನಲ್ಲಿ ಬಂದ ಇಬ್ಬರು ಫುಡ್ ಡೆಲಿವರಿ ಬಾಯ್‌ಗೆ ಲಾಂಗ್ ತೋರಿಸಿ 1,500 ರೂಪಾಯಿ ನಗದು ಕಿತ್ತು ಪರಾರಿಯಾದರು. ಈ ಕುರಿತು ಫುಡ್ ಡೆಲಿವರಿ ಬಾಯ್ ಪುಲಕೇಶಿ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆ ರಸ್ತೆಯ ಸುತ್ತಮುತ್ತಲಿನ ಸಿಸಿ ಟಿವಿಗಳನ್ನು ಪರಿಶೀಲಿಸಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ