logo
ಕನ್ನಡ ಸುದ್ದಿ  /  ಕರ್ನಾಟಕ  /  ಯುಗಾದಿ ವಿಶೇಷ: ಬೆಂಗಳೂರಿನಲ್ಲಿ ರಾಗಿ ಮುದ್ದೆ, ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆಯಲ್ಲಿ 12 ಮುದ್ದೆ ತಿಂದು ಮೇಕೆ ಗೆದ್ದ ವ್ಯಕ್ತಿ

ಯುಗಾದಿ ವಿಶೇಷ: ಬೆಂಗಳೂರಿನಲ್ಲಿ ರಾಗಿ ಮುದ್ದೆ, ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆಯಲ್ಲಿ 12 ಮುದ್ದೆ ತಿಂದು ಮೇಕೆ ಗೆದ್ದ ವ್ಯಕ್ತಿ

Raghavendra M Y HT Kannada

Apr 08, 2024 10:51 AM IST

ರಾಗಿ ಮುದ್ದೆ ನಾಟಿ ಕೋಟಿ ಸಾರು ತಿನ್ನುವ ಸ್ಪರ್ಧೆಯಲ್ಲಿ 12 ಮುದ್ದೆ ತಿಂದ ಬೆಂಗಳೂರಿನ ವ್ಯಕ್ತಿ ಬಹುಮಾನ ಗೆದ್ದಿದ್ದಾನೆ.

    • ಬೆಂಗಳೂರಿನಲ್ಲಿ ನಡೆದ ರಾಗಿ ಮುದ್ದೆ, ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆಯಲ್ಲಿ ವ್ಯಕ್ತಿಯೊಬ್ಬ 12 ಮುದ್ದೆ ತಿಂದು ಮೇಕೆ ಹೋತ ಗೆದ್ದಿದ್ದಾನೆ.
ರಾಗಿ ಮುದ್ದೆ ನಾಟಿ ಕೋಟಿ ಸಾರು ತಿನ್ನುವ ಸ್ಪರ್ಧೆಯಲ್ಲಿ 12 ಮುದ್ದೆ ತಿಂದ ಬೆಂಗಳೂರಿನ ವ್ಯಕ್ತಿ ಬಹುಮಾನ ಗೆದ್ದಿದ್ದಾನೆ.
ರಾಗಿ ಮುದ್ದೆ ನಾಟಿ ಕೋಟಿ ಸಾರು ತಿನ್ನುವ ಸ್ಪರ್ಧೆಯಲ್ಲಿ 12 ಮುದ್ದೆ ತಿಂದ ಬೆಂಗಳೂರಿನ ವ್ಯಕ್ತಿ ಬಹುಮಾನ ಗೆದ್ದಿದ್ದಾನೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾನುವಾರ (ಏಪ್ರಿಲ್ 7) ಹಳ್ಳಿಯ ಸೊಗಡು ಕಳೆಗಟ್ಟಿದೆ. ಗ್ರಾಮೀಣ ಕ್ರೀಡೆಯನ್ನು ಉಳಿಸುವ ಉದ್ದೇಶದಿಂದ ಕೆಂಪೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ನಂದಿನಿ ಬಡಾವಣೆಯ ಜೈ ಮಾರುತಿ ನಗರದಲ್ಲಿ ಆಯೋಜಿಸಿದ್ದ ರಾಗಿ ಮುದ್ದೆ, ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆಯಲ್ಲಿ ಸ್ಥಳೀಯ ವ್ಯಕ್ತಿಯೊರ್ವ ಹನ್ನೆರಡೂವರೆ (12.5) ಮುದ್ದೆ ತಿಂದು ಮೊದಲ ಬಹುಮಾನ ಗೆದ್ದಿದ್ದಾರೆ. ಕುಣಿಗಲ ಮೂಲದ ಸೀತಾರಾಮಯ್ಯ ಎಂಬುವರು 12 ಮುಂದೆ ತಿಂದು ಎರಡನೇ ಬಹುಮಾನ ಪಡೆದಿದ್ದಾರೆ. ಯುಗಾದಿ ಹೊಸತೊಡಕು ಹಿನ್ನೆಲೆಯಲ್ಲಿ ಆಯೋಜಿಸಿದ್ದ ರಾಗಿ ಮುದ್ದೆ ನಾಟಿ ಕೋಳಿ ಸಾರು ಊಟ ತಿನ್ನುವ ಸ್ಪರ್ಧೆಯಲ್ಲಿ ನೂರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಬರದ ನಡುವೆ ಗ್ಯಾರಂಟಿ ಜಾರಿ, ಪರಿಹಾರದ ಚೊಂಬು; ಸಿದ್ದರಾಮಯ್ಯ- ಡಿಕೆಶಿ ಜೋಡಿ ಸರ್ಕಾರಕ್ಕೆ ವರ್ಷ, ಹೇಗಿತ್ತು ಈ ಹಾದಿ, 10 ಅಂಶಗಳು

Hassan Scandal: ರೇವಣ್ಣಗೆ ಎರಡನೇ ಪ್ರಕರಣದಲ್ಲೂ ಜಾಮೀನು, ನ್ಯಾಯಾಧೀಶರ ಸೂಚನೆ ಏನು

ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲೊಲ್ಲ, ಅದು ಬಿಜೆಪಿ ಅಪಪ್ರಚಾರವಷ್ಟೇ: ಸಿಎಂ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಪೂರ್ವ ಮುಂಗಾರು; 18 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ, ಇತ್ತೀಚಿನ 10 ಸುದ್ದಿ ಮುಖ್ಯಾಂಶ

ಸ್ಪರ್ಧೆಗೆ 30 ನಿಮಿಷಗಳ ಸಮಯವನ್ನು ನಿಗದಿ ಮಾಡಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದವರು ಒಂದೊಂದು ಮುದ್ದೆ ತಿಂದು ಮುಗಿಸುತ್ತಿದ್ದಂತೆ ಸ್ಥಳದಲ್ಲಿ ನೆರೆದಿದ್ದ ನೂರಾರು ಮಂದಿ ಸಿಳ್ಳೆ ಚಪ್ಪಾಳೆ ಹೊಡೆದು ಹುರಿದುಂಬಿಸುತ್ತಿದ್ದರು.

ಸ್ಥಳೀಯರಾದ 55 ವರ್ಷದ ವೆಂಕಟರಾಮ ಎಂಬುವರೇ ಹನ್ನೆರಡೂವರೆ ಮುದ್ದೆ ತಿಂದು ಮೊದಲ ಬಹುಮಾನವಾಗಿ ಇಟ್ಟಿದ್ದ ಮೇಕೆ ಹೋತವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ 35 ವರ್ಷದ ಗೀತಾ ಎಂಬುವವರು ಮೊದಲ ಬಹುಮಾನ ಗೆದ್ದುಕೊಂಡಿದ್ದಾರೆ. ಬೆಂಗಳೂರು ನಗರ ಮಾತ್ರವಲ್ಲದೆ, ಸುತ್ತಮುತ್ತಲ್ಲಿನ ಜಿಲ್ಲೆಗಳು ಸೇರಿದಂತೆ ನಾನಾ ಭಾಗಗಳಿಂದ ಜನರು ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಪ್ರವೇಶ ಶುಲ್ಕವಾಗಿ 150 ರೂಪಾಯಿ ನಿಗದಿ ಪಡಿಸಲಾಗಿತ್ತು.

ಮೊದಲ ಬಹುಮಾನವಾಗಿ 20 ಕೆಜಿ ತೂಕದ ಮೇಕೆ ಹೋತ, ಎರಡನೇ ಬಹುಮಾನವಾಗಿ 15 ಕೆಜಿ ಕೂತದ ಮೇಕೆ ಹೋತ ಹಾಗೂ 3ನೇ ಬಹುಮಾನವಾಗಿ 10 ಕೆಜಿ ನಾಟಿ ಕೋಳಿ ಬಹುಮಾನವಾಗಿ ಇಡಲಾಗಿತ್ತು. ಕೆಂಪೇಗೌಡ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ 2ನೇ ವರ್ಷದ ರಾಗಿ ಮುದ್ದೆ ತಿನ್ನುವ ಸ್ಪರ್ಧೆಯಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ