logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Traffic: 10 ಕಿ.ಮೀ. ಸಂಚಾರಕ್ಕೆ 30 ನಿಮಿಷ!; 129 ಗಂಟೆ ನಷ್ಟ!- ಆಮೆಗತಿ ವಾಹನ ಸಂಚಾರ - ಜಗತ್ತಿನಲ್ಲಿ ಬೆಂಗಳೂರು ನಂ.2!

Bengaluru Traffic: 10 ಕಿ.ಮೀ. ಸಂಚಾರಕ್ಕೆ 30 ನಿಮಿಷ!; 129 ಗಂಟೆ ನಷ್ಟ!- ಆಮೆಗತಿ ವಾಹನ ಸಂಚಾರ - ಜಗತ್ತಿನಲ್ಲಿ ಬೆಂಗಳೂರು ನಂ.2!

HT Kannada Desk HT Kannada

Feb 16, 2023 09:47 AM IST

ಟಾಮ್‌ಟಾಮ್‌ ವರದಿ ಪ್ರಕಾರ, ಕಳೆದ ವರ್ಷ ಬೆಂಗಳೂರು ಮಹಾನಗರದ ಕೇಂದ್ರ ಭಾಗದಲ್ಲಿ 10 ಕಿ.ಮೀ. ಸಂಚರಿಸಲು ಬರೋಬ್ಬರಿ 30 ನಿಮಿಷ ಬೇಕಾಗಿತ್ತು!

  • Bengaluru Traffic: ಕಳೆದ ವರ್ಷ ಬೆಂಗಳೂರು ಮಹಾನಗರದ ಹೃದಯಭಾಗದಲ್ಲಿ 10 ಕಿ.ಮೀ. ಸಂಚರಿಸಲು ವಾಹನ ಸವಾರರಿಗೆ ಬರೋಬ್ಬರಿ 30 ನಿಮಿಷ ಸಮಯ ಬೇಕಾಗಿತ್ತು ಎಂದು ಜಿಯೋಲೋಕೇಶನ್‌ ಟೆಕ್ನಾಲಜಿಯಲ್ಲಿ ಪರಿಣತಿ ಹೊಂದಿರುವ ಟಾಮ್‌ಟಾಮ್‌ ಕಂಪನಿಯ ಇತ್ತೀಚಿನ ವರದಿ ಹೇಳಿದೆ.

ಟಾಮ್‌ಟಾಮ್‌ ವರದಿ ಪ್ರಕಾರ, ಕಳೆದ ವರ್ಷ ಬೆಂಗಳೂರು ಮಹಾನಗರದ ಕೇಂದ್ರ ಭಾಗದಲ್ಲಿ 10 ಕಿ.ಮೀ. ಸಂಚರಿಸಲು ಬರೋಬ್ಬರಿ 30 ನಿಮಿಷ ಬೇಕಾಗಿತ್ತು!
ಟಾಮ್‌ಟಾಮ್‌ ವರದಿ ಪ್ರಕಾರ, ಕಳೆದ ವರ್ಷ ಬೆಂಗಳೂರು ಮಹಾನಗರದ ಕೇಂದ್ರ ಭಾಗದಲ್ಲಿ 10 ಕಿ.ಮೀ. ಸಂಚರಿಸಲು ಬರೋಬ್ಬರಿ 30 ನಿಮಿಷ ಬೇಕಾಗಿತ್ತು! (PTI)

ಅತಿಯಾದ ಸಂಚಾರದಟ್ಟಣೆಯ ಕಾರಣ 2022ರಲ್ಲಿ ಬೆಂಗಳೂರು ಮಹಾನಗರದ ಹೃದಯ ಭಾಗ ಜಗತ್ತಿನ ಎರಡನೇ ಅತಿ ನಿಧಾನಗತಿಯ ಚಾಲನೆ ಹೊಂದಿರುವ ನಗರ ಎಂಬ ಕುಖ್ಯಾತಿಗೆ ಒಳಗಾಗಿದೆ. ಲಂಡನ್‌ ಮೊದಲನೇ ಸ್ಥಾನದಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಪ್ರಜ್ವಲ್ ರೇವಣ್ಣ ಕೇಸ್‌; ಜರ್ಮನಿಯಿಂದ ಲಂಡನ್‌ಗೆ ಹೊರಟ್ರಾ ಹಾಸನ ಸಂಸದ, 2 ದಿನಗಳ 10 ವಿದ್ಯಮಾನಗಳು

Raghunandan S Kamath Death: ಐಸ್ ಕ್ರೀಮ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ನ್ಯಾಚುರಲ್ ಐಸ್ ಕ್ರೀಂನ ರಘುನಂದನ್ ಕಾಮತ್ ಇನ್ನಿಲ್ಲ

ಪ್ರಜ್ವಲ್‌ ರೇವಣ್ಣ ಕೇಸ್‌; ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ; ಕಾನೂನು ಕ್ರಮಕ್ಕೆ ತಕರಾರು ಇಲ್ಲ

ಬಂಟ್ವಾಳ: 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ, ಉಮೇಶ್ ಮಠದಬೆಟ್ಟು ಕಾರ್ಯಕ್ಕೆ ಶ್ಲಾಘನೆ

ಕಳೆದ ವರ್ಷ ಬೆಂಗಳೂರು ಮಹಾನಗರದ ಹೃದಯಭಾಗದಲ್ಲಿ 10 ಕಿ.ಮೀ. ಸಂಚರಿಸಲು ವಾಹನ ಸವಾರರಿಗೆ ಬರೋಬ್ಬರಿ 30 ನಿಮಿಷ ಸಮಯ ಬೇಕಾಗಿತ್ತು ಎಂದು ಜಿಯೋಲೋಕೇಶನ್‌ ಟೆಕ್ನಾಲಜಿಯಲ್ಲಿ ಪರಿಣತಿ ಹೊಂದಿರುವ ಟಾಮ್‌ಟಾಮ್‌ ಕಂಪನಿಯ ಇತ್ತೀಚಿನ ವರದಿ ಹೇಳಿದೆ.

ಈ ವರದಿ ಬುಧವಾರ ಪ್ರಕಟವಾಗಿದ್ದು ಇದರಂತೆ, ಕಳೆದ ವರ್ಷ ಬೆಂಗಳೂರು ಮಹಾನಗರದ ಮಧ್ಯಭಾಗದಲ್ಲಿ 10 ಕಿ.ಮೀ. ಸಂಚಾರಕ್ಕೆ 29 ನಿಮಿಷ 9 ಸೆಕೆಂಡ್‌ ಬೇಕಾಗಿತ್ತು. ಲಂಡನ್‌ನಲ್ಲಿ 10 ಕಿ.ಮೀ. ಅಂತರದ ಪ್ರಯಾಣಕ್ಕೆ 36 ನಿಮಿಷ 20 ಸೆಕೆಂಡ್ಸ್‌ ಬೇಕಾಗಿತ್ತು. ಹೀಗಾಗಿ ಆಮೆಗತಿ ವಾಹನ ಸಂಚಾರದಲ್ಲಿ ಲಂಡನ್‌ ಮೊದಲ ಸ್ಥಾನ, ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಐರ್ಲೆಂಡ್‌ನ ರಾಜಧಾನಿ ಡಬ್ಲಿನ್‌, ಜಪಾನ್‌ನ ಸಪ್ಪೊರೊ ಮತ್ತು ಇಟಲಿಯ ಮಿಲಾನ್‌ ಅನುಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.

ಈ ವರದಿಯು 12ನೇ ವಾರ್ಷಿಕ ಆವೃತ್ತಿಯಾಗಿದ್ದು, ಟಾಮ್‌ಟಾಮ್‌ ಟ್ರಾಫಿಕ್‌ ಇಂಡೆಕ್ಸ್‌ ಎಂಬ ಶೀರ್ಷಿಕೆ ಹೊಂದಿದೆ. ಇದರಲ್ಲಿ 2022ನೇ ಇಸವಿಗೆ ಸಂಬಂಧಿಸಿ 56 ರಾಷ್ಟ್ರಗಳ 389 ನಗರಗಳ ಟ್ರಾಫಿಕ್‌ ಟ್ರೆಂಡ್ಸ್‌ನ ವಿವರವಾದ ವರದಿ ಇದೆ. ಇಷ್ಟೂ ನಗರಗಳ ಟ್ರಾಫಿಕ್‌ನ ಮೌಲ್ಯಮಾಪನ ಮಾಡಿರುವ ವರದಿ, ಚಾಲನೆಗೆ ತಗಲು ಸಮಯ, ವೆಚ್ಚ ಮತ್ತು ಪ್ರತಿ ಮೈಲು ಪ್ರಯಾಣದ ಸಂದರ್ಭದಲ್ಲಿ ಪರಿಸರದ ಮೇಲೆ ಆಗುವ ಪರಿಣಾಮಗಳನ್ನು ಅಂದಾಜಿಸಿದೆ.

ಈ ಅಧ್ಯಯನವು ಪ್ರತಿ ಮೈಲ್‌ ಅಂತರಕ್ಕೆ ತಗಲುವ ಪ್ರಯಾಣ ಸಮಯ, ವೆಚ್ಚ ಮತ್ತು CO2 ಹೊರಸೂಸುವಿಕೆಯನ್ನು ಗಣನೆಗೆ ತೆಗೆದುಕೊಂಡಿತು. ವಿಶಿಷ್ಟ EV, ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳು ನಗರದೊಳಗೆ 10km (ಅಥವಾ 6-ಮೈಲಿ) ಪ್ರಯಾಣವನ್ನು ಪೂರ್ಣಗೊಳಿಸಲು ಎಷ್ಟು ಸಮಯ ತೆಗೆದುಕೊಂಡಿತು ಎಂಬುದನ್ನು ಪರಿಗಣಿಸಿದೆ.

ಸಂಚಾರ ದಟ್ಟಣೆಯಿಂದ ಬೆಂಗಳೂರಲ್ಲಿ ಕಳೆದು ಹೋದ ಸಮಯ 129 ಗಂಟೆ!

ಬೆಂಗಳೂರು ಮಹಾನಗರದಲ್ಲಿ ರಶ್-ಅವರ್ ಟ್ರಾಫಿಕ್‌ನಿಂದಾಗಿ ಕಳೆದುಹೋದ ಅವಧಿ 129 ಗಂಟೆ. ಈ ವಿಷಯದಲ್ಲಿ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ ಎಂದು ಅಧ್ಯಯನ ವರದಿ ಹೇಳಿದೆ.

ಹೊಂದಾಣಿಕೆಯ ಕೆಲಸದ ವ್ಯವಸ್ಥೆ, ರಿಮೋಟ್‌ ವರ್ಕ್‌ ಆಪ್ಶನ್‌ ಮುಂತಾದ ಆಯ್ಕೆಗಳಿದ್ದರೂ, ಜಾಗತಿಕ ಮಟ್ಟದ ನಗರಗಳಲ್ಲಿ ರಶ್-ಅವರ್‌ ಟ್ರಾಫಿಕ್‌ಗೆ ಕಳೆದುಕೊಳ್ಳುವ ಸಮಯ ಕಳೆದ ವರ್ಷ ಹೆಚ್ಚಿದೆ. ಡಬ್ಲಿನ್‌ ನಗರದಲ್ಲಿ ಟ್ರಾಫಿಕ್‌ ಕಾರಣ 140 ಗಂಟೆ ನಷ್ಟವಾಗಿದೆ ಎಂದು ವರದಿ ಹೇಳಿದೆ.

ಇಂಗಾಲ ಹೊರಸೂಸುವಿಕೆ ಬೆಂಗಳೂರು ನಂ.5

ಬೆಂಗಳೂರು ಮಹಾನಗರದಲ್ಲಿ ಸಂಚಾರ ದಟ್ಟಣೆ ಕಾರಣ ಅನೇಕ ರೀತಿಯ ಹಾನಿಗಳೂ ಆಗುತ್ತಿವೆ. ಟ್ರಾಫಿಕ್‌ ಜಾಮ್‌ನ ನೇರ ಪರಿಣಾಮ ಚಾಲಕನ ಜೇಬಿನ ಮೇಲಾಗುತ್ತದೆ. ವಾಹನ ಚಾಲನೆಯ ವೆಚ್ಚ ಹೆಚ್ಚಾಗುವುದು ಇದಕ್ಕೆ ಕಾರಣ. ಹೆಚ್ಚು ಸಮಯ ವಾಹನ ಚಾಲನೆ ಸ್ಥಿತಿಯಲ್ಲಿ ಇರುವ ಕಾರಣ CO2 ಹೊರಸೂಸುವಿಕೆ ಹೆಚ್ಚಾಗುತ್ತದೆ. ಈ ವಿಚಾರದಲ್ಲಿ ಲಂಡನ್‌ ಮೊದಲ ಸ್ಥಾನದಲ್ಲಿದೆ. ಬೆಂಗಳೂರು 5ನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ