logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನೀರಿನ ಬಿಕ್ಕಟ್ಟು; ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನೀಡಲು ತಜ್ಞರ ಸಲಹೆ, ಕಂಪನಿಗಳು ಹೇಳೋದೇ ಬೇರೆ

ಬೆಂಗಳೂರು ನೀರಿನ ಬಿಕ್ಕಟ್ಟು; ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನೀಡಲು ತಜ್ಞರ ಸಲಹೆ, ಕಂಪನಿಗಳು ಹೇಳೋದೇ ಬೇರೆ

Raghavendra M Y HT Kannada

Mar 26, 2024 02:37 PM IST

google News

ಬೆಂಗಳೂರಿನಲ್ಲಿ ಉಂಟಾಗಿರುವ ನೀರಿನ ಸಮಸ್ಯೆಗೆ ಪರಿಹಾರವಾಗಿ ಐಟಿ ಉದ್ಯೋಗಿಗಳಿಗೆ ತಾತ್ಕಾಲಿಕವಾಗಿ ವರ್ಕ್ ಫ್ರಂ ಹೋಮ್ ನೀಡಬೇಕೆಂಬ ಸಲಹೆಗಳು ಬಂದಿವೆ.

    • Bengaluru water crisis: ಬೆಂಗಳೂರಿನ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವ ಕಾರಣ ತಜ್ಞರು ತಾತ್ಕಾಲಿಕ ಪರಿಹಾರವಾಗಿ ಹಲವು ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ. ಇದರಲ್ಲಿ ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್  ನೀಡುವುದು.
ಬೆಂಗಳೂರಿನಲ್ಲಿ ಉಂಟಾಗಿರುವ ನೀರಿನ ಸಮಸ್ಯೆಗೆ ಪರಿಹಾರವಾಗಿ ಐಟಿ ಉದ್ಯೋಗಿಗಳಿಗೆ ತಾತ್ಕಾಲಿಕವಾಗಿ ವರ್ಕ್ ಫ್ರಂ ಹೋಮ್ ನೀಡಬೇಕೆಂಬ ಸಲಹೆಗಳು ಬಂದಿವೆ.
ಬೆಂಗಳೂರಿನಲ್ಲಿ ಉಂಟಾಗಿರುವ ನೀರಿನ ಸಮಸ್ಯೆಗೆ ಪರಿಹಾರವಾಗಿ ಐಟಿ ಉದ್ಯೋಗಿಗಳಿಗೆ ತಾತ್ಕಾಲಿಕವಾಗಿ ವರ್ಕ್ ಫ್ರಂ ಹೋಮ್ ನೀಡಬೇಕೆಂಬ ಸಲಹೆಗಳು ಬಂದಿವೆ.

ಬೆಂಗಳೂರು: ಸಿಲಿಕಾನ್ ಸಿಟಿ, ಐಟಿ ಹಬ್ ಬೆಂಗಳೂರಿನಲ್ಲಿ ಕಳೆದ ಹಲವು ದಿನಗಳಿಂದ ನೀರಿನ ಸಮಸ್ಯೆ ಉಂಟಾಗಿದ್ದು, ಇದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಲು ಜಲಮಂಡಳಿ ಮತ್ತು ಬಿಬಿಎಂಪಿ ಭಾರಿ ಸರ್ಕಸ್ ಮಾಡುತ್ತಿವೆ. ಕೈತೋಟ, ಕಾರು ವಾಶ್ ಮಾಡಲು ಕಾವೇರಿ ನೀರು ಬಳಸಬಾರದು ಎಂದು ಸೇರಿದಂತೆ ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಇದರ ನಡುವೆ ಬೆಂಗಳೂರಿಗರಿಗೆ ಅಗತ್ಯಕ್ಕೆ ತಕ್ಕಂತೆ ನೀರು ಪೂರೈಸಲು ತಾತ್ಕಾಲಿಕ ಎಂಬಂತೆ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ವರ್ಕ್ ಫ್ರಂ ಹೋಮ್ ನೀಡಬೇಕೆಂಬ ಸಲಹೆ, ಸೂಚನೆಗಳು ಕೇಳಿಬಂದಿವೆ.

ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನೀಡಲು ಜಲ ತಜ್ಞರು ಮತ್ತು ಕಾನೂನು ತಜ್ಞರು ಸರ್ಕಾರ, ಜಲಮಂಡಳಿಗೆ ಸಲಹೆಗಳನ್ನು ನೀಡುತ್ತಿದ್ದಾರೆ. ಐಟಿ ಉದ್ಯೋಗಿಗಳು ಕೂಡ ತಮಗೆ ತಾತ್ಕಾಲಿಕವಾಗಿ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಲಿ ಎಂದು ಹೇಳುತ್ತಿದ್ದಾರೆ. ಆದರೆ ಕಂಪನಿಗಳು ವರ್ಕ್ ಫ್ರಂ ಹೋಮ್ ಇರಲಿ ಮೊದಲು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಿ ಎಂದು ಹೇಳುತ್ತಿವೆ.

ನೀರಿನ ಕೊರತೆಯನ್ನು ಒಪ್ಪಿಕೊಂಡ ಸರ್ಕಾರ

ಎಕನಾಮಿಕ್ಸ್ ಟೈಮ್ಸ್ ವರದಿ ಪ್ರಕಾರ, ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನೀಡಿದರೆ ನಗರದಲ್ಲಿ ಕಡಿಮೆ ಜನಸಂಖ್ಯೆಯು ನೀರಿನ ಒಟ್ಟಾರೆ ಬೇಡಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 500 ಮಿಲಿಯನ್ ಲೀಟರ್ (ಎಂಎಲ್‌ಡಿ) ನೀರಿನ ಕೊರತೆ ಇದೆ ಎಂಬುದನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ನಗರದ ಜನರ ಅಗತ್ಯಗಳನ್ನು ಪೂರೈಸಲು ಕನಿಷ್ಠ 2,600 ಡಿಎಲ್‌ಡಿ ನೀರಿನ ಅಗತ್ಯವಿದೆ.

ಕರ್ನಾಟಕ ಮತ್ತ ಅಸ್ಸಾಂ ಹೈಕೋರ್ಟ್‌ಗಳ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕೆ ಶ್ರೀಧರ್ ರಾವ್ ಈ ಬಗ್ಗೆ ಮಾತನಾಡಿ, ಬೆಂಗಳೂರಿನ ಅಂದಾಜು 15 ಲಕ್ಷ ಐಟಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ಸ್ಪಷ್ಟ ಕಾರಣವನ್ನೂ ನೀಡಿರುವ ಅವರು, ಸುಮಾರು 10 ಲಕ್ಷ ಉದ್ಯೋಗಿಗಳು ತಮ್ಮ ಸ್ವಗ್ರಾಮಗಳಿಗೆ ಹೋಗುತ್ತಾರೆ. ಇದು ನಗರದ ನೀರಿನ ಸಂಪನ್ಮೂಲಗಳ ಮೇಲಿನ ಒತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ನೀರಿನ ಸಂಗ್ರಹ ಸಾಮರ್ಥ್ಯವನ್ನು ಸುಧಾರಿಸಲು ಕರೆಗಳ ಹೂಳು ತೆಗೆಯುವಂತಹ ತಕ್ಷಣದ ಕ್ರಮವನ್ನೂ ಕೈಗೊಳ್ಳಬೇಕೆಂದು ಹೇಳಿದ್ದಾರೆ.

ಆದರೆ ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನೀಡಲು ಕಂಪನಿಗಳು ಮನಸು ಮಾಡುತ್ತಿಲ್ಲ. ಬದಲಾಗಿ ನಗರದಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎನ್ನುತ್ತಿವೆ. ನೀರಿನ ಬಿಕ್ಕಟ್ಟು ತಾತ್ಕಾಲಿಕವಷ್ಟೇ. ಕಚೇರಿಗಳಲ್ಲಿ ಹಿಂದೆಂದಿಗಿಂತಲೂ ನೀರನ ವ್ಯರ್ಥವನ್ನು ಕಡಿಮೆ ಮಾಡುತ್ತಿದ್ದೇವೆ. ಕೆಲಸದ ಪರಿಸ್ಥಿತಿ ಹೈಬ್ರಿಡ್ ಆಗಿದೆ. ಉದ್ಯೋಗಿಗಳು ಅಗತ್ಯದ ಆಧಾರದ ಮೇಲೆ ಕಚೇರಿಗೆ ಬರುತ್ತಾರೆ. ಈಗಾಗಲೇ ಏಕಾಏಕಿ ವರ್ಕ್ ಫ್ರಂ ಹೋಂ ನೀಡಿದರೆ ಕೆಲಸದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಐಟಿ ಕಂಪನಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯದ ಮಟ್ಟಿಗೆ ನೀರಿನ ಟ್ಯಾಂಕರ್‌ಗಳಿಗೆ ನಿಯಂತ್ರಣ, ಕಾವೇರಿ ನೀರನ್ನು ಕಾರ್ ತೊಳೆಯಸು, ಕೈತೋಟಕ್ಕೆ ಬಳಸಬಾರದು ಎಂಬುದು ಸೇರಿದಂತೆ ಜಳಮಂಡಳಿ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೊಂಡಿದೆ. ಕೊಳಗೆ ಬಾವಿಗಳಿಗೆ ಕೃತಕ ಬುದ್ದಿಮತ್ತೆ (ಎಐ) ಮತ್ತು ಆಧುನಿಕ ತಂತ್ರಜ್ಞಾನ ಅವಳವಡಿಸುವಂತಹ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಆದರೆ ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನೀಡುವ ವಿಚಾರ ಇನ್ನೂ ಚರ್ಚೆಯ ಹಂತದಲ್ಲೇ ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ