logo
ಕನ್ನಡ ಸುದ್ದಿ  /  ಕರ್ನಾಟಕ  /   Priyank Kharge On Union Budget: ಕೇಂದ್ರದ ಬಜೆಟ್ ಬಿಚ್ಚಿಡುವುದಕ್ಕಿಂತ ಮುಚ್ಚಿಡುವುದೇ ಹೆಚ್ಚಾಗಿದೆ: ಪ್ರಿಯಾಂಕ್ ಖರ್ಗೆ

Priyank Kharge on Union Budget: ಕೇಂದ್ರದ ಬಜೆಟ್ ಬಿಚ್ಚಿಡುವುದಕ್ಕಿಂತ ಮುಚ್ಚಿಡುವುದೇ ಹೆಚ್ಚಾಗಿದೆ: ಪ್ರಿಯಾಂಕ್ ಖರ್ಗೆ

HT Kannada Desk HT Kannada

Feb 03, 2023 11:13 AM IST

ಮಾಜಿ ಸಚಿವ, ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ (ಫೋಟೋ-ಫೈಲ್)

    • ಬಿಜೆಪಿಯವರು ಪ್ರಧಾನಿ ಮೋದಿ, ಜೆ.ಪಿ ನಡ್ಡಾ ಸೇರಿದಂತೆ ಯಾರನ್ನೇ ಕರೆಸಿ ವಿಜಯ ಸಂಕಲ್ಪ ಯಾತ್ರೆ ಮಾಡಿದರೂ ಅದು ಕನಸಾಗಿಯೇ ಉಳಿಯುತ್ತದೆಯೇ ಹೊರತು ನನಸಾಗುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಭವಿಷ್ಯ ನುಡಿದಿದ್ದಾರೆ. 
ಮಾಜಿ ಸಚಿವ, ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ (ಫೋಟೋ-ಫೈಲ್)
ಮಾಜಿ ಸಚಿವ, ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ (ಫೋಟೋ-ಫೈಲ್)

ಕಲಬುರಗಿ: ಕೇಂದ್ರದ ಬಜೆಟ್ ಬಿಚ್ಚಿಡುವುದಕ್ಕಿಂತ ಮುಚ್ಚಿಡುವುದೇ ಹೆಚ್ಚಾಗಿದೆ. ಕಳೆದ ಎಂಟು ವರ್ಷಗಳಿಂದ ಕೇಂದ್ರ ಸರ್ಕಾರ ಬರೀ ಬಾಯಲ್ಲಿ ಹೇಳುತ್ತಿದೆ. ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಬೇಟಿ ಬಚಾವ್ ಬೇಟಿ ಪಡಾವ್, ಪಿಎಂ ಆವಾಸ್ ಯಾವ ಯೋಜನೆಯೂ ಪೂರ್ಣಗೊಂಡಿಲ್ಲ. ಆದರೂ ಕಳೆದ 75 ವರ್ಷಗಳಲ್ಲಿ ಮಾಡಲಾಗದ್ದನ್ನು ನಾವು ಮಾಡಿದ್ದೇವೆ ಎನ್ನುತ್ತಾರೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಎಸ್‌ಎಸ್‌ಎಲ್‌ಸಿ ಟಾಪರ್‌ ಅಂಕಿತಾ ಬಸಪ್ಪ ಕೊನ್ನೂರ್‌ಗೆ ಐಎಎಸ್‌ ಅಧಿಕಾರಿಯಾಗುವಾಸೆ; ಸ್ಟಡಿಗೆ ಯೂಟ್ಯೂಬ್‌ ಬಳಸಿಕೊಂಡ ಜಾಣೆ

SSLC Result 2024: ಎಸ್ಸೆಸ್ಸೆಲ್ಸಿ ಫಲಿತಾಂಶ, 14ನೇ ಸ್ಥಾನದಿಂದ ಪ್ರಥಮ ಸ್ಥಾನಕ್ಕೆ ಜಿಗಿದ ಉಡುಪಿ; ಈ ಬಾರಿ ದಕ್ಷಿಣ ಕನ್ನಡ ದ್ವಿತೀಯ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024; ಉಡುಪಿ ನಂ1, ದಕ್ಷಿಣ ಕನ್ನಡ ನಂ 2, ಶಿವಮೊಗ್ಗ 28ರಿಂದ 3ನೇ ಸ್ಥಾನಕ್ಕೆ ಹೈಜಂಪ್

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ , ಅಂಕಿತ ಬಸಪ್ಪ ಕೊನ್ನೂರು ರಾಜ್ಯಕ್ಕೆ ಫಸ್ಟ್‌

ಕಲಬುರ್ಗಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಅನ್ನು ಅತ್ಯುತ್ತಮ ಬಜೆಟ್, ಇದರಿಂದ ದೇಶಕ್ಕೆ ಒಳ್ಳೆಯದಾಗಲಿದೆ. ಆ ಮೂಲಕ ಅಮೃತ ಕಾಲಕ್ಕೆ ನಾವು ಕಾಲಿಡುತ್ತಿದ್ದೇವೆ. ಭಾರತ ಮುಂದಿನ 25 ವರ್ಷಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ಈ ಬಜೆಟ್ ನೀಲಿನಕ್ಷೆಯಾಗಿದೆ ಎಂದು ಬಿಜೆಪಿ ನಾಯಕರು ಬಣ್ಣಿಸಿದ್ದಾರೆ. ಆಮೂಲಕ ಕಳೆದ ಎಂಟುವರ್ಷಗಳಿಂದ ಇವರ ಸಾಧ್ಯನೆ ಶೂನ್ಯ ಎಂದು ಹೇಳಿದ್ದಾರೆ.

ಈ ಬಜೆಟ್ ಅನ್ನು ಅವಲೋಕಿಸಿದರೆ, ಕಾರ್ಮಿಕ, ರೈತ, ಬಡವ, ಮಹಿಳೆ, ಅಲ್ಪಸಂಖ್ಯಾತರು, ದಲಿತರ ವಿರೋಧಿ ಬಜೆಟ್ ಆಗಿದೆ. ವಿತ್ತ ಸಚಿವರ ಭಾಷಣ ಗಮನಿಸಿದರೆ, ಅವರು ಕಾರ್ಮಿಕರ ಬಗ್ಗೆ ಮಾತೇ ಆಡಿಲ್ಲ. ಕಾರ್ಮಿಕ ಇಲಾಖೆಗೆ ಬಜೆಟ್ ನ ಶೇ.0.1ರಷ್ಟು ಅನುದಾನ ನೀಡಿದ್ದಾರೆ. ನೌಕರರ ಪಿಂಚಣಿ ಯೋಜನೆ ಕಳೆದ ವರ್ಷ 18,478 ಕೋಟಿ ಇತ್ತು. ಈ ವರ್ಷ 9,160 ಕೋಟಿ ರೂ. ಅನುದಾನ ನೀಡಲಾಗಿದೆ. ಇದು ಕಾರ್ಮಿಕ ಪರವಾದ ಬಜೆಟ್ ಎಂದು ಹೇಳಲು ಸಾಧ್ಯವೇ? ನಾವು ಹಸಿವು ಮುಕ್ತ ಕರ್ನಾಟಕ ಮಾಡಲು ಅನ್ನಭಾಗ್ಯ ಯೋಜನೆ ಮಾಡುತ್ತೇವೆ ಎಂದಾಗ ಬಿಜೆಪಿ ನಾಯಕರು ನಕ್ಕಿದ್ದರು ಎಂದಿದ್ದಾರೆ.

ಗ್ರಾಮೀಣ ಮಟ್ಟದ ಬಡವರಿಗೆ ಆಶ್ರಯ ಯೋಜನೆಗೆ ಕಳೆದ ವರ್ಷ 98,468 ಕೋಟಿ ನೀಡಿದ್ದರು. ಈ ವರ್ಷ ಕೇವಲ 60 ಸಾವಿರ ಕೋಟಿ ನೀಡಿದ್ದಾರೆ. 38,468 ಕೋಟಿ ಕಡಿಮೆ ಮಾಡಿದ್ದಾರೆ. ಇವರು ಮಾತೆತ್ತಿದರೆ ರೈತರ ಪರವಾಗಿದ್ದೇವೆ ಎಂದು ಹೇಳುತ್ತಾರೆ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಹೇಳಿದವರು, ರಸಗೊಬ್ಬರ ಸಬ್ಸಿಡಿ ಅನುದಾನ ಕಡಿತ ಮಾಡಿದ್ದಾರೆ. ಕಳೆದ ವರ್ಷ 2.25 ಲಕ್ಷ ಕೋಟಿ ಅನುದಾನ ನೀಡಿದ್ದ ಸರ್ಕಾರ 1.75 ಲಕ್ಷ ಕೋಟಿ ಆಗಿದೆ. ಜನ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ಗಗನ ಮುಟ್ಟಿದೆ. ಪೆಟ್ರೋಲ್ ಸಬ್ಸಿಡಿಗೆ ಸರ್ಕಾರ ಕೇವಲ 2 ಸಾವಿರ ಕೋಟಿ ನೀಡಿದ್ದಾರೆ. ಇಂತಹ ನಿರ್ಧಾರದ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಲು ಸಾಧ್ಯವೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಈ ಸರ್ಕಾರ ಗೋಹತ್ಯೆ ನಿಷೇಧ ಜಾರಿಗೆ ತಂದ ಮೇಲೆ ಪುಣ್ಯಕೋಟಿ ದತ್ತು ಯೋಜನೆ ಮೂಲಕ ಸರ್ಕಾರಿ ಸಿಬ್ಬಂದಿಯಿಂದ 40 ಕೋಟಿ ವಸೂಲಿ ಮಾಡಿದ್ದಾರೆ. ಒಬ್ಬ ಬಿಜೆಪಿ ನಾಯಕ ಗೋವುಗಳನ್ನು ದತ್ತು ತೆಗೆದುಕೊಂಡಿಲ್ಲ. ಆದರೂ ಇವರು ಅಧಿವೇಶನದಲ್ಲಿ ಕೇಸರಿ ಶಾಲು ಹಾಕಿಕೊಂಡು ಟೇಬಲ್ ಕುಟ್ಟಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದರು.

ಕೇಂದ್ರ ಬಜೆಟ್ ಆಗಲಿ, ರಾಜ್ಯ ಬಜೆಟ್ ಆಗಲಿ ಎಲ್ಲವೂ ಬಡ, ರೈತ, ಕಾರ್ಮಿಕ, ಅಲ್ಪಸಂಖ್ಯಾತ, ಹಿಂದುಳಿದ, ದಲಿತ, ಕನ್ನಡಿಗರ ವಿರೋಧಿ ಬಜೆಟ್ ಆಗಿದೆ. ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿಲ್ಲ ಜನಾದ್ರೋಹ ಜಾತ್ರೆ ಮಾಡುತ್ತಿದ್ದಾರೆ. ಇವರು ಕಾಂಗ್ರೆಸ್ ಬಗ್ಗೆ ಯಾಕೆ ಮಾತನಾಡುತ್ತಾರೆ. ಇವರು ಟೀಕೆ ಮಾಡುವುದನ್ನು ಬಿಟ್ಟು ತಮ್ಮ ಸಾಧನೆ ಏನು ಎಂದು ಹೇಳಲಿ ಎಂದು ಸವಾಲು ಹಾಕಿದ್ದಾರೆ.

ಬಿಜೆಪಿಯವರು ಪ್ರಧಾನಿ ಮೋದಿ, ಜೆ.ಪಿ ನಡ್ಡಾ ಸೇರಿದಂತೆ ಯಾರನ್ನೇ ಕರೆಸಿ ವಿಜಯ ಸಂಕಲ್ಪ ಯಾತ್ರೆ ಮಾಡಿದರೂ ಅದು ಕನಸಾಗಿಯೇ ಉಳಿಯುತ್ತದೆಯೇ ಹೊರತು ನನಸಾಗುವುದಿಲ್ಲ. ಡಬಲ್ ಇಂಜಿನ ಸರ್ಕಾರದ ಡಬಲ್ ದೋಖಾ ಬಗ್ಗೆ ಕನ್ನಡಿಗರು ಎಚ್ಚೆತ್ತುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಜನ ಬಂಡಲ್ ಜನತಾ ಪಕ್ಷಕ್ಕೆ ಪಾಠ ಕಲಿಸಿ ಮನೆಗೆ ಕಳಿಸುವ ಅಭಿಯಾನವನ್ನು ಜನ ಆಗಲೇ ಆರಂಭಿಸಿದ್ದಾರೆ. ಜನ 40 ಪರ್ಸೆಂಟ್ ಕಮಿಷನ್, ಸುಳ್ಳು ಭರವಸೆ, ನಿಮ್ಮ ಆಡಳಿತ ವೈಖರಿ, ಯುಪಿ ಮಾದರಿ ಅಭಿವೃದ್ಧಿ ಎಲ್ಲದರಿಂದ ಬೇಸತ್ತು ಹೋಗಿದ್ದಾರೆ ಎಂದು ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು