logo
ಕನ್ನಡ ಸುದ್ದಿ  /  ಕರ್ನಾಟಕ  /  World Environment Day 2023: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ಸರ್ಕಾರದಿಂದ ಚಿತ್ರಕಲಾ-ಪ್ರಬಂಧ ಸ್ಪರ್ಧೆ; ಟಾಪಿಕ್​ ಹೀಗಿದೆ

World Environment Day 2023: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ಸರ್ಕಾರದಿಂದ ಚಿತ್ರಕಲಾ-ಪ್ರಬಂಧ ಸ್ಪರ್ಧೆ; ಟಾಪಿಕ್​ ಹೀಗಿದೆ

HT Kannada Desk HT Kannada

May 26, 2023 07:13 PM IST

ಸಾಂದರ್ಭಿಕ ಚಿತ್ರ (pixabay)

    • World Environment Day 2023: ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಬೆಳಿಗ್ಗೆ 10.30 ರಿಂದ 11.30 ರವರೆಗೆ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ಬೆಳಿಗ್ಗೆ 12.30 ರಿಂದ 01.30 ರವರೆಗೆ ಆಯೋಜಿಸಲಾಗಿದೆ.
ಸಾಂದರ್ಭಿಕ ಚಿತ್ರ (pixabay)
ಸಾಂದರ್ಭಿಕ ಚಿತ್ರ (pixabay)

ಬೆಂಗಳೂರು: ಜೂನ್​ 5 ರಂದು ವಿಶ್ವ ಪರಿಸರ ದಿನಾಚರಣೆ (World Environment Day 2023). ಇದರ ಅಂಗವಾಗಿ ಕರ್ನಾಟಕ ಸರ್ಕಾರವು ಶಾಲಾ ಮಕ್ಕಳಿಗಾಗಿ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು, ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಲು ಕೋರಿದೆ.

ಟ್ರೆಂಡಿಂಗ್​ ಸುದ್ದಿ

Bangalore Rain: ಬೆಂಗಳೂರಿಗೆ ತಂಪೆರದ ಮಳೆ; ರಾಜ್ಯದಲ್ಲಿ ಮತ್ತೆರಡು ದಿನ ಮಳೆ ಸಂಭವ, ಮಳೆಗೆ ಕುಣಿದು ಕುಪ್ಪಳಿಸಿದ ಮಕ್ಕಳು

Hassan Scandal: ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ನಿಖರವಾದ ಸಾಕ್ಷಿಗಳಿದ್ದರೆ ಎಲ್ಲರನ್ನೂ ಬಂಧಿಸುತ್ತೇವೆ: ಡಾ.ಪರಮೇಶ್ವರ್‌

Forest Tales: ಅಜಯ್‌ ಮಿಶ್ರ ಎಂಬ ಅಧಿಕಾರಿ ರೂಪಿಸಿದ ಅಂಚೆಯೊಳಗಿನ ಅರಣ್ಯ ಲೋಕ, ನೋಡುವ ಆಸಕ್ತಿಯುಂಟೆ

Breaking News: ಬೆಳ್ತಂಗಡಿ ಮಾಜಿ ಶಾಸಕ ಕೆ ವಸಂತ ಬಂಗೇರ ನಿಧನ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಶಾಲಾ ಮಕ್ಕಳಿಗಾಗಿ ವಿಶ್ವ ಪರಿಸರ ದಿನಾಚರಣೆ 2023 ರ ಘೋಷಣೆ –“ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರ ಹಾಗೂ ಪರಿಸರಕ್ಕಾಗಿ ಜೀವನಶೈಲಿ” ಕುರಿತು ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಜೂನ್ 2 ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಕಬ್ಬನ್ ಉದ್ಯಾನವನ, ಜವಹರ ಬಾಲಭವನದಲ್ಲಿ ಆಯೋಜಿಸಿದೆ.

ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಬೆಳಿಗ್ಗೆ 10.30 ರಿಂದ 11.30 ರವರೆಗೆ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ಬೆಳಿಗ್ಗೆ 12.30 ರಿಂದ 01.30 ರವರೆಗೆ ಆಯೋಜಿಸಲಾಗಿದೆ.

ಸ್ಪರ್ಧೆಯ ವಿಷಯ

“ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರ ಹಾಗೂ ಪರಿಸರಕ್ಕಾಗಿ ಜೀವನಶೈಲಿ” (Solution to Plastic Pollution & Life-Lifestyle for Environment) - ಇದು ಸ್ಪರ್ಧೆಯ ವಿಷಯವಾಗಿದೆ.

ಶುಲ್ಕ?

ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ, ಸ್ಪರ್ಧೆಯಲ್ಲಿ ಭಾಗವಹಿಸಲು ಶಾಲಾ ಮಕ್ಕಳು ತಮ್ಮ ಸ್ವಂತ ಖರ್ಚಿನಲ್ಲಿ ಸ್ಪರ್ಧೆಗೆ ಬರತಕ್ಕದ್ದು, ಭಾಗವಹಿಸುವ ಶಾಲಾ ಮಕ್ಕಳಿಗೆ ಚಿತ್ರ ಬಿಡಿಸುವ ಹಾಳೆಗಳು ಮತ್ತು ಪ್ರಬಂಧ ಬರೆಯುವ ಹಾಳೆಗಳನ್ನು ಮಂಡಳಿಯ ವತಿಯಿಂದ ನೀಡಲಾಗುವುದು.

ಮಕ್ಕಳು ಏನೇನು ತರಬೇಕು?

ಚಿತ್ರಕಲೆಗೆ ಬಳಸುವ ಪೆನ್ಸಿಲ್, ಬಣ್ಣಗಳು (ಪೇಂಟಿಂಗ್ ಸಾಮಗ್ರಿಗಳು) ಇತ್ಯಾದಿ ಸಾಮಗ್ರಿಗಳು ಭಾಗವಹಿಸುವ ಮಕ್ಕಳೇ ತರಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಶಾಲಾ ಮಕ್ಕಳು, ಸ್ಪರ್ಧೆಯ ಅರ್ಧಗಂಟೆ ಮುಂಚಿತವಾಗಿ ಬಾಲಭವನ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ಹಾಜರಾಗಿರಬೇಕು. ಸ್ಪರ್ಧೆಗಳ ನಂತರ ಚಿತ್ರಕಲೆ ಮಾಡಿರುವ ಹಾಳೆಗಳು ಮತ್ತು ಪ್ರಬಂಧ ಬರೆದಿರುವ ಹಾಳೆಗಳು ಮಂಡಳಿಗೆ ನೀಡಬೇಕು. ಬಹುಮಾನ ವಿಜೇತರನ್ನು ತೀರ್ಪುಗಾರರು ಆಯ್ಕೆ ಮಾಡಲಿದ್ದು, ಅದೇ ಕೊನೆಯ ತೀರ್ಮಾನವಾಗಿರುತ್ತದೆ.

ಬಹುಮಾನ ವಿತರಣೆ ಯಾವಾಗ?

ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ಪ್ರತಿ ವಿಭಾಗದ ವಿಜೇತರಿಗೆ ಜೂನ್ 5 ರಂದು ಬೆಳಿಗ್ಗೆ 11 ಗಂಟೆಗೆ ಜ್ಞಾನ ಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು, ಬೆಂಗಳೂರು ಇಲ್ಲಿ ನಡೆಯಲಿರುವ ವಿಶ್ವ ಪರಿಸರ ದಿನಾಚಾರಣೆ 2023 ರಂದು ಗಣ್ಯರಿಂದ ವಿತರಣೆ ಮಾಡಲಾಗುವುದು. ಲಘು ಉಪಹಾರವನ್ನು ಸ್ಪರ್ಧೆಯಲ್ಲಿ ಭಾಗವಹಿಸುವ ಶಾಲಾ ಮಕ್ಕಳಿಗೆ ಸ್ಪರ್ಧೆಯ ನಂತರ ನೀಡಲಾಗುವುದು.

ನೋಂದಣಿ

ನೋಂದಣಿಗಾಗಿ ಮಂಡಳಿಯ ಪ್ರಾದೇಶಿಕ ಕಛೇರಿ ಬೆಂಗಳೂರು ನಗರ ದಕ್ಷಿಣ, 1 ನೇ ಮಹಡಿ, ನಿಸರ್ಗ ಭವನ, 7 ನೇ ‘ಡಿ’ ಕ್ರಾಸ್, ಶಿವನಗರ, ಬೆಂಗಳೂರು - 560010 ಅಥವಾ ಇ-ಮೇಲ್ bngcitysouth@kspcb.gov.in ಸಂಪರ್ಕಿಸಲು ಅಧಿಕೃತ ಪ್ರಕಟಣೆ ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು