ಕರ್ನಾಟಕ ಎಸ್‌ಎಸ್‌ಎಲ್‌ಸಿ ರಿಸಲ್ಟ್ ಪ್ರಕಟ, ಉತ್ತರ ಪತ್ರಿಕೆಯ ಸ್ಕ್ಯಾನ್ಡ್ ಪ್ರತಿ ಪಡೆಯಲು ಮೇ 16, ಮರುಮೌಲ್ಯಮಾಪನಕ್ಕೆ ಮೇ 22 ಕೊನೇ ದಿನ
May 09, 2024 01:48 PM IST
ಕರ್ನಾಟಕ ಎಸ್‌ಎಸ್‌ಎಲ್‌ಸಿ ರಿಸಲ್ಟ್ ಪ್ರಕಟಿಸಿದ ಮಂಡಲಿ ಅಧ್ಯಕ್ಷೆ ಎನ್ ಮಂಜುಶ್ರೀ, ಉತ್ತರ ಪತ್ರಿಕೆಯ ಸ್ಕ್ಯಾನ್ಡ್ ಪ್ರತಿ ಪಡೆಯಲು ಮೇ 16, ಮರುಮೌಲ್ಯಮಾಪನಕ್ಕೆ ಮೇ 22 ಕೊನೇ ದಿನ ಎಂದು ವೇಳಾಪಟ್ಟಿ ಪ್ರಕಟಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರ ಮೌಲ್ಯಮಾಪನವಾಗಿರುವ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ, ಮರುಎಣಿಕೆ, ಮರುಮೌಲ್ಯಮಾಪನ ಪ್ರಕ್ರಿಯೆ ನಡೆಸುವುದಕ್ಕೆ ಮಂಡಲಿಯು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಂತೆ, ಉತ್ತರ ಪತ್ರಿಕೆಯ ಸ್ಕ್ಯಾನ್ಡ್ ಪ್ರತಿ ಪಡೆಯಲು ಮೇ 16, ಮರುಮೌಲ್ಯಮಾಪನಕ್ಕೆ ಮೇ 22 ಕೊನೇ ದಿನವಾಗಿದೆ.
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ರ ಫಲಿತಾಂಶವನ್ನು ಗುರುವಾರ (ಮೇ 9) ಪ್ರಕಟಿಸಿದೆ. ಇದು kseab.karnataka.gov.in ಜಾಲತಾಣದ ಮೂಲಕ ಆಯಾ ಶಾಲಾ ಆಡಳಿತ ಮಂಡಳಿಯವರು ಮತ್ತು ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಫಲಿತಾಂಶವನ್ನು karresults.nic.in ಜಾಲತಾಣದಲ್ಲಿ ಪರಿಶೀಲಿಸಬಹುದು ಎಂದು ಮಂಡಲಿಯ ಅಧ್ಯಕ್ಷೆ ಎನ್ ಮಂಜುಶ್ರೀ ತಿಳಿಸಿದ್ದಾರೆ.
ಇದರ ಜೊತೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರ ಮೌಲ್ಯಮಾಪನವಾಗಿರುವ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ, ಮರುಎಣಿಕೆ, ಮರುಮೌಲ್ಯಮಾಪನ ಪ್ರಕ್ರಿಯೆ ನಡೆಸುವುದಕ್ಕೆ ಮಂಡಲಿಯು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಂತೆ, ಉತ್ತರ ಪ್ರತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಅರ್ಜಿ ಸಲ್ಲಿಕೆ ಇಂದು ಶುರುವಾಗಿದ್ದು, ಮೇ 16 ಕೊನೇ ದಿನವಾಗಿರುತ್ತದೆ. ಇದಕ್ಕೆ ಶುಲ್ಕ ಪಾವತಿಸಬೇಕಾಗಿದ್ದು, ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ ಇಲ್ಲದವರು ಆನ್‌ಲೈನ್‌ನಲ್ಲಿ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಅರ್ಜಿ ಸಲ್ಲಿಸಿದ ಬಳಿಕ, ಅಫ್‌ಲೈನ್ ಚಲನ್ ಡೌನ್‌ಲೋಡ್ ಮಾಡಿಕೊಂಡು ಶುಲ್ಕವನ್ನು ಬಿ1/ಕೆ1/ಬ್ಯಾಂಕಿಗೆ ಪಾವತಿಸಬೇಕು. ಶುಲ್ಕ ಪಾವತಿ ಕೂಡ ಇಂದು ಶುರುವಾಗಿದ್ದು, ಮೇ 17 ಕೊನೇ ದಿನವಾಗಿರಲಿದೆ.
ಉತ್ತರ ಪತ್ರಿಕೆಗಳಲ್ಲಿ ಅಂಕಗಳ ಮರುಎಣಿಕೆ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ಮೇ 13ಕ್ಕೆ ಶುರವಾಗಲಿದ್ದು ಮೇ 22 ಕೊನೇ ದಿನವಾಗಿರಲಿದೆ. ಇದಕ್ಕೂ ಶುಲ್ಕಪಾವತಿಸಬೇಕಾಗಿದ್ದು, ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ ಇಲ್ಲದವರು ಆನ್‌ಲೈನ್‌ನಲ್ಲಿ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಅರ್ಜಿ ಸಲ್ಲಿಸಿದ ಬಳಿಕ, ಅಫ್‌ಲೈನ್ ಚಲನ್ ಡೌನ್‌ಲೋಡ್ ಮಾಡಿಕೊಂಡು ಶುಲ್ಕವನ್ನು ಬಿ1/ಕೆ1/ಬ್ಯಾಂಕಿಗೆ ಪಾವತಿಸಬೇಕು. ಶುಲ್ಕಪಾವತಿಗೆ ಮೇ 23 ಕೊನೇ ದಿನ.
ಈ ಪ್ರಕ್ರಿಯೆಗೆ ಅರ್ಜಿ ಸಲ್ಲಿಕೆ ಆನ್‌ಲೈನ್ ಮೂಲಕ ಮಾತ್ರಲಭ್ಯವಿದ್ದು, ನೇರವಾಗಿ ಭೌತಿಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಮಂಡಲಿ ಹೇಳಿದೆ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಮರುಮೌಲ್ಯಮಾಪನ, ಸ್ಕ್ಯಾನ್ಡ್ ಪ್ರತಿ ಪಡೆಯಲು ವೇಳಾಪಟ್ಟಿ
ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಮರುಮೌಲ್ಯಮಾಪನ, ಸ್ಕ್ಯಾನ್ಡ್ ಪ್ರತಿ ಪಡೆಯಲು ವೇಳಾಪಟ್ಟಿ ಈ ರೀತಿ ಇದೆ.
ಉತ್ತರ ಪ್ರತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಅರ್ಜಿ ಸಲ್ಲಿಕೆ
ಆರಂಭ ದಿನಾಂಕ ಮೇ 9
ಕೊನೇ ದಿನಾಂಕ ಮೇ 16
ಉತ್ತರ ಪ್ರತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಅರ್ಜಿ ಸಲ್ಲಿಕೆಗೆ ಆಫ್‌ಲೈನ್ ಚಲನ್ ಮೂಲಕ ಶುಲ್ಕ ಪಾವತಿ
ಆರಂಭ ದಿನಾಂಕ ಮೇ 9
ಕೊನೇ ದಿನಾಂಕ ಮೇ 17
ಉತ್ತರ ಪತ್ರಿಕೆಗಳ ಮರು ಎಣಿಕೆ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ
ಆರಂಭ ದಿನಾಂಕ ಮೇ 13
ಕೊನೇ ದಿನಾಂಕ ಮೇ 22
ಉತ್ತರ ಪತ್ರಿಕೆಗಳ ಮರು ಎಣಿಕೆ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆಗೆ ಆಫ್‌ಲೈನ್ ಮೂಲಕ ಶುಲ್ಕ ಪಾವತಿಗೆ
ಕೊನೇ ದಿನಾಂಕ ಮೇ 23
ಮರುಎಣಿಕೆ ಉಚಿತ, ಸ್ಕ್ಯಾನ್ಡ್ ಪ್ರತಿ ಮತ್ತು ಮರುಮೌಲ್ಯಮಾಪನಕ್ಕೆ ಶುಲ್ಕ
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ಉತ್ತರ ಪತ್ರಿಕೆಗಳಲ್ಲಿ ಅಂಕಗಳ ಮರುಎಣಿಕೆಗೆ ಯಾವುದೇ ಶುಲ್ಕ ಇಲ್ಲ. ಅದು ಉಚಿತವಾಗಿದೆ. ಉಳಿದಂತೆ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಮತ್ತು ಮರುಮೌಲ್ಯಮಾಪನಕ್ಕೆ ಶುಲ್ಕ ಪಾವತಿಸಬೇಕು ಎಂದು ಮಂಡಲಿ ತಿಳಿಸಿದೆ.
ಸ್ಕ್ಯಾನ್ಡ್ ಪ್ರತಿ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಶುಲ್ಕ ಪಾವತಿಗೆ ಆನ್‌ಲೈನ್ ವಿಧಾನಕ್ಕೆ ಆದ್ಯತೆ ನೀಡಲಾಗಿದೆ. ಇದರಂತೆ, ಆನ್‌ಲೈನ್ ಮೂಲಕ ಕೆ1ರಲ್ಲಿ ಶುಲ್ಕ ಪಾವತಿಸಿದರೆ ಸ್ಕ್ಯಾನ್ಡ್ ಪ್ರತಿಯನ್ನು ಒಂದು ವಿಷಯಕ್ಕೆ 410 ರೂಪಾಯಿ (400 ರೂ ಶುಲ್ಕ + 10 ರೂ ಸೇವಾ ಶುಲ್ಕ) ಪಾವತಿಸಬೇಕು. ಮರುಮೌಲ್ಯಮಾಪನಕ್ಕೆ 810 ರೂಪಾಯಿ ( 800 ರೂಪಾಯಿ ಶುಲ್ಕ + 10 ರೂ ಸೇವಾ ಶುಲ್ಕ) ಪಾವತಿಸಬೇಕು.
ಆಫ್‌ಲೈನ್ ಚಲನ್ ಮೂಲಕ ಶುಲ್ಕ ಪಾವತಿಸುವವರು ಆನ್‌ಲೈನ್‌ನಲ್ಲಿ ಬಿ1ರ ಮೂಲಕ ಅರ್ಜಿ ಸಲ್ಲಿಸಬೇಕು. ಇಲ್ಲಿ ಸ್ಕ್ಯಾನ್ಡ್ ಪ್ರತಿಯನ್ನು ಒಂದು ವಿಷಯಕ್ಕೆ 420 ರೂಪಾಯಿ (400 ರೂ ಶುಲ್ಕ + 20 ರೂ ಸೇವಾ ಶುಲ್ಕ) ಪಾವತಿಸಬೇಕು. ಮರುಮೌಲ್ಯಮಾಪನಕ್ಕೆ 820 ರೂಪಾಯಿ ( 800 ರೂಪಾಯಿ ಶುಲ್ಕ + 20 ರೂ ಸೇವಾ ಶುಲ್ಕ) ಪಾವತಿಸಬೇಕು.
ಆಫ್‌ಲೈನ್ ಚಲನ್ ಮೂಲಕ ಶುಲ್ಕ ಪಾವತಿಸುವುದಾದರೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶುಲ್ಕಪಾವತಿಸಬೇಕು. ಇಲ್ಲಿ ಸ್ಕ್ಯಾನ್ಡ್ ಪ್ರತಿಯನ್ನು ಒಂದು ವಿಷಯಕ್ಕೆ 410 ರೂಪಾಯಿ (400 ರೂ ಶುಲ್ಕ + 10 ರೂ ಸೇವಾ ಶುಲ್ಕ) ಪಾವತಿಸಬೇಕು. ಮರುಮೌಲ್ಯಮಾಪನಕ್ಕೆ 810 ರೂಪಾಯಿ ( 800 ರೂಪಾಯಿ ಶುಲ್ಕ + 10 ರೂ ಸೇವಾ ಶುಲ್ಕ) ಪಾವತಿಸಬೇಕು.
ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಮಂಡಳಿಯ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಈ ರೀತಿ ಅಪ್ಲೋಡ್ ಆದ ಬಳಿಕ ಸಂಬಂಧಪಟ್ಟ ವಿದ್ಯಾರ್ಥಿಗೆ ಅವರು ಅರ್ಜಿಯಲ್ಲಿ ನೀಡಿದ ಮೊಬೈಲ್ ಸಂಖ್ಯೆಗೆ ಈ ಮಾಹಿತಿಯನ್ನು ರವಾನಿಸಲಾಗುತ್ತದೆ. ಅದನ್ನು ಸ್ವೀಕರಿಸಿದ ಬಳಿಕ ಅವರು ಉತ್ತರ ಪತ್ರಿಕೆಯನ್ನು ಮಂಡಲಿಯ ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.