logo
ಕನ್ನಡ ಸುದ್ದಿ  /  ಕರ್ನಾಟಕ  /  Magadi Leopard Captured: ಮಾಗಡಿ ಗವಿಗಂಗಾಧರೇಶ್ವರ ದೇಗುಲ ಬಳಿ ಬೋನಿಗೆ‌ ಬಿದ್ದ ಚಿರತೆ

Magadi Leopard captured: ಮಾಗಡಿ ಗವಿಗಂಗಾಧರೇಶ್ವರ ದೇಗುಲ ಬಳಿ ಬೋನಿಗೆ‌ ಬಿದ್ದ ಚಿರತೆ

HT Kannada Desk HT Kannada

Nov 15, 2023 07:03 AM IST

ಮಾಗಡಿ ಪಟ್ಟಣದಲ್ಲಿ ಇರಿಸಲಾಗಿದ್ದ ಬೋನಿಗೆ ಬಿದ್ದ ಹೆಣ್ಣು ಚಿರತೆ

    • Karnataka wildlife ರಾಮನಗರ( Ramnagar) ಜಿಲ್ಲೆ ಮಾಗಡಿ () Magadi)ಪಟ್ಟಣದಲ್ಲಿ ಕೆಲ ದಿನಗಳಿಂದ ಜನರಿಗೆ ಭೀತಿ ಮೂಡಿಸಿದ್ದ ಚಿರತೆಯನ್ನು( Leopard) ಸೆರೆ ಹಿಡಿಯುವಲ್ಲಿ ಕರ್ನಾಟಕ ಅರಣ್ಯ ಇಲಾಖೆ( Karnataka Forest Department)  ಕೊನೆಗೂ ಯಶಸ್ವಿಯಾಗಿದೆ.
ಮಾಗಡಿ ಪಟ್ಟಣದಲ್ಲಿ ಇರಿಸಲಾಗಿದ್ದ ಬೋನಿಗೆ ಬಿದ್ದ ಹೆಣ್ಣು ಚಿರತೆ
ಮಾಗಡಿ ಪಟ್ಟಣದಲ್ಲಿ ಇರಿಸಲಾಗಿದ್ದ ಬೋನಿಗೆ ಬಿದ್ದ ಹೆಣ್ಣು ಚಿರತೆ

ರಾಮನಗರ: ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ಕಾಣಿಸಿಕೊಂಡು ಭಯ ಮೂಡಿಸಿದ್ದ ಚಿರತೆ ಬಲೆಗೆ ಬಿದ್ದಿದೆ. ಅದೂ ದೀಪಾವಳಿ ದಿನವಾದ ಮಂಗಳವಾರದಂದು ದೇವಾಲಯದ ಸಮೀಪದಲ್ಲಿಯೇ ಚಿರತೆ ಸೆರೆ ಸಿಕ್ಕಿದೆ.

ಟ್ರೆಂಡಿಂಗ್​ ಸುದ್ದಿ

Raghunandan Kamath Death: ಐಸ್ ಕ್ರೀಮ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ನ್ಯಾಚುರಲ್ ಐಸ್ ಕ್ರೀಂನ ರಘುನಂದನ್ ಕಾಮತ್ ಇನ್ನಿಲ್ಲ

ಪ್ರಜ್ವಲ್‌ ರೇವಣ್ಣ ಕೇಸ್‌; ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ; ಕಾನೂನು ಕ್ರಮಕ್ಕೆ ತಕರಾರು ಇಲ್ಲ

ಬಂಟ್ವಾಳ: 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ, ಉಮೇಶ್ ಮಠದಬೆಟ್ಟು ಕಾರ್ಯಕ್ಕೆ ಶ್ಲಾಘನೆ

ಕರ್ನಾಟಕ ಹವಾಮಾನ ಮೇ 18; ಉತ್ತರ ಕನ್ನಡ, ತುಮಕೂರು, ಬೆಂಗಳೂರು ಸೇರಿ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌, ಉತ್ತರ ಒಳನಾಡಲ್ಲಿ ಹಲವೆಡೆ ಮಳೆ

ಕೆಲವು ದಿನಗಳಿಂದ ಜನತೆಗೆ ಭಯ ಮೂಡಿದಿದ್ದ ಐದು ವರ್ಷದ ಹೆಣ್ಣು ಚಿರತೆಯೊಂದು ಬೋನಿಗೆ‌ ಬಿದ್ದಿರುವುದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಮಾಗಡಿ ಪಟ್ಟಣದ ಗವಿ ಗಂಗಾಧರೇಶ್ವರ ದೇವಾಲಯದ ಬಳಿ ಇರಿಸಲಾಗಿದ್ದ ಬೋನಿಗೆ ಬಿದ್ದ ಚಿರತೆ ಸೆರೆಯಾಗಿದೆ.

ಹಲವು ದಿನಗಳಿಂದ ಮಾಗಡಿ ಪಟ್ಟಣದ ಸುತ್ತಮುತ್ತ ಚಿರತೆ ಉಪಟಳ‌ ನೀಡುತ್ತಿತ್ತು. ಚಿರತೆ ಹಾವಳಿಯಿಂದ ಬೇಸತ್ತಿದ್ದ ಮಾಗಡಿ ಜನತೆ, ಅರಣ್ಯಾಧಿಕಾರಿಗಳಿಗೆ ಚಿರತೆ ಹಿಡಿಯುವಂತೆ ಮನವಿ ಮಾಡಿದ್ದರು. ಕಳೆದ ಎರಡು ದಿನಗಳ ಹಿಂದೆ ದೇವಾಲಯದ ಪಕ್ಕದಲ್ಲಿ ಅರಣ್ಯಾಧಿಕಾರಿಗಳು ಬೋನು ಇರಿಸಿದ್ದರು. ಮಂಗಳವಾರ ಮುಂಜಾನೆ ಚಿರತೆ ಬೋನಿಗೆ ಬಿದ್ದಿದೆ.

ಕರ್ನಾಟಕ ಅರಣ್ಯ ಇಲಾಖೆಗೆ ಸ್ಥಳೀಯರು ದೂರು ನೀಡಿದ್ದರಿಂದ ರಾಮನಗರ ವಿಭಾಗದ ಅಧಿಕಾರಿಗಳು ತಂಡವನ್ನು ರಚಿಸಿದ್ದರು. ಅಲ್ಲದೇ ಬೋನು ಇರಿಸಿ ವಿಚಕ್ಷಣೆ ಮಾಡುತ್ತಲೇ ಇದ್ದರು. ಚಿರತೆ ಇದೇ ಭಾಗದಲ್ಲಿ ಇರುವ ಮಾಹಿತಿಯೂ ಇದ್ದುದರಿಂದ ಬರುವ ನಿರೀಕ್ಷೆಯಿತ್ತು. ಆಹಾರ ಅರಸಿ ಬಂದ ಚಿರತೆ ಬೋನಿನಲ್ಲಿ ಸೆರೆಯಾಗಿದೆ.

ಮಾಗಡಿ ಪಟ್ಟಣದ ಜನರು ಚಿರತೆ ನೋಡಲು ಮುಗಿಬಿದ್ದಿದ್ದರು. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾವನದುರ್ಗ ಅರಣ್ಯ ಪ್ರದೇಶಕ್ಕೆ ಚಿರತೆಯನ್ನು ಬಿಡುವುದಾಗಿ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ