Elephants captured: ನಾಗರಹೊಳೆ ವ್ಯಾಪ್ತಿಯಲ್ಲಿ ಪುಂಡಾಟ ನಡೆಸುತ್ತಿದ್ದ 2 ಭಾರೀ ಸಲಗ 3 ದಿನ ಅಂತರದಲ್ಲಿ ಸೆರೆ
- ನಾಗರಹೊಳೆ(Nagarahole) ರಾಷ್ಟ್ರೀಯದ ಅರಣ್ಯದಂಚಿನ ಗ್ರಾಮಗಳು, ಕೃಷಿಭೂಮಿಗೆ ನುಗ್ಗಿ ಪುಂಡಾಟ ನಡೆಸುತ್ತಿದ್ದ ಭಾರೀ ಗಾತ್ರದ ಎರಡು ಸಲಗಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಒಂದು ಆನೆ ರೇಡಿಯೋ ಕಾಲರ್‌ನೊಂದಿಗೆ ಕಾಡು ಸೇರಿದ್ದರೆ ಇನ್ನೊಂದು ಆನೆಯನ್ನು ಶಿಬಿರಕ್ಕೆ ಹಾಕಲಾಗಿದೆ. ಶಿಬಿರದ ಆನೆ ಪಳಗಿಸುವ ಚಟುವಟಿಕೆ ಶುರುವಾಗಲಿದೆ. ಕಾರ್ಯಾಚರಣೆ ಚಿತ್ರನೋಟ ಇಲ್ಲಿದೆ.

(1 / 6)
ಇದು ಭಾರೀ ಗಾತ್ರದ ಆನೆ. ಪುಂಡಾಟ ಮಾಡಿ ಸ್ಥಳೀಯರ ಜತೆಗೆ ಅರಣ್ಯ ಇಲಾಖೆಯವರಿಂದಲೂ ತಪ್ಪಿಸಿಕೊಳ್ಳುತ್ತಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ವಲಯ ವ್ಯಾಪ್ತಿಯಲ್ಲಿ ಪುಂಡಾಟ ಮೆರೆಯುತ್ತಲೇ ಇತ್ತು.
(2 / 6)
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಳ್ಳಿ ವನ್ಯಜೀವಿ ವಲಯದ ಅಗಸನಹುಂಡಿ ಶಾಖೆಯ ಗಡಿಭಾಗದಲ್ಲಿರೈತರ ಜಮೀನಿಗೆ ದಾಟಿ ಬೆಳೆನಷ್ಟ ಪಡಿಸುತ್ತಿದ್ದ 45ವರ್ಷದ ಸಲಗವನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿಪರಿಪಾಲಕರ ಆದೇಶದ ಮೇರೆಗೆ ಆನೆಗಳ ತಂಡದೊಂದಿಗೆ ಅರಣ್ಯ ಸಿಬ್ಬಂದಿ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದರು.
(3 / 6)
ಸೆರೆ ಹಿಡಿದ ಆನೆಯನ್ನು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ ಚಿಕ್ಕನರಗುಂದ ಅವರ ಮಾರ್ಗದರ್ಶನದಲ್ಲಿ ಸಾಕಾನೆಗಳ ಸಹಕಾರದಿಂದ ಆನೆ ಶಿಬಿರಕ್ಕೆ ಸಾಗಿಸಲು ಸಿದ್ದತೆ ಮಾಡಿಕೊಳ್ಳಲಾಯಿತು.
(4 / 6)
ಆನೆಯ ಆಗಿಂದಾಗೆ ವೀರನಹೋಸಳ್ಳಿ ವನ್ಯಜೀವಿ ವಲಯದಲ್ಲಿ ಇರುವರೈಲ್ವೇ ಬ್ಯಾರಿಕೇಡ್ ಹಾಗೂ ಸ್ಟೀಲ್ ರೋಪ್ ಬ್ಯಾರಿಕೇಡ್ ಅನ್ನು ಮುರಿದು ದಾಟಿ ರೈತರ ಬೆಳೆನಾಶಪಡಿಸಿರುವುದು ಕಂಡುಬಂದಿತ್ತು ಆನೆಯನ್ನು ಸೆರೆಹಿಡಿಯುವ ಕಾರ್ಯದಲ್ಲಿಸಾಕಾನೆಗಳಾದ ಆಭಿಮನ್ಯು, ಮಹೇಂದ್ರ, ಮಹಾರಾಷ್ಟ್ರ ಭೀಮ್, ಕರ್ನಾಟಕ ಭೀಮ, ಅಶ್ವತ್ಥಾಮ,ಹರ್ಷ ಹಾಗೂ ಅರಣ್ಯ ಸಿಬ್ಬಂದಿಗಳು ಭಾಗಿಯಾಗಿದ್ದರು. ಆನೆಯನ್ನು ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು.
(5 / 6)
ನಾಗರಹೊಳೆಗೆ ಹೊಂದಿಕೊಂಡಂತೆ ಇರುವ ಎಚ್‌ಡಿಕೋಟೆ ತಾಲ್ಲೂಕಿನ ಭೀಮನಹಳ್ಳಿ ಗಿರಿಜನ ಪುನರ್ ವಸತಿ ಕೇಂದ್ರಕ್ಕೆ ಹೊಂದಿಕೊಂಡಂತೆ ನೀಡಿರುವ ಜಮೀನುಗಳಲ್ಲಿ ಬೆಳೆ ಬೆಳೆಯಾಗಿದ್ದು, ಅಲ್ಲಿ ಗದ್ದಲ ಮಾಡುತ್ತಿದ್ದ ಆನೆಯನ್ನು ಎರಡು ದಿನದ ಹಿಂದೆ ಸೆರೆ ಹಿಡಿಯಲಾಗಿದೆ.
ಇತರ ಗ್ಯಾಲರಿಗಳು