logo
ಕನ್ನಡ ಸುದ್ದಿ  /  ಕರ್ನಾಟಕ  /  Ashwath Narayan: ಬಿಜೆಪಿ ಭಾರತೀಯರ ಪಕ್ಷ, ಕಾಂಗ್ರೆಸ್ ಇಂಪೋರ್ಟೆಡ್ ಪಕ್ಷ; ಅಶ್ವತ್ಥ ನಾರಾಯಣ

Ashwath Narayan: ಬಿಜೆಪಿ ಭಾರತೀಯರ ಪಕ್ಷ, ಕಾಂಗ್ರೆಸ್ ಇಂಪೋರ್ಟೆಡ್ ಪಕ್ಷ; ಅಶ್ವತ್ಥ ನಾರಾಯಣ

Meghana B HT Kannada

Apr 22, 2023 02:58 PM IST

ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ

    • ದೇಶದ ಬಗ್ಗೆ ಕಾಳಜಿ ಇರುವ ಬಿಜೆಪಿ ಭಾರತೀಯರ ಪಕ್ಷವಾಗಿದೆ. ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ಇಂಪೋರ್ಟೆಡ್ ಪಕ್ಷವಾಗಿದೆ ಎಂದು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ (Malleshwaram constituency) ಬಿಜೆಪಿ ಅಭ್ಯರ್ಥಿ ಆಗಿರುವ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ (Dr CN Ashwath Narayan) ಕುಟುಕಿದ್ದಾರೆ.
ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ
ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ

ಬೆಂಗಳೂರು: ದೇಶದ ಬಗ್ಗೆ ಕಾಳಜಿ ಇರುವ ಬಿಜೆಪಿ ಭಾರತೀಯರ ಪಕ್ಷವಾಗಿದೆ. ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ಇಂಪೋರ್ಟೆಡ್ ಪಕ್ಷವಾಗಿದೆ ಎಂದು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ (Malleshwaram constituency) ಬಿಜೆಪಿ ಅಭ್ಯರ್ಥಿ ಆಗಿರುವ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ (Dr CN Ashwath Narayan) ಕುಟುಕಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Karnataka Rains: ಬೆಂಗಳೂರು, ಮೈಸೂರು, ಕೊಡಗು ಸಹಿತ ಹಲವೆಡೆ ಒಂದು ವಾರ ಭಾರೀ ಮಳೆ, ಆರೆಂಜ್‌ ಅಲರ್ಟ್‌

Tumkur News: ಮಾಗಡಿಗೆ ಕುಡಿಯುವ ನೀರು, ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ತುಮಕೂರಲ್ಲಿ ಭಾರೀ ವಿರೋಧ

Indian Railway: ಹುಬ್ಬಳ್ಳಿ ನೈರುತ್ಯ ವಲಯದಿಂದ ಬೇಸಿಗೆಯಲ್ಲಿ ವಿಶೇಷ ರೈಲು ಡಬಲ್‌, ಆದಾಯವೂ ಶೇ 134ಪಟ್ಟು ಏರಿಕೆ

Mandya News: ಮಂಡ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕನ್ನಡದಲ್ಲೇ ಹೆಚ್ಚು ಅನುತ್ತೀರ್ಣ, ಮಕ್ಕಳ ಜತೆಗೆ ಶಿಕ್ಷಕರಿಗೂ ಕಾರ್ಯಾಗಾರ !

ಸುಬ್ರಹ್ಮಣ್ಯ ನಗರದ 'ಇ' ಬ್ಲಾಕ್‌ನ ಹಲವೆಡೆಗಳಲ್ಲಿ ಇಂದು (ಏ 22) ಬೆಳಿಗ್ಗೆ ಮನೆಮನೆಗೆ ತೆರಳಿ ಮತ ಯಾಚನೆ ಮಾಡಿ ಮಾತನಾಡಿದ ಅವರು, ಬಿಜೆಪಿ ನಿಜವಾದ ಅರ್ಥದಲ್ಲಿ ಜನರಿಗೆ ಸ್ಪಂದಿಸುತ್ತಿದೆ. ಮಲ್ಲೇಶ್ವರ ಕ್ಷೇತ್ರವನ್ನು ಜಗತ್ತಿನಲ್ಲೇ ಮಾದರಿ ಕ್ಷೇತ್ರವೆನ್ನುವಂತೆ ಅಭಿವೃದ್ಧಿ ಪಡಿಸುವುದು ತಮ್ಮ ಕನಸಾಗಿದೆ ಎಂದು ಅವರು ಭರವಸೆ ನೀಡಿದರು.

ಕೋವಿಡ್ ನಂತರ ತಂತ್ರಜ್ಞಾನದ ಬಳಕೆ ಮುಂಚೂಣಿಗೆ ಬಂದಿದೆ. ನಗರ ನಿರ್ಮಾಣದ ವಿಧಾನವೂ ಈಗ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರನ್ನು ಎಲ್ಲ ವರ್ಗಗಳ ಜನರ ಕೈಗೂ ಎಟುಕುವಂತಹ ನಗರವನ್ನಾಗಿ ರೂಪಿಸುವುದು ಬಿಜೆಪಿಯ ಹೆಬ್ಬಯಕೆಯಾಗಿದೆ ಎಂದು ಅವರು ನುಡಿದರು.

ಬಿಜೆಪಿಯು ಕೋವಿಡ್ ನಿರ್ವಹಣೆ, ಗಡಿ ಸುರಕ್ಷೆ, ಕುಡಿಯುವ ನೀರು, ಶೌಚಾಲಯ, ಶಿಕ್ಷಣ, ಹೂಡಿಕೆ, ಉದ್ಯಮಶೀಲತೆ ಹೀಗೆ ಎಲ್ಲದರಲ್ಲೂ ಸಮಗ್ರ ಪ್ರಗತಿಯನ್ನು ಸಾಧಿಸುವಂತಹ ಯೋಜನೆಗಳನ್ನು ರೂಪಿಸಿದೆ. ಉಳಿದ ಪಕ್ಷಗಳಿಗೆ ಇಂತಹ ಒಂದು ಸಣ್ಣ ಕಲ್ಪನೆಯೂ ಇಲ್ಲ ಎಂದು ಅಶ್ವತ್ಥ ನಾರಾಯಣ ಅವರು ಟೀಕಿಸಿದರು.

ಪಾದಯಾತ್ರೆಯ ಉದ್ದಕ್ಕೂ ಭಾರತ್ ಮಾತಾ ಕೀ ಜೈ, ವೋಟು ಕೊಡಿ ವೋಟು ಕೊಡಿ-ಬಿಜೆಪಿಗೆ ವೋಟು ಕೊಡಿ, ಬರ್ತಾರಣ್ಣ ಬರ್ತಾರೆ-ಅಶ್ವತ್ಥಣ್ಣ ಬರ್ತಾರೆ ಮುಂತಾದ ಘೋಷಣೆಗಳು ಮೊಳಗಿದವು. ಬಿಜೆಪಿ ಮುಖಂಡರಾದ ಪಾಲಿಕೆ ಮಾಜಿ ಸದಸ್ಯ ಮಂಜುನಾಥ, ವಾರ್ಡ್ ಅಧ್ಯಕ್ಷ ಯೋಗೇಶ ಸೇರಿದಂತೆ ಇತರರು ಇದ್ದರು.

ಪ್ರತಿದಿನವೂ ಅಶ್ವತ್ಥ ನಾರಾಯಣ ಅವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಪಾದಯಾತ್ರೆ, ರೋಡ್​ ಶೋ ನಡೆಸುತ್ತಾ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡುತ್ತಿದ್ದಾರೆ. ನಿನ್ನೆ (ಏ 21) ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ರೋಡ್‌ ಶೋ ನಡೆಸಿ, ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಅವರ ಪರವಾಗಿ ಮತಯಾಚಿಸಿದರು.

ಟ್ವೀಟ್​ನಲ್ಲಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿರುವ ಅಶ್ವತ್ಥ ನಾರಾಯಣ, ನಮ್ಮ ಸರ್ಕಾರವು ಹಿಂದುಳಿದವರ ಮತ್ತು ಪರಿಶಿಷ್ಟ ಸಮುದಾಯದವರ ಏಳಿಗೆಗೆ ಬದ್ಧವಾಗಿದೆ, ಆದ್ದರಿಂದಲೇ ಜನ ಬಿಜೆಪಿಯೇ ಭರವಸೆ ಎನ್ನುತ್ತಿದ್ದಾರೆ. ಆದರೆ, ಕಾಂಗ್ರೆಸ್​ ಎಲ್ಲರನ್ನೂ ತನ್ನ ವೋಟ್ ಬ್ಯಾಂಕ್ ಎಂದುಕೊಂಡು, ಅಂದಿನಿಂದ ಇಂದಿನವರೆಗೂ ತನ್ನ ಕೊಳಕು ರಾಜಕೀಯ ಮಾಡಿಕೊಂಡು ಬಂದಿರುವುದರಿಂದಲೇ ಆ ಪಕ್ಷದ ಇಂದಿನ ಅಧಃಪತನವು ನಮ್ಮ ಕಣ್ಣ ಮುಂದಿದೆ ಎಂದಿದ್ದಾರೆ.

ಇಡೀ ದೇಶದಲ್ಲಿ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹೂಡಿಕೆಯು ಹರಿದು ಬಂದಿದ್ದು ನಮ್ಮ ಕರ್ನಾಟಕಕ್ಕೆ. ಡಬಲ್ ಎಂಜಿನ್ ಸರ್ಕಾರದ ಉದ್ಯಮಸ್ನೇಹಿ ವಾತಾವರಣದಿಂದ ರಾಜ್ಯದಲ್ಲಿ ಅತಿ ಹೆಚ್ಚು ಉದ್ಯಮಗಳು ಸ್ಥಾಪನೆಗೊಂಡು ರಾಜ್ಯದ ಯುವಜನತೆಗೆ ಉದ್ಯೋಗ ನೀಡಿದ್ದು ಬಿಜೆಪಿಯೇ ಭರವಸೆ ಎಂದು ಜನ ಮೆಚ್ಚುತ್ತಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ