logo
ಕನ್ನಡ ಸುದ್ದಿ  /  ಕರ್ನಾಟಕ  /  Aap On Pu Result: ಪಿಯುಸಿ ಫಲಿತಾಂಶ ಕುಸಿತ: ಕಳಪೆ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳ ಭವಿಷ್ಯವನ್ನ ಅಂಧಕಾರಕ್ಕೆ ತಳ್ಳಿದ ಸರ್ಕಾರ: ಎಎಪಿ ಆರೋಪ

AAP on PU Result: ಪಿಯುಸಿ ಫಲಿತಾಂಶ ಕುಸಿತ: ಕಳಪೆ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳ ಭವಿಷ್ಯವನ್ನ ಅಂಧಕಾರಕ್ಕೆ ತಳ್ಳಿದ ಸರ್ಕಾರ: ಎಎಪಿ ಆರೋಪ

Raghavendra M Y HT Kannada

Apr 22, 2023 06:47 PM IST

ಬೆಂಗಳೂರಿನ ಎಎಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬ್ರಿಜೇಶ್ ಕಾಳಪ್ಪ ಹಾಗೂ ಇತರೆ ನಾಯಕರು.

  • ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಪಂಚರ್ ಸೂರ್ಯ ಅವರು, ಪಂಚರ್ ಹಾಕುವವರು ಏನ್ರಿ ಮಾಡ್ತಾರೆ ಎಂದಿದ್ದರು. ಆದ್ರೆ ನಿನ್ನೆ (ಏ.21, ಶುಕ್ರವಾರ) ಬಂದಿರುವ ಫಲಿತಾಂಶದಲ್ಲಿ ಅವರದೇ ಕ್ಷೇತ್ರದ ತಬಸುಂ ಶೇಖ್ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಬಂದಿದ್ದಾರೆ ಎಂದು ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ.

ಬೆಂಗಳೂರಿನ ಎಎಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬ್ರಿಜೇಶ್ ಕಾಳಪ್ಪ ಹಾಗೂ ಇತರೆ ನಾಯಕರು.
ಬೆಂಗಳೂರಿನ ಎಎಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬ್ರಿಜೇಶ್ ಕಾಳಪ್ಪ ಹಾಗೂ ಇತರೆ ನಾಯಕರು.

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ (PUC Result) ನಿನ್ನೆ (ಏ.21, ಶುಕ್ರವಾರ) ಪ್ರಕಟವಾಗಿದ್ದು, ಸಾರ್ವಕಾಲಿಕ ದಾಖಲೆಯ ಶೇ.74.67 ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ಆದರೆ ಈ ಬಾರಿ ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳ ಸಾಧನೆ ಕಡಿಮೆ ಎಂದು ಆಮ್ ಆದ್ಮಿ ಪಾರ್ಟಿ (Aam Aadmi Party) ನಾಯಕರು ಆರೋಪಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪ್ರಜ್ವಲ್ ರೇವಣ್ಣ ಕೇಸ್‌; ಜರ್ಮನಿಯಿಂದ ಲಂಡನ್‌ಗೆ ಹೊರಟ್ರಾ ಹಾಸನ ಸಂಸದ, 2 ದಿನಗಳ 10 ವಿದ್ಯಮಾನಗಳು

Raghunandan S Kamath Death: ಐಸ್ ಕ್ರೀಮ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ನ್ಯಾಚುರಲ್ ಐಸ್ ಕ್ರೀಂನ ರಘುನಂದನ್ ಕಾಮತ್ ಇನ್ನಿಲ್ಲ

ಪ್ರಜ್ವಲ್‌ ರೇವಣ್ಣ ಕೇಸ್‌; ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ; ಕಾನೂನು ಕ್ರಮಕ್ಕೆ ತಕರಾರು ಇಲ್ಲ

ಬಂಟ್ವಾಳ: 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ, ಉಮೇಶ್ ಮಠದಬೆಟ್ಟು ಕಾರ್ಯಕ್ಕೆ ಶ್ಲಾಘನೆ

ನಗರ ಎಎಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್‌ ಕಾಳಪ್ಪ (Brijesh Kalappa), ಕಳಪೆ ಶಿಕ್ಷಣ ವ್ಯವಸ್ಥೆಯಿಂದಾಗಿ ಬಿಜೆಪಿ ಸರ್ಕಾರ (BJP Govt) ಪಿಯು ಮಕ್ಕಳ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳಿದೆ ಎಂದು ದೂರಿದ್ದಾರೆ.

ಕರ್ನಾಟಕದ ಪಿಯುಸಿ ಫಲಿತಾಂಶ ಬಂದಿದ್ದು. ಖಾಸಗಿ ಶಾಲೆಗಳಲ್ಲಿ ಶೇ. 76.67 ರಷ್ಟು ಫಲಿತಾಂಶ ಹಾಗೂ ಸರ್ಕಾರಿ ಶಾಲೆಗಳಲ್ಲಿ ಶೇ. 63.63 ರಷ್ಟು ಫಲಿತಾಂಶ ಬಂದಿದೆ. ಆದರೆ ದೆಹಲಿಯ ಸರ್ಕಾರಿ ಕಾಲೇಜುಗಳಲ್ಲಿ ನೂರಕ್ಕೆ ನೂರಷ್ಟು ಫಲಿತಾಂಶ ಬರುತ್ತಿದೆ ಎಂದು ಹೇಳಿದ್ದಾರೆ.

ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳ ಫಲಿತಾಂಶವನ್ನು ಹೋಲಿಕೆ ಮಾಡುವುದು ತುಂಬಾ ಅವಶ್ಯಕ ಇದೆ. ಯಾಕಂದ್ರೆ ಇಂದು ನಮ್ಮ ಆಮ್ ಆದ್ಮಿ ಪಕ್ಷದ ನಿಂತಿರುವುದೇ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯ ವಿಚಾರದಲ್ಲಿ. ಹಾಗಾಗಿ ಹೋಲಿಕೆಯನ್ನ ಮಾಡಲಾಗಿದೆ.

ಕಳೆದ ಕೊವಿಡ್ ಸಮಯದಲ್ಲಿ ಎಲ್ಲಾ ರಾಜ್ಯದಲ್ಲೂ ಮಕ್ಕಳನ್ನ ತೇರ್ಗಡೆ ಮಾಡಲಾಗಿತ್ತು. 2021ರಲ್ಲಿ ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಶೇ. 99.96 ರಷ್ಟು ಫಲಿತಾಂಶ ಬಂದಿದೆ. 2018 - ಶೇ. 90.64, 2019 - ಶೇ. 4.24, 2020 - ಶೇ. 97.92, 2021 - ಶೇ. 99.96 ರಷ್ಟು ಫಲಿತಾಂಶಗಳು ಬಂದಿದೆ. ಆದರೆ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ಶೇ. 63.63 ರಷ್ಟು ಪಿಯುಸಿ ಫಲಿತಾಂಶ ಬಂದರೆ. ದೆಹಲಿಯಲ್ಲಿ ಶೇ. 99.96 ರಷ್ಟು ಬಂದಿದೆ. ಅಂದರೆ 100 ಕ್ಕೆ 100 ರಷ್ಟು ಸರ್ಕಾರಿ ಶಾಲೆಗಳ ರಿಸಲ್ಟ್ ಇದಾಗಿದೆ ಅಂತ ವಿವರಿಸಿದ್ದಾರೆ.

ದೆಹಲಿ ಸರ್ಕಾರಿ ಶಾಲೆಗಳ ವಿವರಗಳನ್ನು ನೋಡುತ್ತಿದ್ದರೆ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳ ಅಂಕಗಳೇ ಹೆಚ್ಚಾಗಿವೆ. ಸರ್ಕಾರಿ ಶಾಲೆಗಳನ್ನ ನೀವು (ಬಿಜೆಪಿ ಸರ್ಕಾರ) ಮಾದರಿ ಶಾಲೆಗಳನ್ನಾಗಿ ಮಾಡಬಹುದು. ರಾಜ್ಯದಲ್ಲಿ ಪ್ರತಿ ವರ್ಷ ಪೋಷಕರಿಗೆ ತಮ್ಮ ಮಕ್ಕಳ ಶಿಕ್ಷಣದ 50,000 ರಿಂದ 1 ಲಕ್ಷದವರೆಗೆ ಶುಲ್ಕವನ್ನ ಕೊಟ್ಟು ಸೀಟ್ ತೆಗೆದುಕೊಳ್ಳುವ ಸ್ಥಿತಿ ಎದುರಾಗಿದೆ.

ಹಾಗಾಗಿ ಇಂದು ಆಮ್ ಆದ್ಮಿ ಯಾಕೆ ಇದನೆಲ್ಲಾ ಹೇಳ್ತಾ ಇದೆ ಅಂದ್ರೆ ಕರ್ನಾಟಕದ ಸರ್ಕಾರಿ ಶಾಲೆಗಳಿಗೆ ಹೊಸ ರೂಪವನ್ನ ಕೊಟ್ಟು ತಮ್ಮ ಮಕ್ಕಳಿಗೆ ಉತ್ತಮ ಫಲಿತಾಂಶ ಜೊತೆಗೆ ಭವಿಷ್ಯವನ್ನ ನೀಡುವುದು ಆಮ್ ಆದ್ಮಿ ಪಕ್ಷದ ಧೇಯವಾಗಿದೆ. ಅಲ್ಲದೇ ಪರೀಕ್ಷೆಗಳಲ್ಲಿ ಮಕ್ಕಳ ಫೇಲ್ ಆಗ್ತಾ ಇದ್ದಾರೆ. ಹೀಗಾಗಿ ಇಲ್ಲಿನ ವ್ಯವಸ್ಥೆಯನ್ನ ಬದಲಿಸಬೇಕಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಪಂಚರ್ ಸೂರ್ಯ ಅವರು ಪಂಚರ್ ಹಾಕುವವರು ಏನ್ರಿ ಮಾಡ್ತಾರೆ ಎಂದಿದ್ದರು. ಆದ್ರೆ ನಿನ್ನೆ (ಏ.21, ಶುಕ್ರವಾರ) ಬಂದಿರುವ ಫಲಿತಾಂಶದಲ್ಲಿ ಅವರದೇ ಕ್ಷೇತ್ರದ ತಬಸುಂ ಶೇಖ್ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಬಂದಿದ್ದಾರೆ. ಕನಿಷ್ಠ ಪಕ್ಷ ಅವರಿಗೆ ಮಾನವೀಯತೆ ಇದ್ರೆ ಅವರನ್ನ ಭೇಟಿ ಮಾಡಿ ಕ್ಷಮೆಯಾಚಿಸಿ, ಶುಭಶಾಯಗಳನ್ನ ತಿಳಿಸಲಿ ಎಂದು ಎಂದು ಬ್ರಿಜೇಶ್‌ ಕಾಳಪ್ಪ ಹೇಳಿದ್ದಾರೆ. ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿಗಳಾದ ದರ್ಶನ್ ಜೈನ್ ಹಾಗೂ ಗಂಗಾದರ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ