logo
ಕನ್ನಡ ಸುದ್ದಿ  /  ಕರ್ನಾಟಕ  /  ಸಾಮಾಜಿಕ ಮಾಧ್ಯಮಗಳಲ್ಲಿ ಅರ್ಜುನ ಆನೆಗೆ ಜನರ ಅಂತಿಮ ನಮನ; ಅಂಬಾರಿ ಹೊತ್ತ ಧೀರನಿಗೆ ಕಣ್ಣೀರಿನ ವಿದಾಯ ಹೇಳಿದ ಕರುನಾಡ ಜನತೆ

ಸಾಮಾಜಿಕ ಮಾಧ್ಯಮಗಳಲ್ಲಿ ಅರ್ಜುನ ಆನೆಗೆ ಜನರ ಅಂತಿಮ ನಮನ; ಅಂಬಾರಿ ಹೊತ್ತ ಧೀರನಿಗೆ ಕಣ್ಣೀರಿನ ವಿದಾಯ ಹೇಳಿದ ಕರುನಾಡ ಜನತೆ

Reshma HT Kannada

Dec 06, 2023 08:03 AM IST

ಅರ್ಜುನನಿಗೆ ಅಂತಿಮ ನಮನ

    • ಹಾಸನ ಜಿಲ್ಲೆಯಲ್ಲಿ ನಡೆದ ಕಾರ್ಯಾಚಾರಣೆ ವೇಳೆ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವನ್ನಪ್ಪಿದೆ. ಅರ್ಜುನನ ಸಾವಿಗೆ ಕರುನಾಡಿನ ಜನತೆ ಕಂಬನಿ ಮಿಡಿಯುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅಂತಿಮ ಜನರ ಸಲ್ಲಿಸುತ್ತಿದ್ದಾರೆ. 
ಅರ್ಜುನನಿಗೆ ಅಂತಿಮ ನಮನ
ಅರ್ಜುನನಿಗೆ ಅಂತಿಮ ನಮನ

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತು ಗಮನ ಸೆಳೆದಿದ್ದ ಅರ್ಜುನ ಆನೆ ಕಳೆದೆರಡು ದಿನಗಳ ಹಿಂದೆ ಸಾವನ್ನಪ್ಪಿದ್ದಾನೆ. ಹಾಸನ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರ್ಜುನ ಕೊನೆಯುಸಿರೆಳೆದಿದ್ದಾನೆ. ದಸರೆಯ ಪ್ರಮುಖ ಆಕರ್ಷಣೆಯಾಗಿದ್ದ ಅರ್ಜುನನ ಆಕಸ್ಮಿಕ ಸಾವು ಕರುನಾಡಿನ ಜನತೆ ಕಣ್ಣೀರು ಹಾಕುವಂತೆ ಮಾಡಿದೆ. ಕರ್ನಾಟಕದಾದ್ಯಂತ ಜನರು ಸಾಮಾಜಿಕ ಜಾಲತಾಣಗಳಲ್ಲಿ ಅರ್ಜುನ ಫೋಟೊ ಹಂಚಿಕೊಳ್ಳುವ ಮೂಲಕ, ಅರ್ಜುನನ ಬಗ್ಗೆ ಬರೆದುಕೊಳ್ಳುವ ಮೂಲಕ ಕಂಬನಿ ಮಿಡಿಯುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Environment day: ವಿಶ್ವ ಪರಿಸರ ದಿನಕ್ಕೆ ಜಾಗತಿಕ ತಾಪಮಾನದ ಮೇಲೆ ಪ್ರಬಂಧ ಬರೆಯಿರಿ, 5000 ರೂ. ಬಹುಮಾನ ಪಡೆಯಿರಿ

Vijayapura News: ವಿಜಯಪುರ ಬಿಎಲ್‌ಡಿಇಯಲ್ಲಿ ಕೌಶಲ್ಯಗಳ ಸಂಗಮ, ತಾಂತ್ರಿಕ ಹಬ್ಬದ ಸಡಗರ

Museums Day 2024: ಬೆಂಗಳೂರು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ಮೈಸೂರು ಮ್ಯೂಸಿಯಂಗಳಿಗೆ ಹೊಸ ರೂಪ, ಏನಿದರ ವಿಶೇಷ

Bangalore Mysore Expressway: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಮೊಬೈಲ್ ನಲ್ಲಿ ಮಾತಾಡಿಕೊಂಡು ಡ್ರೈವ್ ಮಾಡಿದರೆ ದಂಡ ಗ್ಯಾರಂಟಿ

ಇನ್ನೊಂದೆಡೆ ಅರ್ಜುನನ ಸಾವಿನ ಬಗ್ಗೆ ಆಕ್ರೋಶವು ವ್ಯಕ್ತವಾಗಿದ್ದು, ಜನರ ಆಕ್ರೋಶದ ನಡುವೆಯೇ ಅರ್ಜುನನ ಅಂತ್ಯಕ್ರಿಯೆ ನೆರವೇರಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅರ್ಜುನನಿಗೆ ಅಂತಿಮ ವಿದಾಯ ಹೇಳಲಾಯಿತು.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಳಸೂರು ವಲಯದ ದಬ್ಬಳ್ಳಿಕಟ್ಟೆ ಕೆಎಫ್‌ಡಿಸಿ ನಡುತೋಪಿನ ಪ್ರದೇಶದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.

ಸಾಮಾಜಿಕ ಜಾಲತಾಣಗಳಲ್ಲಿ ಜನರ ಕಂಬನಿ

ಅರ್ಜುನ ಆನೆಯ ಸಾವಿಗೆ ಎಕ್ಸ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌, ವ್ಯಾಟಾಆಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮೊನ್ನೆಯಿಂದ ಅರ್ಜುನನ ಫೋಟೊ ಹಂಚಿಕೊಂಡು ಕಂಬನಿ ಸುರಿಸುತ್ತಿದ್ದಾರೆ ಕರ್ನಾಟಕದ ಜನತೆ. ಹಲವರು ಅರ್ಜುನನ ಬಗ್ಗೆ ಬರೆದುಕೊಂಡು ಫೋಟೊ ಹಂಚಿಕೊಳ್ಳುವ ಮೂಲಕ ತಮ್ಮದೇ ಮನೆಯ ಸದಸ್ಯ ಬಿಟ್ಟು ಹೋದಂತೆ ಕಣ್ಣೀರು ಹಾಕುತ್ತಿದ್ದಾರೆ. ಆ ಮೂಲಕ ಅರ್ಜುನನಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲ ಸಿನಿಮಾ ರಂಗದ ಗಣ್ಯರು, ಪೊಲೀಸ್‌ ಅಧಿಕಾರಿಗಳು ಕೂಡ ಕಣ್ಣೀರು ಸುರಿಸಿದ್ದನ್ನು ಈ ವೇಳೆ ನೋಡಬಹುದಾಗಿದೆ.

ಅರ್ಜುನ ಆನೆಯ ಸಾವಿನ ಬಗ್ಗೆ ಎಕ್ಸ್‌ನಲ್ಲಿ ಫೋಟೊ ಹಂಚಿಕೊಂಡು ಅಂತಿಮ ನಮನ ಸಲ್ಲಿಸಿದ್ದಾರೆ ನಟ ರಿಷಬ್‌ ಶೆಟ್ಟಿ. ʼಅರ್ಜುನ ಅಂಬಾರಿಯ ಜೊತೆ ಕನ್ನಡಗಿರ ಮನಸನ್ನೂ ಹೊತ್ತಿದ್ದ, ಅವನ ಸಾವು ಅತ್ಯಂತ ನೋವುಂಟು ಮಾಡಿದೆʼ ಎಂದು ಅವರು ಬರೆದುಕೊಂದು ದುಃಖ ವ್ಯಕ್ತಪಡಿಸಿದ್ದಾರೆ.

ʼಅರ್ಜುನನ ಸಾವು ನನ್ನನ್ನು ಭಾವುಕನಾಗಿಸಿತು ಒಂದು ವೇಳೆ ಅಚಾತುರ್ಯದಿಂದ ಸಾವು ಸಂಭವಿಸಿದ್ದರೆ ಕ್ಷಮೆಗೆ ಅನರ್ಹರು ಸಂಬಂಧಪಟ್ಟವರು..!! ಆ ಗಜ ಕಳೆ ಮತ್ತೆಲ್ಲು ಕಾಣಸಿಗದು. ಅನ್ಯ ಕಾಡು ಆನೆ ಹಿಡಿದಾಗ ಅವನು ಲಾರಿಗೆ ಆನೆ ತಬ್ಬುತಿದ್ದ ಶೈಲಿ ಅಮೋಘ!ರಾಜ್ಯದೇವಿ ಅಂಬಾರಿ ಹೊತ್ತವ ದೇವಿಗೆ ಸಮ ಮುಂದಿನ ಜನ್ಮಕ್ಕೆ ರಾಜನಾಗಿ ಹುಟ್ಟುತ್ತಾನೆ ಅರ್ಜುನʼ ಎಂದು ನವರಸ ನಾಯಕ ಜಗ್ಗೇಶ್‌ ಬರೆದುಕೊಂಡಿದ್ದಾರೆ.

ಸತ್ಯ ಏನು ಗೊತ್ತಾ…

ಸತ್ಯ ಏನು ಗೊತ್ತಾ? ಅರ್ಜುನನ್ನು ನಂಬಿದ್ದವರು ಇಂದು ಜೀವಂತವಾಗಿದ್ದಾರೆ, ಅರ್ಜುನ ಯಾರನ್ನು ನಂಬಿದ್ದನೋ ಅವರೇ ಅವನನ್ನು ಕೊಂದುಬಿಟ್ರು ಎಂದು ಮಧುಕುಮಾರ್‌ ಎನ್ನುವವರು ಬರೆದುಕೊಳ್ಳುವ ಮೂಲಕ ದುಃಖ, ಆಕ್ರೋಶ ಹೊರ ಹಾಕಿದ್ದಾರೆ.

8 ಬಾರಿ ದಸರಾ ಅಂಬಾರಿ ಹೊತ್ತು ನಾಡಿನ ಜನಮನ ಗೆದ್ದಿದ್ದ 65 ವರ್ಷದ 'ಅರ್ಜುನ' ಇಂದು ಕಾಡಾನೆಗಳ ಕಾಳಗದಲ್ಲಿ ಸಾವನ್ನಪ್ಪಿರುವುದು ವಿಷಾದದ ಸಂಗತಿ. ಅರ್ಜುನನ ಗಜಗಾಂಭೀರ್ಯಕ್ಕೆ ಅವನೇ ಸಾಟಿ! ಓಂ ಶಾಂತಿ ಎಂದು ನಟ ದರ್ಶನ್‌ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ

ಸಂಸದ ಪ್ರತಾಪ ಸಿಂಹ ಅವರು ಕೂಡ ಸಾಮಾಜಿಕ ಜಾಲತಾಣದಲ್ಲಿ ಅರ್ಜುನನ ಫೋಟೊ ಹಂಚಿಕೊಳ್ಳುವ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ‌ ಹೊತ್ತಿದ್ದ ಅರ್ಜುನ ಆನೆ, ಸಕಲೇಶಪುರ ತಾಲೂಕಿನ ಯಸಳೂರು ವಲಯದ ಬಾಳೆಕೆರೆ ಫಾರೆಸ್ಟ್‌ನಲ್ಲಿ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವಿಗೀಡಾದ ಸಂಗತಿ ತಿಳಿದು ದುಃಖವಾಗಿದೆ. ಒಂದು ಕಾಲದಲ್ಲಿ ಮೈಸೂರು ದಸರಾದ ಕೇಂದ್ರಬಿಂದುವಾಗಿದ್ದ ಅರ್ಜುನ ನಮ್ಮೆಲ್ಲರ ಹೃದಯದಲ್ಲಿ ಮರೆಯಲಾರದ ನೆನಪುಗಳನ್ನು ಬಿಟ್ಟುಹೋಗಿದ್ದಾನೆ ಎಂದು ಬರೆದುಕೊಳ್ಳುವ ಮೂಲಕ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್‌.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ