logo
ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಮಂಗಳೂರು ಮಹಾನಗರದಲ್ಲಿ ನೀರಿನ ರೇಷನಿಂಗ್ ಆರಂಭ, ಎಲ್ಲಿ ಯಾವಾಗ? ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ

Mangalore News: ಮಂಗಳೂರು ಮಹಾನಗರದಲ್ಲಿ ನೀರಿನ ರೇಷನಿಂಗ್ ಆರಂಭ, ಎಲ್ಲಿ ಯಾವಾಗ? ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ

Umesha Bhatta P H HT Kannada

May 07, 2024 02:39 PM IST

ಮಂಗಳೂರಿಗೆ ನೀರು ಒದಗಿಸುವ ತುಂಬೆ ಜಲಾಶಯ.

    • ಬೇಸಿಗೆ ಬವಣೆ ಮಂಗಳೂರಿಗೂ ತಟ್ಟಿದೆ. ಇಲ್ಲಿ ಕುಡಿಯುವ ನೀರನ್ನು ರೇಷನಿಂಗ್‌ ಮಾದರಿಯಲ್ಲಿ ವಿತರಿಸಲು ನಗರ ಪಾಲಿಕೆ( Mangalore City Corporation) ಮುಂದಾಗಿದೆ.
ಮಂಗಳೂರಿಗೆ ನೀರು ಒದಗಿಸುವ ತುಂಬೆ ಜಲಾಶಯ.
ಮಂಗಳೂರಿಗೆ ನೀರು ಒದಗಿಸುವ ತುಂಬೆ ಜಲಾಶಯ.

ಮಂಗಳೂರು: ನೇತ್ರಾವತಿ ನದಿಯಲ್ಲಿ ದಿನೇದಿನೇ ನೀರಿನ ಮಟ್ಟ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ನಗರ ವ್ಯಾಪ್ತಿಯಲ್ಲಿ ನೀರು ರೇಷನಿಂಗ್ ಆರಂಭಗೊಂಡಿದ್ದು, ಟ್ಯಾಂಕರುಗಳ ಮೂಲಕವೂ ನೀರು ಪೂರೈಕೆ ಮಾಡಲಾಗುತ್ತಿದೆ. ರೇಶನಿಂಗ್ ಪ್ರಕಾರ, ಎರಡು ದಿನಗಳಿಗೊಮ್ಮೆ ನೀರು ಪೂರೈಕೆಯನ್ನು ಪಾಲಿಕೆ ಮಾಡುತ್ತಿದೆ. ತುಂಬೆ ವೆಂಟೆಡ್ ಡ್ಯಾಮನಲ್ಲಿ ನೀರಿನ ಮಟ್ಟ 4.12 ಮೀಟರ್ ಇದ್ದರೆ, ಎಎಂಆರ್ ಡ್ಯಾಂನಲ್ಲಿ 15.71 ಮೀಟರ್ ಗೆ ಇಳಿಕೆಯಾಗಿದೆ. ತುಂಬೆ ಡ್ಯಾಂನಲ್ಲಿ 4 ಮೀಟರ್ ಎತ್ತರಕ್ಕೆ ನೀರು ನಿಲ್ಲಿಸಿದರೆ, 5.21 ಮಿಲಿಯನ್ ಕ್ಯೂಬಿಕ್ ಮೀಟರ್ ನೀರು ಸಂಗ್ರಹ ಮಾಡಬಹುದಾಗಿದ್ದು, ಅಂದಾಜಿನಂತೆ 23 ದಿನಗಳವರೆಗೆ ಮಂಗಳೂರಿಗೆ ನೀರು ಪೂರೈಕೆ ಮಾಡಬಹುದು. ಆದರೆ ಮಂಗಳೂರಿನಲ್ಲಿ ಬೇಡಿಕೆ ಅಧಿಕವಾಗಿರುವ ಕಾರಣ ನೀರು ಪೂರೈಕೆ ಮಂಗಳೂರು ಮಹಾನಗರ ಪಾಲಿಕೆಗೂ ಸವಾಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಹವಾಮಾನ ಮೇ 19; ರಾಜ್ಯದಲ್ಲಿ ಮಳೆ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಲ್ಲಿ ಆರೆಂಜ್ ಅಲರ್ಟ್‌, 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

Hassan Scandal : ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ

ರೇಶನಿಂಗ್ ಹೇಗಿರುತ್ತೆ?

ಮಂಗಳೂರಿನಲ್ಲಿ ಕುಡಿಯುವ ನೀರಿನ ರೇಶನಿಂಗ್ ಹೀಗಿರುತ್ತದೆ. ಮಂಗಳೂರು ನಗರ ಪ್ರದೇಶ, ಸುರತ್ಕಲ್ ಪ್ರದೇಶಕ್ಕೆ ದಿನ ಬಿಟ್ಟು ದಿನ ನೀರು ಪೂರೈಕೆ ಮಾಡಲಾಗುತ್ತದೆ. ಹೀಗಾಗಿ ನೀರಿನ ಸಮಸ್ಯೆ ಇದ್ದರೆ ಸಹಾಯವಾಣಿಯನ್ನೂ ಮನಪಾ ನೀಡಿದೆ. ಅದರಂತೆ ಮನಪಾ ಕಂಟ್ರೋಲ್ ರೂಮ್ ಸಂಖ್ಯೆ ಹೀಗಿದೆ. 0824-2220319, 0824-2220306, ಮನಪಾ ವಾಟ್ಸಾಪ್ ಸಂಖ್ಯೆ 9449007722, ಪಣಂಬೂರು ರೇಚಕ ಸ್ಥಾವರ ಸಂಖ್ಯೆ 0824-2220364, ಬೆಂದೂರು ರೇಚಕ ಸ್ಥಾವರ ಸಂಖ್ಯೆ 0824-2220303, ಪಡೀಲ್ ರೇಚಕ ಸ್ಥಾವರ ಸಂಖ್ಯೆ 0824-2230840 ದೂರವಾಣಿ ಕರೆ ಮಾಡಬಹುದು.

ಬೆಸ ದಿನಗಳಂದು, (ಮೇ 5,7,9…): ಬೆಂದೂರು ರೇಚಕ ಸ್ಥಾವರದ ಕೋರ್ಟ್ ವಾರ್ಡ್, ರಥಬೀದಿ, ಬಾವುಟಗುಡ್ಡೆ, ಆಕಾಶವಾಣಿ, ಪದವು, ಗೋರಿಗುಡ್ಡೆ, ಸೂಟರ್ ಪೇಟೆ, ಶಿವಭಾಗ್, ಬೆಂದೂರು, ಕದ್ರಿ, ವಾಸ್ ಲೇನ್, ಬೆಂದೂರು ಲೋಲೆವೆಲ್ ಪ್ರದೇಶಗಳಾದ ಕಾರ್ ಸ್ಟ್ರೀಟ್, ಕುದ್ರೋಳಿ ಫಿಶಿಂಗ್ ಹಾರ್ಬರ್, ಕೊಡಿಯಾಲಬೈಲು. ಪಡೀಲು ರೇಚಕ ಸ್ಥಾವರದಿಂದ ಮಂಗಳಾದೇವಿ, ಅತ್ತಾವರ, ಬಾಬುಗುಡ್ಡೆ, ವೆಲೆನ್ಸಿಯಾ, ಜಪ್ಪಿನಮೊಗರು, ಬಿಕರ್ನಕಟ್ಟೆ, ಉಲ್ಲಾಸ ನಗರ, ತಿರುವೈಲು, ಬಜಾಲ್, ವಾಮಂಜೂರು, ಶಕ್ತಿನಗರ, ಕುಂಜತ್ತಬೈಲು, ಸಂಜಯನಗರ, ರಾಜೀವನಗರ, ಬೊಂದೆಲ್, ಕಾವೂರು, ಕಂಕನಾಡಿ, ನಾಗುರಿ, ಪಂಪ್ ವೆಲ್, ಪಡೀಲ್.

ಸಮ ದಿನಗಳಂದು (ಮೇ 6,8,10…): ಪಣಂಬೂರು ರೇಚಕ ಸ್ಥಾವರದಿಂದ ಸುರತ್ಕಲ್, ಎನ್.ಐ.ಟಿ.ಕೆ , ಮುಕ್ಕ, ಹೊಸಬೆಟ್ಟು, ಕುಳಾಯಿ, ಜನತಾ ಕಾಲೊನಿ, ಬೈಕಂಪಾಡಿ, ಮೀನಕಳಿಯ, ಪಣಂಬೂರು, ಪಡೀಲ್ ರೇಚಕ ಸ್ಥಾವರದಿಂದ ಬಜಾಲ್, ಜಲ್ಲಿಗುಡ್ಡೆ, ಅಳಪೆ, ಮೇಘನಗರ, ಸದಾಶಿವನಗರ, ಕಂಕನಾಡಿ ರೈಲ್ವೆ ನಿಲ್ದಾನ ಪ್ರದೇಶ, ಕುಲಶೇಖರ, ಪ್ರಶಾಂತನಗರ, ಮುಡಾ, ಕೊಟ್ಟಾರ, ಕುಳೂರು, ಬಂಗ್ರಕುಳೂರು, ಕಾಪಿಕಾಡ್, ವೀರನಗರ ಇತ್ಯಾದಿ ಪ್ರದೇಶಗಳು.

ನೀರಿನ ಬಳಕೆ ಮಿತವಾಗಿರಲಿ

ಲಭ್ಯ ನೀರನ್ನು ಮಿತವಾಗಿ ಬಳಸಬೇಕು ಎಂದು ಪಾಲಿಕೆ ಸೂಚಿಸಿದೆ. ಇರುವ ನೀರನ್ನು ಪೋಲು ಮಾಡದೆ ಮುಂಜಾಗರೂಕತೆ ವಹಿಸಿ, ಮಳೆ ಪ್ರಾರಂಭವಾಗುವವರೆಗೆ ಲಭ್ಯ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲು ಒತ್ತು ನೀಡಬೇಕು. ಕುಡಿಯುವ ನೀರು ಪ್ರಥಮ ಆದ್ಯತೆಯಾಗಿ ನೀಡಬೇಕಾದ ಹಿನ್ನೆಲೆಯಲ್ಲಿ ಕಾರು, ಆಟೊ, ಸ್ಕೂಟರ್, ದ್ವಿಚಕ್ರ, ಗಾರ್ಡನ್ ಮತ್ತು ಪ್ರಾಣಿಗಳನ್ನು ತೊಳೆಯಲು ನೀರು ಹೆಚ್ಚಾಗಿ ಬಳಸಬಾರದು ಎಂದು ಪಾಲಿಕೆ ಸೂಚಿಸಿದೆ.

ಅನಗತ್ಯ ಪೋಲು ಕಂಡರೆ ಕಠಿಣ ಕ್ರಮ ಡಿಸಿ

ನೀರಿನ ಅನಗತ್ಯ ಬಳಕೆಗೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ ಈ ಕಾರಣ ನೀರನ್ನು ಅನಗತ್ಯವಾಗಿ ಪೊಲು ಮಾಡುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ. ಮಳೆಯ ಕೊರತೆ, ತಾಪಮಾನ ಹೆಚ್ಚಳದಿಂದಾಗಿ ನೀರಿನ ಸಮಸ್ಯೆ ಪ್ರಾರಂಭವಾಗುತ್ತಿದೆ. ಸಾರ್ವಜನಿಕರು ಅನಗತ್ಯವಾಗಿ ನೀರು ಪೊಲು ಮಾಡದೇ ಸದ್ಭಳಕೆ ಮಾಡಬೇಕು ಹಾಗೂ ನೀರಿನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು. ಈಗಾಗಲೇ ನೀರಿನ ಸಮಸ್ಯೆ ಪರಿಹರಿಸುವ ಕಂಟ್ರೋಲ್ ರೂಮ್ ಗಳನ್ನು ತೆರೆಯಲಾಗಿದ್ದು, ಈ ಕಂಟ್ರೋಲ್ ರೂಮ್ ಗಳಿಗೆ ಸಾರ್ವಜನಿಕರಿಂದ ಬರುವಂತಹ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾರೆ.

ಮಳೆಗಾಗಿ ಪ್ರಾರ್ಥಿಸಿ ಪರ್ಜನ್ಯ ಜಪ

ಮಂಗಳೂರಿನ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಕದ್ರಿ ಕೆರೆಯ ಆವರಣದಲ್ಲಿ ಅಖಿಲ ಭಾರತ ಬ್ರಾಹ್ಮಣ ಒಕ್ಕೂಟದ ವತಿಯಿಂದ ಕಲ್ಕೂರ ಪ್ರತಿಷ್ಠಾನದ ಸಂಯೋಜನೆಯಲ್ಲಿ ಪರ್ಜನ್ಯ ಜಪ, ರುದ್ರ ಪಾರಾಯಣವೂ ನಡೆಯಿತು. ಮಳೆ ಬಾರದೆ ಸಮಸ್ಯೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯಾಗಿ ಧಾರ್ಮಿಕ ಆಚರಣೆಯನ್ನು ಕದ್ರಿಯಲ್ಲಿ ನಡೆಸಲಾಗಿದೆ. ಮಳೆಗಾಗಿ ಪ್ರಾರ್ಥಿಸುವ ಈ ಜಪಯಜ್ಞದಲ್ಲಿ ಪ್ರಮುಖರಾದ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಪಾಲ್ಗೊಂಡಿದ್ದರು.

ವರದಿ: ಹರೀಶ ಮಾಂಬಾಡಿ, ಮಂಗಳೂರು

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ