logo
ಕನ್ನಡ ಸುದ್ದಿ  /  ಕರ್ನಾಟಕ  /  Mangaluru News: ವಿಟ್ಲ ಸಮೀಪ ಕೊಳ್ನಾಡಿನಲ್ಲಿ ದಿಡೀರ್ ಕುಸಿದ ಕೋಳಿಫಾರಂ ಕಟ್ಟಡ, 5,000 ಕ್ಕೂ ಅಧಿಕ ಕೋಳಿಗಳ ಸಾವು

Mangaluru News: ವಿಟ್ಲ ಸಮೀಪ ಕೊಳ್ನಾಡಿನಲ್ಲಿ ದಿಡೀರ್ ಕುಸಿದ ಕೋಳಿಫಾರಂ ಕಟ್ಟಡ, 5,000 ಕ್ಕೂ ಅಧಿಕ ಕೋಳಿಗಳ ಸಾವು

Umesh Kumar S HT Kannada

Jan 13, 2024 01:39 PM IST

ವಿಟ್ಲ ಸಮೀಪ ಕೊಳ್ನಾಡು ಗ್ರಾಮದ ದೇವಸ್ಯ ದಲ್ಲಿ ಕೋಳಿ ಫಾರಂ ಕಟ್ಟಡ ದಿಢೀರ್ ಕುಸಿದು 5,000 ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ.

  • ದಕ್ಷಿಣ ಕನ್ನಡದ ವಿಟ್ಲ ಸಮೀಪ ಕೊಳ್ನಾಡು ಗ್ರಾಮದ ದೇವಸ್ಯ ದಲ್ಲಿ ಕೋಳಿ ಫಾರಂ ಕಟ್ಟಡ ದಿಢೀರ್ ಕುಸಿದು 5,000 ಕ್ಕೂ ಹೆಚ್ಚು ಕೋಳಿಗಳಿ ಸತ್ತು ಹೋಗಿವೆ. ಪ್ರತ್ಯೇಕ ಪ್ರಕರಣದಲ್ಲಿ, ಬಿ.ಸಿ.ರೋಡ್ ನಲ್ಲಿ ಸರಣಿ ಕಳ್ಳತನ ನಡೆಸಿದ ಆರೋಪಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿದರು. (ವರದಿ - ಹರೀಶ್ ಮಾಂಬಾಡಿ,ಮಂಗಳೂರು)

ವಿಟ್ಲ ಸಮೀಪ ಕೊಳ್ನಾಡು ಗ್ರಾಮದ ದೇವಸ್ಯ ದಲ್ಲಿ ಕೋಳಿ ಫಾರಂ ಕಟ್ಟಡ ದಿಢೀರ್ ಕುಸಿದು 5,000 ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ.
ವಿಟ್ಲ ಸಮೀಪ ಕೊಳ್ನಾಡು ಗ್ರಾಮದ ದೇವಸ್ಯ ದಲ್ಲಿ ಕೋಳಿ ಫಾರಂ ಕಟ್ಟಡ ದಿಢೀರ್ ಕುಸಿದು 5,000 ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪ ಕೊಳ್ನಾಡು ಗ್ರಾಮದ ದೇವಸ್ಯ ದಲ್ಲಿ ಕೋಳಿ ಫಾರಂ ಕಟ್ಟಡ ದಿಢೀರ್ ಕುಸಿದು 5,000 ಕ್ಕೂ ಹೆಚ್ಚು ಕೋಳಿಗಳಿ ಸತ್ತಿದ್ದು, ಆರು ಲಕ್ಷ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ

ಟ್ರೆಂಡಿಂಗ್​ ಸುದ್ದಿ

Hassan Scandal: ರೇವಣ್ಣಗೆ ಎರಡನೇ ಪ್ರಕರಣದಲ್ಲೂ ಜಾಮೀನು, ನ್ಯಾಯಾಧೀಶರ ಸೂಚನೆ ಏನು

ಕರ್ನಾಟಕದಲ್ಲಿ ಪೂರ್ವ ಮುಂಗಾರು; 18 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ, ಇತ್ತೀಚಿನ 10 ಸುದ್ದಿ ಮುಖ್ಯಾಂಶ

ಬೆಳ್ತಂಗಡಿ ಅಕ್ರಮ ಕಲ್ಲುಗಣಿಗಾರಿಕೆ ಕೇಸ್; ಆರೋಪಿಗಳ ಬಂಧನ, ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್‌, 10 ವಿದ್ಯಮಾನಗಳಿವು

ಸೈಬರ್ ವಂಚಕರಿಗೆ ಸಿಮ್ ಕಾರ್ಡ್‌ ಪೂರೈಸುತ್ತಿದ್ದ ನಾರಾ ಶ್ರೀನಿವಾಸ್ ರಾವ್ ಬಂಧನ; ಗೋವಾ ಮಹಿಳೆಯ ಬ್ಲಾಕ್ ಮೇಲ್, ಬೆಂಗಳೂರಿನ ವ್ಯಕ್ತಿ ಸೆರೆ

ಯಜ್ಞನಾಥ ಶೆಟ್ಟಿ ಮಾಲೀಕತ್ವದ ಕೋಳಿ ಫಾರಂ ಕಟ್ಟಡ ಏಕಾಏಕಿ ಸಂಜೆ ದಿಢೀರನೆ ಕುಸಿದು ಬಿತ್ತು. ಕಟ್ಟಡ ಕುಸಿದ ಶಬ್ದ ಕೇಳಿಸಿಕೊಂಡ ಮಾಲಕರು ಮತ್ತು ಸ್ಥಳೀಯರು ಸ್ಥಳಕ್ಕೆ ಬರುವಷ್ಟರಲ್ಲಿ ಐದು ಸಾವಿರಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿದ್ದವು.

ಕೋಳಿ ಫಾರಂ ಕಟ್ಟಡ ದಿಢೀರನೆ ಕುಸಿದು ಬಿದ್ದ ಘಟನೆಯಿಂದ ಮಾಲಕರು ಆಘಾತಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಮಾಜಿ ತಾ.ಪಂ.ಸದಸ್ಯ ಕುಲ್ಯಾರು ನಾರಾಯಣ ಶೆಟ್ಟಿ, ಕೊಳ್ನಾಡು ಗ್ರಾಮ ಪಂ.ಉಪಾಧ್ಯಕ್ಷೆ ಅಸ್ಮಾ ಹಸೈನಾರ್, ಮಾಜಿ ಸದಸ್ಯ ಯೂಸುಫ್ ತಾಳಿತ್ತನೂಜಿ, ಸಾಮಾಜಿಕ ಕಾರ್ಯಕರ್ತ ಹಸೈನಾರ್ ಮತ್ತಿತರರು ಆಗಮಿಸಿದರು. ಘಟನೆಯಲ್ಲಿ ಸುಮಾರು ಆರು ಲಕ್ಷಕ್ಕೂ ಅಧಿಕ ನಷ್ಟ ಅಂದಾಜಿಸಲಾಗಿದೆ. ಒಮ್ಮಿಂದೊಮ್ಮೆಲೆ ಕಟ್ಟಡ ಕುಸಿದು ಬೀಳಲು ಕಾರಣವೇನು ಎಂದು ತಿಳಿದು ಬಂದಿಲ್ಲ

ಸುಮಾರು ಎರಡು ಕಿ. ಮೀ ದೂರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದೆ. ಕೋಳಿ ಫಾರಂ ಕುಸಿದ ಸುದ್ದಿ ಹರಡುತ್ತಿದ್ದಂತೆ ನಾನೂ ಅಲ್ಲಿಗೆ ಧಾವಿಸಿದೆ. ಹಂಚಿನ ಮಾಡು ಸಹಿತ ಕಟ್ಟಡ ನೆಲಕಚ್ಚಿತ್ತು. ಅಷ್ಟೊಂದು ಕೋಳಿಗಳು ಸತ್ತು ಬಿದ್ದದ್ದು ಕಂಡು ಮನ‌ ಕಲಕಿತು ಎಂದು ಸ್ಥಳೀಯರಾದ ಐತಪ್ಪ ನಾಯ್ಕ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬರುವಷ್ಟರಲ್ಲಿ ಪಾಪ ಕೋಳಿಗಳು ಪ್ರಾಣ ತೆತ್ತಿದ್ದವು. ಮನಸಿಗೆ ನೋವು ಆಗಿದೆ. ಆದರೆ ಜನರ ಜೀವಕ್ಕೆ ಹಾನಿಯಾಗದ ಬಗ್ಗೆ ಸಮಾಧಾನವೂ ಇದೆ ಎಂದವರು ಹೇಳಿದರು.

ಏಕಮುಖ ಪ್ರೇಮ ಪ್ರಕರಣ: ನವವಿವಾಹಿತನ ಬೈಕ್ ಭಸ್ಮ

ಅತ್ತೆ ಮನೆಗೆ ಬಂದಿದ್ದ ವಿವಾಹಿತನೊಬ್ಬನ ಬೈಕ್ ಸುಟ್ಟ ಪ್ರಕರಣವೊಂದು ನಡೆದಿದ್ದು, ಇದಕ್ಕೆ ಏಕಮುಖ ಪ್ರೀತಿಯೇ ಕಾರಣ ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಗ್ರಾಮದ ನಿನ್ನಿಕಲ್ಲು ಪಾದಾಳ ನಿವಾಸಿ ಸಂದೀಪ್ ಎಂಬಾತನನ್ನು ಬಂಧಿಸಲಾಗಿದೆ.

ಹಿರೇಬಂಡಾಡಿ ಗ್ರಾಮದ ಮುಳ್ಳುಗುಡ್ಡೆ ಎಂಬಲ್ಲಿ ಬರಿಮಾರು ಗ್ರಾಮದ ಕಡವಿನಬಳಿಯ ಲಿಖಿತ್ ಕುಮಾರ್ ಅವರ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಲಾಗಿತ್ತು. ಜನವರಿ 3ರಂದು ಇವರಿಗೆ ಮದುವೆಯಾಗಿದ್ದು, ಜನವರಿ 6ರಂದು ಇವರು ಪತ್ನಿ ಮನೆಗೆ ಬಂದಿದ್ದರು. ರಾತ್ರಿ ಈ ಘಟನೆ ನಡೆದಿತ್ತು. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿತ್ತು.

ವಿಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ ಸಂದರ್ಭ ಘಟನೆಯ ಹಿನ್ನೆಲೆ ಬೆಳಕಿಗೆ ಬಂತು. ಆರೋಪಿಗೆ ಲಿಖಿತ್ ಪತ್ನಿ ಮೇಲೆ ಪ್ರೀತಿಯಿದ್ದು, ಇದು ಏಕಮುಖ ಪ್ರೀತಿಯಾಗಿತ್ತು. ಆಕೆಗೆ ಮದುವೆಯಾಗಿರುವುದನ್ನು ಕಂಡು ಆಕ್ರೋಶಗೊಂಡು ಆ ದ್ವೇಷದಿಂದ ಆಕೆಯ ಪತಿಯ ಬೈಕ್ ಅನ್ನು ಸುಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಬಿ.ಸಿ.ರೋಡ್ ನಲ್ಲಿ ಸರಣಿ ಕಳ್ಳತನ ನಡೆಸಿದ ಆರೋಪಿಯ ಬಂಧಿಸಿದ ಬಂಟ್ವಾಳ ಪೊಲೀಸರು

ಬಿಸಿರೋಡಿನ ಹೃದಯಭಾಗದ ಹೊಟೇಲ್ ಸಹಿತ ಹಲವೆಡೆ ಸರಣಿ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ‌ನಗರ ಠಾಣಾ ಪೊಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಬೆಳ್ತಂಗಡಿ ಪಡಂಗಡಿ ನಿವಾಸಿ ಹಮೀದ್ ಯಾನೆ, ಕುಂಜ್ಞಿಮೋನು ಯಾನೆ ಜಾಫರ್ ಬಂಧಿತ ಆರೋಪಿ. ಈತ ಕಳೆದ ಎರಡು ವಾರಗಳ ಹಿಂದೆ ಬಿ.ಸಿ.ರೋಡಿನ ಅನಿಯಾ ದರ್ಬಾರ್ ಹೋಟೆಲ್ ಹಾಗೂ ಇಲ್ಲಿನ‌ ಕೆಲ ಅಂಗಡಿಗಳಿಗೆ ನುಗ್ಗಿ ಲಕ್ಷಾಂತರ ರೂ ನಗದು ಕಳವು ಮಾಡಿದ್ದಾಗಿ ಆರೋಪಿಸಲಾಗಿದೆ. ಇಲ್ಲಿನ ಅನಿಯಾ ದರ್ಬಾರ್ ಹೊಟೇಲ್ ನಿಂದ ಕಳವು ಮಾಡಿರುವ ಬಗ್ಗೆ ನಗರ ಪೋಲೀಸ್ ಠಾಣೆಗೆ ಮಾಲಕ ದೂರು ನೀಡಿದ್ದರು. ಆರೋಪಿ ಹಮೀದ್ ಕಳವು ಮಾಡುವ ವೇಳೆ ಹೊಟೇಲ್ ಒಳಗಿನ ಸಿ.ಸಿ.ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದ್ದು, ಇದರ ಆಧಾರದ ಮೇಲೆ ಪೋಲಿಸ್ ತಂಡ ಬಂಧನಕ್ಕೆ ಕಾರ್ಯತಂತ್ರ ಹೆಣೆದಿದ್ದರು.

ಹಮೀದ್ ಮಂಗಳೂರಿನಿಂದ ಪ್ರಯಾಣ ಬೆಳೆಸುತ್ತಿದ್ದ ವೇಳೆ ಬಂಟ್ವಾಳದಲ್ಲಿ ಪೋಲಿಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಈತ ಹಲವು ಕಳವು ಪ್ರಕರಣಗಳ ಆರೋಪಿಯಾಗಿದ್ದು, ವಿವಿಧ ಠಾಣೆಗಳಲ್ಲಿ ಈತನ ಮೇಲೆ ಕಳವು ಪ್ರಕರಣ ದಾಖಲಾಗಿದೆ, ಜೊತೆಗೆ ಈತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣಕ್ಕಾಗಿ ವಾರೆಂಟ್ ಆರೋಪಿ ಕೂಡ ಆಗಿರುವುದು ಪೋಲಿಸ್ ವಿಚಾರಣೆ ವೇಳೆ ತಿಳಿದು ಬಂದಿದೆ. ಇದೀಗ ಈತನನ್ನು ಬಂಟ್ವಾಳ ಡಿ.ವೈ‌ಎಸ್.ಪಿ.ವಿಜಯಪ್ರಸಾದ್ ನಿರ್ದೇಶನದಂತೆ, ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಆನಂತ ಪದ್ಮನಾಭ ನೇತೃತ್ವದಲ್ಲಿ ಎಸ್‌.ಐ.ರಾಮಕೃಷ್ಣ ಮತ್ತು ಎಸ್.ಐ.ಕಲೈಮಾರ್ ತಂಡದಲ್ಲಿ ಸಿಬ್ಬಂದಿಗಳಾದ ಇರ್ಷಾದ್. ಪಿ ಮತ್ತು ರಾಜೇಶ್ ಅವರು ಕಾರ್ಯಚರಣೆ ನಡೆಸಿ, ಆರೋಪಿಯನ್ನು ಬಂಧಿಸಿ‌ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಈಗಾಗಲೇ ಕೈಕಂಬ ಪೊಳಲಿ ದ್ವಾರದ ಬಳಿ ಹೋಟೆಲ್ ಸಹಿತ ಸುಮಾರು ಅಂಗಡಿಗಳಿಗೆ ನುಗ್ಗಿ ಸಾವಿರಾರು ರೂ.ನಗದು ಕಳವು ಮಾಡಿದ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ. ಇದರ ಜೊತೆಗೆ ಅಂಗಡಿಯಿಂದ ವೃದ್ದೆಯೋರ್ವರ ಕುತ್ತಿಗೆಯಿಂದ ಚೈನ್ ಸ್ನ್ಯಾಚಿಂಗ್ ಮಾಡಿ ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು ಯಶಸ್ವಿಯಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಒಂದೆಡೆ ಪೊಲೀಸರು ಕಳ್ಳರನ್ನು ಹಿಡಿಯುವುದು ಹಾಗೂ ಇನ್ನೊಂದೆಡೆ ಪಿಕ್ ಪಾಕೆಟ್ ನಂಥ ಕಳವು ಕೃತ್ಯ ನಡೆಸುವ ಕಳ್ಳ ಪೊಲೀಸ್ ಆಟ ಮುಂದುವರಿದಿದೆ.

(ವರದಿ - ಹರೀಶ್ ಮಾಂಬಾಡಿ,ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ