logo
ಕನ್ನಡ ಸುದ್ದಿ  /  ಕರ್ನಾಟಕ  /  Minister Ashwath Narayan: ಅಪಾರ್ಟ್ಮೆಂಟ್ ನಿವಾಸಿಗಳೂಂದಿಗೆ ಸಚಿವ ಅಶ್ವತ್ಥ್ ನಾರಾಯಣ ಸಂವಾದ; ಮತಯಾಚನೆ

Minister Ashwath Narayan: ಅಪಾರ್ಟ್ಮೆಂಟ್ ನಿವಾಸಿಗಳೂಂದಿಗೆ ಸಚಿವ ಅಶ್ವತ್ಥ್ ನಾರಾಯಣ ಸಂವಾದ; ಮತಯಾಚನೆ

Raghavendra M Y HT Kannada

Apr 09, 2023 06:11 PM IST

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಅಪಾರ್ಟ್ಮೆಂಟ್ ಗಳ ನಿವಾಸಿಗಳೊಂದಿಗೆ ಸಚಿವ ಸಿಎನ್ ಅಶ್ವತ್ಥ್ ನಾರಾಯಣ ಸಂವಾದ ನಡೆಸಿ ಮತಯಾಚಿಸಿದ್ದಾರೆ.

  • ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಪಾರ್ಟ್ಮೆಂಟ್ ನಿವಾಸಿಗಳೊಂದಿಗೆ ಸಚಿವ ಸಿಎನ್ ಅಶ್ವತ್ಥ್ ನಾರಾಯಣ ಇಂದು ಸಂವಾದ ನಡೆಸಿ ಮತಯಾಚಿಸಿದ್ದಾರೆ.

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಅಪಾರ್ಟ್ಮೆಂಟ್ ಗಳ ನಿವಾಸಿಗಳೊಂದಿಗೆ ಸಚಿವ ಸಿಎನ್ ಅಶ್ವತ್ಥ್ ನಾರಾಯಣ ಸಂವಾದ ನಡೆಸಿ ಮತಯಾಚಿಸಿದ್ದಾರೆ.
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಅಪಾರ್ಟ್ಮೆಂಟ್ ಗಳ ನಿವಾಸಿಗಳೊಂದಿಗೆ ಸಚಿವ ಸಿಎನ್ ಅಶ್ವತ್ಥ್ ನಾರಾಯಣ ಸಂವಾದ ನಡೆಸಿ ಮತಯಾಚಿಸಿದ್ದಾರೆ.

ಬೆಂಗಳೂರು: ವಿಧಾನಸಭೆ ಚುನಾವಣೆ (Assembly Elections 2023) ಘೋಷಣೆಗೂ ಮುನ್ನವೇ ಅಬ್ಬರದ ಪ್ರಚಾರ ಮಾಡಿದ್ದ ಕಾಂಗ್ರೆಸ್ (Congress), ಜೆಡಿಎಸ್ (JDS) ಹಾಗೂ ಬಿಜೆಪಿ (BJP) ನೀತಿ ಸಂಹಿತಿ (Code of Conduct) ಜಾರಿಯಾದ ಬಳಿಕ ಫುಲ್ ಸೈಲೆಂಟಾಗಿ ಮತ ಬೇಟೆಯಾಡುತ್ತಿವೆ.

ಟ್ರೆಂಡಿಂಗ್​ ಸುದ್ದಿ

Karnataka Rains: ಬೆಂಗಳೂರು, ಮೈಸೂರು, ಕೊಡಗು ಸಹಿತ ಹಲವೆಡೆ ಒಂದು ವಾರ ಭಾರೀ ಮಳೆ, ಆರೆಂಜ್‌ ಅಲರ್ಟ್‌

Tumkur News: ಮಾಗಡಿಗೆ ಕುಡಿಯುವ ನೀರು, ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ತುಮಕೂರಲ್ಲಿ ಭಾರೀ ವಿರೋಧ

Indian Railway: ಹುಬ್ಬಳ್ಳಿ ನೈರುತ್ಯ ವಲಯದಿಂದ ಬೇಸಿಗೆಯಲ್ಲಿ ವಿಶೇಷ ರೈಲು ಡಬಲ್‌, ಆದಾಯವೂ ಶೇ 134ಪಟ್ಟು ಏರಿಕೆ

Mandya News: ಮಂಡ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕನ್ನಡದಲ್ಲೇ ಹೆಚ್ಚು ಅನುತ್ತೀರ್ಣ, ಮಕ್ಕಳ ಜತೆಗೆ ಶಿಕ್ಷಕರಿಗೂ ಕಾರ್ಯಾಗಾರ !

ಯಾವುದೇ ರೀತಿಯ ಪ್ರಚಾರ, ಸಭೆ ಅಥವಾ ಸಮಾರಂಭಗಳನ್ನು ನಡೆಸಬೇಕಾದರೂ ಚುನಾವಣಾ ಅಧಿಕಾರಿಗಳ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ. ಆದರೆ ಅಭ್ಯರ್ಥಿಗಳು, ಟಿಕೆಟ್ ಆಕಾಂಕ್ಷಿಗಳು ಮತದಾರರನ್ನು ಸೆಳೆಯಲು ತಮ್ಮದೇ ಆದ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.

ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ (Ashwath Narayan) ಇವತ್ತು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಪಾರ್ಟ್ಮೆಂಟ್ ನಿವಾಸಿಗಳೊಂದಿಗೆ (Apartment Residents) ಸಂವಾದ ನಡೆಸುವ ಮೂಲಕ ಮತಯಾಚನೆ ಮಾಡಿದ್ದಾರೆ.

ಯಶವಂತಪುರ ಸರ್ಕಲ್ ಹತ್ತಿರವಿರುವ ಎಂಬೆಸ್ಸಿ ಹೆರಿಟೇಜ್, ಸಲಾರ್ ಪುರಿಯ ಹಾಗೂ ಮತ್ತಿತರ ಅಪಾರ್ಟ್ಮೆಂಟ್ ಗಳ ನಿವಾಸಿಗಳ ಜೊತೆ ಸಂವಾದ ನಡೆಸಿ ಮತಯಾಚನೆ ವೇಳೆ ಅವರು ಮಾತನಾಡಿದ್ದಾರೆ.

ಮಲ್ಲೇಶ್ವರ ಕ್ಷೇತ್ರದಲ್ಲಿ ಸಮರ್ಪಕ ನೀರು ಪೂರೈಕೆ ನಿರ್ವಹಣೆ, ಶಿಕ್ಷಣ ಲಭ್ಯತೆ, ಆರೋಗ್ಯ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಆದ್ಯತೆಯ ಮೇಲೆ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಮಲ್ಲೇಶ್ವರ ವ್ಯಾಪ್ತಿಯಲ್ಲಿ ಅಂಗನವಾಡಿ ಇಂದ ಹಿಡಿದು ಪದವಿಯವರೆಗೆ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಸುಮಾರು 10, 000 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಬಡತನವು ಕಲಿಕೆಯ ಅವಕಾಶಗಳಿಗೆ ಅಡ್ಡಿಯಾಗದೆ ಎಲ್ಲರಿಗೂ ಸಮಾನ ಶಿಕ್ಷಣ ಲಭ್ಯವಾಗಬೇಕು ಎಂಬ ಆಶಯದೊಂದಿಗೆ ಇಲ್ಲಿನ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಸೋರಿಕೆಯನ್ನ ಶೇಕಡ 45 ರಿಂದ ಶೇಕಡ 14. 72ಕ್ಕೆ ಇಳಿಸಿರುವುದರಿಂದ ಈಗ ಮಹಡಿ ಮನೆಗಳಿಗೂ ನೀರು ಸರಾಗವಾಗಿ ಪೂರೈಕೆ ಆಗುತ್ತಿದೆ. ಇದೇ ವೇಳೆ, ಸಮರ್ಪಕ ನೀರು ನಿರ್ವಹಣೆ ಬಗ್ಗೆ ಜನಜಾಗೃತಿ ಮೂಡಿಸಲು ಮಲ್ಲೇಶ್ವರ 18ನೇ ಕ್ರಾಸ್ ನಲ್ಲಿ ವಾಟರ್ ಮ್ಯೂಸಿಯಂ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

ಕ್ಷೇತ್ರದಲ್ಲಿ ಆರು ಕಡೆ ಸಮಗ್ರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಡಿಜಿಟಲ್ ಹೆಲ್ತ್ ಕ್ಲಿನಿಕ್ ಗಳಾಗಿ ಮೇಲ್ದರ್ಜೆಗೇರಿವೆ. ಇದರ ಜೊತೆಗೆ, ಆರು ಕಡೆ ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್ ಗಳು ಮತ್ತು 'ನಮ್ಮ ಕ್ಲಿನಿಕ್' ಗಳು ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತಿವೆ.

ಸುಸ್ಥಿರ ನಗರ ಬೆಳವಣಿಗೆಗೆ ಸರ್ಕಾರ ಒತ್ತು ನೀಡಿದೆ. ಅದಕ್ಕೆ ಅನುಗುಣವಾಗಿ ಅಪಾರ್ಟ್ಮೆಂಟ್ ಗಳ ನಿವಾಸಿಗಳ ಹಿತರಕ್ಷಣೆಗೂ ಗಮನವಹಿಸಿದೆ. ಅವರಿಗೆ ನೀರಿನ ಬಿಲ್, ವಿದ್ಯುತ್ ಬಿಲ್ ಸೇರಿದಂತೆ ಯಾವುದೇ ನಾಗರಿಕ ಸೇವಾ ಶುಲ್ಕಗಳಲ್ಲಿ ತಾರತಮ್ಯವಾಗದಂತೆ ಕ್ರಮವಹಿಸಿದ್ದೇವೆ. ಹಾಗೆಯೇ, ಸಮರ್ಪಕ ತ್ಯಾಜ್ಯ ನಿರ್ವಹಣೆಯಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ನೀತಿಗಳನ್ನು ರೂಪಿಸಲಾಗುತ್ತಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

ಬ್ರಿಗೇಡ್ ರಿಜೆನ್ಸಿ, ಪಾಂಡುರಂಗ ಆಶ್ರಮ, ಶಶಿಕಿರಣ್ ಅಪಾರ್ಟ್ಮೆಂಟ್ಸ್ ಚಿತ್ರಕೂಟ, ಜುವೆಲ್, ಶೃಂಗಾರ್, ವಿಶಾಲ್ ಅಪಾರ್ಟ್ಮೆಂಟ್ ಗಳು ಹಾಗೂ, ಅರಣ್ಯ ಮತ್ತು ಜಲಮಂಡಳಿ ವಸತಿ ಸಮಚ್ಚಯಗಳಿಗೆ ಸಚಿವ ಅಶ್ವತ್ಥ್ ನಾರಾಯಣ ಭೇಟಿ ಕೊಟ್ಟು ಸಂವಾದ ನಡೆಸಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಈಗಾಗಲೇ ಹಲವು ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿವೆ. ಆದರೆ ಆಡಳಿತಾರೂಢ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಇಂದು ರಾತ್ರಿ ಅಥವಾ ನಾಳೆಯೊಳಗೆ ಕೇಸರಿ ಕಲಿಗಳ ಪಟ್ಟಿ ಬಿಡುಗಡೆಯಾಗಲಿದೆ. ಮೇ 10ಕ್ಕೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಹೊರಬೀಳಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ