logo
ಕನ್ನಡ ಸುದ್ದಿ  /  Karnataka  /  Prime Minister Narendra Modi Inaugurates Shivamogga Airport Today

Shivamogga Airport: ಮಲೆನಾಡು ಜನರ ಬಹುದಿನಗಳ ಕನಸು ನನಸು; ಪ್ರಧಾನಿ ಮೋದಿ ಅವರಿಂದ ಶಿವಮೊಗ್ಗ ಏರ್ಪೋರ್ಟ್ ಲೋಕಾರ್ಪಣೆ

Raghavendra M Y HT Kannada

Feb 27, 2023 01:29 PM IST

ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇದ್ದಾರೆ. (ಫೋಟೋ-ANI)

  • ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಲೋಕಾರ್ಪಣ ಮಾಡಿದ್ದಾರೆ. ಬಳಿಕ ಮಾತನಾಡಿದ ಪ್ರಧಾನಿ, ಇದು ಕೇವಲ ವಿಮಾನ ನಿಲ್ದಾಣವಲ್ಲ. ಈ ಭಾಗದ ಯುವಕರ ಕನಸುಗಳ ಹೊಸ ಪಯಣಕ್ಕೆ ಚಾಲನೆ ಎಂದು ಹೇಳಿದ್ದಾರೆ. 

ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇದ್ದಾರೆ. (ಫೋಟೋ-ANI)
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇದ್ದಾರೆ. (ಫೋಟೋ-ANI)

ಶಿವಮೊಗ್ಗ: ಕರ್ನಾಟಕದಲ್ಲಿ ಶತಾಯ ಗತಾಯ ಮತ್ತೆ ಕಮಲವನ್ನು ಅರಳಿಸಲು ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಕೆಲವೇ ದಿನಗಳ ಅಂತರದಲ್ಲಿ ಐದನೇ ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದು, ನೂತನವಾಗಿ ನಿರ್ಮಿಸಿರುವ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಇಂದು ಲೋಕಾರ್ಪಣೆ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Bangalore News: ಬೆಂಗಳೂರಿಗೂ ತಟ್ಟಿದ ಬಿರು ಬಿಸಿಲು, 40 ಡಿಗ್ರಿ ದಾಟಿದ ಉಷ್ಣಾಂಶ

Bangalore News: ಕೋಟಿ ಕೋಟಿ ಆಸ್ತಿ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ ಬೆಂಗಳೂರಿನ ಅಮ್ಮ ಮಗ !

Karnataka Weather: ಕರ್ನಾಟಕದಲ್ಲೂ ದಾಟಿತು 45ಡಿಗ್ರಿ ಉಷ್ಣಾಂಶದ ಪ್ರಮಾಣ, ಉತ್ತರದಲ್ಲಿ ರಣಬಿಸಿಲು, ರೆಡ್‌ ಅಲರ್ಟ್‌ ಘೋಷಣೆ

Hassan Scandal: ಪ್ರಜ್ವಲ್‌ಗೆ ನೊಟೀಸ್‌, ವಿದೇಶದಿಂದ ಕರೆ ತರಲು ಸಿದ್ದತೆ, ಕೇಂದ್ರ ನೆರವು ಪಡೆಯಲು ಯತ್ನ: ಗೃಹ ಸಚಿವ

ಈ ಮೂಲಕ ಮಲೆನಾಡಿನ ಜನರ ವಿಮಾನ ಪ್ರಯಾಣದ ಬಹುದಿನಗಳ ಕನಸು ನನಸಾಗಿದೆ. ಮತ್ತೊಂದು ವಿಶೇಷ ಅಂದರೆ ಇಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ 80ನೇ ಹುಟ್ಟುಹಬ್ಬ. ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಿಸಲು ಬಿಎಸ್ವೈ ಸಾಕಷ್ಟು ಶ್ರಮವಹಿಸಿದ್ದರು. ಹೀಗಾಗಿ ಅವರ 80ನೇ ಜನ್ಮ ದಿನದಂದೇ ನಮೋ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದ್ದಾರೆ.

ಸಾರ್ವಜನಿಕ ಸಭೆಯ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕೈ ಹಿಡಿದು ಶಿರಭಾಗಿ ನಮಿಸಿದರು. ಈ ವೇಳೆ ಬಿಎಸ್ ವೈ ಪ್ರಧಾನಿ ಅವರ ಕೈಗೆ ಮುತ್ತಿಟ್ಟರು.

ವಿಮಾನ ನಿಲ್ದಾಣ ಉದ್ಘಾಟಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಶಿವಮೊಗ್ಗ ವಿಮಾನ ನಿಲ್ದಾಣವು ಭವ್ಯ ಮತ್ತು ಸುಂದರವಾಗಿದೆ. ಈ ವಿಮಾನ ನಿಲ್ದಾಣದಲ್ಲಿ ಕರ್ನಾಟಕದ ಸಂಪ್ರದಾಯ ಮತ್ತು ತಂತ್ರಜ್ಞಾನದ ಸಂಯೋಜನೆಯನ್ನು ನೋಡಬಹುದು. ಇದು ಕೇವಲ ವಿಮಾನ ನಿಲ್ದಾಣವಲ್ಲ. ಈ ಭಾಗದ ಯುವಕರ ಕನಸುಗಳ ಹೊಸ ಪಯಣಕ್ಕೆ ಚಾಲನೆ ಎಂದು ಹೇಳಿದರು.

ಯಶಸ್ಸಿನ ಉತ್ತುಂಗಕ್ಕೇರಿದ ಮೇಲೂ ನಡತೆಯಲ್ಲಿ ಹೇಗೆ ವಿನಯ ಇರಬೇಕು ಎಂಬುದು ಬಿ ಎಸ್ ಯಡಿಯೂರಪ್ಪ ಅವರ ಮಾತುಗಳು ಮತ್ತು ಅವರ ಜೀವನ ನಮ್ಮಂತಹವರಿಗೆ ಹಾಗೂ ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ ಎಂದು ಪ್ರಧಾನಿ ಮೋದಿ ಬಿಎಸ್ ವೈ ಅವರನ್ನು ಶ್ಲಾಘಿಸಿದರು.

ಬಡ ಮತ್ತು ರೈತರ ಕಲ್ಯಾಣಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟರು

ಇಂದು ಇನ್ನೂ ಒಂದು ಕಾರಣಕ್ಕಾಗಿ ವಿಶೇಷವಾಗಿದೆ. ಇವತ್ತು ಕರ್ನಾಟಕದ ಜನಪ್ರಿಯ ನಾಯಕ ಬಿಎಸ್ ಯಡಿಯೂರಪ್ಪನವರ ಜನ್ಮದಿನ. ಅವರ ದೀರ್ಘಾಯುಷ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಅವರು ತಮ್ಮ ಜೀವನವನ್ನು ಬಡ ಮತ್ತು ರೈತರ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟರು. ಕಳೆದ ವಾರ ಕರ್ನಾಟಕದ ಅಸೆಂಬ್ಲಿಯಲ್ಲಿ ಅವರು ಮಾಡಿದ ಭಾಷಣವು ಸಾರ್ವಜನಿಕ ಜೀವನವನ್ನು ನಡೆಸುವ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದರು.

ಈ ಹಿಂದೆ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆದಾಗ ಅದು ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಡಬಲ್ ಇಂಜಿನ್ ಸರ್ಕಾರ ಇದನ್ನು ಕರ್ನಾಟಕದ ಹಳ್ಳಿಗಳಿಗೆ ಮತ್ತು ಶ್ರೇಣಿ 2, ಶ್ರೇಣಿ 3 ನಗರಗಳಿಗೆ ವಿಸ್ತರಿಸಲು ಪ್ರಯತ್ನಿಸುತ್ತಿದೆ. ಆ ಮನಸ್ಥಿತಿಯ ಫಲವೇ ಶಿವಮೊಗ್ಗದ ಅಭಿವೃದ್ಧಿ ಎಂದರು.

ಡಬಲ್ ಎಂಜಿನ್ ಅಳವಡಿಸಿದಾಗ ವೇಗ ಹೆಚ್ಚಾಗುತ್ತದೆ

ವಾಹನವಾಗಲಿ ಅಥವಾ ಸರ್ಕಾರವಾಗಲಿ ಡಬಲ್ ಎಂಜಿನ್ ಅಳವಡಿಸಿದಾಗ ಅದರ ವೇಗ ಹೆಚ್ಚಾಗುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಕರ್ನಾಟಕವು ಅಂತಹ ಒಂದು ಡಬಲ್ ಎಂಜಿನ್‌ನಲ್ಲಿ ಮುನ್ನಡೆಯುತ್ತಿದೆ, ಅದು ವೇಗವಾಗಿ ಓಡುತ್ತಿದೆ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವು ಮತ್ತೊಂದು ಪ್ರಮುಖ ಬದಲಾವಣೆಯನ್ನು ತಂದಿದೆ ಎಂದು ಹೇಳಿದರು.

ಕಾಂಗ್ರೆಸ್ ಅವಧಿಯಲ್ಲಿಏರ್ ಇಂಡಿಯಾ ಹಗರಣಗಳಿಗೆ ಹೆಸರಾಗಿತ್ತು

2014ಕ್ಕೂ ಮುನ್ನ ಏರ್ ಇಂಡಿಯಾ ಕುರಿತು ಚರ್ಚೆ ನಡೆದಾಗ ಅದು ನಕಾರಾತ್ಮಕ ಸುದ್ದಿಗಾಗಿಯೇ ಬರುತ್ತಿತ್ತು. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಏರ್ ಇಂಡಿಯಾವು ಹಗರಣಗಳಿಗೆ ಹೆಸರುವಾಸಿಯಾಗಿತ್ತು. ಅಲ್ಲದೆ, ನಷ್ಟದ ವ್ಯವಹಾರ ಮಾದರಿಯಾಗಿತ್ತು. ಇಂದು ಏರ್ ಇಂಡಿಯಾ ಭಾರತದ ಹೊಸ ಸಾಮರ್ಥ್ಯದ ರೂಪದಲ್ಲಿ ಪ್ರಪಂಚದ ಮುಂದೆ ಹೊಸ ವಿಮಾನವನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ಹೇಳುವ ಮೂಲಕ ಹಿಂದಿನ ಕಾಂಗ್ರೆಸ್ ಆಡಳಿತವನ್ನು ಟೀಕಿಸಿದರು.

    ಹಂಚಿಕೊಳ್ಳಲು ಲೇಖನಗಳು