logo
ಕನ್ನಡ ಸುದ್ದಿ  /  Karnataka  /  Raids On Illegal Pet Shops: Karnataka Government To Go After Pet Shops That Flout Rules

Raids on illegal pet shops: ನಿಯಮ ಉಲ್ಲಂಘಿಸುತ್ತಿವೆ ಪೆಟ್‌ ಶಾಪ್‌ಗಳು; ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸರ್ಕಾರ

HT Kannada Desk HT Kannada

Jan 14, 2023 02:10 PM IST

ಸಚಿವ ಪ್ರಭು ಚೌಹಾಣ್

  • Raids on illegal pet shops: ರಾಜ್ಯದಲ್ಲಿ ನಿಯಮ ಉಲ್ಲಂಘಿಸಿ ಸ್ಥಾಪನೆ ಆಗಿರುವ ಅನೇಕ ಪೆಟ್‌ಶಾಪ್‌ಗಳಿವೆ. ಅವುಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವಾಣ್‌ ಶುಕ್ರವಾರ ಎಚ್ಚರಿಸಿದ್ದಾರೆ.

ಸಚಿವ ಪ್ರಭು ಚೌಹಾಣ್
ಸಚಿವ ಪ್ರಭು ಚೌಹಾಣ್

ರಾಜ್ಯದಲ್ಲಿ ಪೆಟ್‌ ಶಾಪ್‌ಗಳು ನಿಯಮ ಉಲ್ಲಂಘನೆ ಮಾಡುತ್ತಿವೆ. ಅವುಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಧಿಕಾರಿಗಳು ಬುಧವಾರ ಪೆಟ್‌ ಶಾಪ್‌ಗಳ ಮೇಲೆ ದಾಳಿ ನಡೆಸಿ 16 ವಿವಿಧ ತಳಿಗಳ 1,344 ಪ್ರಾಣಿಗಳನ್ನು ರಕ್ಷಿಸಿ ಪ್ರಕರಣ ದಾಖಲಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Bangalore Rains: ಬೆಂಗಳೂರಲ್ಲಿ ವರುಣ ದರ್ಶನ, ಸತತ 5 ತಿಂಗಳ ನಂತರ ಸುರಿದ ಮಳೆಗೆ ತಂಪಾದ ಉದ್ಯಾನ ನಗರಿ

Indian Railways:ಬೆಳಗಾವಿ-ಭದ್ರಾಚಲಂ, ಅರಸಿಕೆರೆ-ಹೈದ್ರಾಬಾದ್‌ ರೈಲು ರದ್ದು, ವಂದೇಭಾರತ್‌ ರೈಲು ಮಾರ್ಗ ಬದಲಾವಣೆ

Tumkur News: ತುಮಕೂರು ಹರಳೂರಿನ ಐತಿಹಾಸಿಕ ಶ್ರೀವೀರಭದ್ರ ಸ್ವಾಮಿಯ ಅದ್ದೂರಿ ರಥೋತ್ಸವ

Hassan Scandal: ಬಂಧನ ಭೀತಿ, ಜಾಮೀನಿಗಾಗಿ ನ್ಯಾಯಾಲಯಕ್ಕೆ ಮೊರೆ ಹೋದ ಎಚ್‌ಡಿ ರೇವಣ್ಣ

ರಾಜ್ಯದಲ್ಲಿ ನಿಯಮ ಉಲ್ಲಂಘಿಸಿ ಸ್ಥಾಪನೆ ಆಗಿರುವ ಅನೇಕ ಪೆಟ್‌ಶಾಪ್‌ಗಳಿವೆ. ಅವುಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವಾಣ್‌ ಶುಕ್ರವಾರ ಎಚ್ಚರಿಸಿದ್ದಾರೆ.

ಪರವಾನಗಿ ಪಡೆಯದೇ, ಅಗತ್ಯ ನಿಯಮ ಪಾಲಿಸದೇ ವಹಿವಾಟು ನಡೆಸುತ್ತಿರುವ ಪೆಟ್‌ ಶಾಪ್‌ಗಳ ವಿರುದ್ಧ ತಾರತಮ್ಯವಿಲ್ಲದ ನಿರ್ದಾಕ್ಷಿಣ ಕ್ರಮ ಜರುಗಿಸಬೇಕು ಎಂದು ಸಚಿವ ಪ್ರಭು ಚವಾಣ್‌ ಅಧಿಕಾರಿಗಳಿಗೆ ಸೂಚಿಸಿದರು.

ಮುಂಬರುವ ದಿನಗಳಲ್ಲಿ ಪೆಟ್‌ ಶಾಪ್‌ಗಳಲ್ಲಿ ಮಾರಾಟ ಮಾಡುವ ಪ್ರಾಣಿ, ಪಕ್ಷಿಗಳ ಮೇಲೆ ನಿಗಾ ಇರಿಸಲಾಗುವುದು. ಸ್ವದೇಶಿ ಮತ್ತು ವಿದೇಶಿ ಪಶು, ಪಕ್ಷಿಗಳ ಅಕ್ರಮ ಮಾರಾಟ ಕಂಡುಬಂದರೆ ಅಂಥವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುತ್ತದೆ. ಪಾರಿವಾಳ, ಮೊಲ, ಬಾತುಕೋಳಿ, ನಾಯಿ, ಬೆಕ್ಕು ಮತ್ತು ಇತರೆ ಪಶು, ಪಕ್ಷಿಗಳ ಮಾರಾಟ ಮಾಡುವಂಥ ಪೆಟ್‌ ಶಾಪ್‌ ಮಾಲೀಕರು ಈ ಸಂಬಂಧ ಕರ್ನಾಟಕ ಅನಿಮಲ್‌ ವೆಲ್ಫೇರ್‌ ಬೋರ್ಡ್‌ನಲ್ಲಿ ನೋಂದಣಿ ಮಾಡಿಕೊಂಡು ಪರವಾನಗಿ ಪಡೆಯಬೇಕು ಎಂದು ಚವಾಣ್‌ ಹೇಳಿದರು.

ಬೆಂಗಳೂರಿನಲ್ಲಿ ನಡೆದ ತಪಾಸಣೆ ವೇಳೆ ಅನೇಕ ಪೆಟ್‌ ಶಾಪ್‌ಗಳಲ್ಲಿ ಸ್ವಚ್ಛತೆ ಕಾಪಾಡದೇ ಇರುವುದು ಪತ್ತೆಯಾಗಿತ್ತು. ಗೂಡಿನಲ್ಲಿ ಮಿತಿ ಮೀರಿದ ಪಶು, ಪಕ್ಷಿಗಳಿರುವುದು ಕಂಡುಬಂದಿತ್ತು. ಅನೇಕ ಪೆಟ್‌ ಶಾಪ್‌ಗಳಲ್ಲಿ ಪಪ್ಪಿಗಳ ಮಾರಾಟ ಮಾಡುತ್ತಿದ್ದರು. ಪೆಟ್‌ ಶಾಪ್‌ಗಳಲ್ಲಿ ಪಶುಪಕ್ಷಿಗಳಿಗೆ ಅಗತ್ಯ ನೀರು, ಆಹಾರವನ್ನು ಒದಗಿಸುತ್ತಿರಲಿಲ್ಲ. ಕೆಲವು ಶಾಪ್‌ಗಳಿಗೆ ಪರವಾನಗಿ ಇರಲಿಲ್ಲ ಎಂಬುದರ ಕಡೆಗೆ ಸಚಿವ ಚೌಹಾಣ್‌ ಗಮನಸೆಳೆದರು.

ಪ್ರಿವೆನ್ಶನ್‌ ಆಫ್‌ ಕ್ರೂಯಲ್ಟಿ ಟು ಅನಿಮಲ್ಸ್‌ (ಪಿಸಿಎ) ಆಕ್ಟ್‌ 2018, ಡಾಗ್‌ ಬ್ರೀಡಿಂಗ್‌ ಆಂಡ್‌ ಮಾರ್ಕೆಟಿಂಗ್‌ ರೂಲ್ಸ್‌ 2017 ಮತ್ತು ಪೆಟ್‌ ಶಾಪ್‌ ರೂಲ್ಸ್‌ 2018ರ ಪ್ರಕಾರ ಪೆಟ್‌ ಶಾಪ್‌ಗಳು ವಹಿವಾಟು ನಡೆಸಬೇಕು. ಅನಧಿಕೃತ ಪೆಟ್‌ ಶಾಪ್‌ಗಳು ಅಥವಾ ಪ್ರಾಣಿ ಹಿಂಸೆ ಮಾಡುವಂತಹ ಪೆಟ್‌ ಶಾಪ್‌ ಗಮನಕ್ಕೆ ಬಂದರೆ ನಾಗರಿಕರು ದೂರವಾಣಿ ಸಂಖ್ಯೆ 82771 00200ಕ್ಕೆ ಕರೆ ಮಾಡಿ ತಿಳಿಸಬಹುದು ಎಂದು ಸಚಿವರು ಹೇಳಿದರು.

ಇತರೆ ಗಮನಸೆಳೆಯುವ ಸುದ್ದಿ

Gene fingerprinting: ರಾಜಕೀಯ ಭಿನ್ನಮತೀಯರನ್ನು ಟಾರ್ಗೆಟ್‌ ಮಾಡಲು ಜೀನ್‌ ಫಿಂಗರ್‌ ಪ್ರಿಂಟಿಂಗ್‌ ಬಳಸಬಹುದು!; ಹೇಗೆ ಟಾರ್ಗೆಟ್‌ ಮಾಡ್ತಾರೆ?

ರಾಜಕೀಯ ಭಿನ್ನಮತೀಯರನ್ನು ಗುರುತಿಸಲು ಮತ್ತು ಟಾರ್ಗೆಟ್‌ ಮಾಡಲು ಹೊಸ ಜೆನಿಟಿಕ್‌ ಸೀಕ್ವೆನ್ಸಿಂಗ್‌ ಐಡೆಂಟಿಫಿಕೇಶನ್‌ ಟೆಕ್ನಿಕ್‌ ಬಳಕೆಯಾಗಬಹುದು ಎಂಬುದು ಈಗ ಹೊಸ ಆತಂಕ. ಜೆನಿಟಿಕ್‌ ಸ್ವೀಕ್ವೆನ್ಸಿಂಗ್‌ ಮೂಲಕ ಅಪರಾಧ ಸನ್ನಿವೇಶದಲ್ಲಿದ್ದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಇದರಿಂದ ಸಾಧ್ಯವಾಗಬಹುದು ಎಂಬ ವಿಚಾರದ ಕಡೆಗೆ ಪುಲಿಟ್ಜೆರ್ ವಿಜೇತ ಡಾ.ಸಿದ್ಧಾರ್ಥ ಮುಖರ್ಜಿ ಗಮನಸೆಳೆದರು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Shri Ram-Janaki Yatra: ಭಾರತದ ಅಯೋಧ್ಯೆಯಿಂದ ನೇಪಾಳದ ಜನಕಪುರಕ್ಕೆ ರೈಲು ಯಾತ್ರೆ; ದಿನಾಂಕ, ಬುಕ್ಕಿಂಗ್‌ ಶುರು ಯಾವಾಗ?

Shri Ram-Janaki Yatra: ಭಾರತದ ಅಯೋಧ್ಯೆಯಿಂದ ನೇಪಾಳದ ಜನಕಪುರಕ್ಕೆ ಮುಂದಿನ ತಿಂಗಳಿಂದ ಪ್ರವಾಸಿ ರೈಲು ಯಾತ್ರೆ ಶುರುವಾಗಲಿದೆ. ಭಾರತೀಯ ರೈಲ್ವೆ ಈ ಉಪಕ್ರಮ ಜಾರಿಗೊಳಿಸಿದ್ದು, ಮೊದಲ ಯಾತ್ರೆ ಫೆ.17ರಂದು ಹೊರಡಲಿದೆ. ನವದೆಹಲಿಯಲ್ಲಿ ಇದಕ್ಕೆ ಚಾಲನೆ ಸಿಗಲಿದೆ. ವಿವರ ಇಲ್ಲಿದೆ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು