logo
ಕನ್ನಡ ಸುದ್ದಿ  /  Nation And-world  /  Sengol Explainer What Is Sengol Historical Symbol Of Chola Dynasty And Independence Fair Governance New Parliament Uks

Sengol Explainer: ಏನಿದು ಸೆಂಗೋಲ್‌; ಅಧಿಕಾರದ ಐತಿಹಾಸಿಕ ಸಂಕೇತವಾಗಿರುವ ಚೋಳರ ಕಾಲದ ರಾಜದಂಡದ ಸುತ್ತಮುತ್ತ

Umesh Kumar S HT Kannada

May 25, 2023 05:22 PM IST

ಚೋಳರ ಕಾಲದ ಅಧಿಕಾರ ಹಸ್ತಾಂತರ ಪದ್ಧತಿಯ ಸಂಕೇತ ಸೆಂಗೋಲ್‌ (ಸಾಂದರ್ಭಿಕ ಚಿತ್ರ)

  • Sengol Explainer: ಅಧಿಕಾರದ ಐತಿಹಾಸಿಕ ಸಂಕೇತ, ಚೋಳಕಾಲದ ಅಧಿಕಾರ ಹಸ್ತಾಂತರ ಪದ್ಧತಿಯ ಪ್ರತೀಕ ಸೆಂಗೋಲ್‌ ಈಗ ಸುದ್ದಿಯಲ್ಲಿದೆ. ಏನಿದು ಸೆಂಗೋಲ್‌, ಇದರ ಮಹತ್ವ ಮತ್ತು ಇತರೆ ವಿವರಣೆ ಇಲ್ಲಿದೆ.

ಚೋಳರ ಕಾಲದ ಅಧಿಕಾರ ಹಸ್ತಾಂತರ ಪದ್ಧತಿಯ ಸಂಕೇತ ಸೆಂಗೋಲ್‌ (ಸಾಂದರ್ಭಿಕ ಚಿತ್ರ)
ಚೋಳರ ಕಾಲದ ಅಧಿಕಾರ ಹಸ್ತಾಂತರ ಪದ್ಧತಿಯ ಸಂಕೇತ ಸೆಂಗೋಲ್‌ (ಸಾಂದರ್ಭಿಕ ಚಿತ್ರ) (HT Kannada)

ಹೊಸ ಸಂಸತ್‌ ಭವನ ಮೇ 28ರಂದು ಲೋಕಾರ್ಪಣೆಯಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಐತಿಹಾಸಿಕ ಅಧಿಕಾರದ ಸಂಕೇತವಾಗಿರುವ ರಾಜದಂಡವನ್ನು ಸ್ವೀಕರಿಸಿ ಸಂಸತ್‌ಭವನದಲ್ಲಿ ಲೋಕಸಭೆಯ ಸ್ಪೀಕರ್‌ ಆಸನದ ಪಕ್ಕ ಅದೇ ದಿನ ಸ್ಥಾಪಿಸಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Tik Tok Star Murder: ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ ಓಂ ಫಹಾದ್‌ ಭೀಕರ ಹತ್ಯೆ, ಕಾರಣವೇನು

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

ಇವಿಎಂ ವಿವಿಪ್ಯಾಟ್ ಪ್ರಕರಣ; ಅಡ್ಡ ಪರಿಶೀಲನೆ ಮಾಡಿ ಎಂದವರ ವಿರುದ್ಧ ಸುಪ್ರೀಂ ಕೋರ್ಟ್ ಗರಂ, ಎಲ್ಲಾ ಅರ್ಜಿಗಳು ವಜಾ

ರಸ್ತೆ ಮೇಲೆ ಕಾಣಸಿಕ್ತು ತಲೆಕೆಳಗಾದ ಕಾರು, ಅಪಘಾತವಾಗಿಲ್ಲ, ಪಲ್ಟಿಯಾಗಿಲ್ಲ, ಕುತೂಹಲ ಕೆರಳಿಸಿದೆ ಈ ವೈರಲ್ ವಿಡಿಯೋ

ಬ್ರಿಟಿಷರಿಂದ ಅಧಿಕಾರ ಹಸ್ತಾಂತರವನ್ನು ಪ್ರತಿನಿಧಿಸಲು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಸ್ವೀಕರಿಸಿದ ತಮಿಳುನಾಡಿನ ಐತಿಹಾಸಿಕ ರಾಜದಂಡವಾದ 'ಸೆಂಗೊಲ್' ಅದು. ಅದನ್ನು ಅಲಹಾಬಾದ್‌ನ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ 24 ಅಧೀನಮ್ (ಮಠ) ಮುಖ್ಯಸ್ಥರಿಂದ ಸೆಂಗೋಲ್ ಅನ್ನು ಸ್ವೀಕರಿಸಲಿದ್ದಾರೆ. ಆ ಮೂಲಕ ದಕ್ಷಿಣ ಭಾರತಕ್ಕೆ, ವಿಶೇಷವಾಗಿ ತಮಿಳುನಾಡಿಗೆ ಮಹತ್ವದ ರಾಜಕೀಯ ಸಂದೇಶವನ್ನು ನೀಡಲಿದ್ದಾರೆ. ಅಧಿಕಾರದ ಐತಿಹಾಸಿಕ ಸಂಕೇತವಾದ ಸೆಂಗೋಲ್ ಅನ್ನು ಹೊಸ ಸಂಸತ್ತಿನ ಕಟ್ಟಡದಲ್ಲಿ ಲೋಕಸಭಾ ಸ್ಪೀಕರ್ ಆಸನದ ಬಳಿಕ ಸ್ಥಾಪಿಸಲ್ಪಡಲಿದೆ.

ಇಂಡಿಯಾ ಟುಡೇ ಮಾಹಿತಿ ಪ್ರಕಾರ, "ಓಡುವರ್‌" ಅಥವಾ ತಮಿಳು ದೇವಾಲಯದ ಗಾಯಕರು, ನಾದಸ್ವರಂ ಸಂಗೀತಗಾರರು ತಮ್ಮ ಭಾವಪೂರ್ಣ ಸಂಗೀತದಿಂದ ಮೋಡಿಮಾಡುವಾಗ ಹಿನ್ನೆಲೆಯಲ್ಲಿ "ಕೋಲರು ಪಧಿಗಮ್" ಅನ್ನು ಸಾಹಿತ್ಯಿಕವಾಗಿ ಪಠಿಸುತ್ತ ಪ್ರಧಾನಿಯವರ ಜತೆಗೆ ಹೆಜ್ಜೆ ಹಾಕಲಿದ್ದಾರೆ. ಇದಾದ ಬಳಿಕ ರಾಜದಂಡದ ಹಸ್ತಾಂತರ ಮತ್ತು ಲೋಕಸಭಾ ಸ್ಪೀಕರ್‌ ಆಸನದ ಪಕ್ಕ ಗಾಜಿನ ಬಾಕ್ಸ್‌ನಲ್ಲಿ ರಾಜದಂಡವನ್ನು ಇರಿಸಲಾಗುತ್ತದೆ.

ಸಾಂಪ್ರದಾಯಿಕ ಚೋಳ ಪದ್ಧತಿ

ರಾಜರ ಪಟ್ಟಾಭಿಷೇಕದ ಪಾರುಪತ್ಯ ನಡೆಸುವವರು ಸಮಯಾಚಾರ್ಯರು (ಆಧ್ಯಾತ್ಮಿಕ ನಾಯಕರು). ಅವರೇ ಈ ಅಧಿಕಾರ ಹಸ್ತಾಂತರದ ಪವಿತ್ರಕಾರ್ಯವನ್ನು ನೆರವೇರಿಸುವಂಥವರು. ಇದು ಸಾಂಪ್ರದಾಯಿಕ ಚೋಳ ಪದ್ಧತಿ ಆಗಿತ್ತು ಎಂದು ತಮಿಳು ವಿಶ್ವವಿದ್ಯಾಲಯದ ಪುರಾತತ್ವ ವಿಭಾಗದ ಮ್ಯಾರಿಟೈಮ್ ಹಿಸ್ಟರಿ ಮತ್ತು ಮೆರೈನ್ ಇಲಾಖೆಯೊಂದಿಗೆ ಆಡಳಿತಗಾರ ಪ್ರೊ.ಎಸ್.ರಾಜವೇಲು ವಿವರಿಸಿರುವುದಾಗಿ ಪಿಟಿಐ ತಿಳಿಸಿದೆ.

ಪುರಾತನ ಶೈವ ಮಠ ತಿರುವವಡುತುರೈ ಆದೀನಂ ಮಠದ ಮುಖ್ಯಸ್ಥರು 1947 ರಲ್ಲಿ ನೆಹರು ಅವರಿಗೆ ಸೆಂಗೋಲ್ ಅನ್ನು ಹಸ್ತಾಂತರಿಸಿದರು. ಚೋಳರ ಯುಗದ ಸಂಪ್ರದಾಯವನ್ನು ಅನುಸರಿಸಿ, ಬ್ರಿಟಿಷರಿಂದ ಆಡಳಿತ ಹಸ್ತಾಂತರವಾದ ಸಂದರ್ಭದಲ್ಲಿ ಮೊದಲ ಪ್ರಧಾನಿ ನೆಹರೂ ಅವರಿಗೆ ಸೆಂಗೋಲ್‌ ಅನ್ನು ಹಸ್ತಾಂತರಿಸಿದರು.

ತಮಿಳು ರಾಜರು ಈ ಸೆಂಗೋಲ್ (ರಾಜದಂಡವನ್ನು ಉಲ್ಲೇಖಿಸುವ ತಮಿಳು ಪದ) ಅನ್ನು ಹೊಂದಿದ್ದರು. ಇದು ನ್ಯಾಯ ಮತ್ತು ಉತ್ತಮ ಆಡಳಿತದ ಸಂಕೇತವಾಗಿದೆ. ಎರಡು ಮಹಾನ್ ಮಹಾಕಾವ್ಯಗಳಾದ ಸಿಲಪತಿಕಾರಂ ಮತ್ತು ಮಣಿಮೇಕಲೈಗಳಲ್ಲಿ ಸೆಂಗೋಲ್‌ನ ಮಹತ್ವವನ್ನು ದಾಖಲಿಸಲಾಗಿವೆ" ಎಂದು ಪ್ರೊ.ಎಸ್‌.ರಾಜವೇಲು ವಿವರಿಸಿದರು.

ಸೆಂಗೋಲ್‌ ನೆಹರೂಗೆ ಹಸ್ತಾಂತರವಾದ ಸನ್ನಿವೇಶ

ಭಾರತದ ಕೊನೆಯ ಗವರ್ನರ್‌ ಜನರಲ್‌ ಸಿ.ರಾಜಗೋಪಾಲಾಚಾರಿ ಅವರು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಚೋಳರ ಯುಗದ ಪದ್ಧತಿಯ ಮಹತ್ವವನ್ನು ವಿವರಿಸಿದ್ದರು. ಅದರಂತೆ, ದೇಶದ ಅತ್ಯಂತ ಹಳೆಯ ಶೈವ ಮಠಗಳಲ್ಲಿ ಒಂದಾದ ತಿರುವವಡುತುರೈ ಅಧೀನಂ, ಬಂಗಾರದ ಸೆಂಗೋಲ್‌ ಅನ್ನು ಮೂವರು ಹಿರಿಯ ಮಠಾಧೀಶರು, ಒಬ್ಬರ ಸಂಗೀತಗಾರರ ನಿಯೋಗದ ಮೂಲಕ ಹಸ್ತಾಂತರಿಸಿತು. ಈ ರಾಜದಂಡವನ್ನು ಚೆನ್ನೈ ಮೂಲದ ವುಮ್ಮಿಡಿ ಬಂಗಾರುಚೆಟ್ಟಿ ಆಂಡ್‌ ಸನ್ಸ್‌ ತಯಾರಿಸಿತ್ತು. ಈ ರಾಜದಂಡ ಅಲಹಾಬಾದ್‌ನ ನ್ಯಾಷನಲ್‌ ಮ್ಯೂಸಿಯಂನಲ್ಲಿದೆ.

ಸಂಸ್ಕೃತಿ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಎನ್‌ಡಿಟಿವಿಗೆ ನೀಡಿದ ಮಾಹಿತಿ ಪ್ರಕಾರ, ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಸೆಂಗೋಲ್ ಅನ್ನು ಮೊದಲು ಜವಾಹರಲಾಲ್ ನೆಹರು ಅವರ ಪೂರ್ವಜರ ಮನೆ ಆನಂದ ಭವನದಲ್ಲಿ ಇರಿಸಲಾಯಿತು. ನಂತರ ಅದನ್ನು ಅಲಹಾಬಾದ್‌ನ ವಸ್ತುಸಂಗ್ರಹಾಲಯಕ್ಕೆ ಕಳುಹಿಸಲಾಯಿತು. ಮೂರು ತಿಂಗಳು ಬೆನ್ನುಬಿದ್ದು ಸೆಂಗೋಲ್‌ ಎಲ್ಲಿದೆ ಎಂಬುದನ್ನ ಪತ್ತೆ ಹಚ್ಚಲಾಗಿದೆ. ಅಲಹಾಬಾದ್‌ನ ಮ್ಯೂಸಿಯಂ ಕ್ಯುರೇಟರ್‌ ಅಂತಿಮವಾಗಿ ಅದನ್ನು ಗುರುತಿಸಿದರು. ವುಮ್ಮಿಡಿ ಬಂಗಾರುಚೆಟ್ಟಿ ಆಂಡ್‌ ಸನ್ಸ್‌ ಅನ್ನು ಸಂಪರ್ಕಿಸಿ ಸೆಂಗೋಲ್‌ ಅವರೇ ತಯಾರಿಸಿದ್ದು ಎಂಬುದನ್ನು ಖಚಿತಪಡಿಸಲಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕೆಷ್ಟು ಮಹತ್ವ?

ಪುರಾತನ ಕಾಲದಲ್ಲಿ ಹೊಸ ರಾಜನಿಗೆ ಪಟ್ಟಾಭಿಷೇಕ ನಡೆದಾಗ ರಾಜಪುರೋಹಿತರು ಅವರಿಗೆ ಸೆಂಗೋಲ್‌ ನೀಡಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಸುವುದು ಪದ್ಧತಿಯಾಗಿತ್ತು. ಅದು ಅಧಿಕಾರ ವರ್ಗಾವಣೆಯ ಸಂಕೇತ. ಆದರೆ ಪ್ರಜಾಪ್ರಭುತ್ವದಲ್ಲಿ ಇಂತಹ ಆಚರಣೆಗಳಿಗೆ ಸ್ಥಾನವಿಲ್ಲ. ಹೀಗಿರುವಾಗ ಇದಕ್ಕೆ ಎಷ್ಟು ಮಹತ್ವ ನೀಡಬೇಕು ಎಂಬುದು ದ್ರಾವಿಡ ವಿದ್ವಾಂಸ, ಲೇಖಕ ಕೆ.ತಿರುನಾವುಕ್ಕರಸು ಅವರ ಪ್ರಶ್ನೆ.

ಅದೇ ರೀತಿ, ಆಡಳಿತಾರೂಢ ಡಿಎಂಕೆಯ ಟಿಕೆಎಸ್ ಇಳಂಗೋವನ್ ಅವರು, ಸೆಂಗೋಲ್ ಸ್ವೀಕರಿಸುವವರಿಗೆ ನ್ಯಾಯಯುತವಾಗಿ ಆಡಳಿತ ನಡೆಸಬೇಕೆಂಬ ಆದೇಶದ ನೆನಪಿರಬೇಕು. ಆದರೆ ಪ್ರಜಾಪ್ರಭುತ್ವ ಎಂದರೆ ಜನರಿಗೆ ಯಾವಾಗಲೂ ಸರ್ಕಾರವನ್ನು ಪ್ರಶ್ನಿಸುವ ಅಧಿಕಾರವಿದೆ. ಅವರೇ ಆಡಳಿತಗಾರರು. ಸೆಂಗೋಲ್ ಕೊಡುವುದಕ್ಕೆ ನಮಗೆ ಒಬ್ಬ ರಾಜನಿದ್ದಾನೆಯೇ? ಎಂದು ಪ್ರಶ್ನಿಸಿರುವುದಾಗಿ ಎನ್‌ಡಿಟಿವಿ ವರದಿ ಹೇಳಿದೆ.

ಆದಾಗ್ಯೂ, ಸಂಸತ್ತಿನಲ್ಲಿ ರಾಜದಂಡವು ಉತ್ತರ ಮತ್ತು ದಕ್ಷಿಣ ಭಾರತದ ನಡುವಿನ ಸಾಂಸ್ಕೃತಿಕ ಏಕತೆಯ ಸಂಕೇತ. ಭಾರತವು ಯಾವಾಗಲೂ ಹೀಗೆಯೇ ಇದೆ. ಇದು ಉತ್ತರದಿಂದ ದಕ್ಷಿಣಕ್ಕೆ ಒಂದೇ ಸಂಸ್ಕೃತಿಯ ಸೂತ್ರದಲ್ಲಿ ಜೋಡಿಸಲ್ಪಟ್ಟಿದೆ. ವೈವಿಧ್ಯತೆ ಎಂದರೆ ವ್ಯತ್ಯಾಸವಲ್ಲ. ಸೆಂಗೋಲ್ ಅನ್ನು ಆಡಳಿತಗಾರನಿಗೆ ನೀಡಲಾಗುತ್ತದೆ. ಮುಖ್ಯವಾಗಿ ತನ್ನ ಜನರ ಮಾತುಗಳನ್ನು ಕೇಳಲು ಅವನ ಕರ್ತವ್ಯಗಳನ್ನು ನೆನಪಿಸುವುದರ ಸಂಕೇತ ಅದು. ಪ್ರಜಾಪ್ರಭುತ್ವವು ನಮ್ಮ ರಾಜ್ಯದ ಅವಿಭಾಜ್ಯ ಅಂಗವಾಗಿದೆ. ಇದರಲ್ಲಿ ಆಡಳಿತಗಾರರು ಜನರ ಮಾತುಗಳನ್ನು ಕೇಳುತ್ತಾರೆ. ಆಡಳಿತಗಾರನ ಸ್ಥಾನದಲ್ಲಿ ಪ್ರಧಾನಿ ಇದ್ದು, ಸರಿಯಾದುದನ್ನೇ ಮಾಡುತ್ತಿದ್ದಾರೆ ಎಂಬ ವಿವರಣೆಯನ್ನು ಎನ್‌ಡಿಟಿವಿ ಡಿಬೇಟ್‌ನಲ್ಲಿ ಡಾ ರಾಧಾಕೃಷ್ಣನ್ ನೀಡಿದ್ದಾರೆ.

ಸೆಂಗೋಲ್‌ ಬಗ್ಗೆ ಬಿಜೆಪಿಗೇಕಿಷ್ಟು ಗೌರವಾದರ?

ಕಳೆದ ಎರಡು ಲೋಕಸಭಾ ಚುನಾವಣೆ, ತಮಿಳುನಾಡು ವಿಧಾನಸಭಾ ಚುನಾವಣೆ ಗಮನಿಸಿದರೆ, ಬಿಜೆಪಿ ತಮಿಳುನಾಡಿನಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಲು ಹೋರಾಟ ನಡೆಸುತ್ತಿರುವುದು ವೇದ್ಯ ವಿಚಾರ. ಇನ್ನು, 2014 ಮತ್ತು 2019 ರಲ್ಲಿ ತಮಿಳುನಾಡು ಅನುಕ್ರಮವಾಗಿ ಎಐಎಡಿಎಂಕೆ ಮತ್ತು ಡಿಎಂಕೆಯನ್ನು ಬೆಂಬಲಿಸಿ ಸರ್ಕಾರ ರಚನೆಗೆ ಅವಕಾಶ ನೀಡಿತ್ತು. ತಮಿಳುನಾಡಿನಲ್ಲಿ ಸ್ವತಂತ್ರವಾಗಿ ತನ್ನ ಛಾಪು ಮೂಡಿಸಲು ಬಿಜೆಪಿ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ಸೆಂಗೋಲ್‌ ಅದರ ಒಂದು ಸಂಕೇತ. ಪೆರಿಯಾರಿಸ್ಟ್‌ ಅಲ್ಲದ, ಬ್ರಾಹ್ಮಣರಲ್ಲದ, ರಾಷ್ಟ್ರೀಯವಾದ, ಧರ್ಮನಿಷ್ಠ ಮತ್ತು ಹಿಂದು ಧಾರ್ಮಿಕತೆಯನ್ನು ಧಿಕ್ಕರಿಸುವ ಸಮಾಜದಲ್ಲಿ ಬಿಜೆಪಿ ತನ್ನ ಛಾಪು ಮೂಡಿಸಲು ಪ್ರಯತ್ನಿಸುತ್ತಿರುವುದು ಗಮನಾರ್ಹ.

    ಹಂಚಿಕೊಳ್ಳಲು ಲೇಖನಗಳು