logo
ಕನ್ನಡ ಸುದ್ದಿ  /  Karnataka  /  Voter Id Theft Case Judicial Inquiry Under Incharge Of High Court Cj Says Siddaramaiah

Siddaramaiah on voter id scam: ವೋಟರ್ ಐಡಿ ಕಳವು ಪ್ರಕರಣ: ಹೈಕೋರ್ಟ್ ಸಿಜೆ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ಆಗಬೇಕು: ಸಿದ್ದರಾಮಯ್ಯ

HT Kannada Desk HT Kannada

Nov 27, 2022 05:54 PM IST

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (ಫೋಟೋ-File)

  • ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಮೇಲ್ ಉಸ್ತುವಾರಿಯಲ್ಲಿ ಮತದಾರರ ಮಾಹಿತಿ ಕಳವು ಆರೋಪ ಪ್ರಕರಣ ನ್ಯಾಯಾಂಗ ತನಿಖೆ ಆಗಬೇಕು. ಆಗ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆ ನೀಡಬಹುದು. ಆಗ ಮಾತ್ರ ಚುನಾವಣಾ ಆಯೋಗದ ಮೇಲೆ ಜನರಿಗೆ ನಂಬಿಕೆ ಹಾಗೂ ವಿಶ್ವಾಸ ಮೂಡುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (ಫೋಟೋ-File)
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (ಫೋಟೋ-File)

ಬೆಂಗಳೂರು: ಮತದಾರರ ಮಾಹಿತಿ ಕಳವು ಆರೋಪ ಪ್ರಕರಣದಲ್ಲಿ ಆಡಳಿತ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ನಡುವಿನ ವಾಕ್ಸಮರ ಮುಂದುವರೆಯುತ್ತಲೇ ಇದೆ. ಈ ಪ್ರಕರಣದ ಬಗ್ಗೆ ಮಾತನಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಮೇಲ್ ಉಸ್ತುವಾರಿಯಲ್ಲಿ ಈ ಪ್ರಕರಣ ನ್ಯಾಯಾಂಗ ತನಿಖೆ ಆಗಬೇಕು. ಆಗ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆ ನೀಡಬಹುದು. ಆಗ ಮಾತ್ರ ಚುನಾವಣಾ ಆಯೋಗದ ಮೇಲೆ ಜನರಿಗೆ ನಂಬಿಕೆ ಹಾಗೂ ವಿಶ್ವಾಸ ಮೂಡುತ್ತದೆ ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Udupi News: ಪಾತ್ರ ಮುಗಿಸಿ, ಬಣ್ಣ ತೆಗೆಯುವಾಗಲೇ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ್ ಪುತ್ತೂರು

Bangalore News: ಶೂನ್ಯ ಮಳೆಯೊಂದಿಗೆ ಏಪ್ರಿಲ್ ತಿಂಗಳು ಮುಗಿಸಿದ ಬೆಂಗಳೂರು; 1983ರ ಬಳಿಕ ಇದೇ ಮೊದಲು; ವರದಿ

Tumkur News: ತುಮಕೂರಲ್ಲಿ ಕಾಡು ಪ್ರಾಣಿಗಳಿಗೆ ನೀರು ಹಂಚುವ ಜಲದಾನಿಗಳು, ಅರಣ್ಯ ಇಲಾಖೆ ಸಾಥ್

Shimoga News: ಮಲೆನಾಡಿನ ಹಸಿರ ನಡುವೆ ಹಿರೇ ಭಾಸ್ಕರ ಜಲಾಶಯ ದರ್ಶನ, ಏನಿದರ ವಿಶೇಷ, ಹೇಗೆ ಹೋಗಬೇಕು

ಕೆಪಿಸಿಸಿ ಕಚೇರಿಯಲ್ಲಿ ನಿನ್ನೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು, ಮುಕ್ತ ಹಾಗೂ ನ್ಯಾಯ ಬದ್ಧ ರೀತಿಯಲ್ಲಿ ಚುನಾವಣೆ ನಡೆಯಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಯಾರಿಗೆ ಆಶೀರ್ವಾದ ಮಾಡುತ್ತಾರೆ ಅವರು ಅಧಿಕಾರ ನಡೆಸಲಿ. ಇದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಮೇಲ್ ಉಸ್ತುವಾರಿಯಲ್ಲಿ ಈ ಪ್ರಕರಣ ನ್ಯಾಯಾಂಗ ತನಿಖೆ ಆಗಬೇಕು. ಆಗ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆ ನೀಡಬಹುದು. ಆಗ ಮಾತ್ರ ಚುನಾವಣಾ ಆಯೋಗದ ಮೇಲೆ ಜನರಿಗೆ ನಂಬಿಕೆ ಹಾಗೂ ವಿಶ್ವಾಸ ಮೂಡುತ್ತದೆ ಎಂದಿದ್ದಾರೆ.

ಈ ರೀತಿಯಾಗಿ ಮತದಾರರ ಮಾಹಿತಿಯ ಕಳವು ಯಾವ ಕಾಲದಲ್ಲೂ ಆಗಿರಲಿಲ್ಲ. ಆದರೆ ಈ ಬಿಜೆಪಿ ಸರ್ಕಾರದಲ್ಲಿ ಆಗುತ್ತಿದೆ. ಇಂತಹ ವಂಚಕರಿಗೆ ಶಿಕ್ಷೆ ಆಗಬೇಕು. ಸತ್ಯ ವಿಭಾಗೀಯ ಅಧಿಕಾರಿ ಯಿಂದ ಈ ಪ್ರಕರಣ ತನಿಖೆ ನಡೆಸಲು ತೀರ್ಮಾನಿಸಲಾಗಿದೆ. ಈ ಅಧಿಕಾರಿ ಮುಖ್ಯಮಂತ್ರಿ ಹಾಗೂ ಬಿಬಿಎಂಪಿ ಆಯುಕ್ತರ ವಿರುದ್ಧ ತನಿಖೆ ಮಾಡಲು ಸಾಧ್ಯವೇ? ಈ ಕಾರಣಕ್ಕೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ. ಈ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಅಕ್ರಮದ ಮೂಲಕ ರಾಜ್ಯದ ಜನರಿಗೆ ಮೋಸ ಮಾಡಲಾಗಿದೆ. ಇದು ಸಣ್ಣ ಅಪರಾಧವಲ್ಲ. ಇದು ಜನಪ್ರತಿನಿಧಿ ಕಾಯ್ದೆ ಹಾಗೂ ಐಪಿಸಿ ಹಾಗೂ ಚುನಾವಣಾ ಕಾಯ್ದೆಯ ಪ್ರಕಾರ ಗಂಭೀರ ಅಪರಾಧವಾಗಿದೆ. ಹೀಗಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಬಿಬಿಎಂಪಿಯ ಮುಖ್ಯ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು, ಹೊಸದಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ನನ್ನ ಅವಧಿ ಸೇರಿದಂತೆ ಎಲ್ಲಾ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಿ

ಬಿಜೆಪಿಯವರು ಸೋಲಿನ ಭಯದಿಂದ ಮತದಾರರ ಪಟ್ಟಿಯನ್ನು ತಿರುಚಿಸಿದ್ದಾರೆ. ನಾವು ಈ ವಿಚಾರವನ್ನು ಪ್ರಸ್ತಾಪ ಮಾಡಿದರೆ, ಸಿದ್ದರಾಮಯ್ಯ ಅವರ ಕಾಲದಲ್ಲಿ ಆಗಿರಲಿಲ್ಲವೇ? ಎಂದು ಹೇಳುತ್ತಿದ್ದಾರೆ. ನನ್ನ ಅವಧಿಯಲ್ಲಿ ಯಾವುದೇ ಸಂಸ್ಥೆಯು ಈ ರೀತಿಯ ಕ್ರಮ ನಡೆಸಲು ಆದೇಶ ನೀಡಿಲ್ಲ. ನನ್ನ ಅವಧಿಯ ನಂತರ 2018 ಹಾಗೂ 2019 ರ ಚುನಾವಣೆ ನಡೆದಿದೆ. ಈ ಚುನಾವಣೆಗಳಲ್ಲಿ ಬಿಜೆಪಿಯವರೇ ಶಾಸಕರಾಗಿದ್ದಾರೆ. ಹಾಗಿದ್ದರೆ ನೀವು ತಿರುಚಿತ ಮತದಾರರ ಪಟ್ಟಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದೀರಾ?

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಅವಧಿಯಲ್ಲಿ ಇದಕ್ಕೆ ಅವಕಾಶ ನೀಡಿದ್ದರೆ ನನ್ನ ಅವಧಿ ಸೇರಿದಂತೆ ಎಲ್ಲಾ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಿ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.

ಇಂದಿನ ಸರ್ಕಾರ ಮಾಡಿರಲಿಲ್ಲವೆಂದು ಸಬೂಬು ಹೇಳುವ ರೋಗ ಬಿಜೆಪಿ ಸರ್ಕಾರಕ್ಕೆ ಅಂಟಿಕೊಂಡಿದೆ. ನೀವು ಅಧಿಕಾರದಲ್ಲಿದ್ದು, ರಾಜ್ಯದ ಜನರ ತೆರಿಗೆ ಹಣವನ್ನು ಖರ್ಚು ಮಾಡುತ್ತಿರುವವರು ನೀವು. ಲೂಟಿ ಹೊಡೆಯುತ್ತಿರುವವರು ನೀವು. ತನಿಖೆ ಮಾಡಿಸಿ. 2018ರಲ್ಲಿ ನೀವು ಹೇಳುತ್ತಿರುವ ತಿರುಚಿಸಿದ ಮತದಾರರ ಪಟ್ಟಿಯ ಮೇಲೆ ಚುನಾವಣೆ ನಡೆದಿದೆಯಲ್ಲವೇ? ನನ್ನ ಪ್ರಕಾರ ಇದೆಲ್ಲವೂ ಕಪೋಕಲ್ಪಿತ ಆರೋಪ.

ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರಮುಖ ಕಿಂಗ್ ಪಿನ್ ಆಗಿದ್ದು, ಅವರು ಕೂಡಲೇ ರಾಜೀನಾಮೆ ನೀಡಬೇಕು. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಈ ಮೂರು ಕ್ಷೇತ್ರಗಳಲ್ಲಿ ಆಗಿರುವ ಅಧಿಕಾರಿಗಳ ಬದಲಾವಣೆಯಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು