logo
ಕನ್ನಡ ಸುದ್ದಿ  /  ಕರ್ನಾಟಕ  /  Cm On Sonia Gandhi: 'ಅವ್ರು ಬೇಲ್ ಮೇಲೆ ಹೊರಗಿದ್ದಾರೆ, ಅವ್ರಿಂದ ನಾವು ನೈತಿಕತೆಯ ಪಾಠ ಕಲಿಯೋ ಅವಶ್ಯಕತೆ ಇಲ್ಲ'; ಸಿಎಂ

Cm on Sonia Gandhi: 'ಅವ್ರು ಬೇಲ್ ಮೇಲೆ ಹೊರಗಿದ್ದಾರೆ, ಅವ್ರಿಂದ ನಾವು ನೈತಿಕತೆಯ ಪಾಠ ಕಲಿಯೋ ಅವಶ್ಯಕತೆ ಇಲ್ಲ'; ಸಿಎಂ

HT Kannada Desk HT Kannada

Oct 02, 2022 06:03 AM IST

'ಅವ್ರು ಬೇಲ್ ಮೇಲೆ ಹೊರಗಿದ್ದಾರೆ, ಅವ್ರಿಂದ ನಾವು ನೈತಿಕತೆಯ ಪಾಠ ಕಲಿಯೋ ಅವಶ್ಯಕತೆ ಇಲ್ಲ'; ಸಿಎಂ

    • ರಾಜ್ಯದ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ನವರು ಮಾತನಾಡುತ್ತಾರೆ. ರಾಹುಲ್ ಗಾಂಧಿ, ಅವರ ರಾಷ್ಟ್ರೀಯ ಅಧ್ಯಕ್ಷರು ಸೋನಿಯಾ ಗಾಂಧಿಯವರು ಬೇಲ್ ಮೇಲೆ ಹೊರಗಿದ್ದಾರೆ. ಇಲ್ಲಿನ ಅಧ್ಯಕ್ಷರು ಕೂಡ ಬೇಲ್ ಮೇಲೆ ಹೊರಗಿದ್ದಾರೆ.
'ಅವ್ರು ಬೇಲ್ ಮೇಲೆ ಹೊರಗಿದ್ದಾರೆ, ಅವ್ರಿಂದ ನಾವು ನೈತಿಕತೆಯ ಪಾಠ ಕಲಿಯೋ ಅವಶ್ಯಕತೆ ಇಲ್ಲ'; ಸಿಎಂ
'ಅವ್ರು ಬೇಲ್ ಮೇಲೆ ಹೊರಗಿದ್ದಾರೆ, ಅವ್ರಿಂದ ನಾವು ನೈತಿಕತೆಯ ಪಾಠ ಕಲಿಯೋ ಅವಶ್ಯಕತೆ ಇಲ್ಲ'; ಸಿಎಂ

ಬೆಂಗಳೂರು: ರಾಜ್ಯದ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ನವರು ಮಾತನಾಡುತ್ತಾರೆ. ರಾಹುಲ್ ಗಾಂಧಿ, ಅವರ ರಾಷ್ಟ್ರೀಯ ಅಧ್ಯಕ್ಷರು ಸೋನಿಯಾ ಗಾಂಧಿಯವರು ಬೇಲ್ ಮೇಲೆ ಹೊರಗಿದ್ದಾರೆ. ಇಲ್ಲಿನ ಅಧ್ಯಕ್ಷರು ಕೂಡ ಬೇಲ್ ಮೇಲೆ ಹೊರಗಿದ್ದಾರೆ. ಇಂತಹವರಿಂದ ನಾವು ನೈತಿಕತೆಯ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಹವಾಮಾನ ಮೇ 4; ಬೆಂಗಳೂರು, ಮೈಸೂರು, ಮಂಡ್ಯ, ಕೋಲಾರ ಸುತ್ತಮುತ್ತ ಅಲ್ಲಲ್ಲಿ ಮಳೆ, ಉಳಿದೆಡೆ ಒಣಹವೆ

ಸಂಪಾದಕೀಯ: ಸಂತ್ರಸ್ತರ ಮೇಲೆ ಪ್ರಶ್ನೆಗಳ ದಾಳಿ, ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದಲ್ಲಿ ಬಿಚ್ಚಿಕೊಳ್ಳುತ್ತಿದೆ ಸಮಾಜದ ಕರಾಳ ಮುಖ

ಬೆಂಗಳೂರು ಎಡಿಎ ರಂಗಮಂದಿರದಲ್ಲಿ ಕಲಾವಿದೆ ವಿದ್ಯಾಶ್ರೀ ಎಚ್‌ಎಸ್ ಅವರ ಭರತನಾಟ್ಯ ರಂಗಾರೋಹಣ ಇಂದು

MLC Election 2024: ಪ್ರಜ್ವಲ್ ಪ್ರಕರಣ ನಡುವೆಯೇ ವಿಧಾನ ಪರಿಷತ್ 6 ಸ್ಥಾನಗಳಿಗೆ ಜೂನ್ 3 ರಂದು ಚುನಾವಣೆ; ಜೂ 6 ಕ್ಕೆ ಫಲಿತಾಂಶ

ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರೇಸ್ ಕೋರ್ಸ್ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕರ್ನಾಟಕ ಮತ್ತು ಭಾರತದ ಜನತೆ ಈಗಾಗಲೇ ತಿರಸ್ಕಾರ ಮಾಡಿದ್ದಾರೆ. ಮುಂಬರುವ 2023 ರ ಚುನಾವಣೆಯಲ್ಲಿಯೂ ಕೂಡ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ. ನಿನ್ನೆ ಸಿದ್ದರಾಮಯ್ಯ ಅವರು ಆರು ತಿಂಗಳಾದ ಮೇಲೆ ನಮ್ಮ ಸರ್ಕಾರ ಬರುತ್ತದೆ ಅಂತ ಹೇಳಿರುವುದು ಕನಸು. ಅವರ ಕನಸಾಗಿಯೇ ಉಳಿಯುತ್ತದೆ. ಇನ್ಮುಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಅನ್ನುವುದು ಕನಸಿನ ಮಾತು ಎಂದು ಸಿಎಂ ಬೊಮ್ಮಾಯಿ‌ ನುಡಿದರು.

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಜತೆ ಜತೆಯಾಗಿಯೇ ಪಾದಯಾತ್ರೆ ಮಾಡಬೇಕು. ನಾವು ಅದಕ್ಕೆ ಬೇಡ ಅಂದಿಲ್ಲ‌. ಅವರು ಜೊತೆ ಜೊತೆಯಾಗಿ ಬಂದಾಗಲೇ ರಾಜಕಾರಣ ಸರಿ ಆಗುತ್ತದೆ. ಒಬ್ಬರು ಮುಂದೆ ಹೋಗಿ ಇನ್ನೊಬ್ಬರು ಹಿಂದೆ ಇರಬಾರದು. ಅವರಿಬ್ಬರೂ ಒಟ್ಟಿಗೆ ಇದ್ದಷ್ಟು ನಮಗೆ ಒಳ್ಳೆಯದ್ದು ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಭಾರತ ಜೋಡೋ ಯಾತ್ರೆಗೆ ಜನಸಾಮಾನ್ಯರಿಂದ ಪ್ರತಿಕ್ರಿಯೆ ಬರುತ್ತಿಲ್ಲ. ಕಷ್ಟಪಟ್ಟು ಬೇರೆ ಬೇರೆ ತಾಲ್ಲೂಕಿನಿಂದ ಜನರನ್ನು ಕರೆದುಕೊಂಡು ಬಂದು ಪ್ರದರ್ಶನ ಮಾಡುತ್ತಿದ್ದಾರೆ. ಅವರ ಜೊತೆಗೆ ಪಾದೆಯಾತ್ರೆ ಮಾಡುವವರ ಜನಸಂಖ್ಯೆ ಕಡಿಮೆಯಿದೆ. ಅಲ್ಲಲ್ಲಿ ಅಷ್ಟೇ ಜನರಿದ್ದಾರೆ, ಇಂದೊಂದು ತರಹ ಶೋ. ಕಾಂಗ್ರೆಸ್ ನವರು , ರಾಹುಲ್ ಗಾಂಧಿ ತಮ್ಮ ರಾಜಕೀಯ ಆಸ್ತಿತ್ವ ಉಳಿಸಿಕೊಳ್ಳಲು ಈ ಶೋ ಮಾಡುತ್ತಿದ್ದಾರೆ ಎಂದರು.

ನಿನ್ನೆ ಮತ್ತು ಇವತ್ತು ರಾಜ್ಯದ ಬಗ್ಗೆ ಮಾತನಾಡಿದ್ದಾರೆ. ನಾನು ಅದನ್ನು ಗಮನಿಸಿದ್ದು, ಇಷ್ಟು ಸಣ್ಣಮಟ್ಟದ ರಾಜಕಾರಣವನ್ನು ಮಾಡುವುದಕ್ಕೆ ನಾವು ಬಯಸುವುದಿಲ್ಲ. ಅವರು ಪಾದಯಾತ್ರೆ ಮಾಡಿಕೊಂಡು ಹೋಗಲಿ. ಜನರು ತೀರ್ಮಾನ ಮಾಡುತ್ತಾರೆ. ಕೀಳು ಮಟ್ಟದ ಮಾತುಗಳು, ಅಧಿಕಾರಿಗಳಿಗೆ ಹೆದರಿಸುವುದು ನಡೆಯುವುದಿಲ್ಲ. ಇದನ್ನು ನಾನು ಸ್ಪಷ್ಟಪಡಿಸುತ್ತೇನೆ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ‌ ನುಡಿದರು.

ಅಭಿವೃದ್ಧಿಗೆ ಅನುದಾನ: ಬೇರೆ ಏನು ಇಲ್ಲ

ಚನ್ನಪಟ್ಟಣಕ್ಕೆ ಪ್ರವಾಸ ಕೈಗೊಂಡಾಗ ಅಲ್ಲಿನ ಜನರು ಹಲವಾರು ಬೇಡಿಕೆಯಿಟ್ಟಿದ್ದರು. ಅದಕ್ಕೆ ಸಿ. ಪಿ ಯೋಗೇಶ್ವರ ಅವರು ಪ್ರತಿನಿಧಿಸಿದ್ದಾರೆ. ಹೀಗಾಗಿ ಆ ಭಾಗದ ಅಭಿವೃದ್ಧಿಗಾಗಿ ಅನುದಾನ ನೀಡಿದ್ದೇವೆ. ಇದರಲ್ಲಿ ಬೇರೆ ಏನು ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಹಿಂದಿನ ಸರ್ಕಾರಗಳು ಶಾಸಕರು, ವಿಧಾನ ಪರಿಷತ್ ಸದಸ್ಯರಲ್ಲದವರ ಕ್ಷೇತ್ರಕ್ಕೂ ಅನುದಾನ ಕೊಟ್ಟಿದ್ದಾರೆ. ಅದರ ಚರ್ಚೆಗೆ ನಾನು ಹೋಗುವುದಿಲ್ಲ. ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕುವ ಬಗ್ಗೆ ಗೊಂದಲ ಉಂಟಾಗಿದೆ. ಆಹ್ವಾನ ನೀಡದೇ ಶಿಷ್ಠಚಾರ ಉಲ್ಲಂಘನೆ ಮಾಡಿದ್ದರೆ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಬಹುದು. ಕ್ಷೇತ್ರದ ಶಾಸಕರಿಗೆ ಅಧ್ಯಕ್ಷ ಸ್ಥಾನ ಕೊಟ್ಟಿರುತ್ತಾರೆ. ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

    ಹಂಚಿಕೊಳ್ಳಲು ಲೇಖನಗಳು