logo
ಕನ್ನಡ ಸುದ್ದಿ  /  latest news  /  Ips Transfer: ಐಪಿಎಸ್‌ ಅಧಿಕಾರಿಗಳ ವರ್ಗ; ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ದಯಾನಂದ ನೇಮಕ

IPS Transfer: ಐಪಿಎಸ್‌ ಅಧಿಕಾರಿಗಳ ವರ್ಗ; ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ದಯಾನಂದ ನೇಮಕ

HT Kannada Desk HT Kannada

May 30, 2023 12:51 PM IST

ಬೆಂಗಳೂರು ನಗರ ನೂತನ ಪೊಲೀಸ್‌ ಆಯುಕ್ತ ಬಿ.ದಯಾನಂದ

    • ಕರ್ನಾಟಕ ರಾಜ್ಯ ಸರ್ಕಾರ ಹಲವು ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಬೆಂಗಳೂರು ನಗರ ನೂತನ ಪೊಲೀಸ್‌ ಆಯುಕ್ತ ಬಿ.ದಯಾನಂದ
ಬೆಂಗಳೂರು ನಗರ ನೂತನ ಪೊಲೀಸ್‌ ಆಯುಕ್ತ ಬಿ.ದಯಾನಂದ

ಬೆಂಗಳೂರು: ಬೆಂಗಳೂರು ನಗರಕ್ಕೆ ಹೊಸ ಪೊಲೀಸ್‌ ಆಯುಕ್ತರು ಬಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಒಂದಲ್ಲ ಎರಡಲ್ಲ ಇವರು 3 ಸಾವಿರ ವಸ್ತುಗಳ ಅನ್ವೇಷಕ, ನೀವು ಬಳಸುವ ಪ್ರತಿ ವಸ್ತುಗಳು ಇವರದ್ದೇ, ಯಾರವರು?

kalaburgi News: ಟ್ರಾಕ್ಟರ್‌ ಹತ್ತಿಸಿ ಪೊಲೀಸ್‌ ಹತ್ಯೆ: ಮರಳು ದಂಧೆ ತಡೆಯಲು ಹೋದಾಗ ಕಲಬುರಗಿ ಜಿಲ್ಲೆಯಲ್ಲಿ ಕೃತ್ಯ

KCET Results: ಸಿಇಟಿ ಫಲಿತಾಂಶ ಪ್ರಕಟ; ಯಾವ ವಿಷಯದಲ್ಲಿ ಯಾರು ಟಾಪರ್‌

Free bus service: ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಸಾರಿಗೆ ಪ್ರಯಾಣ ಶುರು; ಮೊದಲ ದಿನವೇ ರಶ್‌

ಹಿರಿಯ ಐಪಿಎಸ್‌ ಅಧಿಕಾರಿಗಳನ್ನು ವರ್ಗಾಯಿಸಲಾಗಿದ್ದು, ಬಿ.ದಯಾನಂದ ಅವರನ್ನು ಬೆಂಗಳೂರು ನಗರ ಪೊಲೀಸ್‌ ಆಯುಕ್ತರನ್ನಾಗಿ ನೇಮಿಸಲಾಗಿದೆ.

ವರ್ಷದ ಹಿಂದೆಯಷ್ಟೇ ಪೊಲೀಸ್‌ ಆಯುಕ್ತರಾಗಿ ವರ್ಷದ ಹಿಂದೆ ನೇಮಕಗೊಂಡಿದ್ದ ರೆಡ್ಡಿ ಅವರಿಗೆ ಈ ವರ್ಷದ ಆರಂಭದಲ್ಲಿ ಪೊಲೀಸ್‌ ಮಹಾನಿರ್ದೇಶಕರ ಹುದ್ದೆಗೆ ಬಡ್ತಿ ಅಲ್ಲಿಯೇ ಮುಂದುವರೆಸಲಾಗಿತ್ತು. ದಯಾನಂದ ಅವರು ಗುಪ್ತಚರ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಾಗಿದ್ದರು.

ಈವರೆಗೂ ನಗರ ಪೊಲೀಸ್‌ ಆಯುಕ್ತರಾಗಿದ್ದ ಸಿ.ಎಚ್‌.ಪ್ರತಾಪರೆಡ್ಡಿ ಅವರನ್ನು ಆಂತರಿಕ ಭದ್ರತಾ ವಿಭಾಗದ ಪೊಲೀಸ್‌ ಮಹಾನಿರ್ದೇಶಿಕರನ್ನಾಗಿ ನಿಯೋಜಿಸಲಾಗಿದೆ. ಗುಪ್ತಚರ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಾಗಿ ಮತ್ತೊಬ್ಬ ಹಿರಿಯ ಅಧಿಕಾರಿ ಕೆ.ವಿ. ಶರತ್‌ಚಂದ್ರ ಅವರನ್ನು ನೇಮಿಸಲಾಗಿದೆ. ಕೆ.ವಿ.ಶರತ್‌ಚಂದ್ರ ವರ್ಗದಿಂದ ತೆರವಾದ ಸಿಐಡಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರ ಕಾರ್ಯಭಾರವನ್ನು ಬೆಂಗಳೂರು ನಗರ ಹೆಚ್ಚುವರಿ ಆಯುಕ್ತ ಎಂ.ಎ.ಸಲೀ ಅವರಿಗೆ ವಹಿಸಲಾಗಿದೆ.

ಈಗಾಗಲೇ ಐಎಎಸ್‌ ಹಂತದ ಹಿರಿಯ ಅಧಿಕಾರಿಗಳನ್ನು ವರ್ಗ ಮಾಡಿದ್ದ ಕರ್ನಾಟಕ ಸರ್ಕಾರ ಈಗ ಐಪಿಎಸ್‌ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಗೂ ಚಾಲನೆ ನೀಡಿದೆ.

ಐಪಿಎಸ್‌ ಅಧಿಕಾರಿಗಳ ವರ್ಗಾವಣೆ ಪಟ್ಟಿ..

ಇದನ್ನೂ ಓದಿರಿ

IAS transfer: ಮತ್ತೆ ಐಎಎಸ್‌ ಅಧಿಕಾರಿಗಳ ವರ್ಗ, ಕೆಪಿಸಿಎಲ್‌ ಎಂಡಿಯಾಗಿ ಗೌರವ ಗುಪ್ತ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ