logo
ಕನ್ನಡ ಸುದ್ದಿ  /  Latest News  /  Kannada Live News Updates October 04-10-2022
20 ಶಾಸಕರ ಜತೆ ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ ಹೆಚ್ಡಿಕೆ ಕುಮಾರಸ್ವಾಮಿ(ANI Photo) (Mohammed Aleemuddin )

October 04 Kannada News Updates: 20 ಶಾಸಕರ ಜತೆ ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ ಎಚ್‌ಡಿ ಕುಮಾರಸ್ವಾಮಿ

Oct 04, 2022 05:29 PM IST

ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್‌ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Oct 04, 2022 05:31 PM IST

20 ಶಾಸಕರ ಜತೆ ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ HD ಕುಮಾರಸ್ವಾಮಿ

-  ಶಾಸಕರ ಜತೆ ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ ಹೆಚ್ಡಿಕೆ ಕುಮಾರಸ್ವಾಮಿ

- ವಿಶೇಷ ವಿಮಾನದಲ್ಲಿ ಹೈದ್ರಾಬಾದ್ ಗೆ ಹೊರಟ ಹೆಚ್ ಡಿ ಕುಮಾರಸ್ವಾಮಿ

- ನಾಳೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ನೂತನ ಪಕ್ಷ ಸ್ಥಾಪನೆ ಘೋಷಣೆ ಮಾಡಲಿದ್ದಾರೆ.

- ಆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ.

- ಭಾರತ ರಾಷ್ಟ್ರ ಸಮಿತಿ (BRS) ಪಕ್ಷ ಸ್ಥಾಪನೆ ಮಾಡಲಿರುವ ಕೆಸಿಆರ್

- ಪಕ್ಷ ಸ್ಥಾಪನೆ ಬಗ್ಗೆ ಕೆಲ ತಿಂಗಳ ಹಿಂದೆ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಜತೆ ಚರ್ಚೆ ನಡೆಸಿದ್ದ ಕೆಸಿಆರ್

- ಕೆಲ ತಿಂಗಳ ಹಿಂದೆಯಷ್ಟೇ ಹೈದ್ರಾಬಾದ್ ಗೆ ತೆರಳಿ ಕೆಸಿಆರ್ ಜತೆ ಚರ್ಚೆ ನಡೆಸಿದ್ದ ಹೆಚ್ ಡಿಕೆ

- ಇಂದು ಹೈದ್ರಾಬಾದ್ ನಲ್ಲೇ ಶಾಸಕರ ಜತೆ ವಾಸ್ತವ್ಯ ಹೂಡಲಿರುವ ಹೆಚ್.ಡಿ.ಕುಮಾರಸ್ವಾಮಿ

20 ಶಾಸಕರ ಜತೆ ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ ಹೆಚ್ಡಿಕೆ ಕುಮಾರಸ್ವಾಮಿ(ANI Photo)

20 ಶಾಸಕರ ಜತೆ ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ ಹೆಚ್ಡಿಕೆ ಕುಮಾರಸ್ವಾಮಿ(ANI Photo) (Mohammed Aleemuddin )

Oct 04, 2022 04:28 PM IST

ಹಿಮಪಾತದಲ್ಲಿ ಸಿಲುಕಿ 10 ಪರ್ವತಾರೋಹಿಗಳ ಸಾವು, ಎಂಟು ಜನರ ರಕ್ಷಣೆ, 11 ಜನರಿಗಾಗಿ ಹುಡುಕಾಟ

ಇಂದು ದ್ರೌಪದಿ ಶಿಖರದ ದಾಂಡ-2 ಪರ್ವತದಲ್ಲಿ ಹಿಮಪಾತಕ್ಕೆ ಸಿಲುಕಿದ್ದ 28 ಪರ್ವತಾರೋಹಿಗಳಲ್ಲಿ ಎಂಟು ಜನರ ರಕ್ಷಣೆ ಮಾಡಲಾಗಿದೆ. ಸುಮಾರು ಹತ್ತು ಜನರು ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ. ಉಳಿದ ಹನ್ನೊಂದು ಜನರ ಹುಡುಕಾಟ ಆರಂಭಿಸಲಾಗಿದೆ.

ಹಿಮಪಾತ ಸಂಭವಿಸುವ ಸಮಯದಲ್ಲಿ 170 ಕ್ಕೂ ಹೆಚ್ಚು ಪರ್ವತಾರೋಹಿಗಳು ತರಬೇತಿ ಪಡೆಯುತ್ತಿದ್ದರು. ಹಿಮಪಾತ ಸಂಭವಿಸಿದ ತಕ್ಷಣ ಡೆಹಡ್ರೂನ್‌ ಹೆಲಿಪ್ಯಾಡ್ನಿಂದ ಎಸ್‌ಡಿಆರ್‌ಎಫ್‌ ಪಡೆಯು ಆಗಮಿಸಿದ್ದು, ಹಿಮಪಾತದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಭಾರತೀಯ ವಾಯುಪಡೆ, ಐಟಿಬಿಪಿ ಕೂಡ ರಕ್ಷಣೆಯಲ್ಲಿ ತೊಡಗಿದೆ. ಹೀಗಿದ್ದರೂ, ಭೀಕರ ಹಿಮಪಾತವು ಇಲ್ಲಿಯವರೆಗೆ ಹತ್ತು ಜನರನ್ನು ಬಲಿ ಪಡೆದಿದ್ದು, ಹಿಮದಲ್ಲಿ ಸಿಲುಕಿರುವ ಇತರರ ಹುಡುಕಾಟ ನಡೆಸಲಾಗುತ್ತಿದೆ.

Uttarakhand Mountaineers: ಹಿಮಪಾತದಲ್ಲಿ ಸಿಲುಕಿ 10 ಪರ್ವತಾರೋಹಿಗಳ ಸಾವು

Uttarakhand Mountaineers: ಹಿಮಪಾತದಲ್ಲಿ ಸಿಲುಕಿ 10 ಪರ್ವತಾರೋಹಿಗಳ ಸಾವು

Oct 04, 2022 03:59 PM IST

ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿ ಹಂಚಿಕೊಂಡ ಅಲೈನ್‌ ಆಸ್ಪೆಕ್ಟ್‌, ಜಾನ್‌ ಎಫ್‌, ಕ್ಲೌಸರ್‌, ಆಂಟನ್‌ ಝೈಲಿಂಗರ್‌

Nobel prize in Physics: 2022ರ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್‌ ಪ್ರಶಸ್ತಿ ಘೋಷಣೆಯಾಗಿದೆ. ಅಲೈನ್‌ ಆಸ್ಪೆಕ್ಟ್‌, ಜಾನ್‌ ಎಫ್‌, ಕ್ಲೌಸರ್‌, ಆಂಟನ್‌ ಝೈಲಿಂಗರ್‌ ಅವರು ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ರಾಯಲ್‌ ಸ್ವೀಡಿಸ್‌ ಅಕಾಡೆಮಿಯು ಇವರಿಗೆ ನೊಬೆಲ್‌ ಪ್ರಶಸ್ತಿಯನ್ನು ಘೋಷಿಸಿದೆ.

"2022ರ ಭೌತಶಾಸ್ತ್ರ ವಿಭಾಗದ ನೊಬೆಲ್‌ ಪ್ರಶಸ್ತಿ ವಿಜೇತರ ಸಂಶೋಧನೆಗಳು ಕ್ವಾಂಟಮ್‌ ತಂತ್ರಜ್ಞಾನದ ಹೊಸ ಯುಗಕ್ಕೆ ಬುನಾದಿ ಹಾಕಿದೆ. ಕ್ವಾಂಟಮ್‌ ಸ್ಟೇಟ್‌ಗಳು ಮತ್ತು ಅವುಗಳ ಎಲ್ಲಾ ಪದರಗಳ ಗುಣಲಕ್ಷಣಗಳನ್ನು ತಿಳಿಯಲು ಇವರ ಸಂಶೋಧನೆಗಳು ನೆರವಾಗಿವೆʼʼ ಎಂದು ನೊಬೆಲ್‌ ಪ್ರಶಸ್ತಿ ಸಮಿತಿಯು ಪ್ರಶಸ್ತಿ ಘೋಷಣೆ ಸಂದರ್ಭದಲ್ಲಿ ತಿಳಿಸಿದೆ.

ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿ ಹಂಚಿಕೊಂಡ ಅಲೈನ್‌ ಆಸ್ಪೆಕ್ಟ್‌, ಜಾನ್‌ ಎಫ್‌, ಕ್ಲೌಸರ್‌, ಆಂಟನ್‌ ಝೈಲಿಂಗರ್‌

ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿ ಹಂಚಿಕೊಂಡ ಅಲೈನ್‌ ಆಸ್ಪೆಕ್ಟ್‌, ಜಾನ್‌ ಎಫ್‌, ಕ್ಲೌಸರ್‌, ಆಂಟನ್‌ ಝೈಲಿಂಗರ್‌

Oct 04, 2022 03:48 PM IST

ಉತ್ತರಾಖಂಡದಲ್ಲಿ ಹಿಮಪಾತದಲ್ಲಿ ಸಿಲುಕಿದ ಪರ್ವತಾರೋಹಿಗಳಲ್ಲಿ ಎಂಟು ಜನರ ರಕ್ಷಣೆ

- ಹಿಮಪಾತದಲ್ಲಿ ಸಿಲುಕಿದ ಪರ್ವತಾರೋಹಿಗಳಲ್ಲಿ ಎಂಟು ಜನರನ್ನು ರಕ್ಷಣೆ ಮಾಡಲಾಗಿದೆ.

- - ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಘಟನೆ ನಡೆದ ಉತ್ತರಾಖಂಡದ ದ್ರೌಪದಿ ದಂಡ-2 ಶಿಖರಕ್ಕೆ ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್ ಪಡೆಗಳು ತೆರಳಿವೆ.

- ಪರ್ವತ ಶಿಖರದಲ್ಲಿ ಸಂಭವಿಸಿದ ಹಿಮಕುಸಿತದ ನಂತರ ನೆಹರು ಪರ್ವತಾರೋಹಣ ಸಂಸ್ಥೆಯ 28 ಪ್ರಶಿಕ್ಷಣಾರ್ಥಿಗಳು ಸಿಕ್ಕಿಬಿದ್ದಿದ್ದಾರೆ.

- ಜಿಲ್ಲಾಡಳಿತದಿಂದ ತ್ವರಿತ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪಿ.ಎಸ್. ಧಾಮಿ ತಿಳಿಸಿದ್ದಾರೆ.

Oct 04, 2022 02:55 PM IST

ಹಿಮಪಾತದಲ್ಲಿ ಸಿಲುಕಿದ 28 ಪರ್ವತಾರೋಹಿಗಳು, ಹಲವು ಪರ್ವತಾರೋಹಿಗಳು ಮೃತ?

- ಉತ್ತರಾಖಂಡ್ ನ ಘರ್ವಾಲಿಯಲ್ಲಿ 28 ಪರ್ವತಾರೋಹಿಗಳು ಹಿಮಪಾತದಲ್ಲಿ ಸಿಲುಕಿದ್ದಾರೆ.

- ಅವರಲ್ಲಿ ಅನೇಕರು ಮೃತಪಟ್ಟ ಶಂಕೆ ವ್ಯಕ್ತವಾಗಿದೆ.

- ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಘಟನೆ ನಡೆದ ಉತ್ತರಾಖಂಡದ ದ್ರೌಪದಿ ದಂಡ-2 ಶಿಖರಕ್ಕೆ ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್ ಪಡೆಗಳು ತೆರಳಿವೆ.

- ಪರ್ವತ ಶಿಖರದಲ್ಲಿ ಸಂಭವಿಸಿದ ಹಿಮಕುಸಿತದ ನಂತರ ನೆಹರು ಪರ್ವತಾರೋಹಣ ಸಂಸ್ಥೆಯ 28 ಪ್ರಶಿಕ್ಷಣಾರ್ಥಿಗಳು ಸಿಕ್ಕಿಬಿದ್ದಿದ್ದಾರೆ.

- ಜಿಲ್ಲಾಡಳಿತದಿಂದ ತ್ವರಿತ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪಿ.ಎಸ್. ಧಾಮಿ ತಿಳಿಸಿದ್ದಾರೆ.

ಹಿಮಪಾತದಲ್ಲಿ ಸಿಲುಕಿದ 28 ಪರ್ವತಾರೋಹಿಗಳು, ಹಲವು ಪರ್ವತಾರೋಹಿಗಳು ಮೃತ?

ಹಿಮಪಾತದಲ್ಲಿ ಸಿಲುಕಿದ 28 ಪರ್ವತಾರೋಹಿಗಳು, ಹಲವು ಪರ್ವತಾರೋಹಿಗಳು ಮೃತ?

Oct 04, 2022 01:58 PM IST

370ಎ ರದ್ದತಿಯ ನಂತರ ಕಣಿವೆಯಲ್ಲಿ ಮೀಸಲಾತಿ ಪ್ರಕ್ರಿಯೆಗೆ ಅನುಮತಿ ನೀಡಲಾಗಿದೆ: ಅಮಿತ್‌ ಶಾ

370ಎ ರದ್ದತಿಯ ನಂತರ ಕಣಿವೆಯಲ್ಲಿ ಮೀಸಲಾತಿ ಪ್ರಕ್ರಿಯೆಗೆ ಅನುಮತಿ ನೀಡಲಾಗಿದೆ. ನ್ಯಾಯಮೂರ್ತಿ ಶರ್ಮಾ ಅವರ ಆಯೋಗವು ವರದಿಯನ್ನು ಕಳುಹಿಸಿದ್ದು, ಗುಜ್ಜರ್, ಬಕರ್ವಾಲ್ ಮತ್ತು ಪಹಾರಿ ಸಮುದಾಯಗಳಿಗೆ ಮೀಸಲಾತಿಯನ್ನು ಶಿಫಾರಸು ಮಾಡಿದೆ. ಶೀಘ್ರದಲ್ಲೇ ಈ ವರದಿಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು  ರಾಜೌರಿಯಲ್ಲಿ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭರವಸೆ ನೀಡಿದರು.

Oct 04, 2022 02:00 PM IST

ರಾಜೌರಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿರುವ ಅಮಿತ್‌ ಶಾ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಜಮ್ಮು ಮತ್ತು ಕಾಶ್ಮೀರದ ಪ್ರವಾಸದಲ್ಲಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ರಾಜೌರಿಯಲ್ಲಿ ಬೃಹತ್‌ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.

ಅಮಿತ್‌ ಶಾ

ಅಮಿತ್‌ ಶಾ (ANI)

Oct 04, 2022 01:15 PM IST

ಕಣಿವೆಯ ಉನ್ನತ ಪೊಲೀಸ್‌ ಅಧಿಕಾರಿ ಕೊಲೆ ಆರೋಪಿ ಯಾಸಿರ್‌ ಅಹ್ಮದ್‌ ಅರೆಸ್ಟ್!‌

ಜಮ್ಮು ಮತ್ತು ಕಾಶ್ಮೀರದ ಕಾರಾಗೃಹಗಳ ಮಹಾನಿರ್ದೇಶಕ ಹೇಮಂತ್‌ ಕುಮಾರ್‌ ಲೋಹಿಯಾ ಅವರ ಕೊಲೆ ಆರೋಪಿ ಯಾಸಿರ್‌ ಅಹ್ಮದ್‌ನನ್ನು, ಕಣಿವೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿನ್ನೆ ತಡರಾತ್ರಿಯೇ ಯಾಸಿರ್‌ ಅಹ್ಮದ್‌ನನ್ನು ಬಂಧಿಸಲಾಗಿದೆ ಎಂದು ಎಡಜಿಪಿ ಮುಕೇಶ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.

ಕೊಲೆಗೀಡಾಗಿದ್ದ ಐಪಿಎಸ್‌ ಅಧಿಕಾರಿ

ಕೊಲೆಗೀಡಾಗಿದ್ದ ಐಪಿಎಸ್‌ ಅಧಿಕಾರಿ (PTI)

Oct 04, 2022 12:53 PM IST

ವೈಭವದಿಂದ ಆಕಾಶ ಮುಟ್ಟುವುದನ್ನು ಮುಂದುವರೆಸುತ್ತೇವೆ: ವಾಯುಸೇನೆ ದಿನಾಚರಣೆ ವಾಗ್ದಾನ!

ಭಾರತೀಯ ವಾಯುಸೇನೆಯು ಇದೇ ಅ.8ರಂದು ತನ್ನ 90ನೇ ದಿನಾಚರಣೆಯನ್ನು ಆಚರಿಸುತ್ತಿದ್ದು, ವಾಯುಸೇನೆಯು ವೈಭವದಿಂದ ಆಕಾಶ ಮುಟ್ಟುವುದನ್ನು ಮುಂದುವರೆಸುತ್ತದೆ ಎಂದು ವಾಯುಸೇನಾ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿಆರ್‌ ಚೌಧರಿ ವಾಗ್ದಾನ ಮಾಡಿದ್ದಾರೆ. ಆಧುನಿಕ ಯುದ್ಧ ನೀತಿ ಬದಲಾಗುತ್ತಿದ್ದು, ಈ ಯುದ್ಧ ನೀತಿಯನ್ನು ವಾಯುಸೇನೆ ಅತ್ಯಂತ ವೇಗವಾಗಿ ಅಳವಡಿಸಿಕೊಳ್ಳುತ್ತಿದೆ ಎಂದು ವಿಆರ್‌ ಚೌಧರಿ ಹೇಳಿದರು.

ವಾಯುಸೇನಾ ದಿನಾಚರಣೆ

ವಾಯುಸೇನಾ ದಿನಾಚರಣೆ (ANI)

Oct 04, 2022 12:10 PM IST

ಉ.ಕೊರಿಯಾದಿಂದ ಬ್ಯಾಲಿಸ್ಟಿಕ್‌ ಕ್ಷಿಪಣಿ ಉಡಾವಣೆ: ಟೋಕಿಯೋ ಜನರಿಗೆ ಜಪಾನ್‌ ಸರ್ಕಾರದ ಸಂದೇಶವೇನು?

ಉತ್ತರ ಕೊರಿಯಾ ಉಡಾವಣೆ ಮಾಡಿದ ಬ್ಯಾಲಿಸ್ಟಿಕ್‌ ಕ್ಷಿಪಣಿಯೊಂದು, ಜಪಾನ್‌ ರಾಜಧಾನಿ ಟೋಕಿಯೋ ಆಗಸದಲ್ಲಿ ಕಾಣಿಸಿಕೊಂಡಿದ್ದು, ಕೂಡಲೇ ಮನೆಗಳನ್ನು ತೊರೆದು ಆಶ್ರಯ ತಾಣಗಳಲ್ಲಿ ನೆಲೆಸುವಂತೆ ಜಪಾನ್‌ ನಾಗರಿಕರನ್ನು ಕೋರಿಕೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ (AP)

Oct 04, 2022 10:04 AM IST

ಆಭರಣಪ್ರಿಯರಿಗೆ ನಿರಾಸೆ: ಆಯುಧ ಪೂಜೆ ದಿನದಂದೇ ಚಿನ್ನ-ಬೆಳ್ಳಿ ದರದಲ್ಲಿ ಏರಿಕೆ!

ಆಯುಧ ಪೂಜೆ ದಿನದಂದೇ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಕೆ ಕಂಡುಬಂದಿದ್ದು, ಆಭರಣಪ್ರಿಯರಲ್ಲಿ ನಿರಾಸೆ ಮೂಡಿಸಿದೆ. ಇಂದು(ಅ.-ಮಂಗಳವಾರ) ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಚಿನ್ನದ ಬೆಲೆ 5,111 ರೂ. ದಾಖಲಾಗಿದೆ. ಅದರಂತೆ ರಾಜಧಾನಿ ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್‌) ಚಿನ್ನದ ಬೆಲೆ 5,160 ರೂ. ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆ 46,900 ರೂ. ಆಗಿದ್ದು, 10 ಗ್ರಾಂ (24 ಕ್ಯಾರಟ್‌) ಚಿನ್ನದ ಬೆಲೆ ಬೆಲೆ 51,160 ರೂ. ಆಗಿದೆ. ಅದರಂತೆ ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 57,400 ರೂ. ಆಗಿದ್ದು, ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 62,500 ರೂ. ಆಗಿದೆ.

́ಸಾಂದರ್ಭಿಕ ಚಿತ್ರ

́ಸಾಂದರ್ಭಿಕ ಚಿತ್ರ (HT)

Oct 04, 2022 07:46 AM IST

ನವರಾತ್ರಿ ಸಂಭ್ರಮ: ಮುಂಬಾ ದೇವಿ ದೇವಸ್ಥಾನದಲ್ಲಿ ಭಕ್ತ ಸಾಗರ

ನವರಾತ್ರಿ ಉತ್ಸವದ ಒಂಬತ್ತನೇ ದಿನದ ಅಂಗವಾಗಿ ಮಹಾರಾಷ್ಟ್‌ ರಾಜಧಾನು ಮುಂಬೈನಲ್ಲಿರುವ ಮುಂಬಾ ದೇವಿ ದೇವಸ್ಥಾನದಲ್ಲಿ, ವಿಶೇಷ ಪೂಜೆ ಮತ್ತು ಪಾರ್ಥನೆ ನೆರವೇರುತ್ತಿದೆ. ಹೆಚ್ಚಿನ ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತು ಮುಂಬಾ ದೇವಿಯ ದರ್ಶನ ಪಡೆಯುತ್ತಿದ್ದಾರೆ.

ಮುಂಬಾದೇವಿ ದೇವಸ್ಥಾನ

ಮುಂಬಾದೇವಿ ದೇವಸ್ಥಾನ (ANI)

Oct 04, 2022 07:44 AM IST

ಸಿಎನ್‌ಎನ್‌ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ ಡೋನಾಲ್ಡ್‌ ಟ್ರಂಪ್‌!

ಅಮೆರಿಕದ ಪ್ರತಿಷ್ಠಿತ ಸುದ್ದಿವಾಹಿನಿ ಸಿಎನ್‌ಎನ್‌ ತಮ್ಮ ವಿರುದ್ಧ ಸುಳ್ಳು ಪ್ರಚಾರದಲ್ಲಿ ನಿರತವಾಗಿದೆ ಎಂದು ಆರೋಪಿಸಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌, ಸುದ್ದಿ ಸಂಸ್ಥೆ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ಧಾರೆ. ಡೋನಾಲ್ಡ್‌ ಟ್ರಂಪ್‌ ೨೦೨೪ರ ಅಧ್ಯಕ್ಷೀಯ ಚುನಾವಣೆ ತಯಾರಿ ಆರಂಭಿಸಿರುವ ಲಕ್ಷಣಗಳು ಕಂಡುಬರುತ್ತಿವೆ.

ಡೋನಾಲ್ಡ್‌ ಟ್ರಂಪ್‌ (ಸಂಗ್ರಹ ಚಿತ್ರ)

ಡೋನಾಲ್ಡ್‌ ಟ್ರಂಪ್‌ (ಸಂಗ್ರಹ ಚಿತ್ರ) (AFP)

Oct 04, 2022 07:42 AM IST

ಡ್ನಿಪ್ರೊ ನದಿ ಪಾತ್ರದಲ್ಲಿ ರಷ್ಯನ್‌ ಪಡೆಗಳಿಗೆ ಸೋಲುಣಿಸಿದ ಉಕ್ರೇನ್‌ ಸೈನಿಕರು!

ರಷ್ಯಾ-ಉಕ್ರೇನ್‌ ಕದನ ದಿನದಿಂದ ದಿನಕ್ಕೆ ರೋಚಕವಾಗುತ್ತಿದ್ದು, ಕಳೆದ ಆರು ತಿಂಗಳಿಗೂ ಅಧಿಕ ಸಮಯದಿಂದ ಉಕ್ರೇನ್‌ ಸೈನಿಕರು ರಷ್ಯಾದ ಬೃಹತ್‌ ಸೇನಾಪಡೆಯನ್ನು ಅತ್ಯಂತ ದಿಟ್ಟವಾಗಿ ಎದುರಿಸುತ್ತಿದ್ದಾರೆ. ಇದೀಗ ಡ್ನಿಪ್ರೊ ನದಿ ಪಾತ್ರದ ಬಳಿಕ ರಷ್ಯನ್‌ ಪಡೆಗಳಿಗೆ ಸೋಲುಣಿಸಿರುವ ಉಕ್ರೇನ್‌ ಸೈನಿಕರು, ಯುದ್ಧ ಆರಂಭವಾದಾಗಿನಿಂದ ಇದುವರೆಗಿನ ಅತ್ಯಂತ ದೊಡ್ಡ ಗೆಲುವಿನ ರುಚಿ ಉಂಡಿದ್ದಾರೆ.

ಸಂಗ್ರಹ ಚಿತ್ರ

ಸಂಗ್ರಹ ಚಿತ್ರ (AP)

Oct 04, 2022 07:40 AM IST

ಬಿವೈ ವಿಜಯೇಂದ್ರ ಭ್ರಷ್ಟಾಚಾರದಿಂದ ಬಿಜೆಪಿ ವರ್ಚಸ್ಸಿಗೆ ಧಕ್ಕೆ: ಯತ್ನಾಳ್‌ ಗಂಭೀರ ಆರೋಪ!

ರಾಜ್ಯದಲ್ಲಿ ಬಿಜೆಪಿ ವರ್ಚಸ್ಸಿಗೆ ಧಕ್ಕೆಯಾಗಲು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರ ಭ್ರಷ್ಟಾಚಾರವೇ ಕಾರಣ ಎಂದು ವಿಜಯಒಉರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಆರೋಪಿಸಿದ್ದಾರೆ. ವಿಜಯೇಂದ್ರ ಅವರ ಭ್ರಷ್ಟಾಚಾರದಿಂದಾಗಿಯೇ ಬಿಎಸ್‌ವೈ ಅಧಿಕಾರ ಕಳೆದುಕೊಂಡರು ಎಂದೂ ಯತ್ನಾಳ್‌ ಕಿಡಿಕಾರಿದ್ದಾರೆ.

ಯತ್ನಾಳ್‌ (ಸಂಗ್ರಹ ಚಿತ್ರ)

ಯತ್ನಾಳ್‌ (ಸಂಗ್ರಹ ಚಿತ್ರ) (HT_PRINT)

ಹಂಚಿಕೊಳ್ಳಲು ಲೇಖನಗಳು