logo
ಕನ್ನಡ ಸುದ್ದಿ  /  latest news  /  Parliament New Building: Live Updates; ಪ್ರಧಾನಿ ನರೇಂದ್ರ ಮೋದಿ ಅವರಿಂದ ನೂತನ ಸಂಸತ್ ಭವನ ಲೋಕಾರ್ಪಣೆ
ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನವನ್ನು ಲೋಕಾರ್ಪಣೆ ಮಾಡಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಇದ್ದಾರೆ. (ANI)

Parliament New Building: LIVE Updates; ಪ್ರಧಾನಿ ನರೇಂದ್ರ ಮೋದಿ ಅವರಿಂದ ನೂತನ ಸಂಸತ್ ಭವನ ಲೋಕಾರ್ಪಣೆ

May 28, 2023 08:16 AM IST

ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿಂದು ನೂತನ ಸಂಸತ್ ಭವನವನ್ನು ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಪ್ರತಿ ಕ್ಷಣದ ಮಾಹಿತಿ ಲೈಪ್ ಅಪ್ಡೇಟ್‌ನಲ್ಲಿದೆ.

May 28, 2023 08:29 AM IST

ನೂತನ ಸಂಸತ್ ಭವನ ಲೋಕಾರ್ಪಣೆ

ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನವನ್ನು ಲೋಕಾರ್ಪಣೆ ಮಾಡಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಈ ವೇಳೆ ಉಪಸ್ಥಿತರಿದ್ದರು.

May 28, 2023 08:16 AM IST

ಲೋಕಸಭೆಯಲ್ಲಿ ಸೆಂಗೋಲ್ ಚಿನ್ನದ ರಾಜದಂಡ ಅಳವಡಿಕೆ

ನೂತನ ಸಂಸತ್ ಭವನದಲ್ಲಿರುವ ಲೋಕಸಭಾ ಸ್ಪೀಕರ್ ಆಸನದ ಪಕ್ಕದಲ್ಲಿ ಸೆಂಗೋಲ್ ಚಿನ್ನದ ರಾಜದಂಡವನ್ನು ಪ್ರಧಾನಿ ಪ್ರಧಾನಿ ನರೇಂದ್ರ ಅವರು ಅಳವಡಿಸಿದ್ದಾರೆ. ಈ ವೇಳೆ ಸ್ಪೀಕರ್ ಓಂ ಬಿರ್ಲಾ ಉಪಸ್ಥಿತರಿದ್ದರು.

May 28, 2023 08:03 AM IST

ಸೆಂಗೋಲ್​ ಚಿನ್ನದ ರಾಜದಂಡ ಹಸ್ತಾಂತರ

ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅವರಿಗೆ ತಮಿಳುನಾಡಿನ ಅಧೀನಂ ಮಠದ ಪೀಠಾಧಿಪತಿಗಳು ಸೆಂಗೋಲ್ ಹಸ್ತಾಂತರಿಸಿದ್ದಾರೆ. ಐತಿಹಾಸಿಕ ಸೆಂಗೋಲ್​ ಚಿನ್ನದ ರಾಜದಂಡವನ್ನು ಲೋಕಸಭೆಯ ಸ್ಪೀಕರ್‌ ಆಸನದ ಪಕ್ಕ ಇವತ್ತು ಅಳವಡಿಸಲಾಗುತ್ತದೆ.

May 28, 2023 07:33 AM IST

ಪ್ರಧಾನಿ ನರೇಂದ್ರ ಮೋದಿ ಆಗಮನ

ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದಾರೆ. ಗಂಟೆ ಪೂಜಾ ಕೈಂಕರ್ಯಗಳು ನಡೆಯಲಿವೆ.

May 28, 2023 07:45 AM IST

ಹೊಸ ಸಂಸತ್ ಭವನ ಉದ್ಘಾಟನೆಯ ಪೂಜಾ ಕೈಂರ್ಯಗಳು ಆರಂಭ

ಭಾರತದ ಹೊಸ ಸಂಸತ್ ಭವನ ಇಂದು ಮುಂಜಾನೆಯಿಂದಲೇ ನಡೆಯುತ್ತಿರುವ ಹೋಮ ಹವನ ಹಾಗೂ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಪ್ರಾರಂಭವಾಗುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಕಟ್ಟಡ ಲೋಕಾರ್ಪಣ ಮಾಡಲಿದ್ದಾರೆ.

May 28, 2023 07:16 AM IST

ಮುಖ್ಯಮಂತ್ರಿಗಳು, ಸಚಿವರು ಸೇರಿ 25 ರಾಜಕೀಯ ಪಕ್ಷಗಳ ನಾಯಕರು ಭಾಗಿ ನಿರೀಕ್ಷೆ

ವಿವಿಧ ರಾಜ್ಯಗಳು ಮುಖ್ಯಮಂತ್ರಿಗಳು, ಸಚಿವರು ಸೇರಿದಂಂತೆ 25 ರಾಜಕೀಯ ಪಕ್ಷಗಳು ಹಾಗೂ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

May 28, 2023 07:15 AM IST

ಸೆಂಗೋಲ್​ ಚಿನ್ನದ ರಾಜದಂಡ ಹಸ್ತಾಂತರ

ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೂ ಮುನ್ನ ದಿನ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿದ್ದ ತಮಿಳುನಾಡಿನ ಅಧೀನಂ ಮಠದ ಪೀಠಾಧಿಪತಿಗಳು ಸೆಂಗೋಲ್ ನೀಡಿದ್ದಾರೆ.

ಐತಿಹಾಸಿಕ ಸೆಂಗೋಲ್​ ಚಿನ್ನದ ರಾಜದಂಡವನ್ನು ಲೋಕಸಭೆಯ ಸ್ಪೀಕರ್‌ ಆಸನದ ಪಕ್ಕ ಇವತ್ತು ಅಳವಡಿಸಲಾಗುತ್ತದೆ. 

May 28, 2023 07:13 AM IST

ಸ್ವತಂತ್ರ ಭಾರತದ ಭವಿಷ್ಯವಾಗಿದೆ - ಪ್ರಧಾನಿ ಮೋದಿ

ಈ ಸೆಂಗೋಲ್ 1947ರಲ್ಲಿ ಅಧಿಕಾರ ವರ್ಗಾವಣೆಯ ಪವಿತ್ರ ಸಂಕೇತವಾಗಿ ಪ್ರಾಮುಖ್ಯತೆಯನ್ನು ಹೊಂದಿದೆ. ವಸಾಹತುಪೂರ್ವ ಭಾರತದ ವೈಭಯುವತ ಸಂಪ್ರದಾಯಗಳ ನಡುವಿನ ಸಂಪರ್ಕವು ಸ್ವತಂತ್ರ ಭಾರತದ ಭವಿಷ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು