logo
ಕನ್ನಡ ಸುದ್ದಿ  /  ಜೀವನಶೈಲಿ  /  Year Ender 2023: ಟಿವಿಎಸ್‌ X ನಿಂದ ಓರ್ಕ್ಸಾ ಮಾಂಟಿಸ್‌ವರೆಗೆ; ಈ ವರ್ಷ ಬಿಡುಗಡೆಯಾದ ಪ್ರಮುಖ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳಿವು

Year Ender 2023: ಟಿವಿಎಸ್‌ X ನಿಂದ ಓರ್ಕ್ಸಾ ಮಾಂಟಿಸ್‌ವರೆಗೆ; ಈ ವರ್ಷ ಬಿಡುಗಡೆಯಾದ ಪ್ರಮುಖ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳಿವು

HT Kannada Desk HT Kannada

Dec 20, 2023 07:30 PM IST

ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು (PC: TVS Motors, ultraviolette.com)

    • Electric two wheelers:ದೇಶದಲ್ಲಿ ಈಗ ಎಲೆಕ್ಟ್ರಿಕ್‌ ವಾಹನಗಳಿಗಿರುವ ಬೇಡಿಕೆ ಮತ್ತು ಬೆಳವಣಿಗೆ ದಿನೇದಿನೇ ಏರುಗತಿಯನ್ನು ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ 2023ರಲ್ಲಿ ಅನೇಕ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು ಬಿಡುಗಡೆಯಾಗಿವೆ. ಆಟೋಮೊಬೈಲ್‌ ಮಾರುಕಟ್ಟೆ ಪ್ರವೇಶಿಸಿದ ಕೆಲವು ಪ್ರಮುಖ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ ಪರಿಚಯ ಇಲ್ಲಿದೆ.
ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು (PC: TVS Motors, ultraviolette.com)
ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು (PC: TVS Motors, ultraviolette.com)

ಭಾರತದಲ್ಲಿ ಆಟೋಮೊಬೈಲ್‌ ಉದ್ಯಮ ಹೊಸ ಪರಿವರ್ತನೆಯನ್ನು ಕಾಣುತ್ತಿದೆ. ಅದು ಸಾಂಪ್ರದಾಯಿಕ ICE (ಪೆಟ್ರೋಲ್‌ಮತ್ತು ಡೀಸಲ್‌ನಂತಹ ತೈಲದಿಂದ ಚಲಿಸುವ ವಾಹನಗಳು) ಕಾರುಗಳಿಂದ EVಗೆ (ಎಲೆಕ್ಟ್ರಿಕ್​ ವಾಹನ) ಬದಲಾಗುತ್ತಿದೆ. ಈ ಪರಿವರ್ತನೆ ಕಾರುಗಳಿಗೆ ಮಾತ್ರ ಸೀಮಿತವಾಗಿರದೇ ದ್ವಿಚಕ್ರ ವಾಹನ ವಿಭಾಗವೂ ಇದರಲ್ಲಿ ಸೇರಲ್ಪಟ್ಟಿದೆ. ಜೊತೆಗೆ ಬೇಡಿಕೆಯಲ್ಲಿಯೂ ಹೆಚ್ಚಳವನ್ನು ಕಂಡಿದೆ. ಬಜಾಜ್‌, ಟಿವಿಎಸ್‌ನಂತಹ ಸಾಂಪ್ರದಾಯಿಕ ದ್ವಿಚಕ್ರ ವಾಹನ ತಯಾರಕರು ಸಹ ಹೊಸ ಹೆಸರುಗಳೊಂದಿಗೆ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಮಾರುಕಟ್ಟೆ ಪ್ರವೇಶಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ

World Hypertension Day: ಸೈಲೆಂಟ್‌ ಕಿಲ್ಲರ್‌ ಆಗಿ ಕಾಡುತ್ತಿದೆ ಅಧಿಕ ರಕ್ತದೊತ್ತಡ; ಆರಂಭಿಕ ಹಂತದ ಈ ಚಿಹ್ನೆಗಳನ್ನ ನಿರ್ಲಕ್ಷ್ಯ ಮಾಡದಿರಿ

Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ದೇಶದಲ್ಲಿ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ ಬೇಡಿಕೆ ಮತ್ತು ಬೆಳವಣಿಗೆ ಹೆಚ್ಚುತ್ತಿದೆ. ಇದೇ ರೀತಿ ಮುಂದುವರಿದರೆ 2030ರ ವೇಳೆಗೆ, ಕಾರ್ಬನ್‌ ಹೊರಸೂಸುವಿಕೆಯನ್ನು ಕಡಿತಗೊಳಿಸಿ, ಸುಸ್ಥಿರ ಅಭಿವೃದ್ಧಿ ಗುರಿಯನ್ನು ಸಾಧಿಸಬಹುದಾಗಿದೆ. ಈ ಬೆಳವಣಿಗೆಯನ್ನು ಹೆಚ್ಚಿಸಲು ಭಾರತ ಸರ್ಕಾರವು ವಿವಿಧ ಸಬ್ಸಿಡಿ ಮತ್ತು ಪ್ರೋತ್ಸಾಹ ನೀಡುತ್ತಿದೆ. ಹಾಗಾಗಿ ಆಟೋಮೊಬೈಲ್‌ ಕ್ಷೇತ್ರದಲ್ಲಿ ಹೊಸ ಹೊಸ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು ಬಿಡುಗಡೆಯಾಗುತ್ತಲೇ ಇವೆ. 2023 ಇದಕ್ಕೆ ಸಾಕ್ಷಿಯಾಗಿದೆ. 2023ರಲ್ಲಿ ಭಾರದಲ್ಲಿ ಬಿಡುಗಡೆಯಾಗಿ ಸದ್ದು ಮಾಡಿದ ಕೆಲವು ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು ಯಾವವು ನೋಡಣ ಬನ್ನಿ.

TVS X

ಟಿವಿಎಸ್‌ ಇಂಡಿಯಾ ಆಗಸ್ಟ್‌ 2023ರಲ್ಲಿ TVS X ಬಿಡುಗಡೆ ಮಾಡಿದೆ. ಸದ್ಯ ಈ ಎಲೆಕ್ಟ್ರಿಕ್‌ ಸ್ಕೂಟರ್‌ 2.50 ಲಕ್ಷ ರೂ. (ಎಕ್ಸ್‌ ಶೋರೂಂ ದರ) ನಿಂದಾಗಿ ಭಾರತದಲ್ಲಿ ಅತಿ ದುಬಾರಿ ಸ್ಕೂಟರ್‌ ಆಗಿದೆ. 4.44 kWh ಬ್ಯಾಟರಿ ಪ್ಯಾಕ್‌ ಹೊಂದಿರುವ ಇದು 140 ಕಿಮಿ ಚಾಲನಾ ವ್ಯಾಪ್ತಿಯನ್ನು ನೀಡುತ್ತದೆ. ಟಿವಿಎಸ್‌ X ಎಲೆಕ್ಟ್ರಿಕ್‌ ಸ್ಕೂಟರ್‌ ಪ್ರತಿಗಂಟೆಗೆ 105 ಕಿಮಿ ಗರಿಷ್ಠ ವೇಗವನ್ನು ನೀಡಲಿದ್ದು, ಕೇವಲ 2.6 ಸೆಕೆಂಡುಗಳಲ್ಲಿ 0–40 km/h ವೇಗ ಪಡೆದುಕೊಳ್ಳಲಿದೆ ಎಂದ ಟಿವಿಎಸ್‌ ಹೇಳಿಕೊಂಡಿದೆ.

ಓಲಾ S1 ಶ್ರೇಣಿ

ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಓಲಾ, ಆಗಸ್ಟ್‌ 2023ಯಲ್ಲಿ ದೇಶದಲ್ಲಿ ಇ–ಸ್ಕೂಟರ್‌ಗಳ ಶ್ರೇಣಿಯನ್ನು ಬಿಡುಗಡೆ ಮಾಡಿತು. ಓಲಾ S1 ಪ್ರೋ, ಓಲಾ S1 ಏರ್‌ ಮತ್ತು ಓಲಾ S1 X ಎಂಬ ಎಲೆಕ್ಟ್ರಿಕ್‌ ದ್ವಿಚಕ್ರವಾಹನವನ್ನು ಭಾರತದ ಮಾರುಕಟ್ಟೆಗೆ ನೀಡಿತು. ಈ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಎಕ್ಸ್ ಶೋ ರೂಂ ಬೆಲೆಗಳು ಕ್ರಮವಾಗಿ S1 ಪ್ರೋ– 1.47 ಲಕ್ಷ ರೂ., S1 ಏರ್‌ಗೆ –1.20 ಲಕ್ಷ ರೂ. ಮತ್ತು S1 X ಗೆ– 90,000 ರೂಪಾಯಿಗಳಾಗಿವೆ.

ಅಥರ್ 450S

ಅಥರ್ ಎನರ್ಜಿಯದು ದೇಶದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಜನಪ್ರಿಯ ಹೆಸರಾಗಿದೆ. ಇದು 2023 ರ ಆಗಸ್ಟ್‌ನಲ್ಲಿ 450S ಎಂಬ ಇ-ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಅಥರ್ 450S ಎಲೆಕ್ಟ್ರಿಕ್‌ ಸ್ಕೂಟರ್‌ನ ಬೆಲೆ 1.30 ಲಕ್ಷ ರೂ. (ಎಕ್ಸ್ ಶೋ ರೂಂ) ದಿಂದ ಪ್ರಾರಂಭವಾಗುತ್ತದೆ. ಇದು 2.9 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಎಲೆಕ್ಟ್ರಿಕ್ ಸ್ಕೂಟರ್ 115 ಕಿಮೀ ಡ್ರೈವಿಂಗ್ ಶ್ರೇಣಿಯನ್ನು ಒಂದೇ ಚಾರ್ಜ್‌ನಲ್ಲಿ ನೀಡುವಂತೆ ಶಕ್ತಗೊಳಿಸಲಾಗಿದೆ.

ಸಿಂಪಲ್‌ ಡಾಟ್ ಒನ್

ಸಿಂಪಲ್ ಎನರ್ಜಿಯು 2023 ಡಿಸೆಂಬರ್ 15 ರಂದು ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಸಿಂಪಲ್ ಎನರ್ಜಿಯು ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 99,999 ರೂ.ಗಳ ಪರಿಚಯಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಸಿಂಪಲ್ ಡಾಟ್ ಒನ್ ಇಲೆಕ್ಟ್ರಿಕ್‌ ಸ್ಕೂಟರ್‌ 8.5 kW ಎಲೆಕ್ಟ್ರಿಕ್ ಮೋಟಾರ್ ಮತ್ತು 3.7 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಎಲೆಕ್ಟ್ರಿಕ್ ಮೋಟಾರ್ 12 bhp ಮತ್ತು 72 Nm ಟಾರ್ಕ್‌ನ ಪವರ್ ಔಟ್‌ಪುಟ್ ಅನ್ನು ಉತ್ಪಾದಿಸುತ್ತದೆ. ಇದು 151 ಕಿಮೀ ಚಾಲನಾ ವ್ಯಾಪ್ತಿಯನ್ನು ನೀಡುತ್ತದೆ.

ಅಲ್ಟ್ರಾವೈಲೆಟ್‌ F99

ಭಾರತೀಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿಯಾದ ಅಲ್ಟ್ರಾವೈಲೆಟ್ ಆಟೋಮೋಟಿವ್, ನವೆಂಬರ್‌ನಲ್ಲಿ EICMA 2023 (ಅಂತರಾಷ್ಟ್ರೀಯ ದ್ವಿಚಕ್ರ ವಾಹನಗಳ ಪ್ರದರ್ಶನ) ರಲ್ಲಿ F99 ಇ-ಬೈಕನ್ನು ಬಿಡುಗಡೆಗೊಳಿಸಿತು. ಅಲ್ಟ್ರಾವೈಲೆಟ್‌ F99 ಬೈಕ್‌ 120 bhp ಶಕ್ತಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಪ್ರತಿ ಗಂಟೆಗೆ 265 ಕಿಮೀ ಗರಿಷ್ಠ ವೇಗವನ್ನು ಸಾಧಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಓರ್ಕ್ಸಾ ಮಾಂಟಿಸ್

ಬೆಂಗಳೂರು ಮೂಲದ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿಯಾದ ಓರ್ಕ್ಸಾ ಎನರ್ಜಿಸ್ ತನ್ನ ಮ್ಯಾಂಟಿಸ್ ಇ–ಬೈಕ್‌ ಅನ್ನು ಪ್ರಮುಖ ಕೊಡುಗೆಯಾದ ನವೆಂಬರ್ 2023 ರಲ್ಲಿ ಬಿಡುಗಡೆ ಮಾಡಿತು. ಓರ್ಕ್ಸಾ ಮಾಂಟಿಸ್ ಈ ಎಲೆಕ್ಟ್ರಿಕ್‌ ಬೈಕ್ ಅನ್ನು 3.6 ಲಕ್ಷ (ಎಕ್ಸ್ ಶೋ ರೂಂ) ರೂ. ಬೆಲೆಯೊಂದಿಗೆ ಬಿಡುಗಡೆ ಮಾಡಿದೆ. ಮ್ಯಾಂಟಿಸ್ ಇ-ಬೈಕ್ ಪ್ರತಿ ಗಂಟೆಗೆ 135 ಕಿಮೀ ವೇಗವನ್ನು ಸಾಧಿಸುವ ಸಾಮರ್ಥ್ಯ ಹೊಂದಿದೆ. ಓರ್ಕ್ಸಾ ಮಾಂಟಿಸ್ 8.9 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, 221 ಕಿಮೀ ಚಾಲನಾ ವ್ಯಾಪ್ತಿಯನ್ನು ನೀಡಲಿದೆ.

    ಹಂಚಿಕೊಳ್ಳಲು ಲೇಖನಗಳು