logo
ಕನ್ನಡ ಸುದ್ದಿ  /  ಜೀವನಶೈಲಿ  /  Bank Jobs: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ, 192 ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಭಾನುವಾರವೇ ಕೊನೇ ದಿನ

Bank Jobs: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ, 192 ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಭಾನುವಾರವೇ ಕೊನೇ ದಿನ

HT Kannada Desk HT Kannada

Nov 17, 2023 02:15 PM IST

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2023 (ಸಾಂಕೇತಿಕ ಚಿತ್ರ)

  • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 192 ವಿವಿಧ ಸ್ಪೆಷಲಿಸ್ಟ್ ಆಫೀಸರ್‌ ಹುದ್ದೆಗಳಿವೆ. ಅವುಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ನವೆಂಬರ್ 19 ಅರ್ಜಿ ಸಲ್ಲಿಕೆಗೆ ಕೊನೇ ದಿನ. ವಿವರಗಳಿಗೆ ಈ ವರದಿ ಗಮನಿಸಿ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2023 (ಸಾಂಕೇತಿಕ ಚಿತ್ರ)
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2023 (ಸಾಂಕೇತಿಕ ಚಿತ್ರ)

ಸೆಂಟ್ರಲ್ ಬ್ಯಾಂಕ್ ಆಫ್‌ ಇಂಡಿಯಾದ 192 ಆಫೀಸರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ಈ ಭಾನುವಾರವೇ (ನ.19) ಕೊನೇ ದಿನ.

ಟ್ರೆಂಡಿಂಗ್​ ಸುದ್ದಿ

Mango Recipe: ಇಲ್ಲಿದೆ ಮ್ಯಾಂಗೋ ಮಲೈ ಖಾಂಡ್ವಿ ರೋಲ್‌ ರೆಸಿಪಿ; ಹೆಸರಷ್ಟೇ ಅಲ್ಲ ಈ ತಿಂಡಿಯ ರುಚಿಯೂ ಡಿಫ್ರೆಂಟ್‌

ಹಾಲು-ಮೀನು, ಪಾಲಕ್‌-ಪನೀರ್‌ ಆಯುರ್ವೇದದ ಪ್ರಕಾರ ಯಾವೆಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು, ಇದರ ಪರಿಣಾಮ ಏನಾಗುತ್ತೆ ನೋಡಿ

ಮಳೆಗಾಲದಲ್ಲಿ ಕೇರಳಕ್ಕೆ ಟ್ರಿಪ್‌ ಹೋಗುವ ಪ್ಲಾನ್‌ ಇದ್ರೆ, ಈ 10 ಸಾಂಪ್ರದಾಯಿಕ ತಿನಿಸುಗಳನ್ನು ಟೇಸ್ಟ್‌ ಮಾಡದೇ ಬರಬೇಡಿ

Yoga Asanas: ತೂಕ ಇಳಿಯುವ ಜೊತೆಗೆ ದೇಹ ಫಿಟ್‌ ಆಗಿರಬೇಕಾ? ಈ ಸರಳ ಯೋಗಾಸನಗಳನ್ನ ಮನೆಯಲ್ಲೇ ಅಭ್ಯಾಸ ಮಾಡಿ

ಇದು ಸ್ಪೆಷಲಿಸ್ಟ್‌ ಕೆಟಗರಿಯ ವಿವಿಧ ಆಫೀಸರ್‌ ಹುದ್ದೆಗಳಾಗಿದ್ದು ಅರ್ಹ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ centralbankofindia.co.in/en/recruitments ಮೂಲಕ ಆನ್‌ಲೈನ್ ಮೂಲಕ ನ.19ರೊಳಗೆ ಅರ್ಜಿ ಸಲ್ಲಿಸಬಹುದು.

ಸೆಂಟ್ರಲ್ ಬ್ಯಾಂಕ್ ಆಫ್‌ ಇಂಡಿಯಾದ 192 ಆಫೀಸರ್‌ ಹುದ್ದೆಗಳ ವಿವರ

ಮಾಹಿತಿ ತಂತ್ರಜ್ಞಾನ ಸ್ಕೇಲ್ V: 1 ಹುದ್ದೆ

ರಿಸ್ಕ್ ಮ್ಯಾನೇಜರ್ ಸ್ಕೇಲ್‌ V: 1 ಹುದ್ದೆ

ರಿಸ್ಕ್ ಮ್ಯಾನೇಜರ್ ಸ್ಕೇಲ್‌ IV: 1 ಹುದ್ದೆ

ಮಾಹಿತಿ ತಂತ್ರಜ್ಞಾನ ಸ್ಕೇಲ್ III: 6 ಹುದ್ದೆಗಳು

ಫಿನಾನ್ಶಿಯಲ್ ಅನಲಿಸ್ಟ್ ಸ್ಕೇಲ್ III: 5 ಹುದ್ದೆಗಳು

ಮಾಹಿತಿ ತಂತ್ರಜ್ಞಾನ ಸ್ಕೇಲ್ II: 73 ಹುದ್ದೆಗಳು

ಕಾನೂನು ಅಧಿಕಾರಿ ಸ್ಕೇಲ್‌ II: 15 ಹುದ್ದೆಗಳು

ಕ್ರೆಡಿಟ್ ಆಫೀಸರ್ ಸ್ಕೇಲ್ II: 50 ಹುದ್ದೆಗಳು

ಫಿನಾನ್ಶಿಯಲ್ ಅನಲಿಸ್ಟ್ ಸ್ಕೇಲ್ II: 4 ಹುದ್ದೆಗಳು

ಸಿಎ- ಫೈನಾನ್ಸ್ & ಅಕೌಂಟ್ಸ್‌ / ಜಿಎಸ್‌ಟಿ/ ಇಂಡ್ ಎಎಸ್‌ / ಬ್ಯಾಲೆನ್ಸ್ ಶೀಟ್‌ / ಟ್ಯಾಕ್ಸೇಷನ್ ಸ್ಕೇಲ್ II: 3 ಹುದ್ದೆಗಳು

ಮಾಹಿತಿ ತಂತ್ರಜ್ಞಾನ ಸ್ಕೇಲ್ I: 15 ಹುದ್ದೆಗಳು

ಭದ್ರತಾ ಅಧಿಕಾರಿ ಸ್ಕೇಲ್‌ I: 15 ಹುದ್ದೆಗಳು

ರಿಸ್ಕ್‌ ಮ್ಯಾನೇಜರ್ ಸ್ಕೇಲ್ I: 2 ಹುದ್ದೆಗಳು

ಲೈಬ್ರೇರಿಯನ್ ಸ್ಕೇಲ್ I: 1 ಹುದ್ದೆ

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೇಗೆ

ಅಭ್ಯರ್ಥಿಗಳ ಆಯ್ಕೆಯನ್ನು ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಮಾಡಲಾಗುತ್ತದೆ. ತಾತ್ಕಾಲಿಕವಾಗಿ ನಿಗದಿಯಾದ ಪ್ರಕಾರ ಲಿಖಿತ ಪರೀಕ್ಷೆಯನ್ನು ಡಿಸೆಂಬರ್ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ನಡೆಯಬಹುದು.

ಅರ್ಜಿ ಶುಲ್ಕ ಎಷ್ಟು

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/PWBD ಅಭ್ಯರ್ಥಿಗಳು ಮತ್ತು ಎಲ್ಲಾ ವರ್ಗಗಳ ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕ 175 ರೂಪಾಯಿ ಮತ್ತು ಜಿಎಸ್‌ಟಿ ಪಾವತಿಸಬೇಕು.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/PWBD ಅಭ್ಯರ್ಥಿಗಳು ಮತ್ತು ಎಲ್ಲಾ ವರ್ಗಗಳ ಮಹಿಳಾ ಅಭ್ಯರ್ಥಿಗಳಿಗೆ GST. ಉಳಿದವರು ಎಲ್ಲರೂ 850 ರೂಪಾಯಿ ಮತ್ತು ಜಿಎಸ್‌ಟಿ ಪಾವತಿಸಬೇಕು.

ಅರ್ಹತಾ ಮಾನದಂಡಗಳು ಏನೇನು

ಅರ್ಹತಾ ಮಾನದಂಡಗಳು ಮತ್ತು ಪ್ರತಿ ಪೋಸ್ಟ್‌ಗೆ ಸಂಬಂಧಿಸಿದ ಇತರ ವಿವರಗಳಿಗಾಗಿ ಅಧಿಸೂಚನೆಯನ್ನು ಪರಿಶೀಲಿಸಬಹುದು. ನೇರ ಕೊಂಡಿ ಇಲ್ಲಿದೆ ಕ್ಲಿಕ್ ಮಾಡಿ.

    ಹಂಚಿಕೊಳ್ಳಲು ಲೇಖನಗಳು