logo
ಕನ್ನಡ ಸುದ್ದಿ  /  ಜೀವನಶೈಲಿ  /  Itr Refund: ನಿಮಗಿನ್ನೂ ಆದಾಯ ತೆರಿಗೆ ರಿಫಂಡ್‌ ದೊರಕಿಲ್ವ, ರಿಫಂಡ್‌ ದೊರಕದೆ ಇದ್ದರೆ ಏನು ಮಾಡಬೇಕು, ಇಂತಹ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ITR Refund: ನಿಮಗಿನ್ನೂ ಆದಾಯ ತೆರಿಗೆ ರಿಫಂಡ್‌ ದೊರಕಿಲ್ವ, ರಿಫಂಡ್‌ ದೊರಕದೆ ಇದ್ದರೆ ಏನು ಮಾಡಬೇಕು, ಇಂತಹ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Praveen Chandra B HT Kannada

Aug 28, 2023 04:52 PM IST

ಐಟಿಆರ್‌ ರಿಫಂಡ್‌ ಇನ್ನೂ ದೊರಕದೆ ಇರುವವರಿಗೆ ಮಾಹಿತಿ

    • Income tax refund news: ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವ ಅವಧಿ ಮುಕ್ತಾಯವಾಗಿದೆ, ಇನ್ನೂ ಐಟಿಆರ್‌ ಸಲ್ಲಿಸಬಹುದೇ, ಐಟಿಆರ್‌ ಸಲ್ಲಿಸಿದ್ದೇನೆ, ಇನ್ನೂ ರಿಫಂಡ್‌ ದೊರಕಿಲ್ಲ, ಕಾರಣ ಏನು? ರಿಫಂಡ್‌ ಬಂದಿದೆ, ಆದರೆ ಐಟಿಆರ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದೇನೆ? ಮುಂದೇನು ಮಾಡಬೇಕು? ಇಂತಹ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಐಟಿಆರ್‌ ರಿಫಂಡ್‌ ಇನ್ನೂ ದೊರಕದೆ ಇರುವವರಿಗೆ ಮಾಹಿತಿ
ಐಟಿಆರ್‌ ರಿಫಂಡ್‌ ಇನ್ನೂ ದೊರಕದೆ ಇರುವವರಿಗೆ ಮಾಹಿತಿ

ಬೆಂಗಳೂರು: ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಿದ ಬಳಿಕ ಸಾಕಷ್ಟು ಜನರು ರಿಫಂಡ್‌ ಕುರಿತು ಗೂಗಲ್‌ನಲ್ಲಿ ಹುಡುಕುತ್ತಿದ್ದಾರೆ. ಐಟಿ ರಿಫಂಡ್‌ ಸ್ಟೇಟಸ್‌ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಇನ್ನೂ ಐಟಿ ರಿಫಂಡ್‌ ಬಂದಿಲ್ಲ, ರಿಫಂಡ್‌ ದೊರಕಿದ್ರೆ ಖರ್ಚಿಗಾಗ್ತಿತ್ತು ಎಂದು ಲೆಕ್ಕ ಹಾಕುತ್ತಿದ್ದಾರೆ. ಇನ್ನು ಕೆಲವರ ಪ್ರಾಬ್ಲಂ ಬೇರೆ ರೀತಿ ಇರುತ್ತದೆ. ಕೆಲವರು ಇನ್ನೂ ಐಟಿ ರಿಟರ್ನ್‌ ಸಲ್ಲಿಸಿಯೇ ಇರುವುದಿಲ್ಲ. ಏನೋ ಕಾರಣದಿಂದ ಕೊನೆಯ ದಿನದೊಳಗೆ ಐಟಿಆರ್‌ ಫೈಲ್‌ ಮಾಡಲಾಗಿಲ್ಲ, ಬೇರೆ ಏನಾದರೂ ದಾರಿ ಇದೆಯೇ, ಇನ್ನೂ ಐಟಿಆರ್‌ ಫೈಲ್‌ ಮಾಡಬಹುದೇ ಎಂಬ ಪ್ರಶ್ನೆಯನ್ನೂ ಒಂದಿಷ್ಟು ಜನರು ಹೊಂದಿರಬಹುದು. ಐಟಿ ರಿಟರ್ನ್ಸ್‌ ಈವರೆಗೆ ಫೈಲ್ ಮಾಡಲು ಆಗದಿದ್ದರೆ ಏನು ಪರಿಹಾರ? ರಿಟರ್ನ್ಸ್ ಫೈಲ್ ಮಾಡಿಯೂ ರಿಫಂಡ್ ಬರದಿದ್ದರೆ ಏನು ಮಾಡಬೇಕು? ಐಟಿ ರಿಫಂಡ್ ತಡವಾಗಲು ಏನೆಲ್ಲಾ ಕಾರಣಗಳು ಇರಬಹುದು? ಐಟಿ ರಿಟರ್ನ್ಸ್‌ನಲ್ಲಿ ತಪ್ಪು ಮಾಹಿತಿ ಇದ್ದುದು ಫೈಲ್ ಮಾಡಿದ ಮೇಲೆ ಗೊತ್ತಾಗಿದೆ, ನನಗೆ ರೀಫಂಡ್ ಕೂಡ ಬಂದಾಗಿದೆ. ಈಗ ಏನಾದರೂ ಪರಿಹಾರ ಇದೆಯೇ? ಹೀಗೆ ಒಬ್ಬೊಬ್ಬರದ್ದು ಒಂದೊಂದು ಪ್ರಶ್ನೆ ಇರಬಹುದು. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಇಲ್ಲಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ಐಟಿ ರಿಟರ್ನ್ಸ್‌ ಫೈಲ್‌ ಮಾಡಿಲ್ಲ, ಈಗ ಐಟಿಆರ್‌ ಸಲ್ಲಿಸಬಹುದೇ?

ಕೆಲವರಿಗೆ ಹುಟ್ಟುಹಬ್ಬದಂದು ವಿಶ್‌ ಮಾಡಲು ಆಗುವುದಿಲ್ಲ. ಎರಡು ದಿನ ಕಳೆದ ಬಳಿಕ ಬಿಲೇಟೆಡ್‌ ವಿಶಸ್‌ ಅಂತ ಮಾಡ್ತಾರೆ ಅಲ್ವೇ, ಇದೇ ರೀತಿ ನೀವು ಕೂಡ ಐಟಿ ರಿಟರ್ನ್‌ ಅನ್ನು ತಡವಾಗಿಯೂ ಸಲ್ಲಿಸಬಹುದು. ಈ ರೀತಿ ತಡವಾಗಿ ಐಟಿಆರ್‌ ಸಲ್ಲಿಸಲು ಡಿಸೆಂಬರ್‌ 31ರವರೆಗೆ ಅವಕಾಶವಿದೆ. ಆದರೆ, ಅದಕ್ಕೆ ದಂಡ ಪಾವತಿಸಲು ರೆಡಿ ಇರಬೇಕು

  1. ಯಾರ ವಾರ್ಷಿಕ ಆದಾಯ 5 ಲಕ್ಷ ರೂಪಾಯಿಗಿಂತ ಹೆಚ್ಚು ಇರುತ್ತದೆಯೋ ಅವರು ತಡವಾದ ಐಟಿಆರ್‌ ಸಲ್ಲಿಕೆಗಾಗಿ 5 ಸಾವಿರ ರೂಪಾಯಿ ಪಾವತಿಸಿ ಐಟಿಆರ್‌ ಸಲ್ಲಿಸಬಹುದು.
  2. ಯಾರ ವಾರ್ಷಿಕ ಆದಾಯ 5 ಲಕ್ಷ ರೂಪಾಯಿಗಿಂತ ಕಡಿಮೆ ಇದೆಯೋ ಅವರು ತಡವಾದ ಐಟಿಆರ್‌ ಸಲ್ಲಿಕೆಗಾಗಿ 1 ಸಾವಿರ ರೂಪಾಯಿ ದಂಡ ನೀಡಿ ಐಟಿಆರ್‌ ಸಲ್ಲಿಸಬಹುದು.
  3. ಎಲ್ಲಾದರೂ ನೀವು ಪಾವತಿಸಬೇಕಾದ ತೆರಿಗೆ ಬಾಕಿ ಉಳಿದರೆ ಅದಕ್ಕೆ ಬಡ್ಡಿ ವಿಧಿಸಲೂ ಅವಕಾಶವಿದೆ. ಪ್ರತಿತಿಂಗಳ ಬಾಕಿ ಬಡ್ಡಿಯನ್ನು ಸೇರಿಸಿ ಒಟ್ಟು ಮೊತ್ತವನ್ನು ನೀವು ಪಾವತಿಸಬೇಕು.

ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಸಂಬಂಧಪಟ್ಟ ನಮೂನೆಯನ್ನು ಭರ್ತಿ ಮಾಡಿ ಐಟಿಆರ್‌ ಅನ್ನು ಸಲ್ಲಿಸಬಹುದು.

ಐಟಿಆರ್‌ ರಿಫಂಡ್‌ ಯಾವಾಗ ಬರುತ್ತದೆ?

ನೀವು ಐಟಿಆರ್‌ ಸಲ್ಲಿಕೆ ಮಾಡಿದ 7ರಿಂದ 120 ದಿನದೊಳಗೆ ಐಟಿಆರ್‌ ರಿಫಂಡ್‌ ಬರುತ್ತದೆ. ಮೊದಲೆಲ್ಲ ಐಟಿಆರ್‌ ರಿಫಂಡ್‌ ತಡವಾಗುತ್ತಿತ್ತು. ಈಗ ತಂತ್ರಜ್ಞಾನಗಳ ನೆರವಿನಿಂದ ರಿಫಂಡ್‌ ತ್ವರಿತವಾಗಿ ದೊರಕುತ್ತದೆ.

ರಿಫಂಡ್‌ ಸ್ಟೇಟಸ್‌ ಪರಿಶೀಲಿಸುವುದು ಹೇಗೆ?

ಇನ್‌ಕಂ ಟ್ಯಾಕ್ಸ್‌ ವೆಬ್‌ಸೈಟ್‌ಗೆ ಹೋಗಿ ಇನ್‌ಕಂ ಟ್ಯಾಕ್ಸ್‌ ರಿಫಂಡ್‌ ಸ್ಟೇಟಸ್‌ ಪರಿಶೀಲನೆ ನಡೆಸಬಹುದು. ಮೊದಲಿಗೆ ಪಾನ್‌ ಮತ್ತು ಪಾಸ್‌ವರ್ಡ್‌ ನೀಡಿ https://incometaxindia.gov.in/ ವೆಬ್‌ಸೈಟ್‌ಗೆ ಲಾಗಿನ್‌ ಆಗಿ, ಇಫೈಲ್‌ ವಿಭಾಗ ಪರಿಶೀಲಿಸಿ. ವ್ಯೂ ಫೈಲ್ಡ್‌ ರಿಟರ್ನ್ಸ್‌ ಕ್ಲಿಕ್‌ ಮಾಡಿ. ಇತ್ತೀಚಿನ ಐಟಿಆರ್‌ ಕ್ಲಿಕ್‌ ಮಾಡಿ, ವ್ಯೂ ಡಿಟೈಲ್ಸ್‌ ಕ್ಲಿಕ್‌ ಮಾಡಿ, ಇಲ್ಲಿ ನಿಮಗೆ ರಿಫಂಡ್‌ ಸ್ಟೇಟಸ್‌ ಗೊತ್ತಾಗುತ್ತದೆ.

ಐಟಿಆರ್‌ ರಿಫಂಡ್ ತಡವಾಗಲು ಏನೆಲ್ಲಾ ಕಾರಣಗಳು ಇರಬಹುದು?

ಇನ್ನೂ ನಿಮಗೆ ಐಟಿಆರ್‌ ರಿಫಂಡ್‌ ದೊರಕದೆ ಇರಲು ಹಲವು ಕಾರಣಗಳು ಇರಬಹುದು. ಐಟಿಆರ್‌ ಸಲ್ಲಿಸುವಾಗ ನೀವು ಮಾಡಿರುವ ತಪ್ಪುಗಳು ಕೂಡ ರಿಫಂಡ್‌ ತಡವಾಗಲು ಕಾರಣವಾಗಿರಬಹುದು. ಕೆಲವು ಕಾರಣಗಳು ಈ ಮುಂದಿನಂತೆ ಇವೆ.

- ಬ್ಯಾಂಕ್‌ ವಿವರವನ್ನು ತಪ್ಪಾಗಿ ನೀಡಿರುವುದು.

- ಹೆಚ್ಚುವರಿ ದಾಖಲೆಗಳು/ಮಾಹಿತಿಗಳ ಅಗತ್ಯವಿರುವುದು.

- ನೀವು ನೀಡಿರುವ ಮಾಹಿತಿ ಅಪೂರ್ಣವಾಗಿರಬಹುದು.

- ಕ್ಲೇಮ್‌ ಮಾಡಿರುವ ಟಿಡಿಎಸ್‌/ಟಿಸಿಎಸ್‌ ಹೊಂದಾಣಿಕೆಯಾಗದೆ ಇರುವುದು.

- ರಿಫಂಡ್‌ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದೆ ಇರುವುದು (ಕಾಯುವುದೊಂದೇ ದಾರಿ).

ಐಟಿಆರ್‌ ರಿಫಂಡ್‌ ವಿಳಂಬವಾದರೆ ಏನು ಮಾಡಬೇಕು?

ಮೊದಲನೆಯದಾಗಿ ತೆರಿಗೆ ಪಾವತಿದಾರರು ತಮ್ಮ ಇಮೇಲ್‌ ಚೆಕ್‌ ಮಾಡಬೇಕು. ಈ ಹಿಂದೆ ಆದಾಯ ತೆರಿಗೆ ಇಲಾಖೆಯು ಯಾವುದಾದರೂ ಇಮೇಲ್‌ ಕಳುಹಿಸಿದೆಯೇ ಎಂದು ಪರಿಶೀಲಿಸಿ. ಆದಾಯ ತೆರಿಗೆ ಇಲಾಖೆಯು ಯಾವುದಾದರೂ ಮಾಹಿತಿ ಕೋರಿದ್ದರೆ ಅದಕ್ಕೆ ಪ್ರತಿಕ್ರಿಯೆ ನೀಡಿ.

ಎಲ್ಲಾದರೂ ರಿಫಂಡ್‌ ಸ್ಟೇಟಸ್‌ ಎಕ್ಸ್‌ಪಯರ್ಡ್‌ ಎಂದು ತೋರಿಸುತ್ತಿದ್ದರೆ ಮತ್ತೆ ರಿ ಸಬ್‌ಮಿಟ್‌ ಮಾಡಿ.

ಎಲ್ಲಾದರೂ ಇನ್‌ಕಂ ಟ್ಯಾಕ್ಸ್‌ ರಿಟರ್ನ್‌ ರಿಫಂಡ್‌ "ರಿಟರ್ನ್ಡ್‌" ಎಂದು ತೋರಿಸುತ್ತಿದ್ದರೆ, ಐಟಿಆರ್‌ ವೆಬ್‌ಸೈಟ್‌ಗೆ ಹೋಗಿ ಸರಿಯಾದ ಬ್ಯಾಂಕ್‌ ಮಾಹಿತಿ ನೀಡಿ, ಮತ್ತೆ ರಿಫಂಡ್‌ಗೆ ಅರ್ಜಿ ಸಲ್ಲಿಸಿ.

ಐಟಿಆರ್‌ ಸಲ್ಲಿಸುವಾಗ ತಪ್ಪು ಮಾಹಿತಿ ನೀಡಿದ್ದೀರಾ?

ನೀವು ಐಟಿಆರ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದರೆ ಪರಿಷ್ಕೃತ ಐಟಿಆರ್‌ ಸಲ್ಲಿಸಲು ಅವಕಾಶವಿದೆ. ಐಟಿಆರ್‌ ಅಸೆಸ್‌ಮೆಂಟ್‌ ಪೂರ್ಣಗೊಳ್ಳುವ ಮೂರು ತಿಂಗಳ ಮೊದಲು ಇಂತಹ ಪರಿಷ್ಕೃತ ರಿಟರ್ನ್‌ ಸಲ್ಲಿಸಲು ಅವಕಾಶವಿದೆ.

    ಹಂಚಿಕೊಳ್ಳಲು ಲೇಖನಗಳು